ಬೆಲ್ಲ ಒಂದು ಆರೋಗ್ಯಕರ ಆಹಾರವಾಗಿದೆ. ಇದನ್ನು ಸೇವನೆ ಮಾಡುವುದರಿಂದ ಚಳಿಗಾಲದಲ್ಲಿ ಸಂಭವಿಸುವಂತಹ ರೋಗಗಳಿಂದ ದೂರ ಇರಬಹುದು ಎಂದು ವೈದ್ಯರು ಹೇಳುತ್ತಾರೆ. ಈ ನೈಸರ್ಗಿಕ ಸಿಹಿ ವಸ್ತುವು ಕಬ್ಬಿಣ, ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಆದ್ದರಿಂದ ಇದರ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನವನ್ನುಂಟು ಮಾಡುತ್ತದೆ ಎಂದು ಹೇಳಬಹುದು.
ಹೌದು ಬೆಲ್ಲವನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿರುವಂತಹ ರಕ್ತವನ್ನು ಶುದ್ಧಿ ಮಾಡುತ್ತದೆ. ಆದ್ದರಿಂದ ಬೆಲ್ಲವು ಪ್ರತಿಯೊಬ್ಬರ ಆರೋಗ್ಯದ ದೃಷ್ಟಿಯಿಂದಲೂ ಕೂಡ ತುಂಬಾ ಒಳ್ಳೆಯದು. ಸಕ್ಕರೆ ಕಾಯಿಲೆ ಇರುವವರು ಕೂಡ ಸ್ವಲ್ಪ ಪ್ರಮಾಣದ ಬೆಲ್ಲವನ್ನು ಸೇವನೆ ಮಾಡಬಹುದು ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ.
ಅದರಲ್ಲೂ ಕೆಲವೊಂದು ಸಿಹಿ ಪದಾರ್ಥವನ್ನು ಬೆಲ್ಲದಿಂದ ಮಾಡಿದರೆ ಅದರ ರುಚಿಯು ದುಪ್ಪಟ್ಟಾಗುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೀಗೆ ಇಷ್ಟೆಲ್ಲಾ ರುಚಿಯನ್ನು ಹೊಂದಿರುವಂತಹ ಬೆಲ್ಲ ಸೇವನೆ ಮಾಡು ವುದರಿಂದ ಮತ್ತೆ ಯಾವುದೆಲ್ಲ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ನೋಡುವುದಾದರೆ.
* ಪ್ರತಿದಿನ ಊಟದ ನಂತರ ಬೆಲ್ಲ ತಿನ್ನುವುದರಿಂದ ಅನಿಲ ಉತ್ಪಾದನೆ ಯಾಗುವುದಿಲ್ಲ.
* ಬೆಲ್ಲವನ್ನು ಹಾಲಿನೊಂದಿಗೆ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಯು ಆರೋಗ್ಯಕರವಾಗಿರುತ್ತದೆ.
* ಬೆಲ್ಲದ ಸೇವನೆಯು ಮುಟ್ಟಿನ ಸೆಳೆತ ಮತ್ತು ಇತರ ಸಂಬಂದಿತ ಅಸ್ವಸ್ಥ ತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ಬೆಲ್ಲವನ್ನು ತಿನ್ನುವುದರಿಂದ ರಕ್ತದ ಕೆಟ್ಟ ಅಂಶಗಳು ಶುದ್ಧವಾಗುತ್ತವೆ. ಇದು ಚರ್ಮವನ್ನು ಸುಧಾರಿಸುತ್ತದೆ ಮೊಡವೆ ಸಮಸ್ಯೆಯೂ ದೂರ ವಾಗುತ್ತದೆ
* ಶೀತ ಮತ್ತು ಕೆಮ್ಮಿಗೆ ಬೆಲ್ಲದ ಚಹಾ ಅಥವಾ ಲಡ್ಡುವಿನಲ್ಲೂ ಬಳಸ ಬಹುದು.
* ಬೆಲ್ಲ ತಿಂದರೆ ನಮಗೆ ಶಕ್ತಿ ಬರುತ್ತದೆ, ಆಯಾಸಗೊಂಡಾಗ ಅಥವಾ ನೀವು ದುರ್ಬಲರಾಗಿದ್ದರೆ ಬೆಲ್ಲವನ್ನು ತಿನ್ನುವುದು ತ್ವರಿತ ಪರಿಹಾರವನ್ನು ನೀಡುತ್ತದೆ.
* ಇದು ಆಸ್ತಮಾ ಮತ್ತು ಇತರ ಉಸಿರಾಟದ ಅಸ್ವಸ್ಥತೆಗಳ ಲಕ್ಷಣಗಳ ನ್ನು ನಿವಾರಿಸುತ್ತದೆ.
* ಬೆಲ್ಲದೊಂದಿಗೆ ಶುಂಠಿಯನ್ನು ಸೇವಿಸುವುದರಿಂದ ಕೀಲು ನೋವು ನಿವಾರಣೆಯಾಗುತ್ತದೆ.
* ನಮ್ಮ ಧ್ವನಿಯಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಆಗ ಬೇಯಿಸಿದ ಅನ್ನದೊಂದಿಗೆ ಬೆಲ್ಲವನ್ನು ತಿನ್ನುವುದರಿಂದ ಉತ್ತಮ ಧ್ವನಿಯನ್ನು ಪಡೆಯಲು ಸಹಾಯ ಮಾಡುತ್ತದೆ.
* ಅಸ್ತಮಾ ಇದ್ದಲ್ಲಿ ಬೆಲ್ಲ ಮತ್ತು ಕಪ್ಪು ಎಳ್ಳಿನ ಲಡ್ಡು ತಿನ್ನುವುದರಿಂದ ಪರಿಹಾರ ಸಿಗುತ್ತದೆ.
* ಕಿವಿ ನೋವಿನ ಸಂದರ್ಭದಲ್ಲಿ ಬೆಲ್ಲವನ್ನು ದೇಸಿ ತುಪ್ಪದ ಜೊತೆ ತಿನ್ನುವುದರಿಂದ ಪರಿಹಾರ ದೊರೆಯುತ್ತದೆ.
* ಇದು ಹೆಚ್ಚಿನ ಕಾರ್ಬೋಹೈಡ್ರೆಟ್ ಅಂಶದಿಂದಾಗಿ ತ್ವರಿತ ಶಕ್ತಿಯ ವರ್ಧಕವನ್ನು ಒದಗಿಸುತ್ತದೆ.
* ಬೆಲ್ಲ ದೇಹದಿಂದ ವಿಷವನ್ನು ಹೊರಹಾಕುವ ಮೂಲಕ ರಕ್ತವನ್ನು ಶುದ್ದೀಕರಿಸಲು ಸಹಾಯ ಮಾಡುತ್ತದೆ.
* ಬೆಲ್ಲದಲ್ಲಿರುವ ಉತ್ಕರ್ಷಣ ನಿರೋಧಕಗಳು ಪ್ರತಿರಕ್ಷಣಾ ವ್ಯವಸ್ಥೆ ಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
* ಬೆಲ್ಲವು ಹಾನಿಕಾರಕ ವಿಷವನ್ನು ಹೊರಹಾಕುವ ಮೂಲಕ ಯಕೃತ್ತನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.
ಹೀಗೆ ಮೇಲೆ ಹೇಳಿದ ಇಷ್ಟು ಪ್ರಯೋಜನಗಳು ಕೂಡ ನಮಗೆ ಬೆಲ್ಲ ದಿಂದ ಸಿಗುತ್ತದೆ. ಆದ್ದರಿಂದ ನಮ್ಮ ಆಹಾರ ಕ್ರಮದಲ್ಲಿ ಬೆಲ್ಲ ಸೇವನೆ ಮಾಡುವುದು ಅತ್ಯಂತ ಒಳ್ಳೆಯದು ಎಂದು ಆಯುರ್ವೇದ ತಿಳಿಸುತ್ತದೆ ಹಾಗೂ ವೈದ್ಯರು ಕೂಡ ತಿಳಿಸುತ್ತಾರೆ.
ಬಹಳ ಹಿಂದಿನ ದಿನದಲ್ಲಿ ನಾವೆಲ್ಲರೂ ಕೂಡ ಗಮನಿಸಿರಬಹುದು ಚಹಾ ಕಾಫಿ ತಯಾರಿಸುವುದಕ್ಕೂ ಕೂಡ ಬೆಲ್ಲವನ್ನು ಹಾಕುತ್ತಿದ್ದರು ಆದ್ದರಿಂದ ಅದನ್ನು ಸೇವನೆ ಮಾಡಿದ ಯಾರಿಗೂ ಕೂಡ ಯಾವುದೇ ರೀತಿಯ ಡಯಾಬಿಟಿಸ್ ಸಮಸ್ಯೆ ಬರುತ್ತಿರಲಿಲ್ಲ ಆದರೆ ಇತ್ತೀಚಿನ ದಿನದಲ್ಲಿ ಎಲ್ಲರೂ ಕೂಡ ಬಿಳಿ ಅಂಶವಾಗಿರುವಂತಹ ಸಕ್ಕರೆಯನ್ನು ಯಥೇಚ್ಛ ವಾಗಿ ಉಪಯೋಗ ಮಾಡುತ್ತಿರುವುದರಿಂದ ಎಲ್ಲಾ ಖಾಯಿಲೆಗಳು ಕೂಡ ಹೆಚ್ಚಾಗುತ್ತಿದೆ ಎಂದೇ ಹೇಳಬಹುದಾಗಿದೆ.