Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಹೆಣ್ಣು ಮಕ್ಕಳಿಗಾಗಿ ವಿಶೇಷ ಮಾಹಿತಿ ತಪ್ಪದೆ ತಿಳಿದುಕೊಳ್ಳಿ…….||

Posted on October 28, 2023 By Kannada Trend News No Comments on ಹೆಣ್ಣು ಮಕ್ಕಳಿಗಾಗಿ ವಿಶೇಷ ಮಾಹಿತಿ ತಪ್ಪದೆ ತಿಳಿದುಕೊಳ್ಳಿ…….||

 

ಹೆಣ್ಣು ಮಕ್ಕಳು ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರು ವುದು ಬಹಳ ಮುಖ್ಯ. ಅದರಲ್ಲೂ ಮನೆಯ ವಿಚಾರವಾಗಿರಬಹುದು ಅಥವಾ ಹಣಕಾಸಿನ ವಿಚಾರವಾಗಿರಬಹುದು ಹೀಗೆ ಹಲವಾರು ರೀತಿ ಯ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರು ತ್ತದೆ. ಹೌದು ಇಲ್ಲವಾದರೆ ಕೆಲವೊಂದಷ್ಟು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ ಎಂದೇ ಹೇಳಬಹುದು.

ಹಾಗಾದರೆ ಈ ದಿನ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಯಾವ ಕೆಲವು ವಿಚಾರಗಳನ್ನು ತಿಳಿದುಕೊಳ್ಳ ಬೇಕು ಹಾಗೂ ಅದನ್ನು ಅಳವಡಿಸಿಕೊಳ್ಳುವುದರಿಂದ ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎನ್ನುವ ಮಾಹಿತಿಯನ್ನು ಈ ದಿನ ತಿಳಿಯೋಣ.

* ಶುಕ್ರವಾರದ ದಿನ ಹೆಣ್ಣುಮಕ್ಕಳು ಗಂಡನ ಮನೆಯಿಂದ ತವರು ಮನೆಗೆ ಹೋಗಬಾರದು. ಅದೇ ರೀತಿ ಮಂಗಳವಾರದ ದಿನ ಮನೆ ಮಗಳು ತವರುಮನೆ ಬಿಟ್ಟು ಹೋಗಬಾರದು. ಇದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ರೀತಿ ಹೆಣ್ಣು ಮಕ್ಕಳು ಮಾಡುವುದರಿಂದ ಎರಡು ಮನೆಗೆ ಕೂಡ ದಾರಿದ್ರ್ಯ ಹೆಚ್ಚಾಗುತ್ತದೆ ಎಂದೇ ಶಾಸ್ತ್ರಪುರಾಣಗಳು ತಿಳಿಸುತ್ತವೆ.

ಬಹಳ ಹಿಂದಿನ ದಿನದಿಂದಲೂ ಕೂಡ ಈ ಎರಡು ವಾರಗಳಿಗೆ ಬಹಳ ವಿಶೇಷ ವಾದ ಮಹತ್ವ ಇದೆ. ಆದ್ದರಿಂದ ಹೆಣ್ಣು ಮಕ್ಕಳು ಈ ವಿಚಾರವನ್ನು ತಿಳಿದು ಕೊಂಡಿರುವುದು ಹಾಗೂ ಇದನ್ನು ತಪ್ಪದೆ ಪಾಲಿಸುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ದೇವಸ್ಥಾನಕ್ಕೆ ಹೋಗುವಾಗ ಯಾರು ಕೂಡ ಕಪ್ಪು ಬಣ್ಣದ ಬಟ್ಟೆ ಯನ್ನು ಧರಿಸಿಕೊಂಡು ಹೋಗಬಾರದು ಇದನ್ನು ಕೂಡ ಅಶುಭ ಎಂದು ಪರಿಗಣಿಸಲಾಗುತ್ತದೆ.

ಕಪ್ಪು ಅಶಾಂತಿಯ ಸಂಕೇತವಾಗಿದೆ ಆದ್ದರಿಂದ ಈ ರೀತಿಯ ಬಣ್ಣದ ಬದಲು ತಿಳಿಯಾಗಿರುವಂತಹ ಬಣ್ಣಗಳು ಅಂದರೆ ಬಿಳಿ ಬಣ್ಣ, ಆಕಾಶ ನೀಲಿ ಹೀಗೆ ಶಾಂತಿಯ ರೂಪವಾಗಿರುವ ಬಣ್ಣದ ಬಟ್ಟೆಗಳನ್ನು ಧರಿಸಿಕೊಂಡು ದೇವಸ್ಥಾನಕ್ಕೆ ಹೋಗುವುದರಿಂದ ಒಂದು ರೀತಿಯ ಪಾಸಿಟಿವ್ ಎನರ್ಜಿ ಎನ್ನುವುದು ನಿಮ್ಮಲ್ಲಿ ಹೆಚ್ಚಾಗುತ್ತದೆ ಎಂದೇ ಹೇಳಬಹುದು.

* ಮನೆಯ ಮೂಲೆಯಲ್ಲಿ ಧೂಳು, ಕಸ, ಜೇಡರಬಲೆ ಕಟ್ಟಿಕೊಂಡಿರುವುದು ಶುಭವಲ್ಲ. ಹಾಗಾಗಿ ಮನೆಯನ್ನು ಯಾವಾಗಲು ಸ್ವಚ್ಛವಾಗಿಟ್ಟು ಕೊಳ್ಳಬೇಕು.
* ಸುಮಂಗಲಿಯರು ಬೈತಲೆಯಲ್ಲಿ ಕುಂಕುಮ ಇಟ್ಟುಕೊಂಡಿರಬೇಕು.
* ಸಂಜೆ ಸಮಯದಲ್ಲಿ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ತಲೆ ಕೂದಲನ್ನು ಬಿಟ್ಟುಕೊಂಡಿರಬಾರದು.

ಏಕೆಂದರೆ ಸಂಜೆಯ ಸಮಯದಲ್ಲಿ ತಾಯಿ ಲಕ್ಷ್ಮಿ ದೇವಿ ಆಗಮಿಸುತ್ತಾಳೆ ಎನ್ನುವ ನಂಬಿಕೆ ಇದೆ. ಹಾಗೆನಾದರೂ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಆ ಸಮಯದಲ್ಲಿ ತಲೆಕೂದಲು ಬಿಡುವುದು ತಲೆ ಬಾಚುತ್ತಿದ್ದರೆ ಲಕ್ಷ್ಮೀದೇವಿ ಒಳಗಡೆ ಬರುವ ಬದಲು ಆಚೆ ಹೋಗುತ್ತಾಳೆ ಎನ್ನುವ ನಂಬಿಕೆ.
* ಮನೆಗೆ ಯಾರಾದರೂ ಅಥಿತಿಗಳು ಬಂದರೆ ಅವರ ಕುಶಲೋಪರಿ ವಿಚಾರಿಸಿ ಅವರಿಗೆ ಒಳ್ಳೆ ರೀತಿಯಲ್ಲಿ ಸತ್ಕಾರ ಮಾಡಬೇಕು. ಹಾಗೂ ಮನೆಗೆ ಬಂದ ಅತಿಥಿಗಳಿಗೆ ಯಾವತ್ತಿಗೂ ಕೂಡ ಬೇಜಾರಾಗುವ ರೀತಿ ನಡೆದುಕೊಳ್ಳಬಾರದು.
* ಗರ್ಭಿಣಿ ಸ್ತ್ರೀಯರು ತೆಂಗಿನ ಕಾಯಿ ಒಡೆಯಬಾರದು.

* ಹೆಣ್ಣುಮಕ್ಕಳು ಮನೆಯ ಮಹಾಲಕ್ಷ್ಮಿ ಯಾಗಿರುತ್ತಾರೆ. ಹಾಗಾಗಿ ಅವರು ಕಣ್ಣೀರು ಹಾಕಬಾರದು.
* ಮಂಗಳವಾರ ಮತ್ತು ಶುಕ್ರವಾರದ ದಿನ ಯಾವದೇ ರೀತಿಯ ದಾನ ಮಾಡಬಾರದು.
* ರಾತ್ರಿ ಊಟ ಮಾಡಿದ ಎಂಜಲು ತಟ್ಟೆಗಳನ್ನು ಹಾಗೆ ಇಡಬಾರದು ಬದಲಿಗೆ ಅದನ್ನು ರಾತ್ರಿ ಮಲಗುವ ಮುಂಚೆಯೇ ತೊಳೆಯಬೇಕು.
* ರಾತ್ರಿ ಹೊತ್ತು ಪಾತ್ರೆಯಲ್ಲಿ ಒಂದು ತುತ್ತಾದರು ಅನ್ನವನ್ನು ಉಳಿಸಿರ ಬೇಕು.

* ಹೆಣ್ಣುಮಕ್ಕಳು ಹಣೆಗೆ ಕುಂಕುಮ ಇಟ್ಟುಕೊಂಡಿರಬೇಕು. ಕೈಗೆ ಬಳೆ ಹಾಕಿಕೊಳ್ಳಬೇಕು. ಕಡೇಪಕ್ಷ ಒಂದೊಂದಾದ್ರು ಹಾಕಿಕೊಂಡಿರಬೇಕು.
* ಹೆಣ್ಣುಮಕ್ಕಳು ಸಂಜೆ ವೇಳೆ ದೇವರ ಮುಂದೆ ದೀಪ ಹಚ್ಚಬೇಕು. ರಾತ್ರಿ ಮಲಗುವಾಗ ದೇವರ ಕೋಣೆಯಲ್ಲಿ ಒಂದು ಸಣ್ಣ ಲೈಟಾದ್ರೂ ಹಾಕಿರಬೇಕು.

Useful Information
WhatsApp Group Join Now
Telegram Group Join Now

Post navigation

Previous Post: ದಿನವಿಡಿ ಫ್ರೆಶ್ ಅಂಡ್ ಆಕ್ಟಿವ್ ಇರಲು ಐದು ಮನೆ ಮದ್ದು.! ಸುಸ್ತು ನಿಶಕ್ತಿ ಇರುವವರು ನೋಡಿ.!
Next Post: ಹರಳೆಣ್ಣೆಯಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore