ಮನೆಯಲ್ಲಿರುವಂತಹ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಯಾವ ರೀತಿಯ ಕೆಲವು ನಿಯಮಗಳನ್ನು ಅನುಸರಿಸಬೇಕು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಬಹಳ ಹಿಂದಿನ ದಿನದಿಂದ ಯಾವ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಇರುತ್ತದೆಯೋ ಆ ತಪ್ಪುಗಳನ್ನು ಮಾಡಬಾರದು.
ಹಾಗೆ ಏನಾದರೂ ಆ ತಪ್ಪುಗಳನ್ನು ಮಾಡಿದರೆ ಮೇಲೆ ಹೇಳಿದಂತೆ ನಮ್ಮ ಮನೆಯ ಅಭಿವೃದ್ಧಿ ಆಗುವುದಿಲ್ಲ ಹಾಗೂ ಮನೆಯಲ್ಲಿ ಒಂದರ ಮೇಲೊಂದು ಸಂಕಷ್ಟಗಳು ಅನಾರೋಗ್ಯದ ಸಮಸ್ಯೆಗಳು ಹೀಗೆ ಇನ್ನೂ ಹತ್ತು ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಆದ್ದರಿಂದ ಅಪ್ಪಿತಪ್ಪಿಯು ಈಗ ನಾವು ಹೇಳುವಂತಹ ಈ ಕೆಲವು ತಪ್ಪುಗಳನ್ನು ನಿಮ್ಮ ಮನೆಗಳಲ್ಲಿ ಮಾಡದೇ ಇರುವುದು ತುಂಬಾ ಒಳ್ಳೆಯದು.
ಹಾಗಾದರೆ ಮನೆಯಲ್ಲಿ ಪ್ರತಿಯೊಬ್ಬರೂ ಯಾವ ರೀತಿಯ ಕೆಲವು ನಿಯಮಗಳನ್ನು ಅನುಸರಿಸಬೇಕು, ಯಾವ ಕೆಲವು ತಪ್ಪುಗಳನ್ನು ಮಾಡಬಾರದು, ಹಾಗೂ ಮನೆಯನ್ನು ಯಾವ ರೀತಿಯಾಗಿ ಇಟ್ಟುಕೊಳ್ಳ ಬೇಕು, ಯಾವ ರೀತಿಯಾಗಿ ದೇವರ ಪೂಜೆಯನ್ನು ಮಾಡಬೇಕು, ಯಾವ ವಸ್ತುಗಳನ್ನು ಎಲ್ಲಿ ಇಡಬೇಕು, ಹೀಗೆ ಇನ್ನೂ ಹಲವಾರು ವಿಷಯಕ್ಕೆ ಸಂಬಂಧಿಸಿದ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿದು ಕೊಳ್ಳೋಣ.
* ಮನೆಯ ಮೂಲೆಗಳಲ್ಲಿ ಯಾವುದೇ ರೀತಿಯ ಜಾಡು, ಬಲೆಗಳು ಇರದಂತೆ ನೋಡಿಕೊಳ್ಳಿ.
* ಸಂಜೆ ಸಮಯದಲ್ಲಿ ಮರ ಗಿಡಗಳನ್ನು ಕತ್ತರಿಸಬಾರದು ಅದರಲ್ಲೂ ವಿಶೇಷವಾಗಿ ತುಳಸಿಗಿಡವನ್ನು ಕತ್ತರಿಸಬಾರದು.
* ಸೋಮವಾರ, ಮತ್ತು ಬುಧವಾರಗಳಂದು ಸಾಲವನ್ನು ತೆಗೆದುಕೊಳ್ಳ ಬೇಡಿ.
* ಬೇಗ ಸಾಲವನ್ನು ತೀರಿಸಲು ಬಯಸಿದರೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಒಂದು ಕಿಟಕಿ ಹಾಕಿಸಿ.
* ಭಾರವಾದ ವಸ್ತುಗಳನ್ನು ಅಥವಾ ಭಾರವಾದ ಲಗೇಜುಗಳನ್ನು ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಡಿ. ಇದು ಸಾಲ ಅಥವಾ ಕೆಲವು ರೀತಿಯ ನಷ್ಟಕ್ಕೆ ಕಾರಣವಾಗುತ್ತದೆ.
* ಹಾಸಿಗೆಯ ಮೇಲೆ ಕುಳಿತು ಊಟಮಾಡಬೇಡಿ.
* ಮನೆಯ ಉತ್ತರ ದಿಕ್ಕಿನಲ್ಲಿ ಎತ್ತರದ ಗೋಡೆ ಇದ್ದರೆ, ಅವುಗಳ ಎತ್ತರವನ್ನು ಕಡಿಮೆ ಮಾಡಿ ಮತ್ತು ದಕ್ಷಿಣ ಭಾಗದ ಗೋಡೆಗಳನ್ನು ಸ್ವಲ್ಪ ಎತ್ತರ ಮಾಡಿ.
* ರಾತ್ರಿವೇಳೆ ಅಡುಗೆಮನೆಯಲ್ಲಿ ಕೊಳಕು ಪಾತ್ರೆಗಳನ್ನು ಬಿಡಬೇಡಿ.
* ಸಂಜೆ ಸಮಯದಲ್ಲಿ ಮನೆಯಲ್ಲಿ ಮಲಗಬೇಡಿ ಇದರಿಂದ ಬಡತನ ಹೆಚ್ಚಾಗಿ ಸಾಲ ಬಾದೆಗೆ ತುತ್ತಾಗುತ್ತೀರಿ.
* ಮನೆಯ ನೈಋತ್ಯ ದಿಕ್ಕಿನಲ್ಲಿ Toilet ಇರಬಾರದು.
* ಉಪ್ಪಿನ ಡಬ್ಬಿಯನ್ನು ಸಾದಾ ಮುಚ್ಚಿರಬೇಕು.
ನಿಮ್ಮ ಮಕ್ಕಳಿಗೆ ಹೀಗೆ ಹೆಸರಿಡಿ, ಅದೃಷ್ಟ ಹುಡುಕಿಕೊಂಡು ಬರುತ್ತದೆ.!
* ದಕ್ಷಿಣ ದಿಕ್ಕಿನಲ್ಲಿ ಬೀರುವನ್ನು ಇರಿಸಿ ಅದರ ಬಾಗಿಲನ್ನು ನೀವು ಉತ್ತರ ದಿಕ್ಕಿನಿಂದ ತೆರೆಯಿರಿ.
* ಸಂಜೆ ಸಮಯದಲ್ಲಿ ಯಾವುದೇ ವ್ಯಕ್ತಿಗೆ ಉಪ್ಪಾಗಲಿ, ಮೊಸರಾಗಲಿ ನೀಡಬಾರದು.
* ಮನೆಯ ಬಲ ಬದಿಗೆ ದಾಳಿಂಬೆ ಗಿಡವನ್ನು ನೆಡಬೇಕು ಇದರಿಂದ ಲಕ್ಷ್ಮೀದೇವಿಯನ್ನು ಕುಭೇರದೇವನನ್ನು ಆಕರ್ಷಿಸಿದಂತಾಗುತ್ತದೆ.
* ಬಾತ್ ರೂಮ್ ನಲ್ಲಿ ನೈಟ್ ಯಾವಾಗಲೂ ಕನಿಷ್ಠ ಒಂದು ಬಕೆಟ್ ನೀರು ತುಂಬಿಸಿ ಇಡಿ.
* ಕಪ್ಪು ನಾಯಿಗೆ ಆಹಾರವನ್ನು ನೀಡಿ ಇದರಿಂದ ಸಾಲದ ಋಣದಿಂದ ಬೇಗ ಹೊರಬರಬಹುದು.
* ದೇವರ ಫೋಟೋ ಮೇಲೆ ಬಾಡಿರುವ ಹೂವನ್ನು ಬಿಡಬೇಡಿ.
* ಶಾಸ್ತ್ರದ ಪ್ರಕಾರ ಮಂಗಳವಾರದ ದಿನ ಸಾಲದ ಕಂತನ್ನು ಮರು ಪಾವತಿ ಮಾಡಲು ಒಳ್ಳೆಯ ದಿನ. ಈ ದಿನ ಹಣವನ್ನು ಹಿಂದಿರುಗಿಸು ವುದರಿಂದ ಸಾಲವು ಶೀಘ್ರವಾಗಿ ಇತ್ಯರ್ಥವಾಗುತ್ತದೆ ಎಂದು ನಂಬಲಾಗಿದೆ.
ಮನೆಯಲ್ಲಿ ಹಲ್ಲಿಗಳ ಕಾಟ ಜಾಸ್ತಿ ಆಗಿದಿಯಾ, ಈ ಕೆಲಸ ಮಾಡಿ ಸಾಕು ಮತ್ತೆ ಹಲ್ಲಿಗಳು ಮನೆಯೊಳಗೆ ಬರಲ್ಲ.!
* ಮನೆಯ ಮುಂದೆ ಬಿಲ್ವಪತ್ರೆ ಗಿಡವನ್ನು ಹಾಕಿ ಇದರಿಂದ ನಿಮ್ಮ ಮನೆಗೆ ಹಣದ ಹರಿವು ಹೆಚ್ಚಾಗುತ್ತದೆ.
* ಸಾಧ್ಯವಾದರೆ ಶುಕ್ರವಾರ ನಿಮ್ಮ ಮನೆಯ ಲಕ್ಷ್ಮೀದೇವಿ ಫೋಟೋಗೆ ಕನಕಾಂಬರ ಹೂವನ್ನು ಹಾಕಿ. ಈ ಹೂವು ಲಕ್ಷ್ಮೀದೇವಿಗೆ ಬಹಳ ಪ್ರಿಯವಾದ ಹೂವಾಗಿದೆ.
* ನಿಮ್ಮ ಮನೆಯಲ್ಲಿ ಕುಬೇರ ಯಂತ್ರವನ್ನು ಇಟ್ಟು, ಶಮಿ ಎಲೆಗಳನ್ನು ಇಟ್ಟು ಪೂಜಿಸಿದರೆ ಸಾಲದ ಸಮಸ್ಯೆಯಿಂದ ಅತಿ ಶೀಘ್ರದಲ್ಲೇ ಮುಕ್ತಿ ಹೊಂದಲಿದ್ದೀರಿ. ಜೊತೆಗೆ ಕುಬೇರನ ಮಂತ್ರಗಳನ್ನು ಕೂಡಾ ಪಠಿಸಬೇಕು.