Home Cinema Updates ನನ್ನ ಬಳಿ ಬಂದು ಬೇರೆ ಹೀರೋಗಳ ಬಗ್ಗೆ ಮಾತನಾಡಿದರೆ ಒದ್ದು ಹೊರಗೆ ಹಾಕ್ತೀನಿ ಅಂತ ಹೇಳಿದ ಕಿಚ್ಚ ಸುದೀಪ್ ಕಾರಣ ಏನು ಗೊತ್ತಾ.?

ನನ್ನ ಬಳಿ ಬಂದು ಬೇರೆ ಹೀರೋಗಳ ಬಗ್ಗೆ ಮಾತನಾಡಿದರೆ ಒದ್ದು ಹೊರಗೆ ಹಾಕ್ತೀನಿ ಅಂತ ಹೇಳಿದ ಕಿಚ್ಚ ಸುದೀಪ್ ಕಾರಣ ಏನು ಗೊತ್ತಾ.?

0
ನನ್ನ ಬಳಿ ಬಂದು ಬೇರೆ ಹೀರೋಗಳ ಬಗ್ಗೆ ಮಾತನಾಡಿದರೆ ಒದ್ದು ಹೊರಗೆ ಹಾಕ್ತೀನಿ ಅಂತ ಹೇಳಿದ ಕಿಚ್ಚ ಸುದೀಪ್ ಕಾರಣ ಏನು ಗೊತ್ತಾ.?

ಕಿಚ್ಚ ಸುದೀಪ್ ಅವರು ಕನ್ನಡ ಸಿನಿಮಾ ರಂಗಕ್ಕೆ ಅಪಾರವಾದ ಕೊಡುಗೆಯನ್ನು ಸಲ್ಲಿಸಿದ್ದಾರೆ ಕನ್ನಡ ಸಿನಿಮಾವನ್ನು ಇದೀಗ ಭಾರತೀಯ ಚಿತ್ರರಂಗದಲ್ಲಿ ಬಹು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುವಂತಹ ನಿಟ್ಟಿನಲ್ಲಿ ವಿಕ್ರಾಂತ್ ರೋಣ ಸಿನಿಮಾ ಎಂಬ ಸಿನಿಮಾದಲ್ಲಿ ಅಭಿನಯ ಮಾಡಿದರೆ. ಈಗಾಗಲೇ ಈ ಸಿನಿಮಾದ ಟೀಸರ್ ಮತ್ತು ಟ್ರೈಲರ್ ತುಂಬಾನೇ ಸದ್ದು ಮಾಡಿದೆ ಅಷ್ಟೇ ಅಲ್ಲದೆ ಒಂದು ಸಿನಿಮಾದಲ್ಲಿ ಬಿಡುಗಡೆಯಾದ ರಾ ರಾ ರಕ್ಕಮ್ಮ ಎಂಬ ಹಾಡು ಕೂಡ ಅದ್ಭುತವಾಗಿ ಮೂಡಿ ಬಂದಿದ್ದು ಎಲ್ಲರ ಗಮನವನ್ನು ಸೆಳೆದಿದೆ. ಇನ್ನು ವಿಚಾರಕ್ಕೆ ಬರುವುದಾದರೆ ಇಂಡಸ್ಟ್ರಿಯಲ್ಲಿ ಕಿಚ್ಚ ಸುದೀಪ್ ಅವರಿಗೆ ಬಹಳಷ್ಟು ಆಪ್ತರು ಇರುವುದನ್ನು ನಾವು ನೋಡಬಹುದು. ಈ ಆಪ್ತರ ಜೊತೆ ಸುದೀಪ್ ಅವರು ಆಗಾಗ ಕೆಲವೊಂದಿಷ್ಟು ಸಮಯವನ್ನು ಕಳೆಯುತ್ತಾರೆ ಅಷ್ಟೇ ಅಲ್ಲದೆ ಬಿಡುವಿನ ಸಮಯದಲ್ಲಿ ಎಲ್ಲರನ್ನೂ ಕೂಡ ತಮ್ಮ ಮನೆಗೆ ಕರೆಸಿ ಚಿಕ್ಕದೊಂದು ಪಾರ್ಟಿಯನ್ನು ಮಾಡುವಂತಹ ಹವ್ಯಾಸವನ್ನು ಕೂಡ ಹೊಂದಿದ್ದಾರೆ.

ಆದರೆ ಕಿಚ್ಚ ಸುದೀಪ್ ಅವರ ಮನೆಗೆ ಯಾರೇ ಹೋದರೂ ಕೂಡ ಒಂದು ಷರತ್ತನ್ನು ಕಡ್ಡಾಯವಾಗಿ ಅವರು ಪಾಲನೆ ಮಾಡಲೇ ಬೇಕಂತೆ ಇಲ್ಲವಾದರೆ ಸುದೀಪ್ ಅವರ ಮನೆಗೆ ಎಂಟ್ರಿ ಇಲ್ಲ. ಒಂದು ವೇಳೆ ಎಂಟ್ರಿ ಕೊಟ್ಟರು ಕೂಡ ಅವರನ್ನು ಹೊರಗೆ ಹಾಕುತ್ತಾರೆ ಮುಲಾಜಿಲ್ಲದೆ ಈ ಕೆಲಸವನ್ನು ಕಿಚ್ಚ ಸುದೀಪ್ ಅವರು ಮಾಡುತ್ತಾರೆ. ಅಷ್ಟಕ್ಕೂ ಕಿಚ್ಚ ಸುದೀಪ್ ಮನೆಗೆ ಹೋಗುವ ಮುನ್ನ ಪಾಲಿಸಬೇಕಾದ ಷರತ್ತು ಯಾವುದು ಅಂತ ನೋಡುವುದಾದರೆ ಕಿಚ್ಚ ಸುದೀಪ್ ಅವರ ಮನೆಗೆ ಹೋದಾಗ ಯಾವುದೇ ವ್ಯಕ್ತಿ ಆಗಿರಲಿ ಅಥವಾ ಯಾವುದೇ ಕಲಾವಿದರಾಗಿರಲಿ ಅಥವಾ ಸಿನಿವಾರಂಗಕ್ಕೆ ಸಂಬಂಧಪಟ್ಟಂತಹ ನಟ ನಟಿಯರು ಯಾರೇ ಆಗಿರಲಿ ಅವರ ವಿರುದ್ಧ ಮಾತನಾಡಬಾರದು.

ಈ ರೀತಿ ಮಾತನಾಡುವವರನ್ನು ಕಂಡರೆ ಕಿಚ್ಚ ಸುದೀಪ್ ಅವರಿಗೆ ಬಹಳ ಕೋಪವಂತೆ. ಹಾಗಾಗಿ ಕಿಚ್ಚ ಸುದೀಪ್ ಅವರ ಮನೆಗೆ ಯಾರೆ ಹೋದರು ಕೂಡ ಅವರಿಗೆ ತಿಥಿಸತ್ಕಾರವನ್ನು ನೀಡಲಾಗುತ್ತದೆ ಒಂದು ವೇಳೆ ಅವರು ಬೇರೆ ಕಲವಿದರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಅಥವಾ ಆರೋಪಗಳನ್ನು ಆಡಿದರೆ ಅಂತಹ ವ್ಯಕ್ತಿ ಅದೆಂತಹ ಗಣ್ಯನಾಗಿದ್ದನು ಕೂಡ ಅವರನ್ನು ಮನೆಯಿಂದ ಆಚೆ ಕಳಿಸುತ್ತಾರಂತೆ. ಈ ವಿಚಾರದ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರ ಮಾಧ್ಯಮ ಒಂದರಲ್ಲಿ ಹೇಳಿಕೊಂಡಿದ್ದರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಅದರಲ್ಲಿಯೂ ಕೂಡ ಕಿಚ್ಚನ ಅಭಿಮಾನಿಗಳು ಹೆಚ್ಚು ಸಂತಸಪಟ್ಟಿದ್ದಾರೆ.

ಏಕೆಂದರೆ ಈಗಿನ ಕಾಲದಲ್ಲಿ ಒಬ್ಬ ನಟನನ್ನು ಮತ್ತೊಬ್ಬ ನಟ ತುಳಿಯುವುದಕ್ಕಾಗಿ ಕಾಯುತ್ತಿರುತ್ತಾನೆ ಆದರೆ ಕಿಚ್ಚ ಸುದೀಪ್ ಅವರು ಮಾತ್ರ ತಮ್ಮ ಮುಂದೆ ಬೇರೆಯವರ ಬಗ್ಗೆ ಏನಾದರೂ ತಪ್ಪು ಮಾತನಾಡಿದ್ದರೆ ಅಥವಾ ಅವರನ್ನು ದೂಷಿಸಿದರೆ ಅದನ್ನು ಕೂಡ ಸಹಿಸಿಕೊಳ್ಳುವುದಿಲ್ಲ ಇದರಿಂದಲೇ ನಮಗೆ ಕಿಚ್ಚ ಸುದೀಪ್ ಅವರ ವ್ಯಕ್ತಿತ್ವ ಅರ್ಥವಾಗುತ್ತದೆ. ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಬಹು ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿ ಈ ಸಿನಿಮಾದ ಮೂಲಕ ಇನ್ನಷ್ಟು ಕೀರ್ತಿ ಮತ್ತು ಯಶಸ್ಸನ್ನು ಗಳಿಸಲು ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ. ನೀವು ಕೂಡ ಕಿಚ್ಚ ಸುದೀಪ್ ಅವರ ಸಂದರ್ಶನದ ಮಾತನ್ನು ಕೇಳಿ ನಿಜಕ್ಕೂ ಕೂಡ ಆಶ್ಚರ್ಯ ವ್ಯಕ್ತಪಡಿಸುತ್ತಿರ ಕಿಚ್ಚ ಸುದೀಪ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ಮುಖಾಂತರ ತಿಳಿಸಿ ಮಾಡಿ ಮತ್ತು ಲೈಕ್ ಮಾಡಿ ಸ್ನೇಹಿತರೆ

LEAVE A REPLY

Please enter your comment!
Please enter your name here