ಜ್ಯೋತಿಷ್ಯದಲ್ಲಿ ಹಾಲನ್ನು ಚಂದ್ರನ ಅಂಶ ಎಂದು ಪರಿಗಣಿಸಲಾಗುತ್ತದೆ. ಧಾರ್ಮಿಕವಾಗಿ ಹಾಲಿಗೆ ವಿಶೇಷ ಮಹತ್ವ ಇದೆ. ಹಸಿ ಹಾಲನ್ನು ಶಿವ ಲಿಂಗಕ್ಕೆ ಅರ್ಪಿಸುವುದರಿಂದ ಹಿಡಿದು ಪೂಜಾ ಸಾಮಗ್ರಿಗಳಲ್ಲಿ ಇಡುವ ವರೆಗೂ ಕೂಡ ಬಳಸಲಾಗುತ್ತದೆ ಶಕುನ ಶಾಸ್ತ್ರದಲ್ಲಿ ಹಾಲು ಅನೇಕ ಶುಭ ಹಾಗೂ ಅಶುಭ ಚಿನ್ಹೆಗಳೊಂದಿಗೆ ಸಂಬಂಧಿಸಿದೆ.
ಕುದಿಯುವ ಹಾಲು ಬೀಳೋದು ತುಂಬಾ ಕೆಟ್ಟ ಶಕುನವಾಗಿದೆ. ಆಗಾಗ ಹಾಲು ಒಲೆಯ ಮೇಲೆ ಬೀಳುವುದರಿಂದ ಚಂದ್ರ ದೋಷ ಉಂಟಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸುತ್ತದೆ ಅಂತ ನಂಬಲಾಗಿದೆ. ಆಗಾಗ ಹಾಲು ಚೆಲ್ಲುವುದರಿಂದ ಅನ್ನಪೂರ್ಣೇಶ್ವರಿ ದೇವಿಯು ಕೂಡ ಸಿಟ್ಟು ಗೊಳ್ಳುತ್ತಾಳೆ ಎನ್ನುವ ನಂಬಿಕೆ ಇದೆ.
ಕರ್ನಾಟಕ ಅರಣ್ಯ ಇಲಾಖೆ ಹುದ್ದೆಗಳ ನೇಮಕಾತಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ…
ಒಲೆಯ ಮೇಲೆ ಹಾಲನ್ನು ಕುದಿಸುವಾಗ ಬೆಂಕಿಯನ್ನು ಬಳಸಲಾಗುತ್ತದೆ ಇದು ಮಂಗಳನ ಅಂಶವಾಗಿದೆ. ಇದು ಮಂಗಳ ಮತ್ತು ಚಂದ್ರನನ್ನು ಪರಸ್ಪರ ವಿರುದ್ಧವಾಗಿ ಪರಿಗಣಿಸಲಾಗುತ್ತದೆ. ಕುದಿಯುತ್ತಿರುವಂತಹ ಹಾಲು ಪದೇ ಪದೇ ಬಿದ್ದರೆ ಆಗಾಗ ಸಂಸಾರದಲ್ಲಿ ಕಲಹದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಚಂದ್ರ ಮತ್ತು ಮಂಗಳನ ಸಂಗಮದಿಂದಾಗಿ ಮನೆಯಲ್ಲಿ ಬಡತನ ಬರುವುದಕ್ಕೆ ಪ್ರಾರಂಭವಾಗುತ್ತದೆ.
ಆಗಾಗ ಹಾಲು ಬೀಳುವುದು ಸಹಜ ಆದರೆ ಇದು ಪದೇ ಪದೇ ಪುನರಾವರ್ತನೆಯಾಗುತ್ತಿದ್ದರೆ ಅದು ಮನೆಯಲ್ಲಿ ವಾಸ್ತು ದೋಷ ಇದೆ ಎನ್ನುವುದನ್ನು ಸೂಚಿಸುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿ ಆಗಾಗ ಹಾಲು ಬೀಳುತ್ತಾ ಇದ್ದರೆ ಅಥವಾ ಹಾಲು ಚೆಲ್ಲುತ್ತಾ ಇದ್ದರೆ ಆಗ ನೀವು ತಾಯಿ ಅನ್ನಪೂರ್ಣೇಶ್ವರಿ ದೇವಿಯನ್ನು ಪೂಜಿಸಿ ಕ್ಷಮೆಯನ್ನು ಕೇಳಬೇಕಾಗುತ್ತದೆ. ನೀವೇನಾದರೂ ಯಾವುದಾದರೂ ಕೆಲಸದ ಸಲುವಾಗಿ ಮನೆಯಿಂದ ಹೊರಗಡೆ ಹೋಗುವಾಗ ಹಾಲು ಚೆಲ್ಲಿದರೆ.
ಪಿತೃಪಕ್ಷದಲ್ಲಿ ಇದನ್ನು ಅಪ್ಪಿ ತಪ್ಪಿಯು ತಿನ್ನಬೇಡಿ ಕಷ್ಟ ಬೆನ್ನಟ್ಟುತ್ತೆ.!
ದೇವರಿಗೆ ಸಿಹಿ ನೈವೇದ್ಯ ಮಾಡಿದ ನಂತರವೇ ಮನೆಯಿಂದ ಹೊರಡ ಬೇಕು. ಸತತ ಪರಿಶ್ರಮದ ನಂತರವೂ ಜೀವನದಲ್ಲಿ ನಿರಂತರವಾಗಿ ಹಣದ ಕೊರತೆ ಇದ್ದರೆ ನೀರಲ್ಲಿ ಹಾಲನ್ನು ಹಾಕಿ ಸೋಮವಾರ ಶಿವ ಲಿಂಗಕ್ಕೆ ಅರ್ಪಿಸಿ. ಜೊತೆಗೆ ರುದ್ರಾಕ್ಷದ ಜಪಮಾಲೆಯೊಂದಿಗೆ ಸುಮಾರು 108 ಬಾರಿ ಓಂ ನಮೋ ಸೋಮೇಶ್ವರಾಯ ನಮಃ ಎಂದು ಪಠಿಸಿ ಪ್ರತಿ ಹುಣ್ಣಿಮೆ ಯಂದು ಹಾಲು ಮತ್ತು ನೀರಿನಿಂದ ಚಂದ್ರನಿಗೆ ಅರ್ಗ್ಯವನ್ನು ಅರ್ಪಿಸಿ.
ಇದರಿಂದ ಕೆಲವೇ ದಿನದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮಗೊಳ್ಳುತ್ತದೆ ಅಂತ ಹೇಳಲಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ಹಾಲು ಹಾಕುವವರು ಅಥವಾ ಹಾಲು ಕೊಳ್ಳುವವರು ಅಥವಾ ಹಾಲು ಕೊಂಡೊಯ್ಯತ್ತಿರುವುದನ್ನು ಕಂಡರೆ ಅದು ಕೂಡ ಶುಭ ಸೂಚನೆಯಾ ಗಿದೆ. ನೀವು ಕೂಡ ಹಾಲು ಕುಡಿಯುವುದು ಮನೆಯಲ್ಲಿ ಹಾಲು ಕುದಿಸುವುದು ಇದು ಕೂಡ ಶುಭ ಶಕುನವಾಗಿದೆ.
ಬೆ-ತ್ತಲೆಯಾಗಿ ಸ್ನಾನ ಮಾಡುವವರು ಈ ಸಮಸ್ಯೆ ಎದುರಿಸಬೇಕಾಗುತ್ತದೆ ಎಚ್ಚರ.!
ಇದರಿಂದ ಜಾತಕದಲ್ಲಿ ಚಂದ್ರ ಬಲವಾಗುತ್ತಾನೆ ಎನ್ನುವ ನಂಬಿಕೆ ಇದೆ. ವಿಶೇಷವಾಗಿ ಬುಧವಾರದಂದು ಹಾಲು ತಳ ಹತ್ತದಂತೆ ಜಾಗೃತಿ ವಹಿಸಿ ಏಕೆಂದರೆ ಇದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಬುಧವಾರದ ದಿನ ಹಾಲು ಬಿಸಿ ಮಾಡುವಾಗ ಸಾಧ್ಯವಾದಷ್ಟು ಎಚ್ಚರದಿಂದ ಇರಿ ಸಾಧ್ಯವಾದರೆ ಬುಧವಾರದಂದು ಹಾಲಿನಿಂದ ಮಾಡುವಂತಹ ಕೀರು ಅಥವಾ ಅಂತಹದ್ದೇ ಯಾವುದೇ ರೀತಿಯ ಸಿಹಿ ಪದಾರ್ಥವನ್ನು ಮನೆಯಲ್ಲಿ ಮಾಡಬೇಡಿ.
ವಾಸ್ತು ಶಾಸ್ತ್ರದ ಪ್ರಕಾರ ಪ್ರತಿ ಗುರುವಾರ ತುಳಸಿ ಗಿಡಕ್ಕೆ ನೀರಿನೊಂದಿಗೆ ಹಾಲನ್ನು ಅರ್ಪಿಸಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಇರುವಂತಹ ಯಾವುದೇ ಅಡೆಚಣೆಗಳು ದೂರವಾಗುತ್ತದೆ. ಅಡುಗೆ ಮಾಡುವ ಮುನ್ನ ಬಾಣಲೆಯ ಮೇಲೆ ಸ್ವಲ್ಪ ಹಾಲನ್ನು ಚಿಮುಕಿಸುವುದನ್ನು ಕೂಡ ಶುಭ ಎಂದು ಹೇಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.