ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಫಲಾನುಭವಿಸಲು ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಪಿಂಚಣಿ (Pension) ಪಡೆಯುತ್ತಿದ್ದಾರೆ. ಹಿರಿಯ ನಾಗರಿಕರ ವೃದ್ಯಾಪ್ಯ ವೇತನ, ವಿಧವಾ ವೇತನ, ಮೈತ್ರಿ ಯೋಜನೆ, ಮನಸ್ವಿನಿ ಯೋಜನೆ, ಅಂಗವಿಕಲ ವೇತನ, ಆಸಿಡ್ ದಾಳಿಗೆ ಒಳಗಾದವರು, ಆ.ತ್ಮ.ಹ.ತ್ಯೆ.ಗೆ ಒಳಗಾದ ರೈತನಿಗೆ ಮಾಸಿಕ ಪಿಂಚಣಿ ಈ ರೀತಿ ಯೋಜನೆಗಳ ಮೂಲಕ ಅವರ ಜೀವನ ನಿರ್ವಹಣೆಗೆ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಅವರ ಬ್ಯಾಂಕ್ ಖಾತೆಗೆ ಅಥವಾ ಅಂಚೆ ಕಚೇರಿ (Amout transfer to post office account or bank account) ಖಾತೆಗೆ ಹಣ ವರ್ಗಾವಣೆ ಮಾಡಿ ಸರ್ಕಾರ ನೆರವಾಗುತ್ತಿದೆ.
ಆದರೆ ಈ ಯೋಜನೆಗಳ ಪಿಂಚಣಿ ಅನುಕೂಲ ಪಡೆಯಲು ಇರುವ ಕಂಡೀಶನ್ ಗಳಲ್ಲಿ ಮುಖ್ಯವಾದ ಕಂಡಿಶನ್ ಏನೆಂದರೆ ಒಬ್ಬರು ಒಂದಕ್ಕಿಂತ ಹೆಚ್ಚು ಯೋಜನೆಯ ಫಲಾನುಭವಿಗಳು ಆಗುವಂತಿಲ್ಲ ಎನ್ನುವುದು. ಆದರೆ ನಮ್ಮ ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ಯೋಜನೆಗಳ ಪ್ರಯೋಜನವನ್ನು ಸಾವಿರಾರು ಫಲಾನುಭವಿಗಳು ಪಡೆಯುತ್ತಿದ್ದಾರೆ ಎನ್ನುವುದು ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ನಿರ್ದೇಶನಾಲಯದ ಗಮನಕ್ಕೆ ಬಂದಿದೆ.
ಕೈ ಕಾಲು ಜೋಮು ಹಿಡಿಯುತ್ತಿದ್ದರೆ ಈ ಮನೆ ಮದ್ದನ್ನು ಟ್ರೈ ಮಾಡಿ.!
ಇದನ್ನು ಪತ್ತೆ ಹಚ್ಚಿ ಒಂದಕ್ಕಿಂತ ಹೆಚ್ಚು ಯೋಜನೆಗೆ ನೋಂದಾಯಿಸಿಕೊಂಡಿರುವ ಫಲಾನುಭವಿಗಳ ವಿವರವನ್ನು ಪಟ್ಟಿ ಮಾಡಿ ಅವರಲ್ಲಿ ಹೆಚ್ಚು ಯಾವುದಕ್ಕೆ ಅವರು ಸೂಕ್ತ ಎನ್ನುವುದನ್ನು ಆರಿಸಿ ಮತ್ತೊಂದನ್ನು ರದ್ದುಪಡಿಸಲು ಅಧಿಕಾರಿಗಳಿಗೆ ನಿರ್ದೇಶನಾಲಯವು ಜವಾಬ್ದಾರಿ ವಹಿಸಿದೆ. ಈ ಕಾರ್ಯಕ್ಕೆ ಆಧಾರ್ ಲಿಂಕ್ (Aadhar link to bank account) ಮಾಡುವುದು ಸೂಕ್ತ ಎಂದು ನಿರ್ಧರಿಸಿ ಈ ಕುರಿತು ಒಂದು ಮಹತ್ವದ ಸೂಚನೆಯನ್ನು ಹೊರಡಿಸಲಾಗಿದೆ.
ಅದೇನೆಂದರೆ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ ಮೂಲಕ ಮಾಸಿಕ ಪಿಂಚಣಿ ಪಡೆಯುತ್ತಿರುವವರು ಪಿಂಚಣಿ ಪಡೆಯುತ್ತಿರುವ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು ಆದೇಶಿಸಿದೆ. ಹಾಗಾಗಿ ತಪ್ಪದೇ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕಿದೆ. ಅಂಚೆ ಕಚೇರಿ ಖಾತೆಗೆ ಪಿಂಚಣಿ ಹಣ ಪಡೆಯುತ್ತಿರುವವರು ಅಥವಾ ಯಾವುದೇ ಬ್ಯಾಂಕ್ ಖಾತೆಗೆ ಪಿಂಚಣಿ ಹಣ ಪಡೆಯುತ್ತಿದ್ದರು ಕೂಡ ತಮ್ಮ ಆಧಾರ್ ಕಾರ್ಡ್ ಅನ್ನು ಆ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕಾಗಿದೆ.
ಸೊಂಟ ನೋವು ಗುಣವಾಗಲು ಈ ಟಿಪ್ಸ್ ಫಾಲೋ ಮಾಡಿ.!
ಒಂದು ವೇಳೆ ನಿರ್ದೇಶನದ ಆದೇಶದಂತೆ ಈ ಪ್ರಕ್ರಿಯೆ ಪೂರ್ತಿಗೊಳಿಸದೆ ಇದ್ದರೆ ನಿಮಗೆ ಈ ತಿಂಗಳಿನಿಂದ ಮಾಸಿಕ ಪಿಂಚಣಿ ಸ್ಥಗಿತಗೊಳ್ಳಬಹುದು. ನಿಮ್ಮ ಗ್ರಾಮ ಪಂಚಾಯಿತಿ (Grama Panchayath) ವ್ಯಾಪ್ತಿಯಲ್ಲಿ ಎಷ್ಟು ಫಲಾನುಭವಿಗಳು ಹೀಗೆ ವಿವಿಧ ಯೋಜನೆಗಳಲ್ಲಿ ಮಾಸಿಕ ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ ಮತ್ತು ಯಾವ ಯೋಜನೆಯಡಿ ಅವರಿಗೆ ಪಿಂಚಣಿ ಬರುತ್ತಿದೆ ಮತ್ತು ಯಾವ ಬ್ಯಾಂಕ್ ಖಾತೆಗೆ ಈ ಹಣ ಬರುತ್ತಿದೆ ಎನ್ನುವುದರ ವಿವರ ಗ್ರಾಮದ ಆಡಳಿತಾಧಿಕಾರಿ ಬಳಿ ಸಿಗುತ್ತದೆ.
ಪಿಂಚಣಿ ಪಡೆಯುವವರಿಗೆ ಅನುಕೂಲವಾಗಲಿ ಎಂದು ಗ್ರಾಮದ ಆಡಳಿತಾಧಿಕಾರಿ ಕಚೇರಿ ಮತ್ತು ಅಂಚೆ ಕಚೇರಿಗಳಲ್ಲಿ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಮಾಡಿಸಿರದ ಫಲಾನುಭವಿಗಳ ಪಟ್ಟಿ, ಆಧಾರ್ ನಂಬರ್ ಚಾಲ್ತಿಯಲ್ಲಿ ಇರದ ಪಟ್ಟಿ ಸಿದ್ಧಪಡಿಸಿ ಮಾಹಿತಿ ತಿಳಿಯುವಂತೆ ಮಾಡಬೇಕು ಎಂದು ನಿರ್ದೇಶನಲಯವು ಸೂಚನೆ ನೀಡಿದೆ.
ಅಕ್ಟೋಬರ್ 1 ರಿಂದ ಆಸ್ತಿ ನೋಂದಣಿ ದರ ಹೆಚ್ಚಳ ಕಂದಾಯ ಸಚಿವ ಕೃಷ್ಣಬೈರೇ ಗೌಡ ಅವರಿಂದ ಅಧಿಕೃತ ಘೋಷಣೆ.!
ನಿಮ್ಮ ಕುಟುಂಬದಲ್ಲಿ ಯಾರಾದರೂ ಈ ರೀತಿ ಪಿಂಚಣಿ ಪಡೆಯುತ್ತಿದ್ದು ಇದ್ದಕ್ಕಿದ್ದ ಹಾಗೆ ಅವರ ಪಿಂಚಣಿ ಹಣ ಸ್ಥಗಿತಗೊಂಡಿದ್ದರೆ ಇದೇ ಕಾರಣ ಇರಬಹುದು. ಹಾಗಾಗಿ ತಕ್ಷಣವೇ ನಿಮ್ಮ ಅಂಚೆ ಕಚೇರಿ ಅಥವಾ ಗ್ರಾಮ ಆಡಳಿತಾಧಿಕಾರಿ ಕಛೇರಿಗೆ ಭೇಟಿ ಕೊಟ್ಟು ಸಮಸ್ಯೆಯನ್ನು ತಿಳಿಸಿ ಬಗೆಹರಿಸಿಕೊಳ್ಳಿ ಮತ್ತು ಹೊಸ ಆದೇಶದಂತೆ ನಿಮ್ಮ ಬ್ಯಾಂಕ್ ಖಾತೆಗಳಿಗೆ ದಾಖಲೆಗಳು ಸಲ್ಲಿಕೆಯಾಗಿವೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ.