ಸನಾತನ ಧರ್ಮದ ಪ್ರಕಾರ ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಿಂದ ಆಶ್ವಿಯುಜ ಮಾಸದ ಅಮಾವಾಸ್ಯೆಯ ದಿನದವರೆಗೆ ಇರುವ ಸಮಯವನ್ನು ಪಿತೃಪಕ್ಷ ಎನ್ನಲಾಗುತ್ತದೆ. ಈ ವರ್ಷ ಪಿತೃಪಕ್ಷವು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 14ರವರೆಗೆ ಬಂದಿದೆ. ಈ ಪಿತೃ ಪಕ್ಷವನ್ನು ನಮ್ಮ ವಂಶದಲ್ಲಿ ತೀರಿ ಹೋದ ಹಿರಿಯರು ಅಂದರೆ ಅಜ್ಜಿ ತಾತ, ತಂದೆ ತಾಯಿ, ಅತ್ತೆ ಮಾವ ಅಥವಾ ಮಕ್ಕಳು ಹೀಗೆ ರಕ್ತ ಸಂಬಂಧಿಕರನ್ನು ನೆನೆದು ಅವರಿಗಾಗಿ ಪಿಂಡಪ್ರದಾನ ಮಾಡಲು ಮೀಸಲಿಡಲಾಗಿದೆ.
ವರ್ಷಕ್ಕೆ ಒಂದು ದಿನ ಆದರೂ ಈ ರೀತಿ ತೀರಿಹೋದವರ ಹೆಸರನ್ನು ಹೇಳಿ ಅವರಿಗೆ ಶ್ರಾದ್ಧ ನೆರವೇರಿಸಬೇಕು ಎನ್ನುವುದನ್ನು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಯಾಕೆಂದರೆ ನಾವು ನಮ್ಮ ಹಿರಿಯರ ಋಣದಿಂದ ಬಂದಿರುತ್ತೇವೆ ಹಾಗಾಗಿ ಅದರಿಂದ ಮುಕ್ತರಾಗಲು ಮತ್ತು ನಮ್ಮ ಹಿರಿಯರಿಗೆ ಮೋಕ್ಷ ಪ್ರಾಪ್ತಿಯಾಗಲು ಈ ರೀತಿ ಮಾಡಬೇಕು ಎಂದು ತಿಳಿಸಲಾಗಿದೆ ಪಿತೃ ಪಕ್ಷದಲ್ಲಿ ಹಿರಿಯರಿಗೆ ದರ್ಪಣ ಸಲ್ಲಿಸುತ್ತಾರೆ.
ನಿಮ್ಮ ಮಕ್ಕಳಿಗೆ ಹೀಗೆ ಹೆಸರಿಡಿ, ಅದೃಷ್ಟ ಹುಡುಕಿಕೊಂಡು ಬರುತ್ತದೆ.!
ಹಿರಿಯರ ಹೆಸರು ಹೇಳಿ ಪಿಂಡ ಪ್ರದಾನ ಮಾಡಿ ದಾನವನ್ನು ಕೂಡ ನೆರವೇರಿಸುತ್ತಾರೆ. ಈ ರೀತಿ ಮಾಡಿದರೆ ಕೋಟಿ ಯಜ್ಞವನ್ನು ಮಾಡಿದ ರಾಜಸುಯಾಗ, ಚಂಡಿಯಾಗ ಮಾಡಿದಷ್ಟು ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದನ್ನು ರಕ್ತ ಸಂಬಂಧಿಕರಿಗೆ ಮಾತ್ರ ಅಲ್ಲದೆ ವಿದ್ಯಾದಾನ ಮಾಡಿ ಗುರುಗಳಿಗೆ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ ಬಂಧುಗಳ ಹೆಸರಿನಲ್ಲಿ ಅಥವಾ ನಮ್ಮ ಆತ್ಮೀಯ ಸ್ನೇಹಿತರು ತೀರಿ ಹೋಗಿದ್ದರೆ ಅವರಿಗೆ, ನಮ್ಮ ಮನೆಯ ಸಾಕು ಪ್ರಾಣಿಗಳಿಗೆ ಹೀಗೆ ಎಲ್ಲರ ಹೆಸರು ಹೇಳಿ ಕೂಡ ಮಾಡಬಹುದು ಎಂದು ಸಹ ತಿಳಿಸಲಾಗಿದೆ.
ಪಿತೃ ಪಕ್ಷವನ್ನು ಮಾಡುವ ಸರಿಯಾದ ವಿಧಾನ ಯಾವುದೆಂದರೆ ನದಿ ತಟದಲ್ಲಿ ಅಥವಾ ಸಮುದ್ರ ತಟದಲ್ಲಿ ಕಾಶಿ, ದ್ವಾರಕೆ, ಮಥುರ, ವಾರಣಾಸಿ, ಗಯಾ, ಪೂರಿ ಈ ಪುಣ್ಯಕ್ಷೇತ್ರಗಳಲ್ಲಿ ಮಾಡುತ್ತಾರೆ. ಅಲ್ಲಿಗೆ ಹೋಗಲು ಸಾಧ್ಯವಾಗದೆ ಇದ್ದರೆ ಶಕ್ತಿಯ ಅನುಸಾರ ಇರುವಲ್ಲಿಯೇ ಆಚರಣೆ ಮಾಡಿದರು ಫಲ ದೊರೆಯುತ್ತದೆ. ಜೊತೆಗೆ ಕುಟುಂಬದಲ್ಲಿ ಯಾವುದಾದರೂ ದೋಷವಿದ್ದು ಸಮಸ್ಯೆಗಳಿದ್ದರೆ ಅವುಗಳು ಪರಿಹಾರ ಕೂಡ ಆಗುತ್ತದೆ ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಹಲ್ಲಿಗಳ ಕಾಟ ಜಾಸ್ತಿ ಆಗಿದಿಯಾ, ಈ ಕೆಲಸ ಮಾಡಿ ಸಾಕು ಮತ್ತೆ ಹಲ್ಲಿಗಳು ಮನೆಯೊಳಗೆ ಬರಲ್ಲ.!
ಶ್ರದ್ಧೆಯಿಂದ ಮಾಡುವುದನ್ನು ಶ್ರಾದ್ಧ ಎನ್ನುತ್ತಾರೆ ಹಾಗಾಗಿ ಶ್ರದ್ಧೆಯಿಂದ ನಿಮ್ಮ ಮನೆಯಲ್ಲಿ ಇರುವ ಹಿರಿಯರ ಅಥವಾ ತೀರಿಕೊಂಡರ ಫೋಟೋವನ್ನು ಶುದ್ಧ ಮಾಡಿ ದಕ್ಷಿಣಾಭಿಮುಖವಾಗಿ ಅಥವಾ ದಕ್ಷಿಣದ ಗೋಡೆಗೆ ಅದನ್ನು ಇಟ್ಟು ಅವರ ಫೋಟೋಗೆ ಅಲಂಕಾರ ಮಾಡಿ ಅವರು ಬದುಕಿದ್ದಾಗ ತಿನ್ನುತ್ತಿದ್ದ ಎಲ್ಲ ಇಷ್ಟವಾದ ಪದಾರ್ಥಗಳನ್ನು ಅವರ ಮುಂದೆ ಇಟ್ಟು ಅವರಿಗೆ ಪೂಜೆ ಸಲ್ಲಿಸಬೇಕು ಹಾಗೆಯೆ ಅವರ ಹೆಸರಿನಲ್ಲಿ ಕನಿಷ್ಠ ಹತ್ತು ಜನಕ್ಕಾದರೂ ಅನ್ನದಾನ ಮಾಡಬೇಕು.
ಬಿಕ್ಷುಕರು, ಅನಾಥರು ವೃದ್ಧರು, ಅಶಕ್ತರು ಈ ರೀತಿ ಯಾರು ಕಷ್ಟದಲ್ಲಿ ಇದ್ದಾರೋ ಅವರಿಗೆ ನಿಮ್ಮ ಶಕ್ತಿಯನುಸಾರ ಬೇಕಾಗಿರುವ ಯಾವುದಾದರೂ ವಸ್ತುವನ್ನು ದಾನ ನೀಡಬೇಕು. ಇದನ್ನು ಪಿತೃಪಕ್ಷದಲ್ಲಿ ಮಾಡಲು ಸಾಧ್ಯವಾಗದೇ ಇದ್ದರೆ ಪದ್ಧತಿಯ ಪ್ರಕಾರ ನಿಮ್ಮ ಕುಟುಂಬದಲ್ಲಿ ಯಾವ ಸಮಯದಲ್ಲಿ ಮಾಡುತ್ತಿದ್ದರು ಆಗಲೂ ಮಾಡಬಹುದು.
ಗ್ಯಾಸ್ ಸ್ಟವ್ ಪಳ ಪಳ ಅಂತ ಹೊಳೆಯಲು ಚಾಕ್ ಪೀಸ್ ಅನ್ನು ಹೀಗೆ ಉಪಯೋಗಿಸಿ ನೋಡಿ.!
ಕೆಲವರು ವಿಜಯದಶಮಿದಂದು ಮಾಡುತ್ತಾರೆ, ಇನ್ನೂ ಕೆಲವರು ದೀಪಾವಳಿಗೆ ಮಾಡುತ್ತಾರೆ ಅಥವಾ ಇನ್ನು ಕೆಲವರು ತೀರಿಕೊಂಡ ನಕ್ಷತ್ರದ ಪ್ರಕಾರ ವರ್ಷಕ್ಕೆ ಮಾಡುತ್ತಾರೆ ಈ ರೀತಿ ನಿಮ್ಮ ಕುಟುಂಬದ ಪದ್ಧತಿ ಪ್ರಕಾರ ತಪ್ಪದೇ ವರ್ಷಕ್ಕೆ ಒಮ್ಮೆಯಾದರೂ ಈ ಕಾರ್ಯ ಮಾಡಿ ಅವರಿಗೆ ಜನ್ಮಾಂತರಗಳ ಬಂಧನಗಳಿಂದ ಮುಕ್ತಿ ಕೊಡಿ ಮತ್ತು ನೀವು ಸಹ ಈ ಜನ್ಮದ ಪಾಪಗಳನ್ನು ಕಳೆದುಕೊಂಡು ಪಾವನರಾಗಿ.