ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 27 ನಕ್ಷತ್ರಗಳು ಇವೆ ಎಂದು ಹೇಳಲಾಗುತ್ತದೆ. ಈ 27 ನಕ್ಷತ್ರದ ಆಧಾರದ ಮೇಲೆ 12 ರಾಶಿಗಳು ಇವೆ. ಪ್ರತಿ ಪಾದಕ್ಕೂ ಕೂಡ ಬೇರೆ ಬೇರೆ ರಾಶಿ ಬರುತ್ತದೆ. ನಮ್ಮ ಜನ್ಮ ಸಮಯದಲ್ಲಿ ಯಾವ ರಾಶಿ ಹಾಗೂ ನಕ್ಷತ್ರ ಇರುತ್ತದೆ ಎನ್ನುವುದರ ಆಧಾರದ ಮೇಲೆ ನಮ್ಮ ಭವಿಷ್ಯವನ್ನು ನಿರ್ಧರಿಸಿ ಹೇಳಬಹುದು ಎನ್ನುತ್ತಾರೆ ಖ್ಯಾತ ಜ್ಯೋತಿಷಿಗಳು.
ಅದೇ ಪ್ರಕಾರವಾಗಿ ಹಲವಾರು ಮಹಾನೀಯರ ಜಾತಕವನ್ನು ಪರಾಮರ್ಶಿಸಿ ನೋಡಿ ಕೆಲವು ಹೊಂದಾಣಿಕೆಗಳನ್ನು ಉದಾಹರಿಸಿ ಕೆಲ ನಕ್ಷತ್ರಗಳಲ್ಲಿ ಹುಟ್ಟಿದವರು ಅದೃಷ್ಟವಂತರು ಅವರಿಗೆ ಹುಟ್ಟುವಾಗಲೇ ಯೋಗ ಬಂದಿರುತ್ತದೆ ಎಂದು ಹೇಳುವುದನ್ನು ನಾವು ಕೇಳಿರಬಹುದು. ಹಾಗಾದರೆ ಯಾವ ಯಾವ ನಕ್ಷತ್ರದಲ್ಲಿ ಹುಟ್ಟಿದವರು ಬಹಳ ಪುಣ್ಯವಂತರು ಎಂದು ನೋಡುವುದಾದರೆ ಈಗ ನಾವು ಹೇಳುತ್ತಿರುವ ಈ ಐದು ನಕ್ಷತ್ರಗಳವರು ಬಹಳ ಪುಣ್ಯವಂತರಾಗಿರುತ್ತಾರೆ. ಅದು ಯಾಕೆ ಮತ್ತು ಹೇಗೆ ಎನ್ನುವವರ ಇಲ್ಲಿದೆ ನೋಡಿ.
● ಪುಷ್ಯ ನಕ್ಷತ್ರ:- ಪುಷ್ಯ ನಕ್ಷತ್ರಾಧಿಪತಿ ಶನಿ ಆಗಿದೆ. ಅದರಲ್ಲೂ ಪುಷ್ಯ ನಕ್ಷತ್ರ ಗುರುವಾರದಂದು ಜನಿಸಿದವರು ಬಹಳ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಇವರು ಜೀವನದಲ್ಲಿ ಯಾವಾಗಲೂ ಸಕರಾತ್ಮಕವಾಗಿ ಇರುತ್ತಾರೆ. ಇವರು ಅತ್ಯಂತ ಸಾಮರ್ಥ್ಯ ಉಳ್ಳವರು ಆದರೆ ಅವುಗಳನ್ನು ಒಳ್ಳೆ ಕೆಲಸಕ್ಕಾಗಿ ಉಪಯೋಗಿಸುವವರು ಆಗಿರುತ್ತಾರೆ. ಕ್ರೀಡೆಗಳ ಬಗ್ಗೆ ಇವರಿಗೆ ಆಸಕ್ತಿ ಹೆಚ್ಚಾಗಿದ್ದು ಆ ಕ್ಷೇತ್ರದಲ್ಲಿ ಸಾಧನೆ ಮಾಡಲಿದ್ದಾರೆ ಎಂದು ಹೇಳಲಾಗುತ್ತದೆ. ಶನಿ ಪ್ರಭಾವ ಇರುವುದರಿಂದ ಬಹಳ ಪ್ರಾಮಾಣಿಕರಾಗಿ ಇರಲು ಇಷ್ಟಪಡುತ್ತಾರೆ ಇದೇ ಕಾರಣಕ್ಕಾಗಿ ಇವರಿಗೆ ಯಾವಾಗಲೂ ಒಳ್ಳೆಯದಾಗುತ್ತದೆ.
● ಅಶ್ವಿನಿ ನಕ್ಷತ್ರ:- ಈ ನಕ್ಷತ್ರದ ನಕ್ಷತ್ರಾಧಿಪತಿ ಕೇತು. ಅಶ್ವಿನಿ ನಕ್ಷತ್ರ ಮೊದಲ ನಕ್ಷತ್ರ ಹಾಗಾಗಿ ಅದೃಷ್ಟದಲ್ಲಿ ಕೂಡ ಇವರು ಮೊದಲು ಎಂದೇ ಹೇಳಬಹುದು. ಅಶ್ವಿನಿ ನಕ್ಷತ್ರದವರಿಗೆ ನಾಯಕತ್ವದ ಗುಣ ಹೆಚ್ಚಾಗಿರುತ್ತದೆ. ಅಶ್ವಿನಿ ನಕ್ಷತ್ರದವರಿಗೆ ಕಲೆ ಮೇಲೆ ಹೆಚ್ಚು ಆಸಕ್ತಿ ಇರುತ್ತದೆ ಹಾಗೂ ಅದೇ ವಿಷಯ ಇವರಿಗೆ ಹೆಸರು ತರುತ್ತದೆ. ಜೀವನದಲ್ಲಿ ಬಹಳ ಘನತೆ, ಗೌರವ, ಹೆಸರು ಮತ್ತು ಯಶಸ್ಸನ್ನು ಸಂಪಾದನೆ ಮಾಡುತ್ತಾರೆ.
ಕೈ ಕಾಲು ಜೋಮು ಹಿಡಿಯುತ್ತಿದ್ದರೆ ಈ ಮನೆ ಮದ್ದನ್ನು ಟ್ರೈ ಮಾಡಿ.!
● ಭರಣಿ ನಕ್ಷತ್ರ:- ಭರಣಿ ನಕ್ಷತ್ರದ ನಕ್ಷತ್ರಾಧಿಪತಿ ಶುಕ್ರ. ಹೀಗಾಗಿ ಇವರಿಗೆ ಅದೃಷ್ಟ ಎನ್ನುವುದು ಹುಟ್ಟಿದಾಗಿನಿಂದಲೇ ಇರುತ್ತದೆ. ಭರಣಿ ನಕ್ಷತ್ರದವರು ಧರಣಿಯನ್ನೇ ಆಳುತ್ತಾರೆ ಎಂದು ಹೇಳುತ್ತಾರೆ. ಅದೇ ರೀತಿ ಅವರಿಗೆ ಒಳ್ಳೆಯ ಹಣೆಬರಹ ಇರುತ್ತದೆ, ಹಣಕಾಸಿನ ತೊಂದರೆ ಪಡುವುದು ಬಹಳ ಕಡಿಮೆ. ಇವರು ದೊಡ್ಡ ದೊಡ್ಡ ಸಂಸ್ಥೆಗಳನ್ನು ಕಟ್ಟಿ, ಅನೇಕ ಕುಟುಂಬಗಳಿಗೆ ಕೆಲಸಗಳನ್ನು ನೀಡುವ ಉದ್ಯೋಗದಾತರಾಗಿ ಬೆಳೆಯುತ್ತಾರೆ ಅಂತಹ ಬಲವಾದ ಅದೃಷ್ಟ ಇವರ ಹಣೆಯಲ್ಲಿ ಬರೆದಿರುತ್ತದೆ.
● ರೋಹಿಣಿ ನಕ್ಷತ್ರ:- ರೋಹಿಣಿ ನಕ್ಷತ್ರದ ನಕ್ಷತ್ರಾಧಿಪತಿ ಚಂದ್ರ. ರೋಹಿಣಿ ನಕ್ಷತ್ರದವರು ಜೀವನದಲ್ಲಿ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರ ನಿರ್ಧಾರಗಳ ಮೂಲಕವೇ ಅವರಿಗೆ ಖ್ಯಾತಿ ಬರುತ್ತದೆ ಮತ್ತು ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನೇ ಮಾಡಲು ಬಯಸುತ್ತಾರೆ. ಇವರಿಗೂ ಕೂಡ ಜೀವನದಲ್ಲಿ ಅದೃಷ್ಟ ಎನ್ನುವುದು ಬಹಳ ಇರುತ್ತದೆ ಎಂದು ಹೇಳಲಾಗುತ್ತದೆ.
ಸೊಂಟ ನೋವು ಗುಣವಾಗಲು ಈ ಟಿಪ್ಸ್ ಫಾಲೋ ಮಾಡಿ.!
● ಮಖ ನಕ್ಷತ್ರ:- ಮಖ ನಕ್ಷತ್ರವನ್ನು ಮಹಾ ನಕ್ಷತ್ರ ಎಂದು ಕೂಡ ಕರೆಯುತ್ತಾರೆ. ಈ ನಕ್ಷತ್ರದ ನಕ್ಷತ್ರಾಧಿಪತಿ ಕೇತು. ಮಖ ನಕ್ಷತ್ರದವರು ಸಾಮ್ರಾಜ್ಯವನ್ನು ಆಳುವಂತಹ ಸಿಂಹಾಸನವನ್ನು ಅಲಂಕರಿಸುವಂತಹ ಅದೃಷ್ಟ ಹೊಂದಿರುವವರು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುತ್ತಾರೆ. ಬಹಳ ಅಪರೂಪದ ಅಪರೂಪ ಆಗಿರುವ ಈ ನಕ್ಷತ್ರ ಇವರಿಗೆ ಬಹಳ ಅದೃಷ್ಟವನ್ನು ಕೊಡುತ್ತದೆ ಇವರ ತೆಗೆದುಕೊಳ್ಳುವ ನಿರ್ಧಾರಕರಿಗೆ ಬದ್ಧವಾಗಿ ಬದುಕುವುದರಿಂದ ಅಪಾರ ಸಾಧನೆಯನ್ನು ಮಾಡುತ್ತಾರೆ.