ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕಾದದ್ದು ಗೃಹಿಣಿಯರ ಕರ್ತವ್ಯ ಅದು ನಿಜ, ಆದರೆ ಈಗ ಹೆಣ್ಣುಮಕ್ಕಳು ಕೂಡ ಹೊರಗೆ ಹೋಗಿ ದುಡಿಯುತ್ತಿದ್ದಾರೆ. ಇದರಿಂದ ಅವರಿಗೆ ಹೆಚ್ಚು ಸಮಯ ಇರುವುದಿಲ್ಲ ಜೊತೆಗೆ ಮನೆಯಲ್ಲಿ ಮಕ್ಕಳು ಇದ್ದರಂತೂ ಎಷ್ಟು ನೀಟಾಗಿ ಇಟ್ಟುಕೊಂಡರೂ ಪದೇ ಪದೇ ಏನಾದರೂ ಗಲೀಜು ಮಾಡುತ್ತಲೇ ಇರುತ್ತಾರೆ.
ಹಾಗಾಗಿ ಕೆಲವೊಮ್ಮೆ ಕ್ಲೀನ್ ಮಾಡುವುದೇ ಬೇಡ ಎನ್ನುವಷ್ಟು ರೋಸಿ ಹೋಗಿರುತ್ತದೆ, ನಿಮಗೂ ಹೀಗಾಗಿದ್ದರೆ ಬೇಸರ ಮಾಡಿಕೊಳ್ಳಬೇಡಿ. ಈಗ ನಾವು ಹೇಳುವ ಈ ಉಪಾಯಗಳನ್ನು ನೀವು ಮಾಡಿದರೆ ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ ನಿಮ್ಮ ಮನೆಯನ್ನು ಫಳಫಳ ಹೊಳೆಯುವಂತೆ ಮಾಡಬಹುದು ಅಂತಹ 10 ಉಪಯುಕ್ತ ಟಿಪ್ಸ್ ಗಳನ್ನು ತಿಳಿಸುತ್ತೇವೆ.
ಉತ್ತಮ ಆರೋಗ್ಯ ಪಡೆಯಲು ನಿಮ್ಮ ಜೀವನದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ.!
● ಮನೆಯಲ್ಲಿ ಚಿಕ್ಕ ಮಕ್ಕಳು ಗೋಡೆ ಮೇಲೆ ಪೆನ್ಸಿಲ್ ನಿಂದ ಗೀಚುವುದು ಸರ್ವೆ ಸಾಮಾನ್ಯ. ಆದರೆ ಆ ಪೆನ್ಸಿಲ್ ಕಲೆ ಗೋಡೆಗಳ ಮೇಲೆ ಎದ್ದು ಕಾಣುತ್ತಿರುತ್ತದೆ. ಇದನ್ನು ಹೋಗಿಸಲು ಪೈಂಟ್ ಮಾಡಲೇಬೇಕಾದ ಅವಶ್ಯಕತೆ ಇಲ್ಲ, ನೀವು ಸೋಡಾಪುಡಿಯಿಂದ ಉಜ್ಜಿದರೆ ಅಥವಾ ಬಿಳಿ ಟೂತ್ ಪೇಸ್ಟ್ ನಿಂದ ಇದರ ಮೇಲೆ ಇದರ ಉಜ್ಜಿದರೆ ಪೆನ್ಸಿಲ್ ಕಲೆ ಹೊರಟುಹೋಗುತ್ತದೆ.
● ಮನೆಯಲ್ಲಿರುವ ಕನ್ನಡಿ ಬಹಳ ಬೇಗ ಡಿಮ್ ಆಗುತ್ತದೆ. ಅದರಲ್ಲೂ ವಾಶ್ರೂಮ್ ಗಳಲ್ಲಿ ಇರುವ ಕನ್ನಡಿಗಳಂತೂ ನೀರು ಬಿದ್ದು ಕಲೆ ಆಗಿರುತ್ತದೆ. ಅದು ಮೊದಲಿನಂತೆ ಶೈನ್ ಆಗಲು ಒಂದು ನ್ಯೂಸ್ ಪೇಪರ್ ಗೆ ಟೂಥ್ ಪೇಸ್ಟ್ ಹಚ್ಚಿ ಉಜ್ಜಿ, ಆಗ ಹೊಸ ಕನ್ನಡಿ ರೀತಿ ಕಾಣುತ್ತದೆ.
ಈ ಐದು ನಕ್ಷತ್ರಗಳಲ್ಲಿ ಹುಟ್ಟಿದವರು ಬಹಳ ಪುಣ್ಯವಂತರು.!
● ಧೂಮಪಾನ ಆರೋಗ್ಯಕ್ಕೆ ಹಾನಿಕರ, ಆದರೆ ಮನೆಯಲ್ಲಿ ವೃದ್ಧರು ಹಾಗೂ ಗಂಡಸರು ಈ ಮಾತನ್ನು ಎಷ್ಟು ಹೇಳಿದರು ಕೇಳುವುದಿಲ್ಲ. ಕೆಲವರು ಈ ವಾಸನೆಯ ಆಗುವುದಿಲ್ಲ, ಮನೆಯೊಳಕ್ಕೆ ಸ್ಮೋಕ್ ಮಾಡುವವರು ಇದ್ದಾಗ ಅದರಿಂದ ಬಹಳ ಕಷ್ಟಪಡುತ್ತಾರೆ. ಆ ವಾಸನೆಯನ್ನು ತಕ್ಷಣವೇ ಹೋಗಿಸಲು ಕ್ಯಾಂಡಲ್ ಹಚ್ಚಿಡಿ, ಆಗ ಈ ಸಮಸ್ಯೆ ಇರುವುದಿಲ್ಲ.
● ಕಿಟಕಿ ಹಾಗೂ ಬಾಗಿಲುಗಳನ್ನು ಸರಿಯಾಗಿ ಮುಚ್ಚಲು ಆಗುತ್ತಿಲ್ಲ ಎಂದರೆ ಸ್ವಲ್ಪ ಸಾಬೂನು ನೊರೆ ಹಚ್ಚಿ ಪ್ರಯತ್ನಿಸಿ. ಈಗ ಸುಲಭವಾಗಿ ಅವುಗಳನ್ನು ಕ್ಲೋಸ್ ಮಾಡಬಹುದು. ಹೆಣ್ಣು ಮಕ್ಕಳು ಕೈಗೆ ಕೈ ಬಳೆ ಹಾಕಲು ಕಷ್ಟವಾದಾಗ ಬಳೆಗಳು ಬಹಳ ಟೈಟ್ ಇದ್ದಾಗ ಕೂಡ ಈ ಉಪಾಯವನ್ನು ಮಾಡಬಹುದು.
● ಬಲ್ಪ್ ಕೆಳಗಡೆ ರೂಮ್ ಸ್ಪ್ರೇ ಹಾಕುವುದರಿಂದ ಬಲ್ಬ್ ಆನ್ ಮಾಡಿದಾಗ ಅದು ಗಮಗಮ ಎಂದು ಪರಿಮಳ ಬರುತ್ತದೆ.
● ಬಟ್ಟೆ ಮೇಲೆ ಚುಯಿಂಗ್ ಗಮ್ ಬಿದ್ದರೆ ಅದನ್ನು ಸುಲಭವಾಗಿ ತೆಗೆಯಲು ಬಹಳ ಕಷ್ಟ, ಈಝಿಯಾಗಿ ಕ್ಲೀನ್ ಮಾಡಬೇಕು ಎಂದರೆ ಒಂದು ಗಂಟೆ ಮುಂಚೆ ಆ ಬಟ್ಟೆಯನ್ನು ಫ್ರೀಜರ್ ನಲ್ಲಿ ಇಡಿ ಆಗ ಸುಲಭವಾಗುತ್ತದೆ.
● ಕರ್ಪೂರದ ಡಬ್ಬಿಗೆ ಗಾಳಿ ಸೇರಿಕೊಂಡಾಗ ಅದು ಅಲ್ಲಿಯೇ ಕರಗಳು ಆರಂಭಿಸುತ್ತದೆ. ಈ ರೀತಿ ಆಗಬಾರದು ಎಂದರೆ ಆ ಡಬ್ಬದ ಒಳಗೆ ನಾಲ್ಕರಿಂದ ಐದು ಕಾಳು ಮೆಣಸು ಹಾಕಿಡಿ.
● ಬಟ್ಟೆಗಳ ಮೇಲೆ ಇಂಕ್ ಕಲೆ ಬಿದ್ದಿದ್ದರೆ ಇದನ್ನು ಕ್ಲೀನ್ ಮಾಡಲು ಬಟ್ಟೆ ವಾಶ್ ಮಾಡುವ ಒಂದು ಗಂಟೆಗೂ ಮುನ್ನ ಅದರ ಮೇಲೆ ಟೂತ್ಪೇಸ್ಟ್ ಹಚ್ಚಿ ಒಣಗಲು ಬಿಡಿ, ಆ ಬಳಿಕ ನೀವು ಕ್ಲೀನ್ ಮಾಡಿದರೆ ಕಲೆ ಹೊರಟು ಹೋಗುತ್ತದೆ.
ಕೈ ಕಾಲು ಜೋಮು ಹಿಡಿಯುತ್ತಿದ್ದರೆ ಈ ಮನೆ ಮದ್ದನ್ನು ಟ್ರೈ ಮಾಡಿ.!
● ಬಟ್ಟೆಗಳನ್ನು ನೆನೆಸುವಾಗಲೇ ಅರ್ಧ ಹೋಳು ನಿಂಬೆರಸ ಹಾಕಿ ಅದರಲ್ಲಿ ಬಟ್ಟೆಗಳನ್ನು ನೆನೆಸಿ ವಾಶ್ ಮಾಡಿದರೆ ಬಟ್ಟೆಗಳು ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ. ಬಿಳಿ ಬಟ್ಟೆಗಳಾಗಿದ್ದರೆ ಬಹಳ ಸ್ವಚ್ಛವಾಗಿ ಕಾಣುತ್ತದೆ
● ಬೆಂಕಿ ಪಟ್ಟಣ ಕೂಡ ಬಹಳ ಬೇಗ ಮೆತ್ತಗಾಗುತ್ತದೆ ಮತ್ತು ಮೆತ್ತಾಗಾದಾಗ ಹಚ್ಚಲು ಆಗುವುದಿಲ್ಲ. ಈ ರೀತಿ ಆಗಬಾರದು ಎಂದರೆ ಒಂದು ಪ್ಲಾಸ್ಟಿಕ್ ಕವರ್ ಒಳಗಡೆ ಹಾಕಿ ಟೈಟ್ ಆಗಿ ರಬ್ಬರ್ ಹಾಕಿಡಿ.