ಎಲ್ಲರಿಗೂ ಕೂಡ ಕ್ಯಾನ್ಸರ್ ಎಂಬ ಪದ ಕೇಳಿದರೆ ಸಾಕು ಒಂದು ಕ್ಷಣ ಬೆಚ್ಚಿ ಬೀಳುತ್ತಾರೆ ಹೌದು. ಅಷ್ಟು ಭಯಾನಕವಾದಂತಹ ದೊಡ್ಡ ಕಾಯಿಲೆ ಇದಾಗಿದೆ. ಅದರಲ್ಲೂ ಈ ಒಂದು ಕಾಯಿಲೆ ಬಂದಂತಹ ವ್ಯಕ್ತಿ ಸ್ವಲ್ಪ ದಿನಗಳವರೆಗೆ ಇರುತ್ತಾನೆ, ಆನಂತರ ಅವನಿಗೆ ಸಾವು ಖಚಿತ ಎನ್ನುವಂತಹ ವಿಷಯ ಪ್ರತಿಯೊಬ್ಬರಿಗೂ ಕೂಡ ಮೊದಲೇ ತಿಳಿದಿರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ಕ್ಯಾನ್ಸರ್ ಕಾಯಿಲೆ ಎಂದು ತಕ್ಷಣ ಭಯಪಡುವುದು ಸಹಜ.
ಹೌದು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ ಯಾವುದೇ ಒಬ್ಬ ವ್ಯಕ್ತಿ ಯಾವುದೇ ರೀತಿಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ ಎಂದರೆ. ಆ ಒಂದು ಕಾಯಿಲೆಯ ಗುಣಲಕ್ಷಣಗಳು ಮೊದಲೇ ಸ್ವಲ್ಪ ಮಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತದೆ ಆದರೆ ಈ ಮಾಹಿತಿ ಹೆಚ್ಚಾಗಿ ಯಾರಿಗೂ ಕೂಡ ತಿಳಿದಿರುವುದಿಲ್ಲ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಯಾವ ರೀತಿ ಕಾಣಿಸಿ ಕೊಳ್ಳಬಹುದು ಎನ್ನುವುದನ್ನು ತಿಳಿದುಕೊಂಡಿರುತ್ತಾರೆ.
ಆದರೆ ಇಂತಹ ದೊಡ್ಡ ಕಾಯಿಲೆ ಯಾವ ಕೆಲವು ಲಕ್ಷಣಗಳನ್ನು ಇಟ್ಟುಕೊಂಡು ಬರುತ್ತದೆ ಈ ರೀತಿಯ ಲಕ್ಷಣ ಬಂದರೆ ಈ ಒಂದು ಕ್ಯಾನ್ಸರ್ ಕಾಯಿಲೆ ಇದೆ ಎಂದು ಹೇಗೆ ಕಂಡುಹಿಡಿಯುವುದು ಇದರ ರೋಗಲಕ್ಷಣಗಳು ಯಾವುವು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ಹಾಗೂ ಈ ಒಂದು ರೋಗ ಲಕ್ಷಣ ಕಾಣಿಸಿಕೊಂಡ ತಕ್ಷಣವೇ ಆದಷ್ಟು ನೀವು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ಯನ್ನು ವಹಿಸುವುದು ತುಂಬಾ ಒಳ್ಳೆಯದು.
ಹಾಗೂ ಬಹಳ ಮುಖ್ಯ ವಾಗಿ ನಿಮ್ಮ ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳುವುದು ನಿಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಹಾಗಾದರೆ ಕ್ಯಾನ್ಸರ್ ಕಾಯಿಲೆ ಇದೆ ಎಂದಾಗ ಯಾವ ಕೆಲವು ಲಕ್ಷಣಗಳು ಆ ವ್ಯಕ್ತಿಯ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವುದನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.
ನಿಮ್ಮ ಮಕ್ಕಳಿಗೆ ಹೀಗೆ ಹೆಸರಿಡಿ, ಅದೃಷ್ಟ ಹುಡುಕಿಕೊಂಡು ಬರುತ್ತದೆ.!
* ಕೆಮ್ಮುವಾಗ ಪದೇ ಪದೇ ರಕ್ತ ಕಾಣಿಸಿಕೊಳ್ಳುವುದು.
* ವಾರಕ್ಕಿಂತ ಹೆಚ್ಚು ಕಾಲಗಳವರೆಗೆ ಬಾಯಿಯಲ್ಲಿ ಹುಣ್ಣು ಅಥವಾ ನಾಲಿಗೆಯಲ್ಲಿ ಉಣ್ಣು ಕಾಣಿಸಿಕೊಳ್ಳುವುದು.
* ಉಸಿರಾಟದಲ್ಲಿ ತೊಂದರೆ ಉಂಟಾಗುವುದು.
* ಹೊಟ್ಟೆಯಲ್ಲಿ ಸಂಕಟ ಆಗುವುದು ಅಥವಾ ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳುವುದು.
* ಧೂಮಪಾನ ಮಾಡುವವರಿಗೆ ತಕ್ಷಣವೇ ಅವರ ಧ್ವನಿಯಲ್ಲಿ ಬದಲಾ ವಣೆ ಉಂಟಾಗುವುದು.
* ದೇಹದಲ್ಲಿ ಯಾವುದಾದರೂ ಭಾಗದಲ್ಲಿ ಗಂಟು ರೀತಿ ಕಾಣಿಸಿಕೊಳ್ಳು ವುದು.
* ಗಂಟು ಇದ್ದರೂ ನೋವು ಕಾಣಿಸಿಕೊಳ್ಳದೆ ಇರುವುದು.
* ಮೂತ್ರ ವಿಸರ್ಜನೆಯಲ್ಲಿ ತೊಂದರೆಗಳು ಉಂಟಾಗುವುದು.
* ರಾತ್ರಿ ಹೆಚ್ಚು ಬೆವರುವುದು.
* ದೇಹದ ತೂಕ ತಕ್ಷಣದಲ್ಲಿಯೇ ಕಡಿಮೆಯಾಗುವುದು.
* ಹಲವಾರು ವಾರಗಳವರೆಗೂ ನೋವು ಗುಣ ಆಗದೆ ಇರುವುದು.
* ಹೇಳಿಕೊಳ್ಳಲು ಆಗದೇ ಇರುವಷ್ಟು ನೋವು.
ಮನೆಯಲ್ಲಿ ಹಲ್ಲಿಗಳ ಕಾಟ ಜಾಸ್ತಿ ಆಗಿದಿಯಾ, ಈ ಕೆಲಸ ಮಾಡಿ ಸಾಕು ಮತ್ತೆ ಹಲ್ಲಿಗಳು ಮನೆಯೊಳಗೆ ಬರಲ್ಲ.!
ಹೀಗೆ ಇನ್ನೂ ಹಲವಾರು ಲಕ್ಷಣಗಳು ಈ ಒಂದು ಕ್ಯಾನ್ಸರ್ ಕಾಯಿಲೆ ಇರುವಂತಹ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಕೆಲವು ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ನೀವು ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಉತ್ತಮ.
ಯಾವುದೇ ಒಂದು ಸಮಸ್ಯೆಯನ್ನು ನಾವು ಚಿಕ್ಕದಿದ್ದಾಗಲೇ ತೋರಿಸಿ ಕೊಳ್ಳುವುದು ಒಳ್ಳೆಯದು ಬದಲಿಗೆ ಅದು ದೊಡ್ಡದಾಗಿ ಅದರಿಂದ ಭಾರಿ ಪ್ರಮಾಣದ ತೊಂದರೆ ಉಂಟಾಗುವುದನ್ನು ತಪ್ಪಿಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ರೀತಿಯ ಯಾವುದೇ ಸಮಸ್ಯೆ ಇದ್ದರೂ ಅದನ್ನು ಗುಣಪಡಿಸಿಕೊಳ್ಳುವುದು ತುಂಬಾ ಒಳ್ಳೆಯದು.