ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ ಶುರುವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

 

ಕಾಂಗ್ರೆಸ್ ಸರ್ಕಾರ ಪಂಚ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿದೆ ಚುನಾವಣೆಗು ಮೊದಲು ಪ್ರಣಾಳಿಕೆಯಲ್ಲಿ ನೀಡಿದ್ದ ಐದು ಭಾಗ್ಯಗಳ ಬಗ್ಗೆ ಹಾಗೂ ಅವುಗಳನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಹಲವಾರು ತಿಂಗಳುಗಳಿಂದ ಯೋಚಿಸುತ್ತಿದ್ದ ಕಾಂಗ್ರೆಸ್ ಸರ್ಕಾರದ ವಕ್ದಾರ ಸಿಎಂ ಸಿದ್ದರಾಮಯ್ಯನವರು ನಿಧಾನವಾಗಿ ಒಂದರ ಹಿಂದೆ ಒಂದು ಭಾಗ್ಯಗಳನ್ನು ಜಾರಿಗೊಳಿಸುತ್ತಿದ್ದಾರೆ.

ಈ ಪಂಚ ಭಾಗ್ಯಗಳಿಗೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಎಲ್ಲವು ಮುಖ್ಯವಾಗಿವೆ ಸಾಕಷ್ಟು ಜನರು ಇಂದು ರೇಷನ್ ಕಾರ್ಡಿಗೆ ಸೇರುವವರಿದ್ದಾರೆ ಅವರಿಗೆ ಈ ಯೋಜನೆಗಳ ಫಲಾನುಭವಿಗಳಾಗಲು ಅರ್ಹತೆ ಸಿಗುವುದಿಲ್ಲ ಹಾಗಾಗಿ ಹೊಸ ರೇಷನ್ ಕಾರ್ಡ್ ಮಾಡಿಸಲು ಅರ್ಜಿ ಸ್ವೀಕಾರ ಮಾಡುವ ಕೆಲಸವನ್ನು ಸರ್ಕಾರ ಶುರುಮಾಡಿದೆ.

ಈ ಸುದ್ದಿ ನೋಡಿ:- 

ಕಂದಾಯ ಸಚಿವ ಕೃಷ್ಣಭೈರೇಗೌಡ ಈ ಹಿಂದೆ ತಾನು ಸಂಪುಟದಲ್ಲಿ ಹೊಸ ರೇಷನ್ ಕಾರ್ಡ್ ಗಳ ನೋಂದಣಿ ಬಗ್ಗೆ ಚರ್ಚೆ ಮಾಡಿ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಹೇಳಿದ್ದರು ಅಷ್ಟೇ ಅಲ್ಲದೆ ಕಾಂಗ್ರೆಸ್ ನ ಯು ಬಿ ಬಣಕಾರ್ ಹೊಸ ರೇಷನ್ ಕಾರ್ಡ್ ಕೊಡುವ ಹಾಗೂ ಅದರಲ್ಲಿ ಸೇರ್ಪಡೆಯನ್ನು ಮಾಡಿಕೊಳ್ಳುವ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೇಂದ್ರ ಸರ್ಕಾರದ ಶೇಕಡಾ 60ರಷ್ಟು ಬಿಪಿಎಲ್ ಕಾರ್ಡುಗಳನ್ನು ನೀಡಬೇಕಾಗಿತ್ತು, ಆದರೆ ಶೇಕಡ 80ರಷ್ಟು ಬಿಪಿಎಲ್ ಕಾರ್ಡುಗಳನ್ನು ವಿತರಿಸಿದ್ದಾರೆ. ಆರೋಗ್ಯದ ವಿಚಾರದಲ್ಲಿ ಅಷ್ಟೇ ಅಲ್ಲದೆ ಹೊಸ ಹೊಸ ಯೋಜನೆಗಳ ಅಲಾನುಭವಿಗಳಾಗಲು ರೇಷನ್ ಕಾರ್ಡ್ ತುಂಬಾ ಮುಖ್ಯವಾಗಿದೆ ಹಾಗಾಗಿ ಜನರು ಕೂಡ ರೇಷನ್ ಕಾರ್ಡ್ ನೋಂದಣಿಯ ಬಗ್ಗೆ ಬೇಡಿಕೆಯನ್ನು ಇಡುತ್ತಿದ್ದಾರೆ.

ಈ ಹಿಂದೆ ವಿಧಾನಸಭೆ ಚುನಾವಣೆಯ ವೇಳೆ ನೀತಿ ಸಂಹಿತೆ ಜಾರಿ ಇದ್ದ ಕಾರಣ ರೇಷನ್ ಕಾರ್ಡಿಗೆ ಹೊಸ ಸೇರ್ಪಡೆ ಹಾಗೂ ತಿದ್ದುಪಡಿಯನ್ನು ನಿಲ್ಲಿಸಲಾಗಿತ್ತು ಎಲೆಕ್ಷನ್ ಮುಗಿದು ಈಗಾಗಲೇ ಎರಡು ತಿಂಗಳು ಕಳೆದಿದೆ ಆದರೂ ಕೂಡ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿ ಕೊಟ್ಟಿಲ್ಲ ಇದರಿಂದ ಸಾಕಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ. ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

ಪಡಿತರ ಚೀಟಿಯ ಅರ್ಜಿ ಆಹ್ವಾನವನ್ನು ನಿಲ್ಲಿಸಿರುವುದರಿಂದ ಮಧ್ಯವರ್ತಿಗಳಿಗೆ ಸಾಕಷ್ಟು ಲಾಭವಾಗುತ್ತಿದೆ. ರೇಷನ್ ಕಾರ್ಡ್ ಅರ್ಜಿ ಆಹ್ವಾನವನ್ನು ನಾಡಕಛೇರಿ ಗ್ರಾಮ ಒನ್ ಸೈಬರ್ ಕೇಂದ್ರಗಳಲ್ಲಿ ಬಂದ್ ಮಾಡಿದ್ದಾರೆ ಹಾಗಾಗಿ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ರೇಷನ್ ಕಾರ್ಡ್ ಗೆ ಹೊಸ ಸೇರ್ಪಡೆ ಮಾಡಲು ತಿದ್ದುಪಡಿ ಮಾಡಲು ಅಲೆಯುತ್ತಿದ್ದಾರೆ. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಕೆಲವರು ಅರ್ಜಿ ಹಾಕಿಸಿಕೊಡುತ್ತೇವೆ ಎಂದು ಹೇಳಿ ಹಣದ ಸುಲಿಗೆಯನ್ನು ಮಾಡುತ್ತಿದ್ದಾರೆ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಹಾಗು ತಿದ್ದುಪಡಿ ಬಂದ್ ಆಗಿರುವ ಕಾರಣದಿಂದ ಜನರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹೊಸ ಯೋಜನೆಗಳಿಗೆ ಫಲಾನುಭವಿಗಳಾಗಲು ಸಾಧ್ಯವಾಗುತ್ತಿಲ್ಲ ಸರ್ಕಾರದ ಹಲವು ಸೇವೆಗಳಿಂದ ವಂಚಿತರಾಗುತ್ತಿದ್ದಾರೆ ಅನಾರೋಗ್ಯದ ಸಮಯದಲ್ಲಿ ಪಡಿತರ ಚೀಟಿಯ ಮೂಲಕ ಕಡಿಮೆ ಹಣವನ್ನು ಪಾವತಿ ಮಾಡಬಹುದಾಗಿತ್ತು ಆದರೆ ಈಗ ಪಡಿತರ ಚೀಟಿ ಇಲ್ಲದೆ ರೋಗಿಗಳು ಕಷ್ಟವನ್ನು ಅನುಭವಿಸುತ್ತಿದ್ದಾರೆ.

ಇಷ್ಟು ಮಾತ್ರವಲ್ಲದೆ ಪಡಿತರ ಚೀಟಿ ಇಲ್ಲದೆ ವಿದ್ಯಾರ್ಥಿ ನಿಲಯಗಳಿಗೆ ಸೇರಲು ಸಾಧ್ಯವಾಗುವುದಿಲ್ಲ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮುಂತಾದ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳುವುದು ಕಷ್ಟವಾಗುತ್ತದೆ ಹಲವಾರು ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಿದ್ದಾರೆ ಇದರಿಂದ ಬಡವರಿಗೆ ಕಷ್ಟವಾಗುತ್ತಿದೆ ಈ ಎಲ್ಲಾ ವಿಚಾರಗಳನ್ನು ಮನಗಂಡ ಅಧಿಕಾರಿಗಳು ಸದ್ಯದಲ್ಲೇ ರೇಷನ್ ಕಾರ್ಡ್ ಅರ್ಜಿ ಪ್ರಾರಂಭಿಸುವ ಸಲುವಾಗಿ ಚರ್ಚಿಸುತ್ತಿದ್ದಾರೆ.

Leave a Comment