ಈ ಪದಗಳನ್ನು ಉಚ್ಚರಿಸಿದರೂ ಸಾಕು ದುರದೃಷ್ಟ ನಿಮ್ಮನ್ನು ಬೆನ್ನಟ್ಟುತ್ತದೆ. ಮಾತು ಆಡಿದರೆ ಹೋಯ್ತು, ಮುತ್ತು ಹೊಡೆದರೆ ಹೋಯ್ತು ಎಂಬ ಗಾದೆ ಮಾತಿನಂತೆ ಬೈಗುಳ ಮಾತುಗಳನ್ನು ಆಡಿದರೆ ಆಡಿದವನಿಗೂ ಕೇಡು ಆಡಿಸಿಕೊಂಡವನಿಗೂ ಕೇಡು ಯಾಕೆಂದರೆ ಅವು ಜಗಳವನ್ನೇ ಸೃಷ್ಟಿಸುತ್ತವೆ.
ಆದರೆ ಕೆಲವೊಮ್ಮೆ ನಾವು ಕೆಲವು ಪದ ಮಾತುಗಳನ್ನು ನಮ್ಮನಮ್ಮಲ್ಲೇ ಉಚ್ಚರಿಸುತ್ತಾ ಇರುತ್ತೇವೆ ಅವು ಹಾಗೆ ಮಾತಾಡುವವನಿಗೇ ಸ್ವತಃ ಹಾನಿ. ಅವುಗಳನ್ನು ನಾವು ಗಟ್ಟಿ ಯಾಗಿ ಉಚ್ಚರಿಸಲೂಬಾರದು ಕೆಲವು ಪದಗಳನ್ನು ಹೇಳಲೂಬಾರದು. ಹಾಗೆ ಹೇಳುವಾಗ ಆಕಾಶದಲ್ಲಿ ಸಂಚರಿಸುವ ತಥಾಸ್ತು ದೇವತೆಗಳು ತಥಾಸ್ತು ಎಂದರೆ ಹಾಗೇ ಆಗಿಬಿಡುತ್ತವೆ ಎಂಬ ನಂಬಿಕೆಯಿದೆ. ಇದು ಸುಳ್ಳಲ್ಲ ಎಂದು ಚಾಣಕ್ಯನೂ ಸಮರ್ಥಿಸುತ್ತಾನೆ. ಹಾಗಿದ್ದರೆ ಬನ್ನಿ ಆ ಮಾತುಗಳಾವುವು ಎಂದು ನೋಡೋಣ.
* ಥೂ ದರಿದ್ರ :-
ನಾವು ಕೆಲವೊಮ್ಮೆ ನಮಗೆ ಏನಾದರೂ ಕೆಟ್ಟದಾದರೆ ನಮಗೆ ಇಷ್ಟವಾಗ ದವರು ಯಾರಾದರೂ ಬಂದರೇ ನಮಗೆ ಬೇಡದೇ ಇದ್ದದ್ದು ದೊರೆತರೆ ಬೇಕಿದ್ದದ್ದು ಸಿಕ್ಕದೇ ಹೋದರೆ ಹೀಗೆ ಬೈದುಕೊಳ್ಳುತ್ತೇವೆ. ದರಿದ್ರ ಎಂಬ ಪದದ ಅರ್ಥ ಬಡತನ ಎಂದು. ದರಿದ್ರ ಎಂದು ಬೈದುಕೊಳ್ಳುವವನ ಮೇಲೇ ಬಡತನಕ್ಕೆ ಪ್ರೀತಿ ಉಂಟಾಗುತ್ತದಂತೆ. ಆದ್ದರಿಂದ ತಪ್ಪಿಯೂ ಇದನ್ನು ಹೇಳಬೇಡಿ.
* ಗ್ರಹಚಾರ : –
ಜಾತಕದಲ್ಲಿ ಗ್ರಹಗಳು ತಮ್ಮ ತಮ್ಮ ಮನೆಯಲ್ಲಿ ನಡೆಯುವುದನ್ನು ಗ್ರಹಚಾರ ಎನ್ನುತ್ತಾರೆ. ಆದರೆ ನಾವು ಗ್ರಹಚಾರ ಎಂದು ಉದ್ಧರಿಸು ವುದು ನಮಗೆ ಏನಾದರೂ ಕೆಟ್ಟದು ಸಂಭವಿಸಿದಾಗ ನಾವು ಆಡುವ ಮಾತಿನ ಧ್ವನಿಯಲ್ಲಿ ಕೆಟ್ಟದು ಎಂಬುದು ಹೊರಸೂಸುತ್ತಾ ಇರುತ್ತದೆ. ಇದು ನಿಮ್ಮ ಜಾತಕದಲ್ಲಿರುವ ಕೆಲವು ಗ್ರಹಗಳಿಗೆ ಇಷ್ಟವಾಗದು. ಹೀಗಾಗಿ ಗ್ರಹಗಳಿಗೆ ಕೋಪ ತರಿಸಬೇಡಿ.
* ಅನಿಷ್ಟ :-
ಅನಿಷ್ಟ ಎಂಬ ಪದದ ಅರ್ಥ ಇಷ್ಟವಲ್ಲದ್ದು ಎಂಬುದು ಮಾತ್ರ. ಆದರೆ ಅನಿಷ್ಠ ಎಂದು ಉದ್ಧರಿಸುವಾಗ ನೀವು ಕೋಪದಿಂದ ದುಃಖದಿಂದ ವ್ಯಾಕುಲರಾಗಿರುತ್ತೀರಿ. ಇನ್ನೊಬ್ಬರಿಗೆ ಬಯ್ಯುತ್ತಿರುತ್ತೀರಿ. ಇದು ಸಲ್ಲದು. ಕೆಲವೊಮ್ಮೆ ನಿಮ್ಮ ಬಂಧುಗಳಿಗೇ (ಸಾಮಾನ್ಯವಾಗಿ ಗಂಡ ಹೆಂಡತಿಗೆ, ತಂದೆ ತಾಯಿ ಮಕ್ಕಳಿಗೆ) ಬಯ್ಯುವುದು ಸಾಮಾನ್ಯ. ಇದು ಅನಿಷ್ಟವನ್ನೇ ಉಂಟುಮಾಡೀತು ಜಾಗ್ರತೆ.
* ಎಲಾ ಶನಿ :-
ಕೆಲವೊಮ್ಮೆ ನಮ್ಮನ್ನು ನಕ್ಷತ್ರಿಕನಂತೆ ಕಾಡುವ ಕೆಲವರನ್ನು ಇದ್ದಕ್ಕಿದ್ದಂತೆ ಕಂಡಾಗ ಎಲಾ ಶನಿ ಎಂದು ಉದ್ಧರಿಸುವುದುಂಟು. ಅಂದರೆ ಆತ/ ಆಕೆ ಕಾಟ ಕೊಡಲು ಬಂದಿದ್ದಾನೆ/ಳೆ ಎಂಬ ಅರ್ಥ ಧ್ವನಿಸುತ್ತದೆ. ಆದರೆ ಈ ಮಾತು ಶನಿಗೆ ಇಷ್ಟವಾಗುವುದಿಲ್ಲ. ಶನಿ ಎಂದರೆ ಬರೀ ಕಷ್ಟ ಕೊಡುವುದಕ್ಕಿರುವವನಲ್ಲ ಆತ ಸುಯೋಗ ಉಂಟುಮಾಡುವವನೂ ಕೂಡ. ಹೀಗಾಗಿ ಈ ಪದಪ್ರಯೋಗ ಬೇಡ.
* ಶಾಪ :-
ಇದೊಂದು ಶಾಪ ಎಂದು ಸಿಟ್ಟಿನಿಂದ ಯಾರಾದರೂ ಅರಚಾಡುವುದನ್ನು ನೀವು ನೋಡಬಹುದು. ನಿಜಕ್ಕೂ ಆತನಿಗೆ ಯಾರದೂ ಶಾಪ ಇದ್ದಿರ ಲಾರದು. ಆದರೆ ಗಾಳಿಯಲ್ಲಿ ತೇಲಾಡುತ್ತಾ ಇರುವ ಯಾರ್ಯಾರದೋ ಶಾಪಗಳು ದುಃಖಗಳು ಆತನನ್ನು ಬಂದು ಅಂಟಿಕೊಳ್ಳುವುದು ಖಂಡಿತ.
* ಹಾಳಾಗಿ ಹೋಗು, ಸರ್ವನಾಶವಾಗು : –
ಜಗಳವಾಗುವಾಗ ಯಾರಾದರ ಮೇಲಾದರೂ ತುಂಬ ಸಿಟ್ಟು ಬಂದರೆ ಹೀಗೆ ಹೇಳಿಹೋಗುವುದು ಸಹಜ. ಆದರೆ ಇಂಥ ಮಾತುಗಳು ಆಡಿದ ವರ ಬದುಕಿನ ಮೇಲೂ ಪ್ರಭಾವ ಬೀರುತ್ತವೆ. ಆದ್ದರಿಂದ ಎಚ್ಚರಿಕೆ ಯಿಂದಿರಿ. ಇನ್ನು ಕೆಲವೊಮ್ಮೆ ನೀವು ಆ ಅರ್ಥದಲ್ಲಿ ಉದ್ದೇಶಿಸರದೇ ಇದ್ದರೂ ದೇವತೆಗಳು ತಥಾಸ್ತು ಎಂದುಬಿಡಬಹುದು. ಹೀಗಾಗಿ ಪ್ರೀತಿಪಾತ್ರರ ಜತೆ ಜಗಳವಾಡುವಾಗ ಇವನ್ನು ಬಳಸಬೇಡಿ. ಹೌದು ಈ ಪದಗಳು ತುಂಬಾ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ನಾವು ಮಾತನಾಡುವಾಗ ಪ್ರತಿಯೊಂದು ಪದದ ಮೇಲೆ ನಿಗಾ ಇಡುವುದು ಒಳ್ಳೆಯದು.