ಮನೆಯಲ್ಲಿರುವಂತಹ ಮಹಿಳೆಯರು ಅಡುಗೆ ಮನೆಯ ವಿಚಾರವಾಗಿ ಕೆಲವೊಂದಷ್ಟು ಉತ್ತಮವಾದಂತಹ ವಿಷಯಗಳನ್ನು ತಿಳಿದುಕೊಂಡಿರು ವುದು ಬಹಳ ಮುಖ್ಯವಾಗಿರುತ್ತದೆ ಹೌದು ಏಕೆಂದರೆ ಅವರು ಅಡುಗೆ ಮನೆಯಲ್ಲಿ ಮಾಡುವಂತಹ ಕೆಲಸವನ್ನು ಆ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ಸುಲಭವಾಗಿಸಿ ಕೊಳ್ಳಬಹುದು.
ಹಾಗಾಗಿ ಪ್ರತಿಯೊಬ್ಬರೂ ಕೂಡ ಈಗ ನಾವು ಹೇಳುವಂತಹ ಕೆಲವೊಂದಷ್ಟು ಟಿಪ್ಸ್ ಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು. ಅದರಲ್ಲೂ ಹೊರಗಡೆ ಹೋಗಿ ಕೆಲಸ ಮಾಡುವಂತಹ ಮಹಿಳೆಯರಿಗೆ ಯಾವ ಕೆಲಸವನ್ನು ಹೇಗೆ ಕಡಿಮೆ ಸಮಯದಲ್ಲಿ ಮಾಡಬಹುದು ಎನ್ನುವಂತಹ ವಿಚಾರ ತಿಳಿದಿರುವುದಿಲ್ಲ. ಹಾಗಾಗಿ ಅಂತವರಿಗೆ ಇಂಥ ಕೆಲವೊಂದು ಟಿಪ್ಸ್ ಗಳು ತುಂಬಾ ಅನುಕೂಲವಾಗುತ್ತದೆ ಹಾಗೂ ಕೆಲಸವನ್ನು ಬೇಗನೆ ಮಾಡಬಹುದು ಎಂದೇ ಹೇಳಬಹುದು.
ಯೌವನವನ್ನು ಕಾಪಾಡುವ 10 ಆಹಾರಗಳು.!
ಹಾಗಾದರೆ ಈ ದಿನ ಅಡುಗೆ ಮನೆಗೆ ಸಂಬಂಧಿಸಿದಂತೆ ಯಾವ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು ಹಾಗೂ ಯಾವ ಕೆಲಸವನ್ನು ಹೇಗೆ ಮಾಡುವುದರಿಂದ ಆ ಕೆಲಸ ಸುಲಭವಾಗಿ ಆಗುತ್ತದೆ ಎನ್ನುವಂತಹ ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದು ಕೊಳ್ಳೋಣ.
* ಅನ್ನ ಮಾಡುವಂತಹ ಸಮಯದಲ್ಲಿ ಅಕ್ಕಿಗೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಹಾಕುವುದರಿಂದ ಅನ್ನ ಉದುರು ಉದುರಾಗಿ ಇರುತ್ತದೆ.
* ಸಾಮಾನ್ಯವಾಗಿ ನಾವು ಅಡುಗೆ ಮಾಡುವಂತಹ ಸಮಯದಲ್ಲಿ ಹಸಿಮೆಣಸಿನಕಾಯಿಯನ್ನು ಕತ್ತರಿಸಿದರೆ ನಮ್ಮ ಕೈ ಉರಿಯುತ್ತಿರುತ್ತದೆ ಅಂತಹ ಸಮಯದಲ್ಲಿ ಕೈಗೆ ಹರಳೆಣ್ಣೆಯನ್ನು ಹಚ್ಚಿದರೆ ಕೈಯಿನ ಉರಿ ಕಡಿಮೆಯಾಗುತ್ತದೆ.
ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ.!
* ಯಾವುದೇ ಚಾ ಕಪ್ಪಿಗೆ ಚಾದ ಕಲೆ ಹಾಗೆ ಇದ್ದಲ್ಲಿ ನಿಂಬೆರಸ ಮತ್ತು ಸೋಡಾ ಹಾಕಿ ಎರಡು ಗಂಟೆ ನೀರಿನಲ್ಲಿ ನೆನೆಸಿಡಿ ನಂತರ ತೊಳೆಯಿರಿ ಹೊಳಪು ಬರುವುದು.
* ಹಸಿಮೆಣಸಿನಕಾಯಿ ತೊಟ್ಟು ತೆಗೆದು ಫ್ರಿಜ್ಜಲ್ಲಿ ಇಡುವುದರಿಂದ ಹಸಿ ಮೆಣಸು ಹೆಚ್ಚು ದಿನಗಳ ಕಾಲ ಚೆನ್ನಾಗಿರುವುದು.
* ಮೊಸರಿಗೆ ಒಂದು ಚಮಚ ಸಕ್ಕರೆ ಹಾಕಿ ಕಡೆದಲ್ಲಿ ಬೆಣ್ಣೆ ಹೆಚ್ಚು ಬರುತ್ತದೆ.
* ಈರುಳ್ಳಿಯನ್ನು 15 ನಿಮಿಷ ನೀರಿನಲ್ಲಿ ನೆನೆಸಿ ಹಚ್ಚ ಬೇಕು ಹಾಗೆ ಮಾಡಿದರೆ ಕಣ್ಣಲ್ಲಿ ನೀರು ಬರುವುದಿಲ್ಲ.
* ಮನೆಗೆ ನೆಂಟರು ಬಂದಾಗ ಮೊಸರು ಇಲ್ಲದಿದ್ದಲ್ಲಿ ಒಂದು ಪಾತ್ರೆಗೆ ಹಾಲು ಹಾಕಿ, ಮೊಸರು ಹಾಕಿ ಆ ಪಾತ್ರೆ ಕೆಳಗೆ ನೀರಿನ ಬಟ್ಟಲು ಇಟ್ಟಲ್ಲಿ
ಒಂದು ಗಂಟೆಯಲ್ಲಿ ಮೊಸರು ತಯಾರಾಗುತ್ತದೆ.
* ಸಿಂಕ್ ಕ್ಲೀನ್ ಆಗದೆ ಜಿಗುಟು ಎಣ್ಣೆಯ ಕೊಳೆಗಳು ಹಾಗೆ ಇದ್ದಲ್ಲಿ ಸ್ವಲ್ಪ ಸೋಡಾ ಹಾಕಿ ಬಿಟ್ಟು ಆನಂತರ ತೊಳೆಯಿರಿ ಸಿಂಕ್ ಹೊಳೆಯುತ್ತದೆ.
* ಆಲೂಗೆಡ್ಡೆ ಫ್ರೆಶ್ ಇಲ್ಲದಿದ್ದಾಗ ಆಲೂಗಡ್ಡೆಯನ್ನು ಬೇಯಿಸುವಾಗ ಸ್ವಲ್ಪ ನಿಂಬೆರಸ ಹಾಕಿ ಬೇಯಿಸಿದರೆ ಆಲೂಗಡ್ಡೆ ಬೆಳ್ಳಗಾಗುತ್ತವೆ ಮತ್ತು
ಫ್ರೆಶ್ ಎನಿಸುತ್ತದೆ.
ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಕಿವಿಮಾತು.!
* ಹೂ ಕೋಸು ಬೇಯಿಸುವ ನೀರಿನಲ್ಲಿ ಒಂದು ಚಮಚ ಸಕ್ಕರೆ ಹಾಕಿ ದರೆ ತರಕಾರಿಯ ಬಿಳಿ ಬಣ್ಣ ಉಳಿಯುತ್ತದೆ.
* ಬೆಂಡೆಕಾಯಿ ಪಲ್ಯದಲ್ಲಿ ಸೀಳಿಕ ಬಿಡದೆ ಇರಲು ಹೋಳುಗಳಿಗೆ ಉರಿಯುವಾಗ ಹುಣಸೆಹಣ್ಣಿನ ರಸ ಸೇರಿಸಿ.
* ಮೆಣಸಿನ ಕಾಯಿಯನ್ನು ಬೀಜ ತೆಗೆದು ಬಳಸಿದರೇ ಖಾರ ಕಡಿಮೆ ಯಾಗುತ್ತದೆ.
* ಇನ್ಸ್ಟಂಟ್ ಕಾಫಿ ಪುಡಿ ಗಂಟು ಕಟ್ಟಿದ್ದರೆ ಅದರಲ್ಲಿ ಸ್ವಲ್ಪ ಕುದಿಯುವ ನೀರು ಬೆರೆಸಿ ಫ್ರಿಡ್ಜ್ ನಲ್ಲಿ ಇಟ್ಟರೆ ಬೇಕಾದಾಗ ಬಳಸಬಹುದು.
* ತುಪ್ಪ ಕಾಯಿಸುವ ಮುನ್ನ ವಿಲ್ಲೆದೆಲೆ ಮತ್ತು ಲವಂಗ ಹಾಕಿ ಕಾಯಿಸಿದರೆ ಪರಿಮಳ ಚೆನ್ನಾಗಿ ಬರುವುದು ಮತ್ತು ತುಪ್ಪ ಬಹಳ ದಿನ ಉಳಿಯುವುದು.
* ಜೇನುತುಪ್ಪ ಎಪ್ಪುಗಟ್ಟಿದ್ದರೆ ಆ ಬಾಟಲಿಯನ್ನು ಬಿಸಿ ನೀರಿನಲ್ಲಿ ಇಡಿ ಮತ್ತೆ ಮೊದಲಿನಂತಾಗುತ್ತದೆ.