ಜೀವ ಅಕ್ಷಯ್ 7 ಹಾಗೂ ಜೀವನ್ ಶಾಂತಿ ಇವೆರಡೂ ಕೂಡ LIC ಯಲ್ಲಿ ಬರುವಂತಹ ಪಾಲಿಸಿ ಗಳಾಗಿದ್ದು ಇವೆರಡನ್ನು ನೀವೇನಾದರೂ ಮಾಡಿಸಿದರೆ ಇದರಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆದು ಕೊಳ್ಳಬಹುದು ಹಾಗೂ ಈ ಪಾಲಿಸಿಯ ಲಾಭಗಳೇನು ಯಾರು ಈ ಪಾಲಿಸಿ ಮಾಡಿಸಿಕೊಳ್ಳಬಹುದು. ಹೀಗೆ ಈ ಪಾಲಿಸಿಗಳ ವಿಷಯಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಈ ಪಾಲಿಸಿ ಹೋಲ್ಡರ್ ಯಾವುದೋ ಕಾರಣದಿಂದ ಮರಣ ಹೊಂದಿ ದರೆ ಅವನು ಕಟ್ಟಿದ ಅಷ್ಟು ಹಣ ಪಾಲಿಸಿ ಹೋಲ್ಡರ್ ಯಾರನ್ನು ನಾಮಿನಿ ಕೊಟ್ಟಿರುತ್ತಾನೋ ಅವನಿಗೆ ಹಣ ಸೇರುತ್ತದೆ. ಹಾಗೂ ಅವರಿಗೆ ಲೈಫ್ ಟೈಮ್ ಪೆನ್ಶನ್ ಸಹ ಬರುತ್ತದೆ. ಹಾಗಾದರೆ ನೀವು ಈ ಎರಡು ಪಾಲಿಸಿಗಳನ್ನು ಮಾಡಿಸಬೇಕು ಎಂದರೆ ಯಾವುದೆಲ್ಲ ರೀತಿಯ ನಿಯಮಗಳನ್ನು ಪಾಲಿಸಬೇಕು ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಎಷ್ಟು ವರ್ಷದವರೆಗೆ ಈ ಪಾಲಿಸಿ ಅವಧಿ ಇರುತ್ತದೆ.
ಹಾಗೂ ಇದರ ಕೊನೆಯ ಅವಧಿ ಯಾವುದು ಹೀಗೆ ಈ ಎಲ್ಲ ವಿಚಾರ ವಾಗಿ ಸಂಬಂಧಿಸಿದ ಹಲವಾರು ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
• ಮೊದಲನೆಯದಾಗಿ ನ್ಯೂ ಜೀವನ್ ಶಾಂತಿ ಯೋಜನೆಯನ್ನು ನೀವು ಮಾಡಿಸಿಕೊಳ್ಳಬೇಕು ಎಂದರೆ ಯಾವುದೆಲ್ಲ ನಿಯಮಗಳನ್ನು ನೀವು ಅನುಸರಿಸಬೇಕು ಎನ್ನುವುದರ ಬಗ್ಗೆ ತಿಳಿಯೋಣ.
* ಈ ಪಾಲಿಸಿ ಪರ್ಚೇಸ್ ಮಾಡಿಕೊಳ್ಳುವುದಕ್ಕೆ ವಯಸ್ಸಿನ ಮಿತಿ ಕನಿಷ್ಠ 30 ವರ್ಷ ವಯಸ್ಸಾಗಿರಬೇಕು. ಹಾಗೂ ಗರಿಷ್ಟ 79 ವರ್ಷ ವಯಸ್ಸಿನ ಒಳಗಿನವರು ಈ ಪಾಲಿಸಿಯನ್ನು ಪಡೆದುಕೊಳ್ಳಬಹುದು.
* ಹಾಗೂ ನೀವು ಈ ಪಾಲಿಸಿಯನ್ನು ಎಷ್ಟು ವರ್ಷದವರೆಗೆ ಹಣ ಕಟ್ಟುತ್ತೀರಿ ಎಂದು ಆಯ್ಕೆ ಮಾಡಿಕೊಂಡಿರುತ್ತೀರೋ, ಅಷ್ಟು ದಿನ ಮುಗಿದ ನಂತರ ನಿಮಗೆ ಪೆನ್ಷನ್ ರೂಪವಾಗಿ ಹಣ ಬರಲು ಪ್ರಾರಂಭ ವಾಗುತ್ತದೆ.
* ಹಾಗೂ ನೀವು ಈ ಪಾಲಿಸಿಗೆ ಯಾರನ್ನ ಬೇಕಾದರೂ ಸೇರಿಸಿಕೊಳ್ಳ ಬಹುದು ಉದಾಹರಣೆಗೆ ನಿಮ್ಮ ಹೆಂಡತಿ ನಿಮ್ಮ ಮಕ್ಕಳು ಹೀಗೆ ಇವರಲ್ಲಿ ಒಬ್ಬರನ್ನು ಈ ಪಾಲಿಸಿಗೆ ಜಾಯಿನ್ ಮಾಡಿಕೊಳ್ಳಬಹುದು.
* ಈ ಪಾಲಿಸಿಯಲ್ಲಿ ನೀವು ಹಣ ಕಟ್ಟಲು ಪ್ರಾರಂಭವಾದ ಮೂರು ತಿಂಗಳ ಬಳಿಕ ನೀವು ಲೋನ್ ಪಡೆದುಕೊಳ್ಳಬೇಕು ಎಂದರೆ ಅರ್ಜಿ ಹಾಕಿ ಲೋನ್ ಪಡೆದುಕೊಳ್ಳಬಹುದು.
* ಹಾಗೂ ಈ ಪಾಲಿಸಿಯಲ್ಲಿ ನಿಮಗೆ ಎರಡು ರೀತಿಯ ಆಯ್ಕೆಗಳು ಇರುತ್ತದೆ ಅವೆರಡರಲ್ಲಿ ಯಾವುದು ಉತ್ತಮ ಎನಿಸುತ್ತದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು ಒಮ್ಮೆ ಆಯ್ಕೆ ಮಾಡಿಕೊಂಡರೆ ಮತ್ತೆ ಬದಲಾಯಿಸುವಂತಿಲ್ಲ.
* ನೀವೇನಾದರೂ ಈ ಪಾಲಿಸಿ ನನಗೆ ಇಷ್ಟವಿಲ್ಲ ಇದನ್ನು ಕ್ಯಾನ್ಸಲ್ ಮಾಡುತ್ತೇನೆ ಎಂದರೆ ಮೂರು ತಿಂಗಳ ನಂತರ ನೀವು ಇದನ್ನು ಕ್ಯಾನ್ಸಲ್ ಮಾಡಿ ಕಟ್ಟಿದಂತಹ ಅಷ್ಟು ಹಣವನ್ನು ಪಡೆಯಬಹುದು.
• ಎರಡನೆಯದಾಗಿ ಜೀವನ್ ಅಕ್ಷಯ 7 ಯೋಜನೆಯನ್ನು ನೀವು ಮಾಡಿಸಿಕೊಳ್ಳಬೇಕು ಎಂದರೆ ಯಾವುದೆಲ್ಲ ನಿಯಮಗಳನ್ನು ನೀವು ಅನುಸರಿಸಬೇಕು ಎಂದರೆ.
* ಈ ಪಾಲಿಸಿ ಪರ್ಚೇಸ್ ಮಾಡಿಕೊಳ್ಳುವುದಕ್ಕೆ ವಯಸ್ಸಿನ ಮಿತಿ ಕನಿಷ್ಠ 30 ವರ್ಷ ವಯಸ್ಸಾಗಿರಬೇಕು. ಹಾಗೂ ಗರಿಷ್ಟ 85 ವರ್ಷ ವಯಸ್ಸಿನ ಒಳಗಿನವರು ಈ ಪಾಲಿಸಿಯನ್ನು ಪಡೆದುಕೊಳ್ಳಬಹುದು.
* ಜೀವನ್ ಅಕ್ಷಯ ಯೋಜನೆಯಲ್ಲಿ ನಿಮಗೆ ತಕ್ಷಣವೇ ಪೆನ್ಷನ್ ಹಣ ಬರುತ್ತದೆ.
* ಹಾಗೂ ನೀವು ಈ ಪಾಲಿಸಿಗೆ ಯಾರನ್ನ ಬೇಕಾದರೂ ಸೇರಿಸಿಕೊಳ್ಳ ಬಹುದು ಉದಾಹರಣೆಗೆ ನಿಮ್ಮ ಹೆಂಡತಿ ನಿಮ್ಮ ಮಕ್ಕಳು ಹೀಗೆ ಇವ ರಲ್ಲಿ ಒಬ್ಬರನ್ನು ಈ ಪಾಲಿಸಿಗೆ ಆಯ್ಕೆ ಮಾಡಿಕೊಳ್ಳಬಹುದು.
* ಇದರಲ್ಲೂ ಕೂಡ 3 ತಿಂಗಳ ನಂತರ ನೀವು ಲೋನ್ ಪಡೆಯಬಹುದು
* ಈ ಪಾಲಿಸಿಯಲ್ಲಿ 10 ಆಯ್ಕೆಗಳು ಇರುತ್ತದೆ ಇದರಲ್ಲಿ ಯಾವುದು ನಿಮಗೆ ಉತ್ತಮ ಎನಿಸುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು.
* ಈ ಪಾಲಿಸಿಯಲ್ಲಿಯೂ ಕೂಡ 3 ತಿಂಗಳ ನಂತರ ನೀವು ಇದನ್ನು ಕ್ಯಾನ್ಸಲ್ ಮಾಡಿಸಿ ಆನಂತರ ಹಣ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.