ರಾಜ್ಯದಲ್ಲಿ ಈಗ ಕರ್ನಾಟಕ ವಿಧಾನಸಭಾ ಚುನಾವಣೆ (Karnataka assembly election-2023) ರಲ್ಲಿ ಬಹುಮತ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷವು (Congress) ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷವು ಈ ಬಾರಿ ಚುನಾವಣೆಯಲ್ಲಿ ಗೆಲ್ಲಲು ಪ್ರಣಾಳಿಕೆಯಲ್ಲಿ (Manifesto) ಬಳಸಿದ ಗ್ಯಾರಂಟಿ ಕಾರ್ಡ್ ಯೋಜನೆಗಳ (Gyaranty Scheme) ಘೋಷಣೆಗಳೇ ಕಾರಣ ಎಂದು ವಿರೋಧ ಪಕ್ಷಗಳು ಮತ್ತು ಜನಸಾಮಾನ್ಯರು ಮಾತನಾಡುತ್ತಲೇ ಇದ್ದಾರೆ.
ಕೊಟ್ಟ ಭರವಸೆಯಂತೆ ಕಾಂಗ್ರೆಸ್ ಪಕ್ಷವು ಕೂಡ ಆ ಗ್ಯಾರೆಂಟಿ ಕಾರ್ಡ್ ಯೋಜನೆಗಳ ಜಾರಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಹಂತ ಹಂತವಾಗಿ ಎಲ್ಲಾ ಗ್ಯಾರಂಟಿ ಯೋಜನೆಗಳಿಗೂ ಅರ್ಜಿ ಆಹ್ವಾನ ಮಾಡಿ ಆಶ್ವಾಸನೆಗಳನ್ನು ಈಡೇಸುವ ಮೂಲಕ ನುಡಿದಂತೆ ನಡೆಯುವ ಸರ್ಕಾರ ಎಂದೆನಿಸಿಕೊಂಡಿದೆ. ಆದರೆ ಇದೆಲ್ಲವೂ ಕೂಡ ಚುನಾವಣೆಯಲ್ಲಿ ಘೋಷಿಸಿದ ಯೋಜನೆಗಳಾಗಿವೆ.
ಈ ಸುದ್ದಿ ನೋಡಿ:- SSC JE ನಿಂದ ಬೃಹತ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…
ಇದರ ಹೊರತಾಗಿಯೂ ಕೂಡ ಕಾಂಗ್ರೆಸ್ ಸರ್ಕಾರವು 2023-24ನೇ ಸಾಲಿನ ರಾಜ್ಯಸರ್ಕಾರದ ಬಜೆಟ್ ಮಂಡನೆ ಮಾಡಿ ಹಲವು ಯೋಜನೆಗಳಿಗೆ (State budget) ಅನುದಾನವನ್ನು ನೀಡಿದೆ. ಇದೇ ರೀತಿಯಾಗಿ BJP ಸರ್ಕಾರ ಈ ಹಿಂದೆ ಜಾರಿಗೆ ತಂದಿದ್ದ ಕೆಲವು ಯೋಜನೆಗಳಿಗೆ ತಿಲಾಂಜಲಿಯನ್ನು ಸಹಾ ನೀಡಿದೆ. ಸದ್ಯಕ್ಕೆ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳ ಹೊರತಾಗಿ ಜಾರಿಗೆ ತಂದಿರುವ ಇನ್ನಷ್ಟು ಯೋಜನೆಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.
ಇದರಲ್ಲಿ ಯುವ ಜನತೆಗೆ, ಸ್ವಂತ ಉದ್ದಿಮೆಯನ್ನು ಆರಂಭಿಸಬೇಕೆನ್ನುವವರಿಗೆ, ಹಿಂದುಳಿದ ವರ್ಗದವರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಾಗೂ ಆರ್ಥಿಕ ನೆರವನ್ನು ನೀಡುವಂತಹ ಯೋಜನೆಗಳನ್ನು ಸರ್ಕಾರ ಕೈಗೊಂಡಿದೆ ಇವುಗಳ ಬಗ್ಗೆ ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.
● ಅರಿವು ಯೋಜನೆ(Arivu Scheme) :- ಈ ಯೋಜನೆಯ ಮೂಲಕ ವೈದ್ಯಕೀಯ ಇಂಜಿನಿಯರಿಂಗ್ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳು ವಾರ್ಷಿಕವಾಗಿ 2% ಬಡ್ಡಿ ದರದಲ್ಲಿ 1 ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿದೆ.
● ವಿದ್ಯಾಸಿರಿ ಯೋಜನೆ(Vidhyasiri Scheme) :- ಹಳ್ಳಿಗಾಡಿನಿಂದ ಪಟ್ಟಣ ಮತ್ತು ನಗರ ಪ್ರದೇಶಗಳಿಗೆ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳನ್ನು ಅವಲಂಬಿಸಿರುತ್ತಾರೆ. ಕೆಲ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ವಿದ್ಯಾರ್ಥಿ ನಿಲಯದಲ್ಲಿ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದರೂ ಸೀಟ್ ಸಿಗದೆ ಇದ್ದಲ್ಲಿ ಅಂತಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಖರ್ಚಿಗಾಗಿ ವಾರ್ಷಿಕವಾಗಿ 15 ಸಾವಿರ ರೂಪಾಯಿಗಳನ್ನು ಸರ್ಕಾರ ನೀಡುತ್ತದೆ.
● ಮೆಟ್ರಿಕ್ ನಂತರದ ವಿದ್ಯಾಭ್ಯಾಸವನ್ನು ಮುಂದುವರಿಸುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿದ್ಯಾರ್ಥಿ ವೇತನ ಸಿಗುತ್ತಿತ್ತು. ಈ ಹಿಂದೆ BJP ಸರ್ಕಾರ ಇದ್ದಾಗ ಇದಕ್ಕೆ ಅನುದಾನ ಸಿಕ್ಕಿರಲಿಲ್ಲ ಈಗ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರವು ಇದನ್ನು ಈ ವರ್ಷದಿಂದ ಮುಂದುವರಿಸುತ್ತಿದೆ.
● ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಇಚ್ಛೆ ಪಡುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ 20 ಲಕ್ಷದವರೆಗೆ ಬಡ್ಡಿ ರಹಿತವಾಗಿ ಸರ್ಕಾರ ಸಾಲ ನೀಡುತ್ತದೆ.
● ವಿದ್ಯಾರ್ಥಿ ನಿಲಯಗಳಲ್ಲಿರುವ ಹೆಣ್ಣು ಮಕ್ಕಳಿಗೆ ಶುಚಿ ಸಂಭ್ರಮ ಕಿಟ್ ನೀಡಲಾಗುತ್ತಿತ್ತು ಈ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ.
● ಸ್ವಾವಲಂಬಿ ಸಾರಥಿ ಯೋಜನೆ ಮೂಲಕ ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಜನತೆಗೆ ಸ್ವಂತ ಉದ್ಯಮ ನಡೆಸುವುದಕ್ಕಾಗಿ ನಾಲ್ಕು ಚಕ್ರದ ಗೂಡ್ಸ್ ವಾಹನಗಳನ್ನು ಖರೀದಿಸಲು ಬಯಸಿದರೆ 3 ಲಕ್ಷ ಸಹಾಯಧನ ನೀಡಲು ನಿರ್ಧರಿಸಿದೆ.
● ಸ್ವಯಂ ಉದ್ಯೋಗ ಸಾಲ ಯೋಜನೆಯಡಿ ಸ್ವಂತ ಉದ್ಯಮ ಮಾಡಲು ಇಚ್ಛಿಸುವ ಹಿಂದುಳಿದ ವರ್ಗದ ಯುವ ಜನತೆ ಸಾಲ ಪಡೆದಿದ್ದರೆ ವಾಣಿಜ್ಯ ಬ್ಯಾಂಕುಗಳ ಮೂಲಕ 1 ಲಕ್ಷದವರೆಗೆ ಸಹಾಯಧನ ನೀಡಲು ನಿರ್ಧರಿಸಿದೆ.
● ಸೇವ ವಲಯಗಳಲ್ಲಿ (Service Sector) ಉದ್ಯಮ ಆರಂಭಿಸಲು ಇಚ್ಛಿಸುವ ಹಿಂದುಳಿದ ವರ್ಗಗಳಾದ ಪ್ರವರ್ಗ 1, ಪ್ರವರ್ಗ 2A ಗೆ ಸೇರಿದ ಯುವಜನತೆಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಮೂಲಕ 10 ಕೋಟಿಯವರೆಗೆ ಸಾಲವನ್ನು ಶೇಕಡ 6% ಅಲ್ಲಿ ನೀಡಲಿದೆ.