ಸಾಮಾನ್ಯವಾಗಿ ಕೆಲವೊಂದಷ್ಟು ಜನರ ಮುಖದ ಮೇಲೆ ಕೈಕಾಲುಗಳಲ್ಲಿ ಬಂಗು ಕಾಣಿಸಿಕೊಳ್ಳುತ್ತದೆ ಹೌದು ಈ ರೀತಿಯ ಸಮಸ್ಯೆಯಿಂದ ಹಲ ವಾರು ಜನ ಸಮಸ್ಯೆಯನ್ನು ಅನುಭವಿಸುತ್ತಿದ್ದು ಅದನ್ನು ಗುಣಪಡಿಸಿ ಕೊಳ್ಳುವುದಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿರುತ್ತಾರೆ. ಆದರೆ ಅವರು ಎಷ್ಟೇ ಖರ್ಚು ಮಾಡಿದರೂ ಕೂಡ ಅದು ವಾಸಿಯಾಗುತ್ತಿರುವುದಿಲ್ಲ.
ಆದ್ದರಿಂದ ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣ ಏನು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಹೌದು ಅದಕ್ಕೆ ಕಾರಣ ಏನು ಎಂದು ತಿಳಿದು ಅದನ್ನು ಸರಿಪಡಿಸಿಕೊಳ್ಳುವುದರ ಮೂಲಕ ನೀವು ಈ ತೊಂದರೆಯನ್ನು ಸಂಪೂರ್ಣವಾಗಿ ದೂರ ಮಾಡಿ ಕೊಳ್ಳಬಹುದು. ಹಾಗಾದರೆ ಈ ದಿನ ಮುಖದ ಮೇಲೆ ಕಾಣಿಸಿ ಕೊಳ್ಳುವ ಕಪ್ಪು ಕಲೆ, ಬಂಗು ಈ ರೀತಿಯ ಎಷ್ಟೇ ಸಮಸ್ಯೆಗಳಿದ್ದರೂ.
ಅದನ್ನು ಹೇಗೆ ದೂರ ಮಾಡಿಕೊಳ್ಳುವುದು ಯಾವ ಮನೆ ಮದ್ದುಗಳನ್ನು ನಾವು ಉಪಯೋಗಿಸುವುದರಿಂದ ಈ ಸಮಸ್ಯೆ ದೂರವಾಗುತ್ತದೆ ಎನ್ನುವ ಮಾಹಿತಿಯನ್ನು ತಿಳಿಯೋಣ. ಹಾಗಾದರೆ ಈ ಸಮಸ್ಯೆಗೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ.
* ನಾವು ಮೊದಲನೆಯದಾಗಿ ಬೇಕರಿ ಪದಾರ್ಥಗಳು ಎಣ್ಣೆ ಯಲ್ಲಿ ಕರಿದ ಪದಾರ್ಥಗಳು ಬೀದಿ ಬದಿಯಲ್ಲಿ ಮಾರಾಟ ಮಾಡುವ ಆಹಾರ ಪದಾರ್ಥಗಳು ಇಂತಹ ಅನಾರೋಗ್ಯ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ನಾವು ಸಂಪೂರ್ಣವಾಗಿ ತ್ಯಜಿಸಬೇಕು.
ಇದರ ಜೊತೆ ತಡವಾಗಿ ಆಹಾರ ಸೇವನೆ ಮಾಡುವುದು ತಡವಾಗಿ ಮಲಗುವುದು, ತಡವಾಗಿ ಏಳುವುದು, ಧೂಮಪಾನ ಮಧ್ಯಪಾನ ಬೀಡಿ ಸಿಗರೇಟು ಇಂತಹ ದುಶ್ಚಟಗಳಿಂದ ಆದಷ್ಟು ದೂರ ಇರಬೇಕು. ಹೀಗೆ ಇಷ್ಟು ಕೂಡ ಈ ಸಮಸ್ಯೆಗಳು ಬರುವುದಕ್ಕೆ ಪ್ರಧಾನವಾದಂತಹ ಕಾರಣಗಳು.
ಇದರ ಜೊತೆ ನಾವು ಯಾವ ಕೆಲವು ಉತ್ತಮವಾದ ವಿಧಾನ ಅನುಸರಿಸ ಬೇಕು ಎಂದು ನೋಡುವುದಾದರೆ.
* ಆಹಾರ ಸೇವನೆ ಮಾಡಬೇಕು ಎಂದಾರೆ ಆಹಾರದಲ್ಲಿ ಹೆಚ್ಚಿನ ಖಾರ ಉಪ್ಪು ಹುಳಿ ಅಂಶ ಇರಬಾರದು. ಹಾಗೂ ಹೆಚ್ಚು ಮಸಾಲೆ ಭರಿತ ಆಹಾರ ಪದಾರ್ಥ ಸೇವನೆ ನಿಲ್ಲಿಸಬೇಕು.
* ಕಾಫಿ ಚಹಾ ಇವುಗಳನ್ನು ಕಡ್ಡಾಯವಾಗಿ ಬಿಡಬೇಕು.
* ವಾತ ಪಿತ್ತ ಕಫ ಸಮಸ್ಯೆಗಳನ್ನು ಉಂಟುಮಾಡುವಂತಹ ಆಲೂಗಡ್ಡೆ ಬದನೆಕಾಯಿ ಹಸಿಮೆಣಸಿನಕಾಯಿ ಇವುಗಳೆಲ್ಲವನ್ನು ಸಹ ನಾವು ಸಂಪೂರ್ಣವಾಗಿ ಬಿಡಬೇಕು.
* ಆದಷ್ಟು ನಮ್ಮ ಆಹಾರ ಸೇವನೆ ಮಾಡುವ ಸಮಯವನ್ನು ಕ್ರಮಬದ್ಧ ವಾಗಿ ಅನುಸರಿಸಬೇಕು. ಈ ಎಲ್ಲಾ ವಿಧಾನಗಳನ್ನು ಅನುಸರಿಸುವುದ ರಿಂದ ಮೇಲೆ ಹೇಳಿದ ಸಮಸ್ಯೆಗಳು ಬರುವುದೇ ಇಲ್ಲ. ಹಾಗಾದರೆ ಮೇಲೆ ಹೇಳಿದಂತೆ ಮುಖದ ಮೇಲೆ ಕಾಣಿಸಿಕೊಳ್ಳುವಂತಹ ಬಂಗು ಇಂತಹ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳುವುದಕ್ಕೆ ಯಾವ ಕೆಲವು ಪರಿಹಾರ ಮಾರ್ಗಗಳನ್ನು ಮಾಡಿಕೊಳ್ಳಬೇಕು ಎಂದು ನೋಡುವುದಾದರೆ.
* ಕಕ್ಕೆ ಮರದ ಹೂವುಗಳನ್ನು ತಂದು ಅದನ್ನು ಸಂಪೂರ್ಣವಾಗಿ ನೆರಳಿನಲ್ಲಿ ಒಣಗಿಸಿ ಕೊಳ್ಳಬೇಕು ಆನಂತರ ಅದನ್ನು ಚೆನ್ನಾಗಿ ಪುಡಿ ಮಾಡಿ ಅದನ್ನು ಕೊಬ್ಬರಿ ಎಣ್ಣೆಯ ಜೊತೆ ಮಿಶ್ರಣ ಮಾಡಿ ಬಂಗು ಇರುವ ಜಾಗಕ್ಕೆ ಹಚ್ಚುತ್ತಾ ಬಂದರೆ ಎಷ್ಟೇ ಬಂಗು ಇದ್ದರೂ 7 ದಿನದಲ್ಲಿ ಗುಣಮುಖವಾಗುತ್ತದೆ. ಕೆಲವೊಂದಷ್ಟು ಜನರಿಗೆ 7 ದಿನದಲ್ಲಿ ಗುಣಮುಖವಾಗಲಿಲ್ಲ ಎಂದರೆ ಕಡ್ಡಾಯವಾಗಿ 21 ದಿನ ಹಚ್ಚುತ್ತಾ ಬನ್ನಿ.
* ಕೆಲವೊಂದಷ್ಟು ಜನರಿಗೆ ಈ ವಿಧಾನ ಸರಿಯಾದ ಫಲಿತಾಂಶ ಕೊಡಲಿಲ್ಲ ಎಂದರೆ ಅಂಥವರು ಪಂಚಕರ್ಮ ಚಿಕಿತ್ಸಾ ವಿಧಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಹೌದು ನಿಮ್ಮ ಹತ್ತಿರದ ಆಯುರ್ವೇದದ ಆಸ್ಪತ್ರೆಗಳಿಗೆ ಹೋಗಿ ಅಲ್ಲಿ ನೀವು ಈ ಚಿಕಿತ್ಸೆ ಪಡೆಯುವುದು ಉತ್ತಮ. ಹಾಗಾಗಿ ಈ ಸಮಸ್ಯೆ ಇದ್ದವರು ಮೇಲೆ ಹೇಳಿದ ಈ ವಿಧಾನಗಳನ್ನು ಅನುಸರಿಸುವುದರ ಮೂಲಕ ಈ ಸಮಸ್ಯೆಯನ್ನು ನೀವು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದಾಗಿದೆ.