ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಸ್ಯೆಗಳು ಶಾಪದಂತಹ ವರದಂತಹ ಶಾಪ ಎನ್ನಬಹುದು. ಯಾಕೆಂದರೆ ತಡವಾಗಿ ಮುಟ್ಟುವಾಗುವುದು, ಮುಟ್ಟಾಗದೆ ಇರುವುದು ಅಥವಾ ಬೇಗ ಮುಟ್ಟಾಗುವುದು ಎಲ್ಲವೂ ಕೂಡ ಆಕೆಯ ದೈಹಿಕ ಆರೋಗ್ಯದ ಮೇಲೆ ಹಾಗೆ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.
ಅತಿಯಾದ ರಕ್ತಸ್ರಾವ, ಬಿಳಿ ಮುಟ್ಟು ಈ ರೀತಿಯ ಸಮಸ್ಯೆಗಳು ಆಕೆಯನ್ನು ಇನ್ನಷ್ಟು ಕುಗ್ಗಿಸುತ್ತವೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಕೂಡ ಪುರುಷರಿಗೆ ಸರಿಸಮಾನವಾಗಿ ವಿದ್ಯಾಭ್ಯಾಸ, ಉದ್ಯೋಗ ಕ್ಷೇತ್ರ ಎಲ್ಲದರಲ್ಲೂ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಕೌಟುಂಬಿಕ ವಿಚಾರದಲ್ಲೂ ಕೂಡ ಆಕೆಯಗಿರುವುದು ಅತಿ ಹೆಚ್ಚಿನ ಜವಾಬ್ದಾರಿ ಸ್ಥಾನ.
ಹೆಣ್ಣು ಮಕ್ಕಳಿಗೆ ಸಂತಾನ ಭಾಗ್ಯ ಬರುವುದೇ ಮುಟ್ಟಾಗುವುದರಿಂದ ಹಾಗಾಗಿ ನಿಯಮಿತವಾಗಿ ಮುಟ್ಟಾಗುವ ಹಾಗೂ ಮುಟ್ಟಾದಾಗ ಸಮಸ್ಯೆ ಬಾರದ ರೀತಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಆಕೆಯದ್ದೇ. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ತಪ್ಪಾದ ಆಹಾರ ಪದ್ಧತಿ ಮತ್ತು ಅತಿಯಾದ ಪಾಶ್ಚಿಮಾತ್ಯ ಶೈಲಿಯ ಅಳವಡಿಕೆ ಹೆಣ್ಣು ಮಕ್ಕಳ ಗರ್ಭಧಾರಣೆ ಮೇಲೆ ಪ್ರಭಾವ ಬೀರುತ್ತಿದೆ.
ಯಾವ ಯಾವ ತಪ್ಪುಗಳಿಂದ ಹೆಣ್ಣು ಮಕ್ಕಳು ಈಗ ಗರ್ಭಧಾರಣೆ ಸಮಸ್ಯೆ ಅನುಭವಿಸುತ್ತಿದ್ದಾರೆ ಹಾಗೆ ಅವರಿಗಿರುವ ಮುಟ್ಟಿನ ಸಮಸ್ಯೆಗಳಿಗೆ ಮನೆಮದ್ದುಗಳೇನು ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
ಗೃಹಿಣಿಯರೇ ನೀವು ದಪ್ಪ ಆಗಲು ನೈಟಿ ಕಾರಣ ಎಚ್ಚರ.!
● ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಫ್ಯಾಷನ್ ಹೆಸರಿನಲ್ಲಿ ಅತಿ ಬಿಗಿಯಾದ ಉಡುಪುಗಳನ್ನು ಧರಿಸುತ್ತಾರೆ ಇದು ನೇರವಾಗಿ ಆಕೆಯ ಗರ್ಭಕೋಶದ ಆರೋಗ್ಯದ ಮೇಲೆ ಪ್ರಭಾವ ಬರುತ್ತದೆ. ಇದರಿಂದ ಸಂತಾನದ ಸಮಸ್ಯೆ ಹಾಗೂ ಮುಟ್ಟಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
● ಹಿಂದೆ ಹೆಣ್ಣುಮಕ್ಕಳು ಕೈ ತುಂಬಾ ಬಳೆ ಹಾಕಿಕೊಳ್ಳುತ್ತಿದ್ದರು. ನಾಡಿಯಲ್ಲಿರುವ ರಕ್ತನಾಳಗಳು ಗರ್ಭಕೋಶಕ್ಕೆ ಸಂಪರ್ಕ ಹೊಂದಿರುವುದರಿಂದ ಇದು ಆಕೆಯ ಆರೋಗ್ಯಕ್ಕೂ ಕೂಡ ಸಹಕಾರಿ ಆಗಿತ್ತು, ಥೈರೊಯ್ಡ್ ಗ್ರಂಥಿಗಳು ಮೆದುಳಿನ ಗ್ರಂಥಿಗಳು ಸ್ರವಿಸುವ ಹಾರ್ಮೋನ್ ಸಮತೋಲನದಲ್ಲಿ ಇರುತ್ತಿತ್ತು. ಹಾಗಾಗಿ ಮುಟ್ಟಿನ ಸಮಸ್ಯೆಗಳು ಮತ್ತು ಗರ್ಭಧಾರಣೆ ಸಮಸ್ಯೆಗಳು ಕಡಿಮೆ ಇತ್ತು ಆದರೆ ಹೆಣ್ಣು ಮಕ್ಕಳು ಬಳೆ ಹಾಕುವುದನ್ನು ಮರೆತುಬಿಟ್ಟಿದ್ದಾರೆ ಆದ ಕಾರಣ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗುತ್ತಿದೆ ಎಂದರು ತಪ್ಪಾಗಲಾರದು.
LIC ಜೀವನ್ ಶಾಂತಿ ಪ್ಲಾನ್, 1,50,000 ಡೆಪಾಸಿಡ್ ಮಾಡಿದ್ರೆ ಸಾಕು ಗಂಡ ಹೆಂಡತಿ ಇಬ್ಬರಿಗೂ ಬರಲಿದೆ 13,395 ಪೆನ್ಷನ್.!
● ಅದೇ ರೀತಿ ತಡವಾಗಿ ಮಲಗುವುದು, ತಡವಾಗಿ ಹೇಳುವುದು ಕೂಡ ದೇಹದಲ್ಲಿ ಹಾರ್ಮೋನ್ ಇಂಬ್ಯಾಲೆನ್ಸ್ ಗೆ ಕಾರಣ ಆಗುತ್ತದೆ. ಇದು ನೇರವಾಗಿ ಋತುಚಕ್ರದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಹಾಗಾಗಿ ಈ ವಿಷಯದ ಬಗ್ಗೆ ಗಮನಹರಿಸಿ ಇಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು.
● ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು ದಿನನಿತ್ಯ 3-4 ಲೀಟರ್ ನೀರು ಕುಡಿಯುವುದು, ಕನಿಷ್ಠ 30 ನಿಮಿಷಗಳ ವಾಕಿಂಗ್ ಅಥವಾ ಸಣ್ಣಪುಟ್ಟ ವ್ಯಾಯಾಮ ಮಾಡುವುದು, ಬೇಗ ಮಲಗುವುದು ಹಾಗು ಬೇಗ ಏಳುವುದು, ಸಾತ್ವಿಕ ಆಹಾರ ಸೇವನೆ ಮಾಡುವುದು ಇವುಗಳು ಈ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ನೀಡಬಲ್ಲದು, ಋತುಚಕ್ರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಇದು ಸಹಾಯ ಮಾಡುವುದು.
ಈ ದೇವರ ಫೋಟೋ ಮನೆಯಲ್ಲಿ ಇದ್ದರೆ ಕೂಡಲೇ ಬದಲಾಯಿಸಿ, ಇಲ್ಲದಿದ್ರೆ ಕಷ್ಟಗಳು ತಪ್ಪಿದ್ದಲ್ಲ.!
● ಬಹಳ ತಡವಾಗಿ ಮುಟ್ಟಾಗುತ್ತಿರುವವರು 100ಗ್ರಾಂ ಕ್ಯಾರೆಟ್ ಬೀಜ ಹಾಗೂ 100 ಗ್ರಾಂ ಓಂ ಕಾಳು ಈ ಎರಡನ್ನು ಪುಡಿ ಮಾಡಿ ಒಂದು ಚಮಚ ಈ ಪುಡಿಯನ್ನು 200ಮಿ.ಲೀ ನೀರಿಗೆ ಹಾಕಿ 100ಮಿ.ಲಿ ಬರುವವರೆಗೂ ಕುದಿಸಿ ನಂತರ ಖಾಲಿ ಹೊಟ್ಟೆಗೆ ಸೇವನೆ ಮಾಡುತ್ತಾ ಬರುವುದರಿಂದ ಈ ಸಮಸ್ಯೆ ನಿವಾರಣೆ ಆಗುವುದು.
● ತಿಂಗಳಿಗೆ ಮುಂಚೆ ಮುಟ್ಟಾಗುವ ಸಮಸ್ಯೆ ಹೊಂದಿರುವವರು ಬೆಟ್ಟದ ನೆಲ್ಲಿಕಾಯಿ ಪುಡಿ ಹಾಗೂ ಧನಿಯಾ ಪುಡಿಯನ್ನು ಮಿಕ್ಸ್ ಮಾಡಿ ಇಟ್ಟುಕೊಂಡು ಒಂದು ಚಮಚ ಈ ಪುಡಿಯನ್ನು 200 ಮಿ.ಲೀ ನೀಟಾಗಿ ಹಾಕಿ 100 ಮೀ.ಲೀ ಬರುವವರೆಗೂ ಕುದಿಸಿ ಬೆಳಿಗ್ಗೆ ಹಾಗೂ ಸಂಜೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಈ ಸಮಸ್ಯೆ ಪರಿಹಾರ ಆಗುತ್ತದೆ.