ಗೃಹಿಣಿಯರೇ ಎಚ್ಚರ ಇನ್ನೂ ಮುಂದೆ ಆದರೂ ಎಚ್ಚೆತ್ತುಕೊಳ್ಳಿ – ನಿಮ್ಮ ಹೊಟ್ಟೆ ಜೋತು ಬಿದ್ದು ನೀವು ದಿನೇ ದಿನೇ ದಪ್ಪವಾಗುತ್ತಿರುವುದಕ್ಕೆ ನೈಟಿ
ಕೂಡ ಒ೦ದು ದೊಡ್ಡ ಕಾರಣವಾಗಿದೆ. ಹೀಗೆಂದು ಯೋಚಿಸುತ್ತಿದ್ದೀರಾ. ನೈಟಿ ಎನ್ನುವುದು ಆರಾಮವಾಗಿ ರಾತ್ರಿ ಮಲಗಲು ಮಾತ್ರ ಬಳಸುವ ಉಡುಪಾಗಿತ್ತು.
ಆದರೆ ಈಗ ಅದು ಗೃಹಿಣಿಯರ ಬಹು ಪ್ರಿಯವಾದ ಉಡುಪಾಗಿದೆ ಕಾರಣ ಇಷ್ಟೇ ಗೃಹಿಣಿಯರ ದಿನದ ಬಹುಪಾಲು ಸಮ ಯ ಕೆಲಸ ಕೆಲಸವೇ ಆಗಿದೆ. ಹೀಗಿರುವಾಗ ನೈಟಿ ಬಹಳ ಆರಾಮಾಗಿ ಇರುತ್ತೆ ಜಾಸ್ತಿ ಬೆವರುವುದಿಲ್ಲ, ಸೆರಗು ಇರುವುದಿಲ್ಲ, ಒಟ್ಟಾರೆ ಏಕವಸ್ತ್ರ ಸೊಗಸಾಗಿ ಇರುತ್ತದೆ ಧರಿಸಲು ಮತ್ತು ಮನೆಯಲ್ಲಿ ಆರಾಮಾಗಿ ಕೆಲಸ ಮಾಡಲು ಅನುಕೂಲವಾಗಿದೆ.
ಆದರೆ ಇದರಿಂದ ನೈಟಿ ಎಷ್ಟು ಅಗಲವಾಗಿ ಇರುತ್ತೋ ಅಷ್ಟೇ ನಿಮ್ಮ ದೇಹದ ಆಕೃತಿ ಕೂಡ ಅಗಲವಾಗುವುದು ತಿಳಿಯುವುದೇ. ಊಟ ತಿಂಡಿ ಮಾಡದೇ ಇಲ್ಲಾ ಕೆಲವೊಮ್ಮೆ ಸರಿಯಾಗಿ ತೆಳುವಾದರೂ ಆಗಬಹುದು ಅದು ಕೂಡ ತಿಳಿಯುವುದಿಲ್ಲ ಕಾರಣ ನೈಟಿ ಗಾಳಿಪಟದ ಹಾಗೆ ಇರುವು ದರಿಂದ. ನಮ್ಮ ಸಂಸ್ಕೃತಿಯ ಸೀರೆಯಿಂದ ಲಾಭವೇನೆಂದರೆ ನಿಮ್ಮ ಆಕೃತಿ ಚೆನ್ನಾಗಿರುತ್ತದೆ.
ಹೇಗೆಂದರೆ ಸೀರೆ ಉಟ್ಟಾಗ ಬೆವರುವುದು ಜಾಸ್ತಿ, ಜೊತೆಗೆ ಸೀರೆ ಉಡಲು ಸೊಂಟಕ್ಕೆ ಗಟ್ಟಿಯಾಗಿ ಕಟ್ಟುವ ಲಂಗ. ಬಿಗಿ ಯಾದ ಬ್ರೌಸ್, ಎಳೆದು ಹಾಕುವ ಸೆರಗು ಇದೆಲ್ಲಾ ಬೊಜ್ಜು ಬರುವ ಸೂಕ್ಷ್ಮ ಜಾಗವನ್ನೆಲ್ಲ ಬಂದಿಸುತ್ತದೆ. ದೇಹವನ್ನು ಕರಗಿಸಲು ಅಥವಾ ಫಿಟ್ನೆಸ್ ಮೈoನ್ಟೈನ್ ಮಾಡಲು ಬಯಸುವವರ ಮೊದಲ ಆದ್ಯತೆ ಬೆವರುವುದು. ಅದಕ್ಕಾಗೆ ಬೆವರು ಸುರಿಸಿ ವ್ಯಾಯಾಮ ಮಾಡುತ್ತಾರೆ, ಬೊಜ್ಜು ಕರಗಿಸಲು ಸೊಂಟಕ್ಕೆ ಬೆಲ್ಟ್ ಕಟ್ಟುತ್ತಾರೆ.
ಇದೆಲ್ಲಾ ಸೀರೆಯಲ್ಲೇ ಇದೆ. ಇದನ್ನು ಬಿಟ್ಟು ಬೇರೆ ಹುಡುಕುವ ನಮ್ಮ ಬುದ್ಧಿಗೆ ಏನಾಗಿದೆ ಒಮ್ಮೆ ಯೋಚಿಸಿ. ಇನ್ನೂ ಪೂಜೆ ಮಾಡುವಾಗ ಅಥವಾ ಯಾವುದೇ ಶುಭಕಾರ್ಯ ಮಾಡುವಾಗ ನೈಟಿ ಧರಿಸಿ ಪೂಜೆ ಮಾಡುವುದು ಶುಭವಲ್ಲ ಇದನ್ನು ಶಾಸ್ತ್ರ ಒಪ್ಪುವುದಿಲ್ಲ ಗೃಹಲಕ್ಷ್ಮೀಯಾದವಳು ಕಳೆ ಕಳೆಯಾಗಿ ಇರಬೇಕು. ಆ ಕಳೆ ನೆಟಿಯಲ್ಲಿ ಖಂಡಿತ ವಾಗಿಯೂ ಇರುವುದಿಲ್ಲ.
ನಾನು ಎಲ್ಲೂ ಹೊರಗಡೆ ಹೋಗಲ್ಲ ಮನೆಯಲ್ಲಿ ಇರುವುದರಿಂದ ನೈಟಿ ಬೆಸ್ಟ್ ಅಂತ ತಿಳಿಯಬೇಡಿ ನಿಮ್ಮ ಮಕ್ಕಳ ಮುಂದೆ ಧರಿಸುವುದು ಕೂಡ ಗೌರವವಲ್ಲ ಮರೆಯದಿರಿ. ಇನ್ನೂ ನೈಟಿ ಧರಿಸಿ ಹೊರಗಡೆ ಹೋಗುವುದು ಗೌರವವಲ್ಲ. ದೇವಸ್ಥಾನಕ್ಕೆ ಹೋಗುವುದು ಸಂಸ್ಕೃತಿಯಲ್ಲಿ ಮರೆಯದಿರಿ.
ನೈಟಿಯನ್ನು ರಾತ್ರಿ ಮಲಗುವಾಗ ಹಾಗೂ ಮುಟ್ಟಿನ ಸಮಯದಲ್ಲಿ ಧರಿಸಿ ಬೇರೆ ಸಮಯದಲ್ಲಿ ಸಾಧ್ಯವಾದಷ್ಟು ಸೀರೆ ಧರಿಸಲು ಪ್ರಯತ್ನಿಸಿ. ಇದರಿಂದ ನೀವು ನಿಮ್ಮ ಗಂಡನನ್ನೂ ಕೂಡ ಆಕರ್ಷಿಸುತ್ತೀರಾ ಜೊತೆಗೆ ಗೃಹಲಕ್ಷ್ಮೀ ಕಳೆ ಬರುತ್ತದೆ. ಇನ್ನೂ ಮುಖ್ಯ ಅಂದರೆ ನಿಮ್ಮ ದೇಹದ ಆಕೃತಿ ಸುಂದರವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ಕೂಡ ಈ ಮೇಲೆ ಹೇಳಿದಂತಹ ಇಷ್ಟು ಮಾಹಿತಿಯನ್ನು ಗಮನದಲ್ಲಿಟ್ಟು ಕೊಂಡು ನಮ್ಮ ಸಂಸ್ಕೃತಿಯಲ್ಲಿ ಯಾವ ರೀತಿಯ ಉಡುಗೆ ತೊಡುಗೆ ಇರುತ್ತದೆಯೋ ಆ ರೀತಿಯಾದಂತಹ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು.
ಹಾಗೇನಾದರೂ ಇಂತಹ ಬಟ್ಟೆಗಳನ್ನು ಉದರಿಸಿದ್ದೆ ಆದರೆ ನಿಮಗೆ ತಿಳಿಯದ ಹಾಗೆ ನೀವೇ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಯಾರೂ ಕೂಡ ಪ್ರತಿದಿನ ಎಲ್ಲಾ ಸಮಯದಲ್ಲಿಯೂ ಕೂಡ ನೈಟಿಯನ್ನು ಧರಿಸುವುದು ಅಷ್ಟೇನೂ ಸಮಂಜಸವಲ್ಲ ಎಂದೇ ಹೇಳಬಹುದು.