ಮುತ್ತೈದೆ ಮಹಿಳೆಯರಿಗೆ ಕಿವಿ ಮಾತು, ನಿಮ್ಮ ಈ ಸ್ವಭಾವಗಳನ್ನು ಬದಲಾಯಿಸಿಕೊಂಡರೆ ಸುಖ ಶಾಂತಿ ನೆಮ್ಮದಿ ಜೊತೆ ಲಕ್ಷ್ಮಿ ಕೂಡ ನೆಲೆಸಿರುತ್ತಾಳೆ.!

ವಿವಾಹವಾಗಿರುವ ಸ್ತ್ರೀ ತಿಳಿದಿರಬೇಕಾದ ಮುಖ್ಯ ಸಂಗತಿಗಳು ಇವು:-

● ಮುತ್ತೈದೆಯರು ನೀವು ಹಾಕುವ ಮಂಗಳ ಸೂತ್ರಕ್ಕೆ ಯಾವುದೇ ಕಾರಣಕ್ಕೂ ಸೇಫ್ಟಿ ಪಿನ್ಗಳನ್ನು ಹಾಕಿಕೊಳ್ಳಬೇಡಿ. ನಿಮ್ಮ ತಕ್ಷಣಕ್ಕೆ ಇದು ಸಿಗಲಿ ಎಂದು ಇಂತಹ ತಪ್ಪನ್ನು ಮಾಡುತ್ತೀರಿ ಆದರೆ ಸೇಫ್ಟಿ ಪಿನ್ ಶನಿಯ ಪ್ರಭಾವ ಹೊಂದಿರುವುದರಿಂದ ಶನಿ ದೋಷ ಉಂಟಾಗಿ ಅದರ ದುಷ್ಪರಿಣಾಮಗಳು ನಿಮ್ಮ ಕುಟುಂಬದ ಮೇಲೆ ಬೀಳುತ್ತದೆ. ಇದು ನಿಮ್ಮ ಮತ್ತು ನಿಮ್ಮ ಪತಿಯ ನಡುವೆ ದಾಂಪತ್ಯ ಕಲಹ ಉಂಟಾಗಲು ಕಾರಣವಾಗಬಹುದು. ಇದರ ಬಗ್ಗೆ ಎಚ್ಚರವಹಿಸಿ, ಇಂತಹ ತಪ್ಪನ್ನು ಇನ್ನು ಮುಂದೆ ಮಾಡಬೇಡಿ.

● ಮುತ್ತೈತೆ ಎನ್ನುವ ಹೆಸರೇ ಐದು ಮುತ್ತುಗಳನ್ನು ಧರಿಸಿರುವವರು ಎಂದು ಹೇಳುತ್ತದೆ. ಹಾಗಾಗಿ ಸಿಂಧೂರ, ಮಾಂಗಲ್ಯ, ಮೂಗುತಿ, ಓಲೆ, ಕಾಲುಂಗುರ ಈ ಐದು ಮುತ್ತುಗಳನ್ನು ಸದಾ ಧರಿಸಬೇಕು. ಇವುಗಳ ಜೊತೆಗೆ ಜೊತೆಗೆ ಕೈ ಬಳೆಗಳು, ಹೂ ಇವುಗಳನ್ನು ಧರಿಸದೆ ಪೂಜೆ ಮಾಡಲೇಬಾರದು. ಈ ರೀತಿ ಪೂಜೆ ಮಾಡಿದರೂ ಆ ಪೂಜೆಗೆ ಯಾವುದೇ ಫಲ ದೊರೆಯುವುದಿಲ್ಲ. ಈ ರೀತಿಯಾಗಿ ದುರ್ವರ್ತನೆ ಹೊಂದಿದ್ದರೆ ನ’ಷ್ಟವೇ ಹೆಚ್ಚು ಹಾಗಾಗಿ ಇಂತಹ ತಪ್ಪನ್ನು ಮಾಡುತ್ತಿದ್ದರೆ ತಕ್ಷಣವೇ ಸರಿಪಡಿಸಿಕೊಳ್ಳಿ.

ನಿಮ್ಮ ಮನೆಗಳಲ್ಲೂ ಕೂಡ ಕಡಜ ಗೂಡು ಕಟ್ಟುತ್ತಿದೆಯಾ ಹಾಗಾದರೆ ನೀವು ಈ ವಿಚಾರ ತಿಳಿದುಕೊಳ್ಳಲೇಬೇಕು.!

● ಮಂಗಳಸೂತ್ರವನ್ನು ಮಾಂಗಲ್ಯ ಧಾರಣೆ ಸಂದರ್ಭದಲ್ಲಿ ಒಳ್ಳೆ ಮುಹೂರ್ತ ನೋಡಿ ಗುರು ಹಿರಿಯರ ಆಶೀರ್ವಾದದೊಂದಿಗೆ ಕಟ್ಟಿಸಲಾಗಿರುತ್ತದೆ. ಒಮ್ಮೆ ಇದನ್ನು ಕಟ್ಟಿಸಿಕೊಂಡ ಮೇಲೆ ನೀವು ನಿಮ್ಮ ಮನಸ್ಸಿಗೆ ಬಂದ ಹಾಗೆ ಅದನ್ನು ಯಾವಾಗಲಾದರೂ ತೆಗೆಯುವುದು, ಯಾವಾಗಲಾದರೂ ಹಾಕಿಕೊಳ್ಳುವುದು ಈ ರೀತಿ ಮಾಡಬೇಡಿ. ಇದರಿಂದ ನಿಮ್ಮ ಪತಿಗೆ ಯಶಸ್ಸಿಗೆ ಮತ್ತು ಆಯಸ್ಸಿಗೆ ಕುಂಠಿತ ಉಂಟಾಗುತ್ತದೆ. ಪತಿ ಆರೋಗ್ಯ ಹಾಗೂ ಹಣಕಾಸಿನ ಪರಿಸ್ಥಿತಿ ಇದರ ಮೇಲೂ ಕೆಟ್ಟ ಪರಿಣಾಮ ಬೀಳುವ ಸಾಧ್ಯತೆ ಕೂಡ ಇರುತ್ತದೆ.

● ಗೃಹಿಣಿಯನ್ನು ಮನೆಯ ಮಹಾಲಕ್ಷ್ಮಿ ಎಂದು ಹೇಳುತ್ತಾರೆ. ಹಾಗಾಗಿ ಮನೆಯಲ್ಲಿ ಹೆಣ್ಣು ಮಕ್ಕಳ ಸದಾ ನಗುನಗುತ್ತ ಇರಬೇಕು. ಆಗ ಆ ಮನೆಗೆ ಯಾವುದೇ ಹಣಕಾಸಿನ ತೊಂದರೆ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ನಗುನಗುತ ಎಲ್ಲವನ್ನು ಬಗೆಹರಿಸುವ ಕಲೆಗಾರಿಕೆಯನ್ನು ಆ ಮನೆಯ ಗೃಹಿಣೀಯು ಹೊಂದಿರಬೇಕು. ಮನೆಯ ಎಲ್ಲಾ ಸದಸ್ಯರ ಆಗುಹೋಗುಗಳನ್ನು ಅರಿತು ಸಹಕರಿಸುವ ಮಾತೃ ಹೃದಯ ಹೊಂದಿರುವ ಗುಣವಂತೆಯಾಗಿರಬೇಕು.

ರೇಷನ್ ವಿತರಣೆಯಲ್ಲಿ ಹೊಸ ಬದಲಾವಣೆ, ಅಕ್ಕಿ ಬದಲಿಗೆ ಹಣ ನೀಡಲು ಸರ್ಕಾರದ ಮಹತ್ವದ ನಿರ್ಧಾರ, ಈ ಬಗ್ಗೆ ಜನಸಾಮಾನ್ಯರ ಅಭಿಪ್ರಾಯ ಪಡೆಯಲು ಸರ್ವೆ.!

● ಗೃಹಿಣಿ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡು ದೇವರ ಪೂಜೆ ವ್ರತ ಹಬ್ಬ ಹರಿದಿನ ಇವುಗಳನ್ನು ತಪ್ಪದೇ ಪಾಲಿಸಿಕೊಂಡು ಬಂದರೆ ಆ ಮನೆ ಏಳಿಗೆಯಾಗುತ್ತದೆ. ಆಕೆಯು ಗುರುಹಿರಿಯಲಿ ಭಕ್ತಿ, ಕಿರಿಯರಲ್ಲಿ ಪ್ರೀತಿಯನ್ನು ತೋರಿ ಮನೆಯಲ್ಲಿ ಯಾವಾಗಲೂ ಶಾಂತಿಯಿಂದ ನಡೆದುಕೊಂಡರೆ ಆ ಮನೆಗೆ ಲಕ್ಷ್ಮಿಯ ಆಗಮನವಾಗುತ್ತದೆ ಎಂದು ಹೇಳಲಾಗಿದೆ.

● ಮನೆಯ ಮುತ್ತೈದೆಯ ಮನಸ್ಸಿನಲ್ಲಿ ದ್ವೇಷ, ಅಸೂಯೆ, ಹೊಟ್ಟೆಕಿಚ್ಚು, ಕಪಟತನ, ಮೋಸ, ವಂಚನೆ ಇಂತಹ ಕೆಟ್ಟ ಭಾವನೆ ತುಂಬಿದ್ದರೆ ಆ ಮನೆ ಎಂದಿಗೂ ಏಳಿಗೆ ಆಗುವುದಿಲ್ಲ. ಅದು ಅವರ ಮೇಲೆ ಮಾತ್ರ ಪರಿಣಾಮ ಬೀರದೆ ಇಡೀ ಕುಟುಂಬದ ಎಲ್ಲರ ಮನಸ್ಥಿತಿಯ ಮೇಲು ಕೂಡ ಪ್ರಭಾವ ಬೀರುತ್ತದೆ. ಜಗಳ, ಮನಸ್ತಾಪ ಈ ರೀತಿ ನಕಾರಾತ್ಮಕ ವಾತಾವರಣವೇ ಇರುತ್ತದೆ ಹೆಣ್ಣು ಮಕ್ಕಳು ಹೆಸರಿಗೆ ತಕ್ಕ ಹಾಗೆ ಸೌಮ್ಯವಾಗಿ ಸಕಾರಾತ್ಮಕವಾಗಿ ಹಾಗೂ ಮನಸ್ಸಿನಲ್ಲಿ ಪರಿಶುದ್ಧತೆಯಿಂದ ಇರಬೇಕು. ಆಗ ಮಾತ್ರ ಆ ಮನೆಯು ನಂದಾಗೋಕುಲವಾಗುವುದು.

ಆಧಾರ್ ಕಾರ್ಡ್ ಕುರಿತು ಸರ್ಕಾರದಿಂದ ಹೊಸ ಆದೇಶ ಜಾರಿ.! ನಿಗದಿತ ದಿನಾಂಕದೊಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದಿದ್ರೆ ದಂಡ ಫಿಕ್ಸ್.!

Leave a Comment