ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಬಾರಿ ಕಾಲು ಜೋಮು ಹಿಡಿಯುವುದು ಬಂದೇ ಬಂದಿರುತ್ತದೆ. ಅನೇಕರಿಗೆ ಈ ಸಮಯದಲ್ಲಿ ಕಾಲು ಕೈ ಊದಿಕೊಂಡ ರೀತಿ ಆದರೆ ಅವರಿಗೆ ಚುಚ್ಚಿದ ಅನುಭವ ಆಗುತ್ತದೆ. ಸಾಮಾನ್ಯವಾಗಿ ಒಂದೇ ಕಡೆ ಕುಳಿತಿದ್ದಾಗ ಈ ರೀತಿ ಅರ್ಧಗಂಟೆವರೆಗೆ ಜೋಮು ಹಿಡಿದಿದ್ದರೆ ಅದು ಸರ್ವೇಸಾಮಾನ್ಯ ಲಕ್ಷಣ ಎನ್ನಬಹುದು.
ಆದರೆ ಪದೇ ಪದೇ ಈ ರೀತಿ ಆಗುತ್ತಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಲೇಬೇಕು. ಅನೇಕ ಕಾರಣಗಳಿಂದಾಗಿ ಈ ರೀತಿ ಕೈಕಾಲು ಜೋಮು ಹಿಡಿಯುವ ಸಮಸ್ಯೆ ಉಂಟಾಗುತ್ತದೆ. ರಕ್ತಹೀನತೆ, ವಿಟಮಿನ್ ಬಿ12 ಕೊರತೆ, ವಿಟಮಿನ್ ಡಿ ಕೊರತೆ, ಮಧುಮೇಹ, ಕಿಡ್ನಿ ಸಮಸ್ಯೆ, ರಕ್ತಹೀನತೆ, ನರ ದೌರ್ಬಲ್ಯ ಇನ್ನು ಮುಂತಾದ ಹತ್ತು ಹಲವು ಸಮಸ್ಯೆಗಳು ಈ ರೀತಿ ಕೈ ಕಾಲು ಜೋಮು ಹಿಡಿಯುವುದಕ್ಕೆ ಕಾರಣವಾಗಿದೆ.
ಸೊಂಟ ನೋವು ಗುಣವಾಗಲು ಈ ಟಿಪ್ಸ್ ಫಾಲೋ ಮಾಡಿ.!
ಈ ರೀತಿ ಸಮಸ್ಯೆ ಉಂಟಾದಾಗ ಅವರು ಬಹಳ ಹಿಂಸೆ ಪಡುತ್ತಾರೆ ಅದರಲ್ಲೂ ಪದೇ ಪದೇ ಈ ರೀತಿ ಆಗುತ್ತಿದ್ದಾಗ ಅವರಿಗೆ ವಿಚಿತ್ರವೇದನೆ ಆಗುತ್ತದೆ. ನೈಸರ್ಗಿಕವಾಗಿ ಈ ಸಮಸ್ಯೆಗಳಿಂದ ಗುಣಪಡಿಸಿಕೊಳ್ಳಲು ಹೆಚ್ಚಿನವರು ಪ್ರಯತ್ನಿಸುತ್ತಾರೆ. ಇದಕ್ಕೂ ಮೊದಲು ನೀವು ರಕ್ತ ಪರೀಕ್ಷೆ ಮಾಡಿಸಿ ಯಾವ ಕಾರಣಕ್ಕಾಗಿ ನಿಮಗೆ ಈ ರೀತಿ ಆಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ನಂತರ ಅದಕ್ಕೆ ಸಂಬಂಧಪಟ್ಟ ಹಾಗೆ ಕೆಲವು ಮನೆಮದ್ದುಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ಅವುಗಳನ್ನು ಫಾಲೋ ಮಾಡುವ ಮೂಲಕ ಸಮಸ್ಯೆಯಿಂದ ಹೊರ ಬರಬಹುದು.
● ನರದೌರ್ಬಲ್ಯ ಉಂಟಾಗಿರುವ ಕಾರಣದಿಂದಾಗಿ ಈ ರೀತಿ ಆಗುತ್ತಿದ್ದರೆ ಅವುಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು. ಅದು ನಾವು ಸೇವಿಸುವ ಆಹಾರದಿಂದಲೇ ಸಾಧ್ಯ, ಹಾಗಾಗಿ ಉತ್ತಮ ಪೋಷಕಾಂಶಗಳುಳ್ಳ ಆಹಾರಗಳು, ಹಣ್ಣು ತರಕಾರಿಗಳು ಬ್ರಾಕೋಲಿ ಇತ್ಯಾದಿಗಳನ್ನು ಸೇವಿಸಬೇಕು.
● ಡ್ರೈ ಫ್ರೂಟ್ಸ್ ಗಳ ಸೇವನೆ ಕೂಡ ಒಳ್ಳೆಯದು. ಇದು ಕ್ರಮೇಣ ಕೈ ಕಾಲು ಜೋಮು ಹಿಡಿಯುವುದು ಇಂತಹ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ.
● ಮಧುಮೇಹಿಗಳು ಒಂದು ಲೋಟ ನೀರಿಗೆ ಒಂದೆರಡು ಚಿಟಿಕೆ ಚಕ್ಕೆ ಪುಡಿ ಸೇರಿಸಿ ಕುದಿಸಿ ಕುಡಿಯುವುದರಿಂದ ಇದು ನಿಯಂತ್ರಣಕ್ಕೆ ಬರುತ್ತದೆ. ಮಧುಮೇಹ ಇಲ್ಲದವರು ಇದರ ಜೊತೆ ಜೇನುತುಪ್ಪವನ್ನು ಕೂಡ ಸೇವಿಸಬಹುದು.
ಅಕ್ಟೋಬರ್ 1 ರಿಂದ ಆಸ್ತಿ ನೋಂದಣಿ ದರ ಹೆಚ್ಚಳ ಕಂದಾಯ ಸಚಿವ ಕೃಷ್ಣಬೈರೇ ಗೌಡ ಅವರಿಂದ ಅಧಿಕೃತ ಘೋಷಣೆ.!
● ಕಿಡ್ನಿ ಸಮಸ್ಯೆಯಿಂದ ಈ ರೀತಿ ಆಗುತ್ತಿದ್ದರೆ ಅದನ್ನು ನಿವಾರಣೆ ಮಾಡಲು ಮೂರು ನೆಗ್ಗಿನ ಮುಳ್ಳುಗಳನ್ನು ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿ ಇದನ್ನು 400 ml ನೀರಿಗೆ ಹಾಕಿ ಅದರ ಜೊತೆಗೆ ಸ್ವಲ್ಪ ತುಂಬೆ ಸೊಪ್ಪು ಹಾಗೂ ಒಂದು ಸ್ವಲ್ಪ ನಾಟಿ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ 100ml. ಆದ ಮೇಲೆ ಅದನ್ನು ಶೋಧಿಸಿ ಬೆಳಗ್ಗೆ ಹಾಗೂ ರಾತ್ರಿ 50ml. ಕುಡಿಯುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ. ಆಹಾರದಲ್ಲಿ ಬೆಳ್ಳುಳ್ಳಿ ಸೇವನೆ ಕೂಡ ಒಳ್ಳೆಯದು
● ವಿಟಮಿನ್ ಡಿ ಗಾಗಿ ಸೂರ್ಯನ ಬೆಳಕಿನಲ್ಲಿ ಕೆಲ ಸಮಯ ಕುಳಿತುಕೊಳ್ಳಿ, ಓಡಾಡಿ ಅಥವಾ ಚಟುವಟಿಕೆಗಳನ್ನು ಮಾಡಿ.
● ಕ್ಯಾಲ್ಸಿಯಂ ಕೊರತೆ ನಿವಾರಣೆ ಮಾಡಿಕೊಳ್ಳಲು ಮೊಟ್ಟೆಗಳನ್ನು ಸೇವಿಸಿ. ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿಗೆ ಇರುವ ನುಗ್ಗೆ ಸೊಪ್ಪು, ಬೀಟ್ರೂಟ್ ಇತ್ಯಾದಿ ಆಹಾರ ಪದಾರ್ಥಗಳನ್ನು ಸೇವಿಸಿ.
ದೇಶದಾದ್ಯಂತ ಇರುವ ಎಲ್ಲ LIC ಏಜೆಂಟ್ ಮತ್ತು ನೌಕರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ.!
● ಸಾಸಿವೆ ಎಣ್ಣೆ ಅಥವಾ ಹರಳೆಣ್ಣೆ ಅಥವಾ ಎಳ್ಳೆಣ್ಣೆ ಅಥವಾ ಆಯುರ್ವೇದ ಅಂಗಡಿಗಳಲ್ಲಿ ಸಿಗುವ ಮಹಾನಾರಾಯಣ ತೈಲ ತೆಗೆದುಕೊಂಡು ಉಗುರು ಬೆಚ್ಚಗೆ ಮಾಡಿ ಚೆನ್ನಾಗಿ ಕೈಕಾಲಿಗೆ ಮಸಾಜ್ ಮಾಡಿ ಸ್ನಾನ ಮಾಡುವುದರಿಂದ ಕೂಡ ನರನಾಡಿಗೆ ಸಂಬಂಧಪಟ್ಟ ಸಮಸ್ಯೆ ನಿವಾರಣೆ ಆಗಿ, ಕೈ ಕಾಲು ಜೋಮು ಹಿಡಿಯುವುದು ಕಡಿಮೆಯಾಗುತ್ತದೆ. ಕೈ ಕಾಲು ಜೋಮು ಹಿಡಿದಾಗ ತಕ್ಷಣ ನಿವಾರಣೆಯಾಗಲು ಕೂಡ ಈ ರೀತಿ ಎಣ್ಣೆ ಮಸಾಜ್ ಮಾಡಬಹುದು.