ಇತ್ತೀಚಿನ ದಿನದಲ್ಲಿ ಮಹಿಳೆಯರಿಗೆ ಸ್ಥನ ಕ್ಯಾನ್ಸರ್ ಎನ್ನುವುದು ಸಾಮಾನ್ಯ ಸಮಸ್ಯೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಮಹಿಳೆಯರಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವು ದರ ಮೂಲಕ ಈ ಸ್ಥನ ಕ್ಯಾನ್ಸರ್ ಹೆಚ್ಚಾಗುವುದಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ಈ ದಿನ ಮಹಿಳೆಯರಲ್ಲಿ ಯಾವ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಹಾಗೂ ಯಾವ ಸಮಸ್ಯೆ ಇದ್ದರೆ ಮಹಿಳೆಯರು ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.
* 4೦, 50, 60 ವರ್ಷ ತುಂಬಿದ ಮಹಿಳೆಯರಲ್ಲಿ ಯಾವುದೇ ರೀತಿಯ ನೋವು ಕಾಣಿಸಿಕೊಳ್ಳದೆ ಇರುವಂತಹ ಕೆಲವೊಂದು ಗಂಟುಗಳು ಸ್ಥನದಲ್ಲಿ ಕಾಣಿಸಿಕೊಳ್ಳುತ್ತದೆ ಆಗ ಮಹಿಳೆಯರು ತಕ್ಷಣವೇ ಉತ್ತಮವಾದ ವೈದ್ಯರ ಬಳಿ ಹೋಗಿ ಅದರ ಬಗ್ಗೆ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
* ಇನ್ನು ಎರಡನೆಯದಾಗಿ ಚರ್ಮದ ಬಣ್ಣ ಬದಲಾಗುತ್ತಿದ್ದರೆ ಹಾಗೂ ಚರ್ಮ ಮೊದಲಿಗಿಂತ ವಿಭಿನ್ನವಾಗಿ ಕಾಣಿಸುತ್ತಿದ್ದರೆ. ಇದು ಕೂಡ ಈ ಸಮಸ್ಯೆ ಬರುವುದಕ್ಕೆ ಕಾಣಿಸಿಕೊಳ್ಳುವಂತಹ ಒಂದು ಲಕ್ಷಣವಾಗಿದೆ. ಈ ಸಮಸ್ಯೆ ಉಂಟಾಗಿದ್ದರು ಸಹ ಹೋಗಿ ವೈದ್ಯರನ್ನು ಕಾಣುವುದು ಬಹಳ ಮುಖ್ಯವಾಗಿರುತ್ತದೆ.
* ಜೊತೆಗೆ ಸ್ಥನದ ತೊಟ್ಟಿನಲ್ಲಿ ರಕ್ತ ಅಥವಾ ಯಾವುದೇ ರೀತಿಯ ದ್ರವರೂಪ ಕಾಣಿಸಿಕೊಂಡರು ಸಹ ನೀವು ವೈದ್ಯರ ಬಳಿ ಹೋಗುವುದು ಬಹಳ ಮುಖ್ಯವಾಗಿರುತ್ತದೆ ಹೌದು.
* ಹಾಗೂ ನಮ್ಮ ಕಂಕಳಿನ ಕೆಳ ಭಾಗದಲ್ಲಿ ಯಾವುದಾದರೂ ಗಂಟುಗಳು ಕಾಣಿಸಿಕೊಳ್ಳುತ್ತಿದ್ದಾರೆ ಆಗಾಗ ನೋವು ಕಾಣಿಸಿಕೊಳ್ಳುತ್ತಿದ್ದರು ಸಹ ವೈದ್ಯರ ಬಳಿ ಹೋಗಿ ಈ ರೀತಿ ಸಮಸ್ಯೆ ಇದೆ ಇದಕ್ಕೆ ಕಾರಣ ಏನು ಎಂದು ತಿಳಿಯುವುದು ಬಹಳ ಮುಖ್ಯ.
ಹೀಗೆ ಮೇಲೆ ಹೇಳಿದ ಇಷ್ಟ ಲಕ್ಷಣಗಳು ಯಾರಲ್ಲಿ ಕಾಣಿಸಿಕೊಳ್ಳುತ್ತಿರುತ್ತ ದೆಯೋ ಅವರು ಈ ಸಮಸ್ಯೆ ಇದರಿಂದ ಬಂದಿದೆ ಎಂದು ನೀವೇ ಚಿಕಿತ್ಸೆ ಯನ್ನು ಪಡೆದುಕೊಳ್ಳಬಾರದು ಅಂದರೆ ನೀವೇ ಯಾವುದೇ ರೀತಿಯ ಸ್ಕ್ಯಾನ್ ಗಳನ್ನು ಮಾಡಿಸಿಕೊಳ್ಳಬಾರದು. ಬದಲಿಗೆ ಆಸ್ಪತ್ರೆಗಳಿಗೆ ಹೋಗಿ ಅಲ್ಲಿ ಅವರು ಹೇಳುವಂತಹ ಸ್ಕ್ಯಾನ್ ಗಳನ್ನು ಮಾಡಿಸಿಕೊಳ್ಳುವುದರ ಮೂಲಕ ಕೆಲವೊಮ್ಮೆ ರಕ್ತ ಪರಿಶೀಲನೆ ಹೀಗೆ ಹಲವಾರು ರೀತಿಯ ಪರೀಕ್ಷೆಗಳನ್ನು ಮಾಡಿಸುವಂತೆ ಅವರು ಹೇಳುತ್ತಾರೆ.
ಆನಂತರ ನಾವು ಅದನ್ನು ಮಾಡಿಸುವುದು ಬಹಳ ಉತ್ತಮವಾಗಿರುತ್ತದೆ. ಬದಲಿಗೆ ನಾವೇ ಯಾವುದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತಪ್ಪು. ಹೀಗೆ ಮೇಲೆ ಹೇಳಿದ ಇಷ್ಟು ಲಕ್ಷಣಗಳು ನಿಮ್ಮಲ್ಲಿ ಇದ್ದರೆ ಮೊದಲು ಹೋಗಿ ಡೈನಕಾಲಜಿಸ್ಟ್ ಬಳಿ ಹೋಗಿ ಸ್ಕ್ಯಾನ್ ಮಾಡಿಸುವುದು ಬಹಳ ಮುಖ್ಯ.
ಹೌದು ಯಾವುದೇ ಸಮಸ್ಯೆಯನ್ನು ನಾವು ನಿರ್ಲಕ್ಷ ಮಾಡಿದರೆ ಮುಂದಿನ ದಿನದಲ್ಲಿ ಆ ಸಮಸ್ಯೆ ನಮಗೆ ದುಪ್ಪಟ್ಟಾಗಿ ಅದರಿಂದ ನಾವೇ ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಯಾವುದೇ ಸಮಸ್ಯೆ ಕಾಣಿಸಿಕೊಂಡರು ಅದನ್ನು ಸೂಕ್ತ ವೈದ್ಯರ ಬಳಿ ಹೋಗಿ ತೋರಿಸಿಕೊಂಡು ಅವರು ಕೊಡುವಂತಹ ಚಿಕಿತ್ಸೆಯನ್ನು ಪಡೆದುಕೊಳ್ಳುವುದರ ಮೂಲಕ ಆ ಸಮಸ್ಯೆಯನ್ನು ನಾವು ಸ್ವಲ್ಪ ಸಮಯದಲ್ಲಿಯೇ ದೂರ ಮಾಡಿ ಕೊಳ್ಳಬಹುದಾಗಿದೆ.
ಅದರಲ್ಲೂ ಬಹಳ ಮುಖ್ಯವಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳು ವಂತಹ ಈ ಸ್ಥನ ಕ್ಯಾನ್ಸರ್ ಅನ್ನು ಮೊದಲನೇ ಹಂತ ಎರಡನೇ ಹಂತ ದಲ್ಲಿದ್ದರೆ ಅದಕ್ಕೆ ಉತ್ತಮವಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದರ ಮೂಲಕ ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದಾಗಿದ್ದು ಇಂತಹ ಸಮಯದಲ್ಲಿ ಗುಣಪಡಿಸಿಕೊಂಡಂತಹ ಹಲವಾರು ಉದಾಹರಣೆ ಗಳನ್ನು ಸಹ ನಾವು ಇಂದಿಗೂ ನೋಡಬಹುದು.