ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಖಾಲಿ ಇಡುವುದರಿಂದ ಹಣದ ಸಮಸ್ಯೆ ದುರಾದೃಷ್ಟ ನಕಾರಾತ್ಮಕ ಉಂಟಾಗುತ್ತದೆ. ಹಾಗಾಗಿ ಮನೆಯಲ್ಲಿ ಯಾವೆಲ್ಲ ವಸ್ತುಗಳನ್ನು ಕಾಲಿಡಬಾರದು ಈ ವಸ್ತುಗಳನ್ನು ಮನೆಯಲ್ಲಿ ಖಾಲಿ ಇಡಬೇಡಿ.
ಮನೆಗೆ ಸಕಾರಾತ್ಮಕತೆ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುವ ಶಾಸ್ತ್ರದಲ್ಲಿ ಹಲವಾರು ವಿಧಗಳನ್ನು ಹೇಳಲಾಗಿದೆ.
ನಾವು ತಿಳಿದೋ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತೇವೆ. ಅದು ಇಡೀ ಕುಟುಂಬದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಶಾಸ್ತ್ರದಲ್ಲಿನ ಮಾರ್ಗಗಳನ್ನು ನಾವು ಪಾಲಿಸುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ಮನೆಯಿಂದ ಹೊರಹಾಕುತ್ತದೆ.
ಅಲ್ಲದೆ ಕೆಲವು ವಸ್ತುಗಳು ಮನೆಯಲ್ಲಿ ಖಾಲಿ ಇಡಬಾರದು. ಹಾಗೇನಾದರು ಖಾಲಿ ಇದ್ದರೆ ಮೇಲೆ ಹೇಳಿದಂತೆ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತದೆ. ಹಾಗಾದರೆ ಈ ದಿನ ನಾವು ಮನೆಯಲ್ಲಿ ಯಾವ ಕೆಲವು ವಸ್ತುಗಳನ್ನು ಖಾಲಿ ಇಡಬಾರದು ಎನ್ನುವುದನ್ನು ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ.
1. ನಿಮ್ಮ ತಿಜೋರಿ ಪರ್ಸ್ ಮತ್ತು ಕೈಚೀಲಗಳನ್ನು ಎಂದಿಗೂ ಖಾಲಿಯಾಗಿ ಇಡಬಾರದು ಇವುಗಳಲ್ಲಿ ನೀವು ಒಂದಿಷ್ಟು ಹಣವನ್ನು ಯಾವಾಗಲೂ ಇಟ್ಟುಕೊಂಡಿರಬೇಕು. ಶಾಸ್ತ್ರದ ಪ್ರಕಾರ, ಇವುಗಳನ್ನು ನಾವು ಎಂದಿಗೂ ಖಾಲಿ ಬಿಡಬಾರದು. ಶಾಸ್ತ್ರದ ಪ್ರಕಾರ, ತಿಜೋರಿ ಅಥವಾ ಪರ್ಸ್ ಸಂಪೂರ್ಣವಾಗಿ ಖಾಲಿಯಾಗಿದ್ದರೆ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ.
ಅಂತಹ ಸಂದರ್ಭಗಳಲ್ಲಿ, ಲಕ್ಷ್ಮಿ ದೇವಿಯನ್ನು ಸಮಾಧಾನಪಡಿಸಲು ಗೋಮತಿ ಚಕ್ರ ಅರಿಶಿನವನ್ನು ಮತ್ತು ಸ್ವಲ್ಪ ಹಣವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಇವುಗಳಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ಲಕ್ಷ್ಮಿಯು ಸಂತುಷ್ಟಳಾಗುತ್ತಾಳೆ. ಆನಂತರ ನಿಮಗೆ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ಕೂಡ ಬರುವುದಿಲ್ಲ ಆದ್ದರಿಂದ ನೀವು ಹಣ ಇಡುವಂತಹ ಸ್ಥಳಗಳಾಗಿರಬಹುದು. ಗಂಡು ಮಕ್ಕಳು ಉಪಯೋಗಿಸುವಂತಹ ಪರ್ಸ್ ಇವುಗಳಲ್ಲಿ ಸ್ವಲ್ಪವಾದರೂ ಹಣವನ್ನು ಇಟ್ಟುಕೊಳ್ಳುವುದು ಬಹಳ ಒಳ್ಳೆಯದು.
2. ಮನೆಯ ಅತ್ಯಂತ ಮಹತ್ವದ ಅಂಶವೆಂದರೆ ಅದು ಆ ಮನೆಯ ದೇವರ ಕೋಣೆ. ಶಾಸ್ತ್ರವು ದೇವರ ಕೋಣೆಯಲ್ಲಿ ಎಂದಿಗೂ ಖಾಲಿ ಕಲಶವನ್ನು ಇಡಬಾರದು. ಕಲಶದಲ್ಲಿ ಸ್ವಲ್ಪ ನೀರನ್ನು ಹಾಕಿಡಿ. ಖಾಲಿ ಕಲಶವನ್ನು ದೇವರ ಕೋಣೆಯಲ್ಲಿ ಇಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ನೀರಿನ ಪಾತ್ರೆಯಲ್ಲಿ ಯಾವಾಗಲೂ ಸ್ವಲ್ಪ ನೀರು ಗಂಗಾಜಲ ಮತ್ತು ತುಳಸಿ ಎಲೆಗಳು ಇರಬೇಕು.
ಹಾಗಾಗಿ ದೇವರ ಕೋಣೆಯಲ್ಲಿರುವಂತಹ ಕಳಶದಲ್ಲಿ ಸದಾ ಕಾಲ ನೀರು ತುಂಬಿರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಹಾಗೆಯೆ ಅದರ ಕಲಶದಲ್ಲಿ ನೀರು ಇಲ್ಲ ಎಂದರೆ ಆ ಮನೆ ಸದಾ ಕಾಲ ಖಾಲಿ ಯಾಗಿ ಯಾವುದೇ ರೀತಿ ಹಣಕಾಸು ಕೂಡ ಇರುವುದಿಲ್ಲ. ಇದರಿಂದ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ತಪ್ಪದೆ ದೇವರ ಕೋಣೆಯಲ್ಲಿ ಒಂದು ಕಳಶದಲ್ಲಿ ನೀರನ್ನು ಸದಾ ಕಾಲ ತುಂಬಿಡುವುದು ಬಹಳ ಮುಖ್ಯ.
3. ಅನ್ನಪೂರ್ಣ ದೇವಿಯು ಅಡುಗೆಮನೆಯಲ್ಲಿ ಇರಿಸಲಾಗಿರುವ ಧಾನ್ಯ ದ ಮೇಲೆ ತನ್ನ ಆಶೀರ್ವಾದವನ್ನು ನೀಡಿರುತ್ತಾಳೆ. ಅಡುಗೆ ಮನೆಯಲ್ಲಿ ನಾವು ಧಾನ್ಯಗಳನ್ನು ಹಾಕಿಡುವ ಪಾತ್ರೆಯನ್ನು ಖಾಲಿ ಬಿಡಬಾರದು. ಇದರಿಂದ ಮನೆಯಲ್ಲಿ ದುರಾದೃಷ್ಟವು ಉಂಟಾಗುತ್ತದೆ ಎನ್ನುವ ನಂಬಿಕೆಯಿದೆ.
ಹಾಗೂ ಮುಂದಿನ ದಿನದಲ್ಲಿ ನಿಮಗೆ ಅನ್ನಪೂರ್ಣೇಶ್ವರಿಯ ಯಾವುದೇ ಆಶೀರ್ವಾದ ಸಿಗುವುದಿಲ್ಲ ಎನ್ನುವುದರ ಅರ್ಥವೂ ಕೂಡ ಇದಾಗಿರುತ್ತದೆ. ಆದ್ದರಿಂದ ಅಡುಗೆ ಮನೆಯಲ್ಲಿರುವಂತಹ ಧಾನ್ಯದ ಪಾತ್ರಗಳನ್ನು ಖಾಲಿಯಾಗಲು ಬಿಡಬೇಡಿ ಸ್ವಲ್ಪ ಖಾಲಿ ಆಗುತ್ತಿದ್ದಂತೆ ಮತ್ತೆ ತರಿಸಿಟ್ಟುಕೊಳ್ಳುವುದು ಉತ್ತಮ.
4. ಶಾಸ್ತ್ರದ ಪ್ರಕಾರ ಖಾಲಿ ಬಕೆಟ್ ಅನ್ನು ಸ್ನಾನಗೃಹದಲ್ಲಿ ಇಡಬಾರದು. ಆ ಬಕೆಟ್‌ನಲ್ಲಿ ನೀರಿಲ್ಲದಿದ್ದಾಗ, ನಕಾರಾತ್ಮಕ ಶಕ್ತಿಯು ತ್ವರಿತವಾಗಿ ಮನೆಯನ್ನು ಪ್ರವೇಶಿಸುತ್ತದೆ. ಇದನ್ನು ಹೊರತುಪಡಿಸಿ ನೀವು ನಿಮ್ಮ ಬಾತ್‌ರೂಂನಲ್ಲಿ ಮುರಿದ ಅಥವಾ ಕಪ್ಪು ಬಕೆಟ್ ಅನ್ನು ಎಂದಿಗೂ ಬಳಸಬೇಡಿ,