ಸಾಮಾನ್ಯವಾಗಿ ನಮ್ಮಲ್ಲಿ ಕೆಲವೊಂದಷ್ಟು ಜನರಿಗೆ ಮುಖದ ಮೇಲೆ ಮೊಡವೆಗಳು ಕಪ್ಪು ಕಲೆಗಳು ಬಂಗು ಹೀಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳು ಇರುತ್ತದೆ. ಅವರು ಅದನ್ನು ಸರಿಪಡಿಸಿಕೊಳ್ಳುವುದಕ್ಕೆ ಎಷ್ಟೇ ಔಷಧಿಯನ್ನು ಪಡೆದುಕೊಂಡರು ಸಹ ಅದು ಗುಣವಾಗುವುದಿಲ್ಲ. ಅದಕ್ಕಾಗಿ ಅವರು ಎಲ್ಲಾ ಕಡೆ ಸಿಗುವಂತಹ ಕೆಲವೊಂದು ಕ್ರೀಮ್ ಗಳನ್ನು ತಂದು ಹಚ್ಚಿ ಅದರಿಂದ ಗುಣಪಡಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಾರೆ.
ಆದರೆ ಅದರಿಂದ ಮತ್ತಷ್ಟು ಸಮಸ್ಯೆಗಳು ಉಂಟಾಗುತ್ತದೆ. ಅದಕ್ಕಾಗಿ ಅವರು ಯಾವುದೇ ರೀತಿಯ ವಿಧಾನವನ್ನು ಕೂಡ ಅನುಸರಿಸಲು ಒಪ್ಪುವುದಿಲ್ಲ ಎಷ್ಟೇ ಪ್ರಯತ್ನ ಪಟ್ಟರು ಈ ಸಮಸ್ಯೆ ದೂರವಾಗುವುದಿಲ್ಲ ಎಂದು ಸುಮ್ಮನಿರುತ್ತಾರೆ. ಆದರೆ ಈ ದಿನ ಈ ಒಂದು ಬೀಜ ಇದ್ದರೆ ಸಾಕು ನಿಮ್ಮ ಮುಖದ ಮೇಲೆ ಇರುವ ಎಂತದ್ದೇ ಕಪ್ಪು ಕಲೆ, ಮೊಡವೆಗಳಿದ್ದರೂ ಸಹ ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು ಹಾಗಾದರೆ ಆ ಬೀಜ ಯಾವುದು? ಹಾಗೂ ಅದನ್ನು ಯಾವ ಒಂದು ವಿಧಾನ ಅನುಸರಿಸುವುದರ ಮೂಲಕ ಮುಖದ ಮೇಲಿನ ಕಪ್ಪು ಕಲೆ ಮಾಡಲು ದೂರ ಮಾಡಿಕೊಳ್ಳಬಹುದು.
ಹಾಗೂ ನಾವು ಅದಕ್ಕೂ ಮೊದಲು ನಮ್ಮ ಚರ್ಮಕ್ಕೆ ಸಂಬಂಧಿಸಿದ ಯಾವ ಕೆಲವು ಒಳ್ಳೆಯ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲಿಯೂ ಕೂಡ ಅಂದರೆ ಯೌವ್ವನಾವಸ್ಥೆ ಯಲ್ಲಿ ಮೊಡವೆಗಳು ಬರುವುದು ಸರ್ವೇಸಾಮಾನ್ಯ. ಆದರೆ ಅದು ಅತಿಯಾಗಿ ಬರುವುದಿಲ್ಲ. ಹಾಗೂ ಆ ಸಮಯದಲ್ಲಿ ಬಂದರೆ ಅದನ್ನು ಯಾವ ಮನೆ ಮದ್ದನ್ನು ಮಾಡಿ ಹಚ್ಚುವುದರಿಂದ ಅದನ್ನು ತಡೆಗಟ್ಟಬಹುದು.
ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ. ಅದಕ್ಕೂ ಮೊದಲು ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣಗಳು ಏನು ಎಂದು ನೋಡುವುದಾದರೆ.
* ಅಜೀರ್ಣ, ಮಲ ಬದ್ಧತೆ, ಹಾರ್ಮೋನ್ ಹಿಂಬಾಲೆನ್ಸ್, ಇವುಗಳಿಂದ ಪಿತ್ತವಿಕಾರಗಳು ಹೆಚ್ಚಾಗಿ ಮುಖದ ಮೇಲೆ ಮೊಡವೆಗಳು ಕಪ್ಪು ಕಲೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ರಕ್ತ ಪಿತ್ತದ ಪ್ರಭಾವದಿಂದ ಈ ಸಮಸ್ಯೆ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ.
ಹಾಗಾದರೆ ಇದನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಆ ವಿಧಾನಗಳು ಯಾವುದು ಎಂದು ಈ ಕೆಳಗೆ ನೋಡೋಣ.
* ಹಾಗಾಗಿ ಅಜೀರ್ಣ ಮಲಬದ್ಧತೆಯನ್ನು ಸರಿಪಡಿಸಿಕೊಳ್ಳುವುದೇ ಇದಕ್ಕೆ ಮೊದಲನೆಯ ಮನೆಮದ್ದು ಎಂದು ಹೇಳಿದರೆ ತಪ್ಪಾಗುವುದಿಲ್ಲ.
* ಇದರ ಜೊತೆ ಬಹಳ ಮುಖ್ಯವಾಗಿ ಹೆಚ್ಚು ಹಣ್ಣು ಸೊಪ್ಪು ತರಕಾರಿಗಳನ್ನು ಸೇವನೆ ಮಾಡುವುದು.
* ಬೇಗ ಮಲಗುವುದು ಬೇಗ ಎದ್ದೇಳುವುದು. ಯಾವುದೇ ದುಶ್ಚಟ ಗಳಿದ್ದರೂ ಅದನ್ನು ಬಿಡುವುದು ಕೆಲವೊಂದಷ್ಟು ಯೋಗಾಭ್ಯಾಸ ಪ್ರಾಣಾಯಾಮವನ್ನು ಮಾಡುವುದು ಬೇಕರಿ ತಿನಿಸುಗಳನ್ನು ಸಂಪೂರ್ಣ ವಾಗಿ ದೂರ ಮಾಡುವುದು ಉತ್ತಮವಾದ ಆಹಾರ ಪದ್ಧತಿಯನ್ನು ಅನು ಸರಿಸುವುದು ಮೊಳಕೆ ಕಟ್ಟಿದ ಕಾಳುಗಳನ್ನು ಸಹ ಸೇವನೆ ಮಾಡುವುದ ರಿಂದ ಈ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಅದರಲ್ಲೂ ಮೇಲೆ ಹೇಳಿದಂತೆ ಯಾವುದೇ ರೀತಿಯ ಪಿತ್ತ ವಿಕಾರಗಳಿದ್ದರೂ ಕೂಡ ಅದನ್ನು ಶಮನ ಮಾಡಿಕೊಳ್ಳಬಹುದು.
ಹಾಗಾದರೆ ಯಾವ ಒಂದು ಮನೆ ಮದ್ದನ್ನು ಮಾಡುವುದರಿಂದ ಈ ಸಮಸ್ಯೆ ದೂರ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ.
* ನಿಂಬೆಹಣ್ಣಿನ ರಸದ ಜೊತೆ ಶುದ್ಧವಾದ ಗಂಧವನ್ನು ತೇಯಬೇಕು ಇದನ್ನು ಬೆಳಗಿನ ಸಮಯ ನಿಮ್ಮ ಮುಖಕ್ಕೆ ಹಚ್ಚಿ ಒಂದು ತಾಸು ಬಿಟ್ಟು ಮುಖವನ್ನು ತೊಳೆಯಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.