ಆಗಿನ ಕಾಲದಲ್ಲಿ ಫ್ರಿಡ್ಜ್, ಕೋಲ್ಡ್ ಸ್ಟೋರೇಜ್ ಇದ್ಯಾವುದು ಇರಲಿಲ್ಲ ಹೆಚ್ಚೆಂದರೆ ಮಡಿಕೆಗಳಲ್ಲಿ ತರಕಾರಿಗಳನ್ನು ಇಟ್ಟು ಮುಚ್ಚುತ್ತಿದ್ದರು, ಅದು ಎರಡು ಮೂರು ದಿನದವರೆಗೆ ಫ್ರೆಶ್ ಆಗಿರುತ್ತಿತ್ತು. ಇನ್ನು ಒಂದು ಮುಖ್ಯ ವಿಚಾರ ಎಂದರೆ ಆಗಿನ ಕಾಲದಲ್ಲಿ ಯಾರೂ ಹಲವು ದಿನದವರೆಗೆ ಈ ರೀತಿ ಸ್ಟೋರೇಜ್ ಮಾಡಿ ಇಟ್ಟುಕೊಳ್ಳುತ್ತಿರಲಿಲ್ಲ ಒಂದೆರಡು ದಿನಕ್ಕೆ ಬೇಕಾದಷ್ಟು ಮಾತ್ರ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು.
ಆದರೆ ಕಾಲ ಬದಲಾದಂತೆಲ್ಲಾ ನಾವು ನಾಗರಿಕತೆ ಹೆಸರಲ್ಲಿ ಸಾಕಷ್ಟು ಬದಲಾಗಿ ಹೋಗಿದ್ದೇವೆ. ಇಂದು ಮನೆ ಮನೆಗಳಲ್ಲೂ ಕೂಡ ಫ್ರಿಜ್ ಇದೆ. ಆಫರ್ ಇರುವಾಗ ಅಥವಾ ಬಿಡುವಾದಾಗ ಅಥವಾ ಮನೆಗೆ ಬೇಕಾದ ಹಣ್ಣು, ತರಕಾರಿ, ಸೊಪ್ಪುಗಳನ್ನೆಲ್ಲ ಖರೀದಿ ಮಾಡಿ ತಂದು ಫ್ರಿಡ್ಜ್ ಒಳಗೆ ತುಂಬಿಸಿ ಇಡುತ್ತೇವೆ.
ಟೆಕ್ನಾಲಜಿ ಇಷ್ಟು ಬೆಳದಿದ್ದರೂ ಆರೋಗ್ಯದ ದೃಷ್ಟಿಯಿಂದ ಫ್ರಿಡ್ಜ್ ನಲ್ಲಿ ಇಟ್ಟ ಆಹಾರ ಪದಾರ್ಥಗಳನ್ನು ಬಳಸುವುದು ಒಳ್ಳೆಯದಲ್ಲ. ಇದರಲ್ಲಿ ಇಟ್ಟ ಪೋಷಕಾಂಶಗಳು ಸತ್ವ ಕಳೆದುಕೊಂಡಿರುತ್ತದೆ, ಎನ್ನುವ ವಾದವು ಕೂಡ ಇದೆ. ವಿಚಾರ ಏನೇ ಇದ್ದರೂ ಅಂಗಡಿ ಮುಗ್ಗಟ್ಟುಗಳನ್ನು ಇಟ್ಟು ಮಾರಾಟ ಮಾಡುವವರಿಗಂತೂ ಈ ರೀತಿ ಫ್ರಿಡ್ಜ್ ಸಾಕಾಗುವುದಿಲ್ಲ. ಕೋಲ್ಡ್ ಸ್ಟೋರೇಜ್ ಅಥವಾ ಇನ್ನಿತರ ವ್ಯವಸ್ಥೆಗಳನ್ನು ಅವರು ಮಾಡಿಕೊಳ್ಳಬೇಕು.
ಇಲ್ಲವಾದಲ್ಲಿ ತರಕಾರಿ ಬೇಗ ಕೆಟ್ಟು ಹೋದರೆ ಕಡಿಮೆ ಬೆಲೆಗೆ ಕೇಳುತ್ತಾರೆ ಅಥವಾ ಹಣ್ಣು ಕೊಳತೆ ಹೋದರೆ ಅವರು ಅದನ್ನು ಮಾರಾಟ ಮಾಡಲಾಗದೆ ವೇಸ್ಟ್ ಮಾಡಬೇಕಾಗುತ್ತದೆ. ಇದರಿಂದ ಲಾಭ ಮಾಡುವ ಉದ್ದೇಶದಿಂದ ತಂದವರು ಲಾಭದ ವಿಷಯವಿರಲಿ ತಮ್ಮ ಹೂಡಿಕೆಯನ್ನು ಕೂಡ ಹಿಂಪಡೆಯದೇ ನಷ್ಟ ಹೊಂದಬೇಕಾಗುತ್ತದೆ.
ಬಲಮುರಿ ಹಾಗೂ ಎಡಮುರಿ ಗಣೇಶನಿಗೆ ಇರುವ ವ್ಯತ್ಯಾಸವೇನು? ಇದರ ವಿಶೇಷವೇನು ಮತ್ತು ಯಾವುದು ಶ್ರೇಷ್ಠ ನೋಡಿ.!
ಆದರೆ ಇನ್ನು ಮುಂದೆ ಇವರಿಗೆಲ್ಲ ಇಂತಹ ಕಷ್ಟ ಬರುವುದಿಲ್ಲ ಎನಿಸುತ್ತದೆ ಯಾಕೆಂದರೆ ಮಾರುಕಟ್ಟೆಯಲ್ಲಿ ಒಂದು ಹೊಸ ಟೆಕ್ನಾಲಜಿ ಬಂದಿದೆ. ಇದಕ್ಕೆ ಕರೆಂಟ್ ಅವಶ್ಯಕತೆ ಇಲ್ಲ, ನೀರು ಒಂದು ಇದ್ದರೆ ಸಾಕು ವಾರಗಟ್ಟಲೆ ಹಣ್ಣು ತರಕಾರಿ ಸೊಪ್ಪುಗಳನ್ನು ಫ್ರೆಶ್ ಆಗಿ ಇಡಬಹುದು. Rukart Subjee Cooler ಎನ್ನುವ ಹೆಸರಿನ ಈ ಬಾಕ್ಸ್ 100kg ಹಾಗೂ 50kg ಯಲ್ಲಿ ಲಭ್ಯವಿದೆ.
100 Kg ಈ ಬಾಕ್ಸ್ ಅನ್ನು ಖರೀದಿ ಮಾಡಿದರೆ ಸುಮಾರು 100 ರಿಂದ 120kg ತರಕಾರಿ ಹಣ್ಣುಗಳನ್ನು ಇದರೊಳಗೆ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು. ಎಂಟು ತರಕಾರಿಗಳನ್ನು ಕ್ರೇಟ್ ಗಳನ್ನು ಇದರ ಜೊತೆ ಕೊಡುತ್ತಾರೆ. ಅದರೊಳಗೆ ಹೂವು ಹಣ್ಣು ಸೊಪ್ಪು ತರಕಾರಿ ಏನನ್ನಾದರೂ ಇಟ್ಟು ಜೋಡಿಸಿಕೊಳ್ಳಬೇಕು. ಜೊತೆಗೆ ಹೊರಗಡೆಯಿಂದ ಇದು ಸ್ಟೀಲ್ ಇಂದ ಕವರ್ ಆಗಿರುವಂತೆ ಕಾಣುತ್ತದೆ.
ಮಹಿಳೆಯರಿಗೆ ಈ ಲಕ್ಷಣಗಳು ಇದ್ದರೆ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತದೆ.!
ಆದರೆ ಒಳಗೆ ಏಳು ಲೇಯರ್ ಒಂದಿದೆಯಂತೆ ಬಾಕ್ಸ್ ನ ನಾಲ್ಕು ಕಡೆ ಹೋಲ್ ಕೊಡಲಾಗಿದೆ, ಅದಕ್ಕೆ 24 ಗಂಟೆಗೆ ಒಮ್ಮೆ 20 ಲೀಟರ್ ನೀರನ್ನು ಹಾಕಬೇಕು. ನೀವು ನೀರು ಹಾಕಿದಾಗ ಅದು ಏಳು ಲೇಯರ್ ನಲ್ಲಿ ತುಂಬಿಕೊಂಡು, ಹನಿ ಹನಿಯಾಗಿ ಬಾಕ್ಸಿಂದ ಹೊರಗೆ ಹೋಗುತ್ತದೆ. ಇದರಲ್ಲಿಟ್ಟ ಸೊಪ್ಪು, ಹೂವು ಮೂರ್ನಾಲ್ಕು ದಿನದವರೆಗೆ ತರಕಾರಿ ವಾರಕ್ಕಿಂತ ಹೆಚ್ಚು ಹಾಗೂ ಹಣ್ಣುಗಳು ಹತ್ತು ದಿನಕ್ಕಿಂತ ಹೆಚ್ಚು ಫ್ರೆಶ್ ಆಗಿ ಇರುತ್ತವೆ.
ಇದರ ಸತ್ವವು ಕೂಡ ಹಾಗೆ ಉಳಿದುಕೊಂಡಿರುತ್ತದೆ ಇದನ್ನು ಖರೀದಿಸಲು SBI ಬ್ಯಾಂಕ್ ಲೋನ್ ಕೂಡ ಕೊಡುತ್ತದೆ. ಈ ಹೊಸ ಟೆಕ್ನಾಲಜಿ ಗೆ ರಿಟೇಲ್ ಮಾರಾಟಗಾರರು, ರೈತರು, ಹೋಟೆಲ್ ಮಾಲೀಕರು, ಹಣ್ಣು ತರಕಾರಿ ವ್ಯಾಪಾರಿಗಳು ಮಾರು ಹೋಗಿದ್ದಾರೆ.