ಚಿಕ್ಕ ಕುಟುಂಬವಾಗಿರಲಿ ಅಥವಾ ಅವಿಭಾಜ್ಯ ಕುಟುಂಬವೇ ಆಗಿರಲಿ ಮನೆ ಎಂದ ಮೇಲೆ ಸದಸ್ಯರ ನಡುವೆ ಪ್ರೀತಿ ವಿಶ್ವಾಸ ನಂಬಿಕೆ ಗೌರವ ಇರಬೇಕಾದದ್ದು ಮುಖ್ಯ. ಹಾಗೆ ಆ ಮನೆಯ ವಾತಾವರಣದಲ್ಲಿ ಸಕರಾತ್ಮಕತೆ, ಶಾಂತಿ, ನೆಮ್ಮದಿ, ಸಂತೋಷ ತುಂಬಿರಬೇಕು. ಹೀಗಾಗಬೇಕೆಂದರೆ ಮನೆಯಲ್ಲಿ ಇರುವ ಸದಸ್ಯರು ನಮ್ಮ ರೂಢಿಗಳಲ್ಲಿ ಇರುವ ದುರಭ್ಯಾಸಗಳನ್ನು ತಿದ್ದುಕೊಂಡು ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಸಹಬಾಳ್ವೆ ನಡೆಸಬೇಕು. ಆಗ ಆ ಮನೆಯೇ ನಂದನವನವಾಗುತ್ತದೆ. ಅದಕ್ಕಾಗಿ ಕೆಲವು ಸಲಹೆಗಳನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ ನೋಡಿ.
● ತಿಂದ ತಕ್ಷಣ ಅಲ್ಲೇ ಮಲಗುವ ದುರಭ್ಯಾಸ ಇದ್ದರೆ ಮೊದಲು ಅದನ್ನು ಬಿಟ್ಟುಬಿಡಿ
● ಹಿರಿಯರ ಮುಂದೆ ಕಾಲು ಚಾಚಿ ಅಥವಾ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳಬೇಡಿ
● ಕೈ ತೊಳೆದು ನೀರನ್ನು ಜಾಡಿಸಬೇಡಿ
● ರಾತ್ರಿ ಊಟ ಆದ ಮೇಲೆ ಎಂಜಲು ತಟ್ಟೆಗಳನ್ನು ಪಾತ್ರೆಗಳನ್ನು ತೊಳೆಯದೆ ಹಾಗೇ ಇಟ್ಟು ಮಲಗಬೇಡಿ.
● ಎಂಜಲು ಕೈಯಲ್ಲಿ ಎಂದಿಗೂ ಕೂಡ ಯಾರಿಗೂ ಊಟ ಬಡಿಸಬೇಡಿ
●”ಅನ್ನ ಸಾರು ಪಲ್ಯ ಮಾಡಿದ ಪಾತ್ರೆಗಳಲ್ಲಿ ಅಥವಾ ಅವುಗಳನ್ನು ಬಿಸಿ ಮಾಡಿದ ಪಾತ್ರೆಗಳಲ್ಲೇ ಊಟ ಮಾಡಬೇಡಿ
ಪಾತ್ರೆಗಳ ಮೇಲೆ ಎಂಜಲು ಕೈ ತೊಳೆಯಬೇಡಿ
● ಮನೆಗೆ ಬಂದ ಹೆಣ್ಣು ಮಕ್ಕಳಿಗೆ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಕಳುಹಿಸುವ ಅಭ್ಯಾಸ ಮಾಡಿಕೊಳ್ಳಿ
● ಹರಿದಿರುವ ಅಥವಾ ತೂತಾಗಿರುವ ಬಟ್ಟೆ, ಒಳ ಉಡುಪು, ಶೂ, ಸಾಕ್ಸ್ ಇವುಗಳನ್ನು ಧರಿಸಬೇಡಿ.
● ಮನೆಯ ಹೊರಗೆ ಬಳಸುವ ಚಪ್ಪಲಿ, ಶೂಗಳನ್ನು ಯಾವುದೇ ಕಾರಣಕ್ಕೂ ಮನೆಯ ಒಳಗಡೆ ತರಬೇಡಿ.
● ದೇವಸ್ಥಾನಕ್ಕೆ ಹೋಗಿದ್ದಾಗ ಅಥವಾ ಮತ್ಯಾವ ಸ್ಥಳದಲ್ಲಾದರೂ ಸರಿ ನಿಮ್ಮ ಚಪ್ಪಲಿ ಕಳೆದು ಹೋಗಿದ್ದರೆ ಕರ್ಮ ಕಳೆಯುತು ಎಂದು ಸುಮ್ಮನಾಗಿ, ಚಪ್ಪಲಿ ಇಲ್ಲ ಎಂದು ನೀವು ಬೇರೆಯವರ ಚಪ್ಪಲಿಯನ್ನು ಹಾಕಿಕೊಂಡು ಬಂದರೆ ನೀವಾಗಿ ನೀವೇ ಸಮಸ್ಯೆಗಳನ್ನು ಸ್ವಾಗತ ಕೋರಿದಂತೆ ಹಾಗಾಗಿ ಇಂತಹ ತಪ್ಪುಗಳನ್ನು ಎಂದು ಮಾಡಬೇಡಿ.
● ಹಸು ಕರುಗಳಿಗೆ ಮೂಕ ಪ್ರಾಣಿಗಳಿಗೆ ಅಥವಾ ಭಿಕ್ಷುಕರಿಗೆ ಹಳಸಿ ಹೋದ ಆಹಾರಗಳನ್ನು ಹಾಕಬೇಡಿ
● ಪಶುಗಳಿಗೆ ಎಂಜಲು ಆಹಾರವನ್ನು ಪಾತ್ರೆ ತೊಳೆದ ಮುಸರೆ ನೀರನ್ನು ಹಾಕಬೇಡಿ.
● ಯಾವುದೇ ಕಾರಣಕ್ಕೂ ಮತ್ತೊಬ್ಬರ ಬಟ್ಟೆಯನ್ನಾಗಲಿ ಅಥವಾ ಮತ್ತೊಬ್ಬರ ಒಡವೆಯನ್ನಾಗಲಿ ಹಾಕಿಕೊಳ್ಳಬೇಡಿ.
● ಪ್ರಯಾಣ ಮಾಡುವಾಗ ಅಪರಿಚಿತರು ಕೊಟ್ಟ ತಿಂಡಿ ತಿನಿಸು ನೀರು ಇವುಗಳನ್ನು ಸೇವಿಸಬೇಡಿ.
● ಶನಿವಾರ ಅಂಗಡಿಯಿಂದ ಮನೆಗೆ ಎಣ್ಣೆ ಉಪ್ಪು ಇವುಗಳನ್ನು ತರಬೇಡಿ.
● ಅನವಶ್ಯಕವಾಗಿ ಹೆಚ್ಚು ಚಪ್ಪಲಿಗಳನ್ನು ಖರೀದಿಸಬೇಡಿ.
● ಮನೆಯಲ್ಲಿ ಗಡಿಯಾರ, ಹೊಲಿಗೆ ಮಿಷನ್, ಸೈಕಲ್ ಇವುಗಳು ಕೆಟ್ಟು ಹೋಗಿದ್ದರೆ ಆದಷ್ಟು ಬೇಗ ಅದನ್ನು ದುರಸ್ತಿ ಮಾಡಿಸಿ.
ಇಲ್ಲವೇ ವಿಲೇವಾರಿ ಮಾಡಿಬಿಡಿ.
● ಭಗವಂತನಲ್ಲಿ ಏನು ಬೇಡಬೇಡಿ, ಬೇಡಿ ಬಿಕ್ಷುಕರಾಗುವ ಬದಲು ಭಕ್ತಿಯಿಂದ ನಂಬಿಕೆ ಇಟ್ಟು ಸುಮ್ಮನಿರಿ, ನೀವು ಕೇಳಿದ್ದು ತಾನಾಗಿಯೇ ಬರುತ್ತದೆ.
ಒಣಗಿದ ಹೂವುಗಳನ್ನು ಬಿಸಾಕುವ ಬದಲು ಅವುಗಳನ್ನೇ ಬಳಸಿಕೊಂಡು ಕೋನ್ ಶೇಪ್ ಸಾಂಬ್ರಾಣಿ ಮಾಡಿ.! ಬುದ್ದಿವಂತ ಮಹಿಳೆಯರಿಗಾಗಿ
● ಅರ್ಹರಿಗೆ ದಾನ ಮಾಡಿ ಆದರೆ ಈ ದನದ ಬಗ್ಗೆ ಪ್ರಚಾರ ಬೇಡ ಅದು ಗುಪ್ತವಾಗಿಯೇ ಇರಲಿ.
● ಮಠ ಮಂದಿರಗಳ ಸ್ವತ್ತು ಹಣಕಾಸು ಒಡವೆ ವಿಷವೆಂದು ತಿಳಿಯಿರಿ. ಅವುಗಳನ್ನು ದುರುಪಯೋಗ ಪಡಿಸಿಕೊಂಡರೆ ಅದರ ಶಿಕ್ಷೆ ನಿಮ್ಮ ಬೆನ್ನ ಹಿಂದೆ ಕಾದಿರುತ್ತದೆ ಎನ್ನುವುದನ್ನು ತಿಳಿದು ಎಚ್ಚರಿಕೆಯಿಂದ ಇರಿ.
● ಅನ್ಯರ ವಸ್ತುಗಳಿಗೆ ಅನ್ಯರ ಹಣಕ್ಕೆ ಅನ್ಯರ ಸಂಪತ್ತಿಗೆ ಎಂದು ಕೂಡ ಆಸೆಪಡಬೇಡಿ.
● ನಿಮ್ಮ ಬಗ್ಗೆ ವಿಪರೀತವಾಗಿ ಜಂಭ ಕೊಚ್ಚಿಕೊಳ್ಳುವುದು ಹಾಗೂ ಬೇರೆಯವ ಬಗ್ಗೆ ಯಾವಾಗಲೂ ಕೀಳಾಗಿ ಮಾತನಾಡುವುದ ಚಾಳಿಯಿದ್ದರೆ ಬಿಟ್ಟುಬಿಡಿ.