ನಮ್ಮಲ್ಲಿ ಕೆಲವೊಂದು ಜನರಿಗೆ ಈ ರೀತಿಯ ಸಮಸ್ಯೆಗಳು ಕಾಣಿಸಿಕೊ ಳ್ಳುತ್ತಲೇ ಇರುತ್ತದೆ ಹೌದು ಹಾಗಾದರೆ ಈ ಒಂದು ಸಮಸ್ಯೆ ಎದುರಾಗಿದೆ ಎಂದರೆ ಯಾವ ರೀತಿಯ ಕೆಲವು ಲಕ್ಷಣಗಳನ್ನು ತೋರಿಸುತ್ತದೆ ಹಾಗೂ ಯಾವ ಕಾರಣದಿಂದ ಶೀತದ ಸಮಸ್ಯೆ ಎದುರಾಗುತ್ತದೆ ಹಾಗೂ ಇದಕ್ಕೆ ಯಾವ ಒಂದು ಮನೆ ಮದ್ದನ್ನು ಮಾಡಿ ಸೇವನೆ ಮಾಡುವುದರಿಂದ ಇದನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.
ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಎದೆಯಲ್ಲಿ ಏನಾದರೂ ಕಫ ಕಟ್ಟಿಕೊಂಡಿದ್ದರೆ ಯಾವ ಕೆಲವು ಲಕ್ಷಣ ಗಳು ಕಾಣಿಸಿಕೊಳ್ಳುತ್ತದೆ ಎಂದು ನೋಡುವುದಾದರೆ. ಎದೆಯಲಿ ಕಫ ಕಟ್ಟಿರುವವರ ಎದೆಯ ಭಾಗದಲ್ಲಿ ಬೇರೆಯವರು ಕಿವಿ ಇಟ್ಟರೆ ಆ ಜಾಗದಲ್ಲಿ ಸುಯ್ ಎನ್ನುವಂತಹ ಶಬ್ದ ಕೇಳಿಸುತ್ತದೆ ಇದಕ್ಕೆ ವೀಸಿಂಗ್ ಎಂದು ಕರೆಯುತ್ತಾರೆ.
ಈ ರೀತಿ ಲಕ್ಷಣ ಇದ್ದರೆ ಅವರಿಗೆ ಕಫ ಕಟ್ಟಿಕೊಂಡಿದೆ ಎಂದೇ ಅರ್ಥ ಅದರಲ್ಲೂ ಚಿಕ್ಕ ಮಕ್ಕಳಲ್ಲಿ ಕಫ ಕಟ್ಟಿಕೊಳ್ಳಬಾರದು ಹಾಗೇನಾದರೂ ನಾವು ಅದನ್ನು ನಿರ್ಲಕ್ಷಿಸಿದರೆ ಅವರು ತಮ್ಮ ಪ್ರಾಣವನ್ನು ಕಳೆದು ಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಇದರ ಜೊತೆ ಜಾಸ್ತಿ ದೂರ ನಡೆದಂತಹ ಸಮಯದಲ್ಲಿ ನಮಗೆ ತೇಗು ಬಂದರೆ ಎದೆಯಲ್ಲಿ ಕಫ ಕಟ್ಟಿಕೊಂಡಿದೆ ಅಂದರೆ ಶ್ವಾಸಕೋಶದಲ್ಲಿ ಸಮಸ್ಯೆ ಇದೆ ಎಂದೇ ಅರ್ಥ.
ಇನ್ನು ಕೆಲವೊಂದಷ್ಟು ಜನರಿಗೆ ಬೆಳಗ್ಗೆ ಎದ್ದ ತಕ್ಷಣ ಉಸಿರಾಡುವುದಕ್ಕೂ ಕೂಡ ಕಷ್ಟಪಡುತ್ತಿರುತ್ತಾರೆ ಇದು ಕೂಡ ಇದರ ಬಹಳ ಪ್ರಮುಖವಾದ ಲಕ್ಷಣವಾಗಿದೆ ಹಾಗೂ ಬೆಳಗ್ಗೆ ಎದ್ದ ತಕ್ಷಣ ಕೆಲವೊಂದಷ್ಟು ಜನರಿಗೆ ಪದೇಪದೇ ಸೀನು ಬರುತ್ತಿರುತ್ತದೆ ಇದು ಕೂಡ ಒಂದು ಲಕ್ಷಣ. ಹಾಗಾದರೆ ಈ ಸಮಸ್ಯೆ ಬರುವುದಕ್ಕೆ ಕಾರಣಗಳು ಏನು ಎಂದು ನೋಡುವುದಾದರೆ.
ತಡವಾಗಿ ಮಲಗಿಕೊಳ್ಳುವುದು ಹಾಗೂ ಫ್ರಿಡ್ಜ್ ನಲ್ಲಿ ಇಟ್ಟಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು, ಅತೀ ತಣ್ಣಗಿರುವ ನೀರನ್ನು ಕುಡಿಯುವುದು, ಹಾಗೂ ನಮ್ಮ ಕಿವಿ ಭಾಗವನ್ನು ಹಾಗೂ ನಮ್ಮ ನೆತ್ತಿಯ ಭಾಗವನ್ನು ಬೆಚ್ಚಗೆ ಇಟ್ಟುಕೊಳ್ಳದೆ ಇರುವುದು ಕೂಡ ಇದಕ್ಕೆ ಪ್ರಮುಖವಾದ ಕಾರಣವಾಗಿದೆ.
ಅದರಲ್ಲೂ ನಮ್ಮ ಕಿವಿ ಭಾಗದಿಂದ ತಣ್ಣಗಿರುವಂತಹ ಗಾಳಿ ಹೋದ ಸಮಯದಲ್ಲಿ ಹಾಗೂ ನಮ್ಮ ನೆತ್ತಿಯ ಭಾಗಕ್ಕೆ ಹೆಚ್ಚು ತಣ್ಣನೆ ಆದರೆ ಆ ಒಂದು ಸಮಯದಲ್ಲಿ ನಮಗೆ ಕಫ ಕಟ್ಟಿಕೊಳ್ಳುವಂತಹ ಸನ್ನಿವೇಶ ಹೆಚ್ಚಾಗಿರುತ್ತದೆ ಹಾಗಾಗಿ ಇದರ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುವುದು ಉತ್ತಮ. ಹಾಗಾದರೆ ಇದನ್ನು ಸರಿಪಡಿಸಿಕೊಳ್ಳುವುದು ಹೇಗೆ ಯಾವ ಕೆಲವು ಮನೆ ಮದ್ದುಗಳನ್ನು ಮಾಡಿ ಸೇವನೆ ಮಾಡುವುದರಿಂದ ಇದನ್ನು ದೂರ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ.
* 6 ಆಡುಸೋಗೆ ಸೊಪ್ಪು
* 6 ದೊಡ್ಡಪತ್ರೆ ಎಲೆ
* 20 ರಿಂದ 30 ತುಳಸಿ ಎಲೆ
* 20 ರಿಂದ 30 ಅಮೃತ ಬಳ್ಳಿ ಎಲೆ
* ಎರಡು ವೀಳ್ಯದೆಲೆ
* ಹಾಗೂ 20 ರಿಂದ 30 ತುಂಬೆ ಗಿಡದ ಎಲೆ
ಇಷ್ಟನ್ನು ಚೆನ್ನಾಗಿ ಜಜ್ಜಿ ಇದರ ರಸವನ್ನು ತೆಗೆದುಕೊಳ್ಳಬೇಕು ನಂತರ ಈ ರಸಕ್ಕೆ ಕಾಲು ಚಮಚ ಮೆಣಸು ಕಾಳಿನ ಪುಡಿ ಹಾಗೂ ಅರ್ಧ ಚಮಚ ಅರಿಶಿನ ಪುಡಿ ಇದರ ಜೊತೆ 5 ಚಮಚ ಜೇನುತುಪ್ಪ ಇಷ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಈ ರೀತಿ ಮಿಶ್ರಣ ಮಾಡಿದಂತಹ ಮನೆ ಮದ್ದನ್ನು ಬೆಳಗಿನ ಸಮಯ ಹೊಟ್ಟೆ ತುಂಬಾ ನೀರನ್ನು ಅಥವಾ ಹಾಲನ್ನು ಕುಡಿದು ವಯಸ್ಸಿನ ಆಧಾರದ ಮೇಲೆ ಹೆಚ್ಚು ಮತ್ತು ಕಡಿಮೆ ಕುಡಿಯಬೇಕು ಈ ರೀತಿ ಕುಡಿಯುತ್ತಾ ಬರುವುದರಿಂದ ಎದೆಯಲ್ಲಿ ಕಟ್ಟಿರುವಂತಹ ಕಫ ಸಂಪೂರ್ಣವಾಗಿ ಗುಣಮುಖವಾಗುತ್ತದೆ.