ಸ್ತನ ಕ್ಯಾನ್ಸರ್ ಇತ್ತೀಚಿಗೆ ಹೆಚ್ಚಾಗಿ ಎಲ್ಲೆಡೆ ಕೇಳಿ ಬರುತ್ತಿರುವ ಗಂಭೀರ ಆರೋಗ್ಯ ಸಮಸ್ಯೆ. ಭಾರತೀಯ ಮಹಿಳೆಯರು ಕೂಡ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು 20 ವರ್ಷದಿಂದ 40 ವರ್ಷದ ಒಳಗಿನ ಮಹಿಳೆಯರ ಕಾಣಿಸಿಕೊಳ್ಳುತ್ತಿದೆ. ಆರಂಭದ ದಿನಗಳಲ್ಲಿಯೇ ಇದನ್ನು ಪತ್ತೆ ಹಚ್ಚಿದಲ್ಲಿ ಚಿಕಿತ್ಸೆ ಫಲಕಾರಿಯಾಗುತ್ತದೆ, ಇಲ್ಲವಾದರೆ ಕ್ಯಾನ್ಸರ್ ನ ಸ್ಟೇಜ್ ಗಳು ದಾಟಿದಂತೆ ಚಿಕಿತ್ಸೆ ನೀಡುವುದು ಹಾಗೂ ಗುಣವಾಗುವುದು ಕೂಡ ಕ’ಷ್ಟಕರವಾಗುತ್ತದೆ.
50 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಈ ಸ್ತನ ಕ್ಯಾನ್ಸರ್ ಗಂಭೀರ ಪರಿಣಾಮ ಬೀರುತ್ತದೆ ಎನ್ನುವುದನ್ನು ಸಂಶೋಧನೆ ತಿಳಿಸಿದೆ. ಹಾಗಾಗಿ ಪ್ರತಿಯೊಬ್ಬ ಮಹಿಳೆಯು ಕೂಡ 20 ವರ್ಷ ದಾಟಿದ ನಂತರ ವರ್ಷಕ್ಕೆ ಒಮ್ಮೆಯಾದರೂ ತಜ್ಞ ವೈದ್ಯರ ಬಳಿ ಈ ಕುರಿತಾದ ಲಕ್ಷಣಗಳಿದ್ದಾಗ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಹಾಗಾಗಿ ಸ್ತನ ಕ್ಯಾನ್ಸರ್ ನ ಕೆಲ ಲಕ್ಷಣಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ.
SBI ಬ್ಯಾಂಕ್ ನಲ್ಲಿ ಒಂದು ಸಲ ಡೆಪಾಸಿಟ್ ಮಾಡಿದ್ರೆ ಸಾಕು 5 ವರ್ಷ ಪ್ರತಿ ತಿಂಗಳು 4950/- ಸಿಗುತ್ತೆ.!
ಲಕ್ಷಣಗಳು:-
● ಸ್ತನದ ಮೇಲಿನ ಚರ್ಮ ಡಿಂಪ್ಲೇಸ್ ಆಗಿ ಕಾಣುವುದು, ಅಂದರೆ ಕಿತ್ತಾಳೆ ಹಣ್ಣಿನ ಸಿಪ್ಪೆಯಂತೆ ಕಾಣುವುದು.
● ಸ್ತನ ಅಥವಾ ಕಂಕುಳಲ್ಲಿ ಗಡ್ಡೆ ರೀತಿ ಆಗುವುದು ಇದರಿಂದ ವಿಪರೀತವಾಗಿ ನೋವು ಬರುವುದು, ಡಿಂಪಲ್ ಗಳಲ್ಲಿ ನೋವು ಕಾಣಿಸಿಕೊಳ್ಳುವುದು.
● ಸ್ತನದ ಮೇಲಿನ ಚರ್ಮ ದಪ್ಪವಾಗಿರುವುದು ಅಥವಾ ಕೆಂಪು ಬಣ್ಣಕ್ಕೆ ತಿರುಗಿರುವುದು.
● ಸ್ತನಗಳಲ್ಲಿ ತುರಿಕೆ ಕಂಡು ಬರುವುದು ಬಹಳ ಗಂಭೀರವಾದ ವಿಷಯವಲ್ಲ ಆದರೆ ಒಂದು ವಾರಕ್ಕಿಂತ ಹೆಚ್ಚು ಸಮಯದವರೆಗೆ ಈ ರೀತಿ ತುರಿಕೆ ಕಾಣಿಸಿಕೊಂಡರೆ ಆಗ ಅದನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಳ್ಳಲೇಬೇಕು, ಏಕೆಂದರೆ ಇದು ಕೂಡ ಸ್ತನ ಕ್ಯಾನ್ಸರ್ ಒಂದು ಲಕ್ಷಣವಾಗಿರಬಹುದು.
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ಎಷ್ಟೆಲ್ಲ ಫಲ ಸಿಗುತ್ತದೆ ನೋಡಿ.!
ಕಾರಣಗಳು:-
● ಮಹಿಳೆಯರ ದೇಹದಲ್ಲಿ ಪುರುಷರಿಗೆ ಹೋಲಿಸಿದರೆ ಹೆಚ್ಚು ಹಾರ್ಮೋನ್ಸ್ ಇರುತ್ತದೆ ಎಂದು ಹೇಳಲಾಗುತ್ತದೆ. ಸಂಶೋಧನೆಗಳಲ್ಲಿ ಕಂಡುಹಿಡಿದಿರುವ ಪ್ರಕಾರ ಮಹಿಳೆಯರ ದೇಹದಲ್ಲಿ ಉಂಟಾಗುವ ಹಾರ್ಮೋನ್ಸ್ ವೇರಿಯೇಷನ್ ಇಂದಾಗಿ ಈ ರೀತಿ ಸ್ತನ ಕ್ಯಾನ್ಸರ್ ಉಂಟಾಗುತ್ತದೆ ಎಂದು ತಿಳಿದು ಬಂದಿದೆ.
● ಹೆರಿಡಿಟರಿ ಅಂದರೆ ಕುಟುಂಬದಲ್ಲಿ ತಾಯಿ ಅಜ್ಜಿ ಅಕ್ಕ ದೊಡ್ಡಮ್ಮ ಈ ರೀತಿ ಯಾರಿಗಾದರೂ ಕ್ಯಾನ್ಸರ್ ಬಂದಿದ್ದರೆ ಆ ಕುಟುಂಬದ ಮುಂದಿನ ಪೀಳಿಗೆಗೆ ಇದು ಟ್ರಾನ್ಸ್ಫರ್ ಆಗುವ ಸಾಧ್ಯತೆಗಳು ಇರುತ್ತವೆ.
● ಇತ್ತೀಚಿನ ದಿನಗಳಲ್ಲಿ 12 ವರ್ಷಗಳಿಗಿಂತ ಮುಂಚೆ ಹೆಣ್ಣು ಮಕ್ಕಳ ಮುಟ್ಟಾಗುತ್ತಿದ್ದಾರೆ ಇದು ಕೂಡ ಈ ರೀತಿ ಕ್ಯಾನ್ಸರ್ ಬರುವುದಕ್ಕೆ ಒಂದು ಕಾರಣವಾಗಿದೆ.
ಲಕ್ಷಾಂತರ ಜನರ ಜೀವನ ಬದಲಾಗಿದೆ.! ಸುಲಭವಾಗಿ ದುಡ್ಡು ಮಾಡಲು ಇರುವ 6 ನಿಯಮಗಳು.!
● ಧೂಮಪಾನ, ಮಧ್ಯಪಾನದಂತ ದುಷ್ಚಟಗಳಿಗೆ ಮಹಿಳೆಯರು ಒಳಗಾಗುವುದು ಈ ರೀತಿ ಕ್ಯಾನ್ಸರ್ ಬರುವುದಕ್ಕೆ ಕಾರಣವಾಗಿರುತ್ತದೆ.
● ಹಿರಿಯರು ಪ್ರತಿದಿನವೂ ಕೂಡ ರಾತ್ರಿ ಹೊತ್ತು ಮಲಗುವ ಸಮಯದಲ್ಲಿ ಕೂಡ ಬಹಳ ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದು ಕೂಡ ಸ್ತನ ಕ್ಯಾನ್ಸರ್ ಬರುವುದಕ್ಕೆ ಒಂದು ಕಾರಣ.
ಪರಿಹಾರ:-
ಮಹಿಳೆಯರು ಈ ರೀತಿ ಲಕ್ಷಣಗಳು ಇವೆಯೇ ಎಂದು ಸ್ವಯಂ ಪರೀಕ್ಷೆ ಮಾಡಿಕೊಳ್ಳಬೇಕು ಒಂದು ವೇಳೆ ಅನುಮಾನ ಬಂದಾಗ ತಪ್ಪದೆ ತಜ್ಞ ವೈದ್ಯರನ್ನು ಭೇಟಿಯಾಗಿ ಕ್ಯಾನ್ಸರ್ ಪರೀಕ್ಷೆಗೆ ಒಳಗಾಗಬೇಕು. ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಅದೇ ಕಾಯಿಲೆ ಎಂದು ನಿಶ್ಚಯವಾಗುವುದರ ಬದಲು ವೈದ್ಯರನ್ನು ಸಂಪರ್ಕಿಸಿದರೆ ಅವರು ಇದಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ಮಾಡಿ ಧೃಡಪಡಿಸುತ್ತಾರೆ. ಒಂದು ವೇಳೆ ಕಾಯಿಲೆ ಇದ್ದರೆ ಧೈರ್ಯದಿಂದ ಇರಿ, ಅದನ್ನು ಪ್ರಾರಂಭಿಕ ಹಂತದಲ್ಲಿ ಇರುವಾಗಲೇ ಗುರುತಿಸುವುದರಿಂದ ಪರಿಣಾಮಕಾರಿಯಾಗಿ ಗುಣಪಡಿಸಬಹುದು.