ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಹಲ್ಲಿಗಳು ಇರುವುದು ಸಹಜ ಆದರೆ ಹೆಚ್ಚಿನ ಜನ ಹಲ್ಲಿಯನ್ನು ಕಂಡ ಕೂಡಲೇ ಅದರಿಂದ ದೂರ ಹೋಗುತ್ತಾರೆ. ಅದನ್ನು ಕಂಡರೆ ಭಯ ಎಂದು ಹೇಳುತ್ತಿರುತ್ತಾರೆ. ಅದರಲ್ಲೂ ಅಡುಗೆ ಮನೆಯಲ್ಲಿ ಹಲ್ಲಿಗಳನ್ನು ಕಂಡರೆ ತುಂಬಾ ಭಯ ಎಂದೇ ಹೇಳಬಹುದು.
ಏಕೆಂದರೆ ನಾವು ಆಹಾರ ತಯಾರಿಸುವಂತಹ ಸಮಯದಲ್ಲಿ ಅದರ ಒಳಗಡೆ ಬೀಳಬಹುದು ನಾವು ಇಟ್ಟಿರುವಂತಹ ಆಹಾರ ಪದಾರ್ಥಗಳ ಮೇಲೆ ಓಡಾಡಬಹುದು ಎಂದು ಆನಂತರ ನಾವು ಅದನ್ನು ತಿನ್ನುವುದರಿಂದ ಅದರಲ್ಲಿರುವಂತಹ ವಿಷ ಅಂಶ ನಮ್ಮ ದೇಹದ ಒಳಗಡೆ ಸೇರಬಹುದು ಎನ್ನುವಂತಹ ಭಯ ಆತಂಕ ಪ್ರತಿಯೊಬ್ಬರಲ್ಲಿಯೂ ಕೂಡ ಇದ್ದೇ ಇರುತ್ತದೆ.
ಹಾಗಾಗಿ ಪ್ರತಿಯೊಬ್ಬರಿಗೂ ಕೂಡ ಹಲ್ಲಿ ಎಂದರೆ ಭಯ. ಆದ್ದರಿಂದ ಮನೆಯಲ್ಲಿರುವಂತಹ ಪ್ರತಿಯೊಬ್ಬರೂ ಕೂಡ ಹಲ್ಲಿಯನ್ನು ಹೇಗಾದ ರೂ ಮಾಡಿ ಮನೆಯಿಂದ ಆಚೆ ಹಾಕಬೇಕು ಎಂದು ಪ್ರಯತ್ನಿಸುತ್ತಿರು ತ್ತಾರೆ. ಅದಕ್ಕಾಗಿ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದು ಕೆಮಿಕಲ್ ಪದಾರ್ಥಗಳನ್ನು ತಂದು ಅದಕ್ಕೆ ಆಹಾರವಾಗಿ ಇಟ್ಟು ಅದನ್ನು ಸಾ.ಯಿಸುತ್ತಿರುತ್ತಾರೆ.
ಆದರೆ ಈ ರೀತಿ ಮಾಡುವುದರಿಂದ ನಾವು ಹೆಚ್ಚು ಕಷ್ಟಗಳಿಗೆ ಗುರಿಯಾಗುತ್ತೇವೆ ಎಂದೇ ಹೇಳಬಹುದು. ಏಕೆಂದರೆ ಹಲ್ಲಿ ಯನ್ನು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಎಂದು ಸಹ ಹೇಳುತ್ತಾರೆ. ಆದ್ದರಿಂದ ನಾವು ಅದನ್ನು ಸಾಯಿಸುವುದು ಅಷ್ಟು ಒಳ್ಳೆಯದಲ್ಲ ಎಂದು ಹೇಳಬಹುದು. ಬದಲಿಗೆ ಅದನ್ನು ಯಾವುದಾದರೂ ವಿಧಾನದ ಮೂಲಕ ಮನೆಯಿಂದ ಆಚೆ ಹಾಕುವುದನ್ನು ಒಳ್ಳೆಯದು.
ಹಾಗಾದರೆ ಈ ದಿನ ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರಿಂದ ಹಲ್ಲಿಯನ್ನು ಮನೆಯಿಂದ ಆಚೆ ಹಾಕಬಹುದು ಎನ್ನುವಂತಹ ಮಾಹಿತಿಯನ್ನು ನೋಡೋಣ. ಅದರಲ್ಲೂ ಕೆಲವೊಂದು ನಿಯಮಗಳನ್ನು ಅನುಸರಿಸುವುದರಿಂದ ಹಲ್ಲಿ ನಮ್ಮ ಮನೆ ಒಳಗಡೆ ಬರದ ಹಾಗೆ ತಡೆಗಟ್ಟಬಹುದು ಹಾಗಾದರೆ ಯಾವ ಕೆಲವು ವಿಧಾನಗಳು ಎಂದು ನೋಡುವುದಾದರೆ.
* ಕೆಲವೊಂದಷ್ಟು ಜನರ ಮನೆಯಲ್ಲಿ ದಿನಸಿ ಪದಾರ್ಥಗಳು ಅತಿಯಾಗಿ ಇರುತ್ತವೆ ಅಂತವರ ಮನೆಯಲ್ಲಿ ಜಿರಳೆಗಳು ಇರುವುದು ಸರ್ವೇಸಾಮಾನ್ಯ ಜಿರಳೆಗಳು ಇದ್ದಂತಹ ಕಡೆ ಹಲ್ಲಿಗಳು ಇರುವುದು ಸರ್ವೇಸಾಮಾನ್ಯ ಹೌದು ಜಿರಳೆಗಳನ್ನು ತಿನ್ನುವುದಕ್ಕೆ ಹಲ್ಲಿಗಳು ಮನೆಯೊಳಗೆ ಸೇರಿಕೊಳ್ಳುತ್ತದೆ. ಆದ್ದರಿಂದ ಆದಷ್ಟು ಹೆಚ್ಚು ದಿನಸಿ ಪದಾರ್ಥಗಳನ್ನು ಹೊರಗಡೆ ಇಡದೆ ಅದನ್ನು ಒಳಗಡೆ ಇಟ್ಟು ಯಾವುದೇ ರೀತಿಯ ಜಿರಳೆಗಳು ಸೇರಿದ ಹಾಗೆ ಇಡುವುದರಿಂದ ಜಿರಳೆಗಳ ಪ್ರಮಾಣ ಕಡಿಮೆಯಾಗುತ್ತದೆ. ಅದರ ಮೂಲಕ ಹಲ್ಲಿಗಳ ಪ್ರಮಾಣವೂ ಕೂಡ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಎಂದೇ ಹೇಳಬಹುದು.
* ಅದೇ ರೀತಿಯಾಗಿ ನಾವು ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುವ ಸಮಯದಲ್ಲಿ ಅಕ್ಷತೆ ಕಾಳನ್ನು ಬಳಸುತ್ತೇವೆ. ಅಕ್ಷತೆಗಳನ್ನು ದೇವರ ಮನೆಯಲ್ಲಿ ಇಡುವುದರಿಂದ ಅದನ್ನು ತಿನ್ನಲು ಜಿರಳೆಗಳು ಬರುತ್ತಿರುತ್ತದೆ ಹಾಗೂ ಹಲ್ಲಿಗಳು ಕೂಡ ಬರುತ್ತಿರುತ್ತದೆ. ಆದ್ದರಿಂದ ಪೂಜೆಯ ಸಮಯ ದಲ್ಲಿ ಅದನ್ನು ಹೊರಗಡೆ ಇಟ್ಟು ಆನಂತರ ಅದನ್ನು ಒಂದು ಬಾಕ್ಸ್ ಒಳಗಡೆ ಇಡುವುದರಿಂದ ಅದನ್ನು ತಿನ್ನುವುದಕ್ಕೆ ಯಾವುದೇ ರೀತಿಯ ಜಿರಳೆಗಳು ಬರುವುದಿಲ್ಲ ಅದನ್ನು ತಿನ್ನುವುದಕ್ಕೆ ಹಲ್ಲಿಗಳು ಕೂಡ ಬರುವುದಿಲ್ಲ.
ಆದ್ದರಿಂದ ಈ ವಿಧಾನ ಅನುಸರಿಸುವುದು ತುಂಬಾ ಒಳ್ಳೆಯದು. ಈ ರೀತಿ ಮಾಡುವುದರಿಂದ ನೀವು ಯಾವುದೇ ರೀತಿಯ ಹಲ್ಲಿಯನ್ನು ಸಾಯಿಸುವ ಅಗತ್ಯತೆ ಇರುವುದಿಲ್ಲ ಬದಲಿಗೆ ಅವುಗಳೇ ಇಲ್ಲಿ ಯಾವುದೇ ರೀತಿಯ ಆಹಾರ ಸಿಗುವುದಿಲ್ಲ ಎಂದು ಮನೆಯಿಂದ ಆಚೆ ಹೋಗುತ್ತದೆ. ಬದಲಿಗೆ ಅದನ್ನು ಸಾಯಿಸಿ ಅದರಿಂದ ಯಾವುದೇ ದೋಷವನ್ನು ಹೊಂದುವ ಸಾಧ್ಯತೆ ಬರುವುದಿಲ್ಲ ಆದ್ದರಿಂದ ಇಂತಹ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು.