ಹಣ ಯಾರಿಗೆ ಬೇಡ ಹಣ ಮಾಡುವುದು ಹಣ ಗಳಿಸುವುದು ಎಲ್ಲರಿಗೂ ಇಷ್ಟ. ಹಾಗಾಗಿ ಹಣದ ಅಧಿದೇವತೆ ಆಗಿರುವ ತಾಯಿ ಲಕ್ಷ್ಮಿಯನ್ನು ಅನೇಕ ರೀತಿಯಲ್ಲಿ ಪೂಜಿಸಿ ಬೇಡಿ ಪ್ರಾರ್ಥಿಸುತ್ತಾರೆ. ತಾಯಿ ಮಹಾಲಕ್ಷ್ಮಿ ಕೂಡ ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸುವವರಿಗೆ, ದಾನ ಧರ್ಮದ ಅನುಕಂಪ ತೋರಿ ಪ್ರಾಮಾಣಿಕತೆಯಿಂದ ಬದುಕುವರಿಗೆ ಒಲಿಯುತ್ತಾರೆ ಹಾಗೂ ಅವರ ಮೇಲೆ ಕೃಪಾಕಟಾಕ್ಷ ತೋರಿ ಅವರ ಮನೆಯಲ್ಲಿ ನೆಲೆಸುತ್ತಾರೆ.
ಆದರೆ ಈ ರೀತಿ ಲಕ್ಷ್ಮಿ ಆಗಮನ ಆಗುವುದಕ್ಕೂ ಮುನ್ನ ಕೆಲವು ಸೂಚನೆಗಳನ್ನು ಕೊಟ್ಟು ಬರುತ್ತಾರೆ ಆದರೆ ಕೆಲವರು ಅದನ್ನು ತಿಳಿಯದೆ ಹಾನಿ ಮಾಡಿ ನ’ಷ್ಟ ಮಾಡಿಕೊಳ್ಳುತ್ತಾರೆ ಹಾಗಾಗಿ ಈ ಅಂಕಣದಲ್ಲಿ ಅಂತಹ ಸೂಚನೆಗಳಲ್ಲಿ ಒಂದರ ಬಗ್ಗೆ ತಿಳಿಸುತ್ತಿದ್ದೇವೆ. ಮನೆಗಳಲ್ಲಿ ಕಡಜಗಳು ಗೂಡು ಕಟ್ಟುತ್ತವೆ ಇದನ್ನು ನೀವು ಗಮನಿಸಿರಬಹುದು. ಮನೆಗೆ ಕಡಜ ಬಂದಾಗ ಅಥವಾ ಗೂಡು ಕಟ್ಟಿದ್ದಾಗ ಕೆಲವರು ಗಾಬರಿಗೊಳ್ಳುತ್ತಾರೆ.
ಕಡಜದ ಗೂಡನ್ನು ಕ್ಲೀನ್ ಮಾಡಲು ಹೋಗುತ್ತಾರೆ ಅಥವಾ ಕಡಜವನ್ನು ಹೊಡೆದು ಹಾಕುವ ಪ್ರಯತ್ನವನ್ನು ಮಾಡುವವರು ಕೂಡ ಇದ್ದಾರೆ. ಇದು ಕಚ್ಚುತ್ತದೆ ಎನ್ನುವ ಭ’ಯ ಕೂಡ ಅನೇಕರಿಗೆ. ಆದರೆ ನೀವು ಅದಕ್ಕೆ ತೊಂದರೆ ಕೊಡದೇ ಇದ್ದರೆ ಅದರಿಂದಲೂ ಕೂಡ ನಿಮಗೆ ತೊಂದರೆ ಆಗುವುದಿಲ್ಲ. ಅದರ ಪಾಡಿಗೆ ಅದು ಯಾವುದೋ ಒಂದು ಮೂಲೆಯಲ್ಲಿ ಗೂಡು ಕಟ್ಟಿಕೊಂಡು ವಾಸ ಮಾಡುತ್ತದೆ.
ನಿಮ್ಮ ಮನೆಯಲ್ಲಿ ನಿಮ್ಮ ಮನೆ ಸದಸ್ಯರು ಮಾತ್ರಬಲ್ಲದೆ ಸಾಕು ಪ್ರಾಣಿಗಳನ್ನು ಕೂಡ ಸಾಕಿರುತ್ತೀರಿ ಅದರ ಜೊತೆಗೆ ಹಲ್ಲಿ, ದುಂಬಿ, ಕಡಜ, ಇಲಿ ಇವುಗಳು ಕೂಡ ವಾಸಸ್ಥಳ ಮಾಡಿಕೊಂಡಿರುತ್ತವೆ. ಇವುಗಳಿಗೂ ಕೂಡ ಭೂಮಿ ಮೇಲೆ ಬದುಕುವ ಹಕ್ಕಿದೆ ಎಂದರೆ ಭಗವಂತ ಅವುಗಳಿಗೂ ಒಂದು ವಾಸಸ್ಥಾನವನ್ನು ಸೂಚಿಸಿರುತ್ತಾನೆ. ಅವುಗಳ ಋಣ ಇರುವ ಕಾರಣಕ್ಕೆ ಅವು ವಾಸ ಮಾಡುತ್ತಿರುತ್ತವೆ.
ಹಾಗಾಗಿ ಯಾವುದೇ ಕಾರಣಕ್ಕೂ ಅವುಗಳಿಗೆ ಹಾನಿ ಮಾಡಬೇಡಿ. ಅದರಲ್ಲೂ ಕಡಜವಂತು ಅಷ್ಟೊಂದು ದು’ಷ್ಟ ಕೀಟವಲ್ಲ ಅದರ ಪಾಡಿಗೆ ಅದು ಯಾವುದೋ ಮೂಲೆಯಲ್ಲಿ ಇದ್ದು ಕೆಲದಿನ ಆದಮೇಲೆ ಹೊರಟು ಹೋಗುತ್ತದೆ. ಇದು ನಿಮ್ಮ ಮನೆಗೆ ಧನಾಗಮನ ಆಗುವ ತಾಯಿ ಲಕ್ಷ್ಮಿ ನಿಮಗೆ ಒಲಿಯುವ ಸೂಚನೆಯನ್ನು ತಿಳಿಸಲು ಬಂದಿರುತ್ತದೆ. ಆದ ಕಾರಣಕ್ಕಾಗಿ ಕಡಜ ನಿಮ್ಮ ಮನೆಗೆ ಬಂದು ಗೂಡು ಕಟ್ಟಿದರೆ ಅದನ್ನು ಹಾನಿ ಮಾಡಿ ತೊಂದರೆ ಮಾಡಬೇಡಿ.
ಇದು ಎಲ್ಲರ ಮನೆಗೂ ಕೂಡ ಹೋಗಿ ಗೂಡು ಕಟ್ಟುವುದಿಲ್ಲ, ಅದಾಗಿ ಅದು ಹುಡುಕಿಕೊಂಡು ಬಂದು ನಿಮ್ಮ ಮನೆಯಲ್ಲಿ ನೆಲೆಸುತ್ತಿದೆ ಎಂದರೆ ಅದು ನಿಮಗೆ ಒಳ್ಳೆಯದು ಮಾಡುವ ಸೂಚನೆಗೆ ಆಗಿದೆ. ಅದಲ್ಲದೆ ಕಡಜಗಳು ಗೂಡು ಕಟ್ಟುವಾಗ ಬಹಳ ಶುದ್ಧವಾದ ಮಣ್ಣಿನಿಂದ ಕಟ್ಟುತ್ತವೆ ಯಾರು ಕೂಡ ತುಳಿಯದ ಯಾರು ಕೂಡ ಬಳಸದ ವಿಶೇಷ ಮಣ್ಣಿನಿಂದ ಈ ಗೂಡನ್ನು ಕಟ್ಟುವುದರಿಂದ ಅದಲ ಶ್ರೇಷ್ಠತೆ ಎಷ್ಟಿದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದು.
ಕಡಜ ಓಡಾಡುತ್ತಿರುವುದು ಇಲ್ಲ ಎನ್ನುವುದನ್ನು ದೃಡಪಡಿಸಿಕೊಂಡಾಗ ಮಾತ್ರ ಆ ಜಾಗವನ್ನು ನೀವು ಕ್ಲೀನ್ ಮಾಡಬಹುದು. ಒಂದು ಪೇಪರ್ ಸಹಾಯದಿಂದ ಮಣ್ಣನ್ನು ಉಜ್ಜಿ ಅದನ್ನು ತೆಗೆದು ಇಟ್ಟುಕೊಂಡು ನಂತರ ಗೋಮೂತ್ರ ಪ್ರೋಕ್ಷಣೆ ಮಾಡಿದರೆ ಸಾಕು ಇದರಿಂದ ಯಾವುದೇ ದೋಷ ಉಂಟಾಗುವುದಿಲ್ಲ. ಬೇಕಾದರೆ ಆ ಗೂಡು ಕಟ್ಟಿದ್ದ ಮಣ್ಣನ್ನು ಪ್ರತಿನಿತ್ಯ ನಿಮ್ಮ ಮನೆಯ ಸದಸ್ಯರು ಹಣೆಗೆ ಧರಿಸಬಹುದು ಇದು ದನಾಕರ್ಷಣೆಯನ್ನು ಸೆಳೆಯುವ ತಂತ್ರವಾಗಿದೆ.