ಭಾರತದಲ್ಲಿ ಎಲೆಕ್ಟ್ರಿಕಲ್ ವಾಹನಗಳ (Electric Vehicle) ಬಳಕೆ ಉತ್ತೇಜಿಸಲು ಸರ್ಕಾರ (Government) ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ, ಒಂದೆಡೆ ಭಾರತದಲ್ಲಿ ಈ ರೀತಿ ಎಲೆಕ್ಟ್ರಿಕಲ್ ವಾಹನಗಳನ್ನು ಉತ್ಪಾದನೆ ಮಾಡುವಂತಹ ಕಂಪನಿಗಳಿಗೆ ನೆರವು ನೀಡಿ, ಜನಸಾಮಾನ್ಯರಿಗೂ ಕೂಡ ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿಸಲಿ ಎನ್ನುವ ಕಾರಣದಿಂದ ಗ್ರಾಹಕರಿಗೂ ಸಬ್ಸಿಡಿ (Subsidy) ಸೌಲಭ್ಯ ಕೊಟ್ಟು ಸಹಾಯ ಮಾಡುತ್ತಿದೆ.
ಸರ್ಕಾರದ ಈ ಯೋಜನೆ ಹಿಂದಿನ ಮೂಲ ಉದ್ದೇಶ ಭಾರತದಲ್ಲಿ ವಾಯುಮಾಲಿನ್ಯವನ್ನು ಕಡಿಮೆ ಮಾಡಬೇಕು ಎನ್ನುವುದು ಎಂದರೆ ತಪ್ಪಾಗಲಾರದು, ಇದರೊಂದಿಗೆ ಪರೋಕ್ಷವಾಗಿ ಇಂಧನ ತೈಲಗಳ ಕೊರತೆಯನ್ನು ನೀಗಿಸುವುದು ಸಹ ಆಗಿದೆ. ಈ ರೀತಿ ನಾನು ಉದ್ದೇಶಕ್ಕಾಗಿ ಎಲೆಕ್ಟ್ರಿಕಲ್ ಬೈಕ್ ಮತ್ತು ಕಾರ್ ಬಳಸುವವರಿಗೆ ಸರ್ಕಾರ ಉತ್ತೇಜನ ಕೊಡುತ್ತಿದೆ.
ಈಗಾಗಲೇ ಇರುವ ಇಂಧನ ಚಾಲಿತ ವಾಹನಗಳನ್ನು ಎಲೆಕ್ಟ್ರಿಕಲ್ ವಾಹನಗಳನ್ನಾಗಿ ಕನ್ವರ್ಟ್ ಮಾಡಲು ಕೂಡ ಸರ್ಕಾರ ಆಸಕ್ತಿ ತೋರಿದೆ. ಒಟ್ಟಿನಲ್ಲಿ 2027 ಕಾಲಘಟ್ಟಕ್ಕೆ ಭಾರತದಲ್ಲಿ ರಸ್ತೆ ಮೇಲೆ ಸಂಚರಿಸುವ ವಾಹನಗಳಲ್ಲಿ 30% ಅಧಿಕ ಎಲೆಕ್ಟ್ರಿಕಲ್ ವಾಹನಗಳೇ ಇರಬೇಕು ನಿಧಾನವಾಗಿ ಆ ಪ್ರಮಾಣ ಇನ್ನೂ ಹೆಚ್ಚು ಮಾಡಬೇಕು ಎನ್ನುವುದು ಸರ್ಕಾರದ ಮಹತ್ವದ ಆಶಯ.
ಎಲೆಕ್ಟ್ರಿಕಲ್ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಭಾರತದಲ್ಲಿ ಮೊದಲ ಬಾರಿಗೆ ಮಾರ್ಕೆಟ್ ಗೆ ಬಂದಾಗಲೂ ಕೂಡ fame Subsidy 2 ಬಗ್ಗೆ ಕ್ರಮ ಕೈಗೊಂಡು ಸರ್ಕಾರ ನೆರವು ನೀಡುತ್ತಲೇ ಬಂದಿದೆ. ಈ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳ ಬಳಕೆಗೆ ಬ್ರೇಕ್ ಹಾಕಿ ಆ ಪ್ರಮಾಣವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿತ್ತು. ಜೊತೆಗೆ ಕೆಲ ದಿನಗಳಾದ ನಂತರ ಈ ಸಬ್ಸಿಡಿ ಯೋಜನೆಗೆ ಬ್ರೇಕ್ ಬಿದ್ದಿತ್ತು.
ಭಾರತ ಸರ್ಕಾರ Fame Subsidy 2 ಅನ್ನು ಪರಿಚಯಿಸಿದ ವೇಳೆ ಅದರ ಅನ್ವಯ ಎಲೆಕ್ಟ್ರಿಕ್ ಕಾರುಗಳ 1kwh ಮೇಲೆ ಹತ್ತು ಸಾವಿರ ರೂಪಾಯಿಗಳ ಸಬ್ಸಿಡಿಯನ್ನು ಘೋಷಿಸಿತ್ತು. ಆದರೆ ಈ ಪ್ರಯೋಜನವನ್ನು ಪಡೆಯಬೇಕೆಂದರೆ ಖರೀದಿಸುವ ಎಲೆಕ್ಟ್ರಿಕ್ ಬೈಕ್ ಅಥವಾ ಕಾರ್ ಗಳು 50% ಭಾರತದಲ್ಲಿ ನಿರ್ಮಿತವಾಗಿರ ಬೇಕಾಗಿತ್ತು. ಕೆಲವೊಂದು ಎಲೆಕ್ಟ್ರಿಕ್ ವಾಹನಗಳ ಕಂಪನಿಗಳು ವಿದೇಶಗಳಿಂದ ಬಿಡಿ ಭಾಗಗಳನ್ನು ಆಮದು ಮಾಡಿಕೊಂಡು ಅವುಗಳನ್ನು ಭಾರತದಲ್ಲಿ ಫಿಕ್ಸ್ ಮಾಡಿ ಮಾರಾಟ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದವು.
ಈ ಸುದ್ದಿ ನೋಡಿ;- ಈ ನಾಲ್ಕು ಜನರು ಸಾಯುವವರೆಗೂ ಬಡವರಾಗಿಯೇ ಇರುತ್ತಾರೆ.!
ಈ ರೀತಿ ಚಟುವಟಿಕೆಗಳ ಮೇಲೆ ಭಾರತ ಸರ್ಕಾರ ನಿರ್ಬಂಧವನ್ನು ಹೇರಿತ್ತು. ಅದೇ ಸಮಯದಲ್ಲಿ fame Subsidy 2 ಅನ್ನು ನಿಲ್ಲಿಸಿತ್ತು.
ಆದರೆ ಈಗ ಕೇಳಿ ಬರುತ್ತಿರುವ ಸದ್ಯದ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಮೇಲೆ Fame Subsidy 3 ಅನ್ನು ನೀಡುವಂತಹ ಮೊದವ ಪ್ರಯತ್ನವನ್ನು ಮಾಡಲು ಹೊರಟಿದೆ ಎಂಬುದಾಗಿ ತಿಳಿದು ಬಂದಿದೆ.
ಈ ಬಾರಿ ಸಿಗಬಹುದಾದ ಸಬ್ಸಿಡಿ ಮೊತ್ತದ ರಿಯಾಯಿತಿಯನ್ನು ಏನಿರಬಹುದು ಎನ್ನುವುದರ ಬಗ್ಗೆ ಅಧಿಕೃತ ಮಾಹಿತಿಗಳು ಸಿಕ್ಕಿಲ್ಲ ಆದರೆ ಹಿಂದಿಗಿಂತಲೂ ಹೆಚ್ಚಿನ ಹಣವನ್ನು ಈ ಬಾರಿ ಸಬ್ಸಿಡಿ ರೂಪದಲ್ಲಿ ಸರ್ಕಾರ ನೀಡಲು ನಿರ್ಧರಿಸಿ ಎಂದಷ್ಟೇ ತಿಳಿದು ಬಂದಿದೆ. ಹಾಗೆಯೇ ಈ ಬಾರಿ ಬಹುತೇಕ ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಮೇಲೆ ಕೂಡ ಈ ನಿಯಮವನ್ನು ಅಳವಡಿಸುವ ಸಿದ್ಧತೆ ನಡೆಯುತ್ತಿದೆ ಎಂಬುದಾಗಿ ಕೂಡ ಮಾಹಿತಿ ದೊರೆತಿದೆ. ಒಂದು ವೇಳೆ ಮತ್ತೊಮ್ಮೆ ಸರ್ಕಾರದ ಸಬ್ಸಿಡಿ ಸಿಕ್ಕರೆ ಮಧ್ಯಮ ವರ್ಗದವರಿಗೆ ಬಹಳ ಅನುಕೂಲ ಆಗಲಿದೆ, ಈ ಬಗ್ಗೆ ಸರ್ಕಾರದಿಂದ ಅಧಿಕೃತವಾಗಿ ಘೋಷಣೆ ಆಗುವವರೆಗೂ ಕೂಡ ಕಾದು ನೋಡೋಣ.