ಪ್ರತಿಯೊಬ್ಬರೂ ಕೂಡ ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳುವು ದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದರೆ ಅವರು ಅನುಸರಿಸುವಂತಹ ಜೀವನಶೈಲಿ ಹಾಗೂ ಅವರು ಅನುಸರಿಸುವಂತಹ ಆಹಾರ ಪದ್ಧತಿ, ಇವೆರಡರಿಂದಲೇ ಅವರು ತಮ್ಮ ದೇಹದ ತೂಕವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳುತ್ತಿರುತ್ತಾರೆ ಆದ್ದರಿಂದ ಇವೆರಡರ ಬಗ್ಗೆ ಹೆಚ್ಚಿನ ಗಮನವನ್ನು ವಹಿಸುವುದು ತುಂಬಾ ಒಳ್ಳೆಯದು.
ನಾವು ನಮ್ಮ ದೇಹಕ್ಕೆ ಎಷ್ಟರ ಪ್ರಮಾಣದಲ್ಲಿ ಆಹಾರವನ್ನು ಸೇವನೆ ಮಾಡ ಬೇಕು ಎಂದು ಇರುತ್ತದೆಯೋ ಅಷ್ಟನ್ನು ಸೇವನೆ ಮಾಡಿದರೆ ಅದು ಸರಿಯಾದ ರೀತಿಯಲ್ಲಿ ಜೀರ್ಣವಾಗುತ್ತದೆ. ನಮ್ಮ ದೇಹಕ್ಕೆ ಅವಶ್ಯಕತೆ ಇರುವ ಆಹಾರಕ್ಕಿಂತ ಅಧಿಕವಾಗಿ ಆಹಾರವನ್ನು ಸೇವನೆ ಮಾಡಿದರೆ ನಾವು ತಿಂದಂತಹ ಆಹಾರ ನಮ್ಮ ದೇಹದಲ್ಲಿ ಹಾಗೆ ಶೇಖರಣೆಯಾಗಿರುತ್ತದೆ ಇದರಿಂದ ನಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾಗುತ್ತದೆ.
ಮನೆಯಲ್ಲಿ ನೆಮ್ಮದಿ ನೆಲೆಸಲು ಇದನ್ನು ಅನುಸರಿಸಿ.!
ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ದೇಹಕ್ಕೆ ಅಗತ್ಯವಾಗಿ ಅವಶ್ಯ ಕತೆ ಇರುವಷ್ಟು ಆಹಾರವನ್ನು ಮಾತ್ರ ಸೇವನೆ ಮಾಡುವುದು ಉತ್ತಮ. ಈ ರೀತಿ ನಮ್ಮ ದೇಹದಲ್ಲಿ ಹೆಚ್ಚಾದಂತಹ ಬೊಜ್ಜಿನ ಪ್ರಮಾಣವನ್ನು ಕಡಿಮೆ ಮಾಡುವುದಕ್ಕೆ ಕೆಲವೊಂದಷ್ಟು ಜನ ಹಲವಾರು ಅಡ್ಡ ಪರಿಣಾಮವನ್ನು ಉಂಟುಮಾಡುವ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ.
ಆದರೆ ಆ ವಿಧಾನಗಳನ್ನು ಅನುಸರಿಸುವುದರಿಂದ ನಮ್ಮ ಆರೋಗ್ಯದಲ್ಲಿ ಮತ್ತಷ್ಟು ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಅದರ ಬದಲು ನಾವು ಸೇವನೆ ಮಾಡುವಂತಹ ಆಹಾರ ಕ್ರಮದಲ್ಲಿಯೇ ಯಾವ ರೀತಿಯ ಆಹಾರ ಕ್ರಮವನ್ನು ಅನುಸರಿಸುವುದರಿಂದ ನಮ್ಮ ದೇಹದ ಕೊಬ್ಬನ್ನು ಕರಗಿಸಬಹುದು ಎನ್ನುವುದನ್ನು ತಿಳಿದುಕೊಂಡಿರುವುದು ತುಂಬಾ ಮುಖ್ಯವಾಗಿರುತ್ತದೆ.
ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಬಹು ಮುಖ್ಯ ವಿಚಾರ.!
ಹಾಗಾದರೆ ಈ ದಿನ ನಮ್ಮ ದೇಹದಲ್ಲಿ ಅದರಲ್ಲೂ ನಮ್ಮ ಹೊಟ್ಟೆಯ ಭಾಗದಲ್ಲಿ ಇರುವಂತಹ ಬೊಜ್ಜನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು. ಅಂದರೆ ಕೇವಲ ಎರಡೇ ಎರಡು ಪದಾರ್ಥಗಳನ್ನು ಉಪಯೋಗಿಸಿ ಹೇಗೆ ನಮ್ಮ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು. ಅದನ್ನು ಹೇಗೆ ತಯಾರಿಸುವುದು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಹಾಗಾದರೆ ಈ ಒಂದು ಮನೆ ಮದ್ದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
* ಕಪ್ಪು ಮೆಣಸು
* ಚಕ್ಕೆ ಅಥವಾ ದಾಲ್ಚಿನ್ನಿ
ಇವೆರಡು ಪದಾರ್ಥ ಇದ್ದರೆ ಸಾಕು ನಿಮ್ಮ ಹೊಟ್ಟೆಯ ಬೊಜ್ಜನ್ನು ಸುಲಭವಾಗಿ ಕಡಿಮೆ ಮಾಡಬಹುದು. ಹಾಗಾದರೆ ಇದನ್ನು ಹೇಗೆ ತಯಾರಿಸುವುದು ಇದನ್ನು ಹೇಗೆ ಉಪಯೋಗಿಸುವುದು ಹಾಗೂ ಯಾವ ಸಮಯದಲ್ಲಿ ಇದನ್ನು ಸೇವನೆ ಮಾಡುವುದು ಎನ್ನುವುದನ್ನು ಈ ಕೆಳಗಿನಂತೆ ತಿಳಿಯದುಕೊಳ್ಳೋಣ.
ನಿಮ್ಮ ಬಿಪಿಯನ್ನು ಕಡಿಮೆ ಮಾಡಲು ಉಪಯುಕ್ತವಾದ 10 ಮನೆಮದ್ದುಗಳು.!
ಮೆಣಸು ಮತ್ತು ಚಕ್ಕೆ ಎರಡನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಆನಂತರ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಚಿಟಿಕೆ ಕಪ್ಪು ಮೆಣಸು ಹಾಗೂ ಒಂದು ಚಿಟಿಕೆ ಚಕ್ಕೆ ಅಥವಾ ದಾಲ್ಚಿನ್ನಿ ಪುಡಿ ಯನ್ನು ಹಾಕಿ ಮಿಶ್ರಣ ಮಾಡಿ ಆನಂತರ ಒಂದು ಚಮಚ ಜೇನುತುಪ್ಪ ವನ್ನು ಮಿಶ್ರಣ ಮಾಡಿ ರಾತ್ರಿ ಸಮಯ ಊಟ ಆದ ತಕ್ಷಣವೇ ಸೇವನೆ ಮಾಡಬೇಕು.
ಈ ರೀತಿ ಸೇವನೆ ಮಾಡುತ್ತಾ ಬಂದರೆ ನಿಮ್ಮ ಹೊಟ್ಟೆಯ ಸುತ್ತ ಇರುವಂತಹ ಬೊಜ್ಜು ಸಂಪೂರ್ಣವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಹಾಗೂ ಮೊದಲೇ ಹೇಳಿದಂತೆ ನಿಮ್ಮ ಆಹಾರ ಪದ್ಧತಿ ಯಲ್ಲಿಯೂ ಕೂಡ ಕೆಲವೊಂದಷ್ಟು ಬದಲಾವಣೆ ಮಾಡಿಕೊಳ್ಳುತ್ತಾ ಇದನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದ ಬೊಜ್ಜನ್ನು ಸುಲಭವಾಗಿ ಯಾವುದೇ ಶ್ರಮ ಇಲ್ಲದೆ ಕಡಿಮೆ ಮಾಡಿಕೊಳ್ಳಬಹುದು.