ನಮ್ಮಲ್ಲಿ ಕೆಲವೊಂದಷ್ಟು ಜನರಿಗೆ ತಲೆ ಸುತ್ತಿನ ಸಮಸ್ಯೆ ಸಾಮಾನ್ಯ ವಾಗಿಯೇ ಇರುತ್ತದೆ. ಆದರೆ ಈ ಸಮಸ್ಯೆ ಯಾವ ಒಂದು ಕಾರಣಕ್ಕಾಗಿ ಬರುತ್ತದೆ ಎನ್ನುವಂತಹ ಮಾಹಿತಿ ಕೆಲವೊಂದಷ್ಟು ಜನಕ್ಕೆ ತಿಳಿದಿಲ್ಲ. ಹಾಗಾದರೆ ಈ ದಿನ ತಲೆಸುತ್ತು ಸಮಸ್ಯೆಗೆ ಕಾರಣಗಳು ಏನು ಹಾಗೂ ಅದನ್ನು ನಾವು ಕಡಿಮೆ ಮಾಡಿಕೊಳ್ಳುವುದಕ್ಕೆ ನಮ್ಮ ಮನೆಯಲ್ಲಿಯೇ ಇರುವಂತಹ ಕೆಲವೊಂದಷ್ಟು ಪದಾರ್ಥಗಳನ್ನು ಉಪಯೋಗಿಸಿ ಹೇಗೆ ಕಡಿಮೆ ಮಾಡಿಕೊಳ್ಳಬಹುದು.
ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿ ಸಿದ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದು ಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ತಲೆ ಸುತ್ತಿನ ಸಮಸ್ಯೆ ಬರುವುದಕ್ಕೆ ಬಹಳ ಪ್ರಮುಖ ವಾದಂತಹ ಕಾರಣಗಳು ಯಾವುವು ಎಂದು ನೋಡುವುದಾದರೆ.
ನಮ್ಮ ದೇಹದಲ್ಲಿ ಅಸಮತೋಲನೆಯ ಭಾವನೆ ಉಂಟಾದಾಗ ತಲೆ ಸುತ್ತು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ರಕ್ತದೊತ್ತಡ ಕಡಿಮೆಯಾದಾಗ. ನಾವೇನಾದರೂ ಒಂದು ಸ್ಥಳದಲ್ಲಿ ಎಡವಿ ಬಿದ್ದಾಗ, ಜ್ವರ ಬಂದಾಗ, ನಾವು ನಮ್ಮ ದೇಹಕ್ಕೆ ಯಾವುದೇ ರೀತಿಯ ವಿಶ್ರಾಂತಿಯನ್ನು ಕೊಡದೆ ರಾತ್ರಿಯೆಲ್ಲ ಕೆಲಸ ಮಾಡುವುದರಿಂದ.
ಹೆಚ್ಚು ಸಮಯ ನಿಂತು ಕೆಲಸ ಮಾಡುವುದರಿಂದ ಹಾಗೂ ಒಂದೇ ಸಮನೆ ಕುಳಿತು ಕೆಲಸ ಮಾಡುವುದರಿಂದ, ದೇಹದಲ್ಲಿ ಏನಾದರು ಪೆಟ್ಟಾಗಿ ರಕ್ತ ಬಂದಾಗ ಹೀಗೆ ಹಲವಾರು ಕಾರಣಗಳಿಂದ ನಮಗೆ ತಲೆಸುತ್ತಿನ ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ ಹಾಗೂ ಪ್ರತಿಯೊಬ್ಬರಿಗೂ ಕೂಡ ಸಹಜವಾಗಿ ಬಿಸಿಲಿಗೆ ಹೋದಂತಹ ಸಮಯದಲ್ಲಿ ಈ ಒಂದು ತಲೆ ಸುತ್ತು ಕಾಣಿಸಿಕೊಳ್ಳುತ್ತದೆ.
ಸಕ್ಕರೆ ಕಾಯಿಲೆ 400 ರಿಂದ 90 ಕ್ಕೆ ಇಳಿಯುತ್ತದೆ ಈ ರೀತಿ ಒಮ್ಮೆ ಮಾಡಿ ನೋಡಿ.! ಮಧುಮೇಹಿಗಳಿಗೆ ರಾಮಬಾಣ ಈ ಜ್ಯೂಸ್
ಹಾಗೂ ನಮ್ಮ ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆ ಇದ್ದಂತಹ ಸಮಯ ದಲ್ಲಿ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗದೆ ವಾಂತಿ ಬಂದಂತಹ ಸಮಯದಲ್ಲಿಯೂ ಕೂಡ ತಲೆ ಸುತ್ತು ಕಾಣಿಸಿಕೊಳ್ಳುತ್ತದೆ. ಹಾಗಾದರೆ ಈ ಒಂದು ತಲೆ ಸುತ್ತಿನ ಸಮಸ್ಯೆಗೆ ಯಾವ ಒಂದು ಮನೆ ಮದ್ದನ್ನು ಮಾಡುವುದು ಅದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗು ತ್ತದೆ ಯಾವ ಸಮಯದಲ್ಲಿ ಇದನ್ನು ಸೇವನೆ ಮಾಡಬೇಕು ಎನ್ನುವಂತಹ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
* ಮೊದಲನೆಯ ಮನೆ ಮದ್ದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
• ಜಾಯಿಕಾಯಿ ಪುಡಿ
• ಜೀರಿಗೆ
ಮಾಡುವ ವಿಧಾನ :- ಒಂದು ಚಮಚ ಜಾಯಿಕಾಯಿ ಪುಡಿಗೆ ಅರ್ಧ ಚಮಚ ಜೀರಿಗೆಯನ್ನು ಹಾಕಿ ಎರಡನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳ ಬೇಕು. ಇದನ್ನು ಪ್ರತಿದಿನ ಒಂದು ಚಮಚ ತಿನ್ನುತ್ತಾ ಬರುವುದರಿಂದ ನಿಮ್ಮ ತಲೆ ಸುತ್ತಿನ ಸಮಸ್ಯೆ ಸಂಪೂರ್ಣವಾಗಿ ಗುಣವಾಗುತ್ತದೆ.ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಇಲ್ಲದೆ ಇರುವುದರಿಂದ ಇದು ಯಾವುದೇ ರೀತಿಯ ತೊಂದರೆಯನ್ನು ಉಂಟುಮಾಡುವುದಿಲ್ಲ.
ವಾಷಿಂಗ್ ಮಿಷನ್ ನಲ್ಲಿ ಬಟ್ಟೆ ತುಂಬಾ ಚೆನ್ನಾಗಿ ಕ್ಲೀನ್ ಆಗಲು ಈ ಟೆಕ್ನಿಕ್ ಬಳಸಿ.!
* ಎರಡನೆಯ ಮನೆಮದ್ದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥ ಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
• ಒಂದು ಲೋಟ ಶುದ್ಧ ನೀರು
• ಸಕ್ಕರೆ
• ನಿಂಬೆ ಹಣ್ಣಿನ ರಸ
ಮಾಡುವ ವಿಧಾನ :- ಒಂದು ಲೋಟ ನೀರನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ನಿಂಬೆಹಣ್ಣಿನ ರಸ ಹಾಗೂ ರುಚಿಗೆ ತಕ್ಕಷ್ಟು ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಇದರಲ್ಲಿ ಇರುವಂತಹ ಸಕ್ಕರೆಯು ನಮ್ಮ ಸುಸ್ತನು ಕಡಿಮೆ ಮಾಡುತ್ತದೆ. ಹಾಗೂ ನಮ್ಮ ರಕ್ತಕ್ಕೆ ಸಕ್ಕರೆಯ ಅಂಶವನ್ನು ಕೊಡುತ್ತದೆ ಹಾಗೂ ನಿಂಬೆಹಣ್ಣಿನ ರಸ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗೆ ಈ ರೀತಿ ತಯಾರಾದಂತಹ ನೀರನ್ನು ತಲೆ ಸುತ್ತಿನ ಸಮಯದಲ್ಲಿ ಕುಡಿಯುವುದರಿಂದ ತಲೆಸುತ್ತಿನ ಸಮಸ್ಯೆ ನಿವಾರಣೆಯಾಗುತ್ತದೆ.