ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (Central and State Government) ಕೃಷಿಯಲ್ಲಿ ತೊಡಗಿಕೊಂಡಿರುವ ರೈತನ (Farmers) ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ. ರೈತನಿಗೆ ಸಹಾಯಧನ ನೀಡುವುದು, ಬೆಳೆ ವಿಮೆ ನೀಡುವುದರ ಜೊತೆಗೆ ಕೃಷಿ ಚಟುವಟಿಕೆ, ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ರೂಪದ ಸಾಲ ಮತ್ತು ಬಡ್ಡಿರಹಿತ ಸಾಲ ಇನ್ನು ಮುಂತಾದ ಅನುಕೂಲತೆಗಳನ್ನು ಮಾಡಿಕೊಡುತ್ತಿದೆ.
ಈಗ ಅದೇ ರೀತಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಟ್ರಾಕ್ಟರ್ 2023 (PM Kisan Tractor Scheme 2023) ಯೋಜನೆ ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದು ಕೃಷಿ ಕ್ಷೇತ್ರದಲ್ಲಿ ಅಗತ್ಯ ಪರಿಕರವಾಗಿರುವ ಟ್ರಾಕ್ಟರ್ ಖರೀದಿಗೆ ಸಹಾಯ ಹಸ್ತ ಚಾಚಿದೆ. ಈ ಯೋಜನೆಗೆ ಸೂಚಿಸಿರುವ ಅರ್ಹತೆಗಳನ್ನು ಹೊಂದಿರುವ ರೈತರು ಸರ್ಕಾರದ ಸಹಾಯದೊಂದಿಗೆ ಟ್ರಾಕ್ಟರ್ ಖರೀದಿಸಿ ಅದನ್ನು ತನ್ನ ಕೃಷಿ ಚಟುವಟಿಕೆ ಉಪಯೋಗಿಸಿಕೊಳ್ಳಬಹುದು.
ಲೇಬರ್ ಕಾರ್ಡ್ ಹೊಸ ವೆಬ್ಸೈಟ್ ಪ್ರಾರಂಭ, ಹೊಸ ವೆಬ್ಸೈಟ್ ನಲ್ಲಿ ರಿಜಿಸ್ಟರ್ ಆಗಿ ಸೇವೆಗಳನ್ನು ಪಡೆಯುವುದು ಹೇಗೆ ನೋಡಿ.!
ಇತ್ತೀಚಿನ ದಿನಗಳಲ್ಲಿ ಕೃಷಿ ಕೂಡ ಆಧುನಿಕರಣ ಗೊಳ್ಳುತ್ತಿರುವುದರಿಂದ ಯಂತ್ರೋಪಕರಣಗಳ ಬಳಕೆ ಅನಿವಾರ್ಯ. ಇದರಿಂದ ಕಡಿಮೆ ಸಮಯದಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಮಾನವ ಶಕ್ತಿ ಅವಶ್ಯಕತೆ ಇಲ್ಲದೆ ಸರಾಗವಾಗಿ ಪರಿಣಾಮಕಾರಿಯಾಗಿ ಕೃಷಿ ಚಟುವಟಿಕೆಗಳನ್ನು ಮಾಡಿ ಮುಗಿಸಬಹುದು. ಉಳುಮೆ ಕೆಲಸದಿಂದ ಹಿಡಿದು ಕಟಾವಿನ ಮತ್ತು ಸಾಗಣೆ ತನಕ ಅನೇಕ ಕೆಲಸಗಳಿಗೆ ಟ್ರಾಕ್ಟರ್ ಉಪಯೋಗಕ್ಕೆ ಬರುತ್ತದೆ.
ಇದನ್ನು ಮನಗಂಡ ಸರ್ಕಾರವು ರೈತನಿಗಾಗಿ ಈ ಯೋಜನೆಯನ್ನು ರೂಪಿಸಿ ಈ ಯೋಜನೆಯಡಿ ಟ್ರಾಕ್ಟರ್ ಖರೀದಿ ಮಾಡುವ ರೈತನಿಗೆ 50% ಸಬ್ಸಿಡಿ (50% Subsidy for tractor purchase) ನೀಡುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವುದು ಈ ಅಂಕಣವನ್ನು ಪೂರ್ತಿಯಾಗಿ ಓದಿ.
ಪಿ.ಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ನಿಬಂಧನೆಗಳು:-
● ರೈತನು ಭಾರತದ ಖಾಯಂ ಪ್ರಜೆಯಾಗಿರಬೇಕು
● 18 – 60 ವರ್ಷದ ವಯೋಮಾನದವರಾಗಿರಬೇಕು, ವಯಸ್ಸಿನ ಸಡಿಲಿಕೆಯು ಆಯಾ ರಾಜ್ಯ ಸರ್ಕಾರದ ನಿರ್ಧಾರವನ್ನು ಅವಲಂಬಿಸಿರುತ್ತದೆ.
● ರೈತನ ಕುಟುಂಬದ ವಾರ್ಷಿಕ ಆದಾಯವು 1.5 ಲಕ್ಷಕ್ಕಿಂತ ಕಡಿಮೆಯಿರಬೇಕು.
● ಅರ್ಜಿದಾರರು ಈಗಾಗಲೇ ಟ್ರಾಕ್ಟರ್ ಹೊಂದಿರಬಾರದು.
● ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಸಬ್ಸಿಡಿ ಯೋಜನೆಯಡಿ ಫಲಾನುಭವಿಯಾಗಿರಬಾರದು.
● ಯೋಜನೆಗೆ ಅರ್ಜಿ ಸಲ್ಲಿಸಿದ ರೈತನು ತನ್ನ ಹೆಸರಿನಲ್ಲಿ ಕನಿಷ್ಠ ಒಂದು ಎಕರೆ ಭೂಮಿಯನ್ನು ಹೊಂದಿರಬೇಕು.
● ಅರ್ಜಿದಾರರು ಸಣ್ಣ ಅಥವಾ ಅತಿ ಸಣ್ಣ ರೈತ ವರ್ಗದ ಅಡಿಯಲ್ಲಿ ಬರಬೇಕು.
ಬೇಕಾಗುವ ದಾಖಲೆಗಳು:-
● ರೈತನ ಆಧಾರ್ ಕಾರ್ಡ್
● ಗುರುತಿನ ಚೀಟಿಯಾಗಿ ಮತದಾರರ ಐಡಿ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಚಾಲನಾ ಪರವಾನಗಿಗಳಲ್ಲಿ ಒಂದು
● ಜಮೀನಿಗೆ ಸಂಬಂಧಿಸಿದ ದಾಖಲೆಗಳು.
● ಬ್ಯಾಂಕ್ ಖಾತೆ ವಿವರಗಳು
● ಟ್ರ್ಯಾಕ್ಟರ್ ಖರೀದಿಗೆ ಸಂಬಂಧಿಸಿದ ದಾಖಲೆಗಳು
● ಆಧಾರ್ ಮತ್ತು ಜಾತಿ ಪ್ರಮಾಣಪತ್ರ
● ಇತ್ತೀಚಿನ ಭಾವಚಿತ್ರ
● ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.
ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ ಸಹಾಯಧನ ಘೋಷಿಸಿದ ಸರ್ಕಾರ ಪರಿಹಾರ ಪಡೆಯಲು ಈ ನಿಯಮ ಅನುಸರಿಸಿ.!
ಅರ್ಜಿ ಸಲ್ಲಿಸುವ ವಿಧಾನ:-
● ಹತ್ತಿರದ CSC ಕೇಂದ್ರಗಳು ಅಥವಾ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಹೋಗಿ ವೈಯುಕ್ತಿಕ ವಿವರ ಹಾಗೂ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಬಹುದು.
● ಸದ್ಯಕ್ಕೀಗ ಅಸ್ಸಾಂ, ಬಿಹಾರ, ಹರಿಯಾಣ, ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ ಈ ರಾಜ್ಯಗಳಲ್ಲಿ ಅರ್ಜಿ ಸಲ್ಲಿಸಲು ಅನುಮತಿ ನೀಡಲಾಗಿದೆ. ಶೀಘ್ರದಲ್ಲಿಯೇ ಕರ್ನಾಟಕದಲ್ಲಿ ಕೂಡ ಅರ್ಜಿ ಸ್ಪೀಕಾರ ಪ್ರಕ್ರಿಯೆ ಆರಂಭ ಆಗಲಿದೆ.
● ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರ ಅಥವಾ ಟ್ರಾಕ್ಟರ್ ಶೋರೂಮ್ ಗೆ ಕೂಡ ಹೋಗಿ ಪಿ.ಎಂ ಕಿಸಾನ್ ಟ್ರಾಕ್ಟರ್ ಯೋಜನೆ ಬಗ್ಗೆ ಮಾಹಿತಿ ಪಡೆಯಬಹುದು.