ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಕೆಲವೊಂದು ನಿಯಮ ಗಳನ್ನು ಅಳವಡಿಸಿಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.ಹೌದು ಅವುಗಳು ಅವರ ಆರೋಗ್ಯದ ದೃಷ್ಟಿಯಿಂದಲೂ ಕೂಡ ಬಹಳ ಒಳ್ಳೆ ಯದು ಎಂದು ಹೇಳಬಹುದು. ಆದರೆ ಹೆಚ್ಚಿನ ಜನ ಇಂತಹ ನಿಯಮ ಗಳನ್ನು ಅನುಸರಿಸುವುದಿಲ್ಲ ಬದಲಿಗೆ ಸಿಕ್ಕಸಿಕ್ಕ ಹಾಗೆ ಸಮಯವನ್ನು ವ್ಯರ್ಥ ಮಾಡುತ್ತಿರುತ್ತಾರೆ ಹಾಗೂ ಸಿಕ್ಕ ಸಿಕ್ಕ ಹಾಗೆ ದಿನವನ್ನು ಕಳೆಯುತ್ತಿರುತ್ತಾರೆ.
ಹೀಗೆಲ್ಲ ಮಾಡುವುದರಿಂದ ಮುಂದಿನ ದಿನದಲ್ಲಿ ಅವರು ಹಲವಾರು ನಷ್ಟಗಳನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಎಂತಹ ಕೆಲವೊಂದಷ್ಟು ಒಳ್ಳೆಯ ಅಭ್ಯಾಸಗಳನ್ನು ಮಾಡಿಕೊಂಡಿರುವುದು ಬಹಳ ಮುಖ್ಯ. ಹಾಗೂ ಅದು ಅವರ ಮುಂದಿನ ಜೀವನದ ಏಳಿಗೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗಾದರೆ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವ ರೀತಿಯ ಕೆಲವು ನಿಯಮಗಳನ್ನು ಅನುಸರಿಸಬೇಕು ಎಂದು ಈ ಕೆಳಗೆ ತಿಳಿದು ಕೊಳ್ಳುತ್ತಾ ಹೋಗೋಣ.
* ಪ್ರತಿಯೊಬ್ಬರೂ ಕೂಡ ದಿನಕ್ಕೆ 8 ರಿಂದ 10 ಗಂಟೆಗಳ ಕಾಲ ನಿದ್ರೆ ಮಾಡಬೇಕು.
ಹೌದು ಕನಿಷ್ಠ ಪಕ್ಷ ಎಂಟು ಗಂಟೆಗಳ ಸಮಯವಾದರೂ ನಿದ್ರೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು ಆದರೆ ಇತ್ತೀಚಿನ ದಿನದಲ್ಲಿ ರಾತ್ರಿಯ ಸಮಯದಲ್ಲಿಯೂ ಕೂಡ ಕೆಲಸ ಎಂದು ಹೆಚ್ಚಿನ ಜನ ನಿದ್ರೆ ಮಾಡುವುದಿಲ್ಲ ಅಂತವರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.
* ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಮೊಬೈಲ್ ಬಳಕೆ ಮಾಡುವುದ ನ್ನು ಕಡಿಮೆ ಮಾಡಬೇಕು. ಹೌದು ಮೊಬೈಲ್ ಬಳಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ಅದರಿಂದಲೇ ಇನ್ನೂ ಹಲವಾರು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದ್ದರಿಂದ ಆದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡುವುದು ಉತ್ತಮ.
* ಪ್ರತಿದಿನ ರಾತ್ರಿ ಬೇಗ ಮಲಗಿ ಬೆಳಗ್ಗೆ 4:30 ಸಮಕ್ಕೆ ಏಳುವುದು ತುಂಬಾ ಒಳ್ಳೆಯದು ಈ ನಿಯಮವನ್ನು ಅನುಸರಿಸಿದರೆ ಯಾವುದೇ ರೀತಿಯ ಆರೋಗ್ಯದ ಸಮಸ್ಯೆ ಬರುವುದಿಲ್ಲ ಆ ಸಮಯದಲ್ಲಿ ಬರುವಂತಹ ಗಾಳಿಯ ಸೇವನೆಯೂ ಅವರ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ಹೇಳಬಹುದು.
* ಪ್ರತಿದಿನ ಎರಡರಿಂದ ಮೂರು ಲೀಟರ್ ನೀರನ್ನು ಕುಡಿಯುವುದು ಕಡ್ಡಾಯ ಹೌದು ನಮ್ಮ ದೇಹಕ್ಕೆ ನೀರಿನ ಅಗತ್ಯತೆ ಹೆಚ್ಚಾಗಿ ಬೇಕು ಆದ್ದರಿಂದ ಹೆಚ್ಚಾಗಿ ನೀರನ್ನು ಕುಡಿಯುವುದರಿಂದ ನಾವು ತಿಂದಂತಹ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗಿ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
* ಮೊದಲೇ ಹೇಳಿದಂತೆ ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು ಕೂಡ ಬಹಳ ಮುಖ್ಯ. ಅದರಲ್ಲೂ 10 ಗಂಟೆಯ ಒಳಗಾಗಿ ನಿದ್ರೆ ಮಾಡುವುದು ತುಂಬಾ ಒಳ್ಳೆಯದು.
* ಪ್ರತಿದಿನ ಪ್ರತಿಯೊಬ್ಬರೂ ಬೆಳಗಿನ ಬಿಸಿಲಿಗೆ ತಮ್ಮ ಶರೀರವನ್ನು ತಾಗಿಸಬೇಕು ಹೌದು ಇದರಿಂದ ನಮಗೆ ವಿಟಮಿನ್ ಸಿ ವಿಟಮಿನ್ ಎ ಹೀಗೆ ಇನ್ನೂ ಹಲವಾರು ರೀತಿಯ ಆರೋಗ್ಯ ಪ್ರಯೋಜನ ಉಂಟಾಗುತ್ತದೆ.
* ಕನಿಷ್ಠ ಪ್ರತಿದಿನ ಅರ್ಧ ಗಂಟೆಗಳ ಕಾಲವಾದರೂ ನಡೆಯಬೇಕು.
* ಆಗಾಗ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.
* ಆರೋಗ್ಯಕ್ಕೆ ಹಾನಿ ಉಂಟು ಮಾಡುವಂತಹ ಆಹಾರ ಪದಾರ್ಥವನ್ನು ಸೇವನೆ ಮಾಡುವುದು ಒಳ್ಳೆಯದು.
* ರಾತ್ರಿ ಉಳಿದಂತಹ ತಂಗಳು ಆಹಾರವನ್ನು ಬೆಳಗ್ಗಿನ ಸಮಯ ಸೇವನೆ ಮಾಡಬಾರದು.
* ರಾತ್ರಿ ಊಟ ಮಾಡಿದ ತಕ್ಷಣ ಸ್ವಲ್ಪ ಹೊತ್ತು ನಡೆಯುವ ಅಭ್ಯಾಸ ವನ್ನು ಮಾಡಿಕೊಳ್ಳಬೇಕು.
* ರಾತ್ರಿ ಹೊತ್ತು ತುಂಬಾ ತಡವಾಗಿ ಮಲಗಿಕೊಳ್ಳುವುದು ಆರೋಗ್ಯಕ್ಕೆ ತುಂಬಾ ಅಪಾಯ.
* ಅತಿಯಾದ ಬಿಸಿ ಇರುವ ಆಹಾರವನ್ನು ಮತ್ತು ಹೆಚ್ಚು ಮಸಾಲೆ ಬರಿತ ಆಹಾರವನ್ನು ಸೇವನೆ ಮಾಡುವುದು ಕೂಡ ಅಪಾಯ.