ಆಧಾರ್ ಕಾರ್ಡ್ (Aadhar card) ಈಗ ಭಾರತದಾಧ್ಯಂತ ಒಂದು ಮಾನ್ಯ ದಾಖಲೆ. ಆಧಾರ್ ಕಾರ್ಡ್ ಎಂದರೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಯೂನಿಕ್ ಆಗಿ ನೀಡುವ 12 ಅಂಕಿಗಳ ದಾಖಲೆ. ದೇಶದ ಎಲ್ಲಾ ನಾಗರಿಕರಿಗೂ ಕೂಡ ಆಧಾರ್ ಕಾರ್ಡ್ ಹಂಚುವ ಪ್ರಕ್ರಿಯೆ 10 ವರ್ಷಗಳ ಹಿಂದೆಯೇ ಆರಂಭವಾಗಿತ್ತು ಈಗ ದೇಶದಾದ್ಯಂತ ಎಲ್ಲರೂ ಕೂಡ ಆಧಾರ್ ಕಾರ್ಡ್ ಹೊಂದಿದ್ದಾರೆ.
ಆಧಾರ್ ಕಾರ್ಡ್ ಹೊಂದಿರದೆ ಹೋದಲ್ಲಿ ಅವರಿಗೆ ಸರ್ಕಾರದ ಯೋಜನೆಗಳ ಪ್ರಯೋಜನವಾಗಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಆಗಲಿ ಯಾವ ಕೆಲಸ ಕಾರ್ಯಗಳು ಆಗುವುದಿಲ್ಲ. ಶಾಲಾ ದಾಖಲಾತಿ ಸಮಯದಲ್ಲಿ, ಉದ್ಯೋಗಕ್ಕೆ ಸೇರುವ ಸಮಯದಲ್ಲಿ ಅಥವಾ ಉದ್ಯೋಗಕ್ಕೆ ಅರ್ಜಿ ಹಾಕಲು, ಸರ್ಕಾರದ ಸೇವೆಗಳನ್ನು ಪಡೆಯಲು ಹೀಗೆ ಬಹುತೇಕ ಎಲ್ಲಾ ಕೆಲಸ ಕಾರ್ಯಗಳು ಅಗತ್ಯ ದಾಖಲೆಯಾಗಿ ಆಧಾರ್ ಕಾರ್ಡ ನ್ನು ಕೇಳಲಾಗುತ್ತದೆ.
ಆದರೆ ಆಧಾರ್ ಕಾರ್ಡ್ ಮಾಡಿಸಿಕೊಂಡಾಗ ಅನೇಕರಿಗೆ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಹಾಗೂ ಇನ್ನಿತರ ಮಾಹಿತಿಯಲ್ಲಿ ವ್ಯತ್ಯಾಸವಾಗಿದ್ದಿದ್ದು ಕಂಡುಬಂದಿದ್ದು ಅದರ ತಿದ್ದುಪಡಿಗೂ (Aadhar correction ) ಕೂಡ ಅವಕಾಶ ನೀಡಲಾಗಿದೆ, ಪೂರಕ ದಾಖಲೆಗಳನ್ನು ಸಲ್ಲಿಸಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.
ಈ ರೀತಿ ಮಿಸ್ ಮ್ಯಾಚ್ ಆಗಿದ್ದ ಅನೇಕರು ಈಗಾಗಲೇ ಅದನ್ನು ಸರಿಪಡಿಸಿಕೊಂಡಿದ್ದಾರೆ ಹಾಗೆ ಕಾಲಕಾಲಕ್ಕೆ ತಕ್ಕಂತೆ ಅವರ ವಿಳಾಸ ಅಥವಾ ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳು ಬದಲಾದಾಗ ಅದನ್ನು ಅಪ್ಡೇಟ್ ಮಾಡಿಕೊಳ್ಳಲು ಅವಕಾಶವಿದೆ. ಆದರೆ 10 ವರ್ಷ ಕಳೆದರೂ ಒಮ್ಮೆ ಕೂಡ ಅಪ್ಡೇಟ್ ಮಾಡಿಸಿದವರು ಇದ್ದಾರೆ. ಸರ್ಕಾರ ಈಗ ಅವರಿಗೆಲ್ಲ ಒಂದು ಸೂಚನೆ ನೀಡಿದೆ.
ಕಳೆದ ಹತ್ತು ವರ್ಷಗಳಿಂದ ಯಾರು ಒಮ್ಮೆ ಕೂಡ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲ ಅವರು ಕಡ್ಡಾಯವಾಗಿ ಸೆಪ್ಟೆಂಬರ್ 14ರ ಒಳಗೆ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕು ಇಂದು ಆದೇಶ ಹೊರಡಿಸಿದೆ. ಈ ಹಿಂದೆ ಜುಲೈ 14 ಕಡೆ ದಿನಾಂಕವಾಗಿ ಹೇಳಲಾಗಿತ್ತು, ಆದರೆ ಮತ್ತೊಮ್ಮೆ ಅವಕಾಶ ನೀಡಿ ಸೆಪ್ಟೆಂಬರ್ 14 ರವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಕಾಲವಕಾಶವನ್ನು ವಿಸ್ತರಿಸಿದೆ.
ಒಂದು ವೇಳೆ ಈ ಸಮಯದಲ್ಲೂ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡದವರ ಆಧಾರ್ ಕಾರ್ಡ್ ಬಂದ್ ಆಗಬಹುದು ಅಥವಾ ಈವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು 50 ರೂ. ಶುಲ್ಕ ಇತ್ತು, ಮುಂದಿನ ದಿನಗಳಲ್ಲಿ ನೀವು ಅಪ್ಡೇಟ್ ಮಾಡಲು ಹೋದರೆ ನಿಮಗೆ ಹೆಚ್ಚಿನ ದಂಡ ಸಹ ಬೀಳಬಹುದು. ಹಾಗಾಗಿ ನಿರ್ಲಕ್ಷ ಮಾಡದೆ ಈ ಬಗ್ಗೆ ಗಮನ ಕೊಡಿ.
● ಆನ್ಲೈನ್ ಮತ್ತು ಆಫ್ಲೈನ್ ಎರಡು ವಿಧಾನದಲ್ಲಿ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಅವಕಾಶವಿದೆ.
UIDAI ಗೆ Login ಆಗಿ update Aadhar ಎನ್ನುವ ಆಪ್ಷನ್ ಕ್ಲಿಕ್ ಮಾಡಿ ಮುಂದಿನ ಹಂತಗಳನ್ನು ಪೂರೈಸುವ ಮೂಲಕ ಯಶಸ್ವಿಯಾಗಿ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದು, ಕನಿಷ್ಠ ಒಂದು ವಾರದ ಒಳಗೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿರುತ್ತದೆ.
● ಆಫ್ಲೈನ್ನಲ್ಲಿ ಅಪ್ಡೇಟ್ ಮಾಡಿಸಲು ಬಯಸುವವರು ಹತ್ತಿರದಲ್ಲಿರುವ ಎನ್ರೋಲ್ಮೆಂಟ್ ಸೆಂಟರ್ ಗಳಿಗೆ ಭೇಟಿಕೊಟ್ಟು ಪೂರಕ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಿ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದು.