ಪ್ರತಿಯೊಬ್ಬರೂ ಕೂಡ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಅದರಲ್ಲೂ ದೇವರ ಮನೆಯನ್ನು ಸ್ವಚ್ಛವಾಗಿ ಶುದ್ಧವಾಗಿ ಮಡಿಯಾಗಿ ಇಡುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ ಇಲ್ಲವಾದರೆ ಕೆಲವೊಂದಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ದೇವರ ಮನೆ ಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.
ಅದರಲ್ಲೂ ದೇವರ ಮನೆಯಲ್ಲಿ ಉಪಯೋಗಿಸುವಂತಹ ವಸ್ತುಗಳನ್ನು ಯಾವುದೇ ಕಾರಣಕ್ಕೂ ನಾವು ಹೊರಗಡೆ ಮಾಡುವಂತಹ ಕೆಲಸಗಳಿಗೆ ಉಪಯೋಗಿಸಬಾರದು ಬದಲಿಗೆ ಆ ವಸ್ತುವನ್ನು ಅದಕ್ಕೆಂದೇ ಮೀಸಲಾಗಿಡಬೇಕು. ಬದಲಿಗೆ ಅದಕ್ಕೆ ಯಾವುದೇ ರೀತಿಯ ಎಂಜಲು ಮೈಲಿಗೆ ತಾಕದ ಹಾಗೆ ನೋಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ.
ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಕಿವಿಮಾತು.!
ಹಾಗಾದರೆ ಈ ದಿನ ದೇವರ ಮನೆಯ ವಿಚಾರ ವಾಗಿ ಸಂಬಂಧಿಸಿದ ಅಂದರೆ ದೇವರ ಮನೆಯನ್ನು ಯಾವ ರೀತಿಯಾಗಿ ಇಟ್ಟುಕೊಳ್ಳಬೇಕು ಹಾಗೂ ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಯಾವ ರೀತಿ ತಪ್ಪುಗಳನ್ನು ಮಾಡುತ್ತಿದ್ದೇವೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
* ಹಾಗೂ ದೇವರ ಮನೆಯಲ್ಲಿ ಉಪಯೋಗಿಸುವಂತಹ ಕೆಲವೊಂದಷ್ಟು ಬಟ್ಟೆಗಳು ಪಾತ್ರೆಗಳನ್ನು ಯಾವುದೇ ಕಾರಣಕ್ಕೂ ನಾವು ಹೊರಗಿನ ಕೆಲಸ ಕಾರ್ಯಗಳಿಗೆ ಉಪಯೋಗಿಸಬಾರದು ಬದಲಿಗೆ ದೇವರ ಮನೆಗೆ ಎಂದೇ ಬೇರೆ ಇಡಬೇಕು.
* ಹಾಗೂ ದೇವರ ಮನೆಯಲ್ಲಿ ಇರುವಂತಹ ಅರಿಶಿಣ ಮತ್ತು ಕುಂಕುಮ ವನ್ನು ನಾವು ಹೊರಗಡೆ ತಂದು ಉಪಯೋಗಿಸಬಾರದು ಅಂದರೆ ಬೇರೆಯವರಿಗೆ ಕುಂಕುಮ ಕೊಡುವುದಕ್ಕೆ ಬಳಸಬಾರದು. ಅದಕ್ಕೆ ಯಾವುದೇ ರೀತಿಯ ಮೈಲಿಗೆ ತಾಕದ ಹಾಗೆ ನೋಡಿಕೊಳ್ಳಬೇಕು.
ಬೀರುನಲ್ಲಿ ಹೆಚ್ಚು ಬಟ್ಟೆ ಇಡಲು ಈ ಟಿಪ್ಸ್ ಬಳಸಿ.!
* ಮೊದಲೇ ಹೇಳಿದಂತೆ ದೇವರ ಮನೆಯಲ್ಲಿ ಯಾವುದೇ ರೀತಿಯ ಧೂಳು ಇದ್ದರೂ ಅದನ್ನು ತೆಗೆಯಬೇಕು ಹಾಗೂ ದೇವರ ಮನೆಯಲ್ಲಿ ಇರುವಂತಹ ಸಾಮಗ್ರಿಯನ್ನು ವಾರಕ್ಕೆ ಒಮ್ಮೆಯಾದರೂ ತೊಳೆಯು ವುದು ಉತ್ತಮ.
* ದೇವರ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಅರಿಶಿಣ ಮತ್ತು ಕುಂಕುಮ ಕಾಲಿಯಾಗದ ಹಾಗೆ ನೋಡಿಕೊಳ್ಳಬೇಕು.
* ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಮುಕ್ಕಾದ ವಿಗ್ರಹಗಳು ಮತ್ತು ಗಾಜು ಒಡೆದಿರುವಂತಹ ಫೋಟೋಗಳನ್ನು ಇಟ್ಟುಕೊಂಡು ಪೂಜಿಸಬಾರದು. ಇದು ಅಶುಭ ಎಂದು ತಿಳಿಸಲಾಗುತ್ತದೆ ಹಾಗೇನಾ ದರೂ ಇಂತಹ ವಿಗ್ರಹಗಳು ಇದ್ದರೆ ಈಗಲೇ ಅದನ್ನು ತೆಗೆದುಬಿಡಿ ಇಲ್ಲವಾದರೆ ಮುಂದಿನ ದಿನದಲ್ಲಿ ಕೆಲವೊಂದಷ್ಟು ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.
ಹೊಟ್ಟೆ ಕರಗಿಸಲು ಇದಕ್ಕಿಂತ ಬೇರೆ ಉಪಾಯ ಇಲ್ಲ.! ಈ ರೀತಿ ಮಾಡಿ ಸುಲಭವಾಗಿ ದೇಹದ ತೂಕ ಕಡಿಮೆಯಾಗುತ್ತೆ.!
* ದೇವರಿಗೆ ಧರಿಸಿದಂತಹ ಹೂವುಗಳನ್ನು ಸಿಕ್ಕಸಿಕ್ಕ ಕಡೆ ಬಿಸಾಡ ಬಾರದು ಅದನ್ನು ಹರಿಯುವ ನೀರಿನಲ್ಲಿ ಹಾಕಬೇಕು ಅಥವಾ ಯಾವುದಾದರೂ ಗಿಡದ ಬುಡಕ್ಕೆ ಹಾಕಬೇಕು.
* ದೇವರ ಮನೆಯ ಬಾಗಿಲನ್ನು ಸದಾ ಕಾಲ ತೆರೆದಿರಬಾರದು. ಪೂಜೆ ಮುಗಿದ ಸ್ವಲ್ಪ ಹೊತ್ತು ಬಿಟ್ಟು ಆನಂತರ ಅದನ್ನು ಮುಚ್ಚುವುದು ಒಳ್ಳೆಯದು.
* ನಾವು ಹೊರಗಿನಿಂದ ಬಂದು ತಕ್ಷಣ ದೇವರ ಕೋಣೆಗೆ ಹೋಗ ಬಾರದು.ಬದಲಿಗೆ ಆ ಬಟ್ಟೆ ಎಲ್ಲವನ್ನು ತೆಗೆದು ಮಡಿಯಾದಂತಹ ಬಟ್ಟೆಯನ್ನು ಧರಿಸಿ ಕೈಕಾಲು ಮುಖ ತೊಳೆದು ಆನಂತರ ಹೋಗಬೇಕು.
* ಅನಗತ್ಯವಾಗಿ ಮನೆಗೆ ಬಂದವರಿಗೆಲ್ಲ ದೇವರ ಕೋಣೆಯನ್ನು ತೋರಿಸಬಾರದು.
* ದೇವರ ಪೂಜೆಗೆ ಇರಿಸಿದ ಕಳಶದ ಕಾಯಿಯನ್ನು ಯಾವುದಾದರೂ ಸಿಹಿ ಪದಾರ್ಥ ಮಾಡಿ ಮನೆಯ ಸದಸ್ಯರು ಮಾತ್ರ ಸೇವನೆ ಮಾಡಬೇಕು ಬೇರೆಯವರಿಗೆ ಕೊಡಬಾರದು.
ಹೊಟ್ಟೆ ಕರಗಿಸಲು ಇದಕ್ಕಿಂತ ಬೇರೆ ಉಪಾಯ ಇಲ್ಲ.! ಈ ರೀತಿ ಮಾಡಿ ಸುಲಭವಾಗಿ ದೇಹದ ತೂಕ ಕಡಿಮೆಯಾಗುತ್ತೆ.!
* ಕಳಶದಲ್ಲಿರುವಂತಹ ನೀರನ್ನು ಮೊದಲು ನಿಮ್ಮ ತಲೆಗೆ ಸಿಂಪಡಿಸಿ ಕೊಂಡು ಆನಂತರ ಅದನ್ನು ತುಳಸಿ ಗಿಡಕ್ಕೆ ಅಥವಾ ಯಾರೂ ಒಡಾಡದ ಸ್ಥಳಕ್ಕೆ ಹಾಕಬೇಕು.
* ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಿದ ತಕ್ಷಣ ದೇವರ ಕೋಣೆಗೆ ಹೋಗಬಾರದು ಹೌದು ತಲೆಯ ಕೂದಲಿನಲ್ಲಿರುವಂತಹ ನೀರು ದೇವರ ಫೋಟೋ ಮತ್ತು ಸಾಮಗ್ರಿಗಳಿಗೆ ಬಿದ್ದರೆ ಹೆಚ್ಚಿನ ದೋಷಗಳು ಉಂಟಾಗುತ್ತದೆ ಆದ್ದರಿಂದ ತಲೆಯನ್ನು ಸಂಪೂರ್ಣವಾಗಿ ಒರೆಸಿ, ಆನಂತರ ಹೋಗುವುದು ಉತ್ತಮ.