ಕೈ ಕಾಲುಗಳಲ್ಲಿ ಜೋಮು ಹಿಡಿಯುವುದು ಪಾದದಲ್ಲಿ ಉರಿ ನರ ದೌರ್ಬಲ್ಯತೆ ಹೀಗೆ ಹಲವಾರು ಕಾರಣಗಳು ಹಲವಾರು ಜನರಲ್ಲಿ ಕಾಣಿಸಿ ಕೊಳ್ಳುತ್ತದೆ. ಆದರೆ ಈ ಸಮಸ್ಯೆ ಯಾವ ಒಂದು ಕಾರಣಕ್ಕಾಗಿ ಬರುತ್ತದೆ ಎನ್ನುವ ಮಾಹಿತಿ ಹೆಚ್ಚಾಗಿ ಯಾರಿಗೂ ಕೂಡ ತಿಳಿದಿಲ್ಲ. ಇದಕ್ಕಾಗಿ ಹಲವಾರು ಜನ ಹೆಚ್ಚಿನ ಹಣಕಾಸನ್ನು ಖರ್ಚು ಮಾಡಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುತ್ತಾರೆ.
ಆದರೆ ಎಷ್ಟೇ ಚಿಕಿತ್ಸೆ ಪಡೆದುಕೊಂಡರು ಕೂಡ ಈ ಸಮಸ್ಯೆಯ ಪರಿಹಾರ ಎನ್ನುವುದು ಅವರಿಗೆ ಸಿಗುತ್ತಿರುವುದಿಲ್ಲ. ಆದ್ದರಿಂದ ಇಂತಹ ಸಮಸ್ಯೆ ಅನುಭವಿಸುತ್ತಿರುವವರು ಈ ದಿನ ನಾವು ಹೇಳುವಂತಹ ಪರಿಹಾರ ಮಾರ್ಗವನ್ನು ಮಾಡಿಕೊಳ್ಳುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಹಾಗಾದರೆ ಈ ದಿನ ಈ ಒಂದು ಸಮಸ್ಯೆ ಕಾಣಿಸಿಕೊಳ್ಳಲು ಪ್ರಧಾನವಾಗಿರುವಂತಹ ಕಾರಣಗಳು ಏನು? ಹಾಗೂ ಇದನ್ನು ಸರಿಪಡಿಸಿಕೊಳ್ಳುವಂತಹ ಪರಿಹಾರ ಮಾರ್ಗಗಳು ಯಾವುವು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸಮಸ್ಯೆಗೆ ವಾತವಿಕಾರಗಳು ಮತ್ತು ಪಿತ್ತ ವಿಕಾರಗಳು ಪ್ರಧಾನವಾದ ಕಾರಣ ಎಂದು ಹೇಳಬಹುದು.
ಪಿತ್ತದಿಂದ ಆಮ ವಿಕಾರದ ಸಮಸ್ಯೆ ಗಳು ಅಂದರೆ ನರ್ವ್ ಸೆಲ್ಸ್ ಗಳು ಶಕ್ತಿ ಕಡಿಮೆಯಾಗುತ್ತದೆ. ಅಂದರೆ ನಮ್ಮ ದೇಹದಲ್ಲಿ ಸರಿಸುಮಾರು 72,000 ನರಗಳು ಇದ್ದು ಇವುಗಳ ಆರೋಗ್ಯ ಸಂಪೂರ್ಣವಾಗಿ ಚೆನ್ನಾಗಿದ್ದರೆ ಮಾತ್ರ ಆ ವ್ಯಕ್ತಿ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. ಹಾಗೇನಾದರೂ ಅದರಲ್ಲಿ ಒಂದು ಸ್ವಲ್ಪ ಅನಾರೋಗ್ಯ ಕಾಣಿಸಿಕೊಂಡರೆ ನಮ್ಮ ಇಡೀ ದೇಹ ಸಂಪೂರ್ಣವಾಗಿ ಕುಗ್ಗುತ್ತದೆ ಎಂದೇ ಹೇಳಬಹುದು. ಆದ್ದರಿಂದಲೇ ಮನುಷ್ಯನನ್ನು ನರಮಾನವ ಎಂದು ಕರೆಯುತ್ತಾರೆ.
ಆದ್ದರಿಂದ ಮನುಷ್ಯ ನರಗಳ ಚೈತನ್ಯವನ್ನು ಗಟ್ಟಿಯಾಗಿ ಇಟ್ಟುಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ವಾತವಿಕಾರದಿಂದ ನರನಾಡಿಗಳಲ್ಲಿ ರಕ್ಷತೆ ಉಂಟಾಗುತ್ತದೆ. ಅಂದರೆ ಹಾರ್ಡ್ ನೆಸ್ ಉಂಟಾಗುತ್ತದೆ ಇದರಿಂದಲೂ ಕೂಡ ನರನಾಡಿಗಳಲ್ಲಿ ಜೋಮು ಹಿಡಿಯುವುದು, ನರ ದೌರ್ಬಲ್ಯತೆ ಈ ರೀತಿಯ ಸಮಸ್ಯೆಗಳು ಬರುತ್ತದೆ.
ಪಿತ್ತ ಹೆಚ್ಚಾಗುವುದಕ್ಕೆ ಸ್ನಿಗ್ಧ ಆಹಾರಗಳ ಸೇವನೆಯ ಕೊರತೆ ಹಾಗೂ ವಾತ ಹೆಚ್ಚಾಗುವುದಕ್ಕೆ ಸ್ನಿದ್ದ ಆಹಾರ ಸೇವನೆಯ ಜೊತೆಗೆ ಅಭ್ಯಂಗ ರಹಿತವಾಗಿರುವಂತಹ ಜೀವನ ಅಂದರೆ ನಮ್ಮ ದೇಹಕ್ಕೆ ಯಾವುದೇ ರೀತಿಯ ಮಸಾಜ್ ಮಾಡಿಕೊಳ್ಳದೆ ಇರುವುದು ಇದಕ್ಕೆ ಬಹಳ ಪ್ರಮುಖವಾದ ಕಾರಣ. ಹಾಗಾದರೆ ಈ ದಿನ ಇಂತಹ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳ ಬೇಕು ಎಂದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಎಂದು ನೋಡುವುದಾದರೆ.
ಪ್ರತಿಯೊಬ್ಬ ಮನುಷ್ಯನು ಕೂಡ ಬಿಸಿಲಿನಲ್ಲಿ ತನ್ನ ಮೈಯನ್ನು ಒಡ್ಡ ಬೇಕು ಹಾಗೂ ಭೂಸ್ಪರ್ಶ ಮಾಡಬೇಕು ಜೊತೆಗೆ ಎಣ್ಣೆ ಸ್ನಾನ ಮಾಡ ಬೇಕು. ಇದರಿಂದ ನರ ದೌರ್ಬಲ್ಯತೆ ಸಮಸ್ಯೆಗಳು ಬರುವುದಿಲ್ಲ, ಕೈ ಕಾಲುಗಳಲ್ಲಿ ಜೋಮು ಹಿಡಿಯುವಂತಹ ಸಮಸ್ಯೆಗಳು ಕೂಡ ಬರುವುದಿಲ್ಲ ಜೊತೆಗೆ ತಮ್ಮ ಆಹಾರ ಪದ್ಧತಿಯಲ್ಲಿ ಹಾಲು, ಮೊಸರು, ಬೆಣ್ಣೆ, ತುಪ್ಪ, ಸೇವನೆ ಮಾಡಬೇಕು ಇದರಿಂದ ವಾತ ಪಿತ್ತದ ಸಮಸ್ಯೆಗಳು ಬರುವುದಿಲ್ಲ.
ಇದನ್ನು ಸೇವನೆ ಮಾಡುವುದರಿಂದ ನಮ್ಮ ಕೈಕಾಲುಗಳಲ್ಲಿ ಜೋಮು ಹಿಡಿಯುವಂತಹ ಸಮಸ್ಯೆ, ನರ ದೌರ್ಬಲ್ಯತೆ ಯಾವುದು ಕೂಡ ಬರುವುದಕ್ಕೆ ಕಾರಣವಾಗುವುದಿಲ್ಲ. ಆದ್ದರಿಂದ ಇಂತಹ ಆಹಾರ ಪದ್ಧತಿಯನ್ನು ಸೇವನೆ ಮಾಡುವುದು ಬಹಳ ಮುಖ್ಯ ಇದರ ಜೊತೆ ಶುದ್ಧವಾದoತಹ ಗಾಣದ ಎಣ್ಣೆಯನ್ನು ಅದರಲ್ಲೂ ಕಡಲೆಕಾಯಿ ಎಣ್ಣೆಯನ್ನು ಉಪಯೋಗಿಸುವುದು ತುಂಬಾ ಒಳ್ಳೆಯದು.