ವಾಸ್ತು ಶಾಸ್ತ್ರದಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಅಡುಗೆ ಮನೆಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅಡುಗೆ ಮನೆಯಲ್ಲಿ ಕೆಲಸ ಮಾಡು ವಾಗ ಎಲ್ಲಾ ವಿಷಯಗಳ ಕಡೆಗೂ ಗಮನ ಹರಿಸುವುದು ಮುಖ್ಯವಾಗಿ ರುತ್ತದೆ. ಇಲ್ಲವಾದರೆ ಮನೆಯಲ್ಲಿ ವಾಸ್ತುದೋಷಗಳು ಹೆಚ್ಚಾಗುತ್ತವೆ. ಜೊತೆಗೆ ಬೇರೆ ರೀತಿಯ ತೊಂದರೆಗಳು ಶುರುವಾಗುತ್ತವೆ. ಹಾಗಾದರೆ ಆ ತಪ್ಪುಗಳು ಯಾವುವು ನೋಡೋಣ ಬನ್ನಿ.
* ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಎಂದಿಗೂ ಚಪ್ಪಲಿ ಯನ್ನು ಧರಿಸಬಾರದು. ಇದರಿಂದ ಆರ್ಥಿಕ ನಷ್ಟಗಳು ಉಂಟಾಗುತ್ತದೆ.
* ವಾಸ್ತು ಶಾಸ್ತ್ರದ ಪ್ರಕಾರ ಚಾಕು ಕತ್ತರಿ ಮತ್ತು ಇತರೆ ಹರಿತವಾದ ಮತ್ತು ಚೂಪಾದ ವಸ್ತುಗಳನ್ನು ಅಡುಗೆ ಮನೆಯಗೋಡೆಗೆ ನೇತು ಹಾಕಬಾರದು.
* ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಆಹಾರ ಸೇವನೆ ಮಾಡುವುದು ಅನೇಕ ರೀತಿಯ ಗ್ರಹ ದೋಷಗಳಿಂದ ಮುಕ್ತಿಯನ್ನು ನೀಡುತ್ತದೆ.
* ಆದರೆ ಈ ನಿಯಮಗಳನ್ನು ನೆನಪಿಡಿ ಅಡುಗೆಮನೆಯ ಮಧ್ಯದಲ್ಲಿ ಎಂದಿಗೂ ಕೂತುಊಟ ಮಾಡಬಾರದು.
* ಅಲ್ಲದೆ ತಿನ್ನುವಾಗ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕೂರಬಾರದು
* ಇನ್ನೊಂದು ಮುಖ್ಯವಾದ ವಿಷಯವೆಂದರೆ. ರಾತ್ರಿ ಮಲಗೋ ಮುನ್ನ ಒಲೆ ಅಥವಾ ಗ್ಯಾಸ್ ಸ್ಟವ್ ನ ಎಂದಿಗೂ ಸ್ವಚ್ಛವಾಗಿ ಇಡಬೇಕು. ಇಲ್ಲವಾದರೆ ತಾಯಿ ಅನ್ನಪೂರ್ಣ ದೇವಿಗೆ ಕಿರಿಕಿರಿ ಉಂಟಾಗುತ್ತದೆ. ಹಾಗೂ ಆಹಾರ ಧಾನ್ಯಗಳ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.
* ವಾಸ್ತು ಶಾಸ್ತ್ರದ ಪ್ರಕಾರ ಲಟ್ಟಣಿಗೆ ಹಾಗೂ ಮಣೆಗಳು ಎಂದಿಗೂ ಸದ್ದು ಮಾಡಬಾರದು. ಈ ಸದ್ದಿನಿಂದ ಮನೆಯಲ್ಲಿ ಸಮಸ್ಯೆಗಳು ಶುರುವಾಗುತ್ತವೆ.
* ಜೊತೆಗೆ ಆರ್ಥಿಕ ನಷ್ಟ ಕೂಡ ಎದುರಾಗುತ್ತದೆ.
* ಲಟ್ಟಣಿಗೆ ಹಾಗೂ ಚಪಾತಿ ಮಣೆಯನ್ನು ಖರೀದಿಸಲು ಬುಧವಾರ ಮತ್ತು ಗುರುವಾರ ಶುಭ ಎಂದು ಪರಿಗಣಿಸಲಾಗಿದೆ. ಹಾಗೂ ಶನಿವಾರ ಮತ್ತು ಸೋಮವಾರ ಅಶುಭ ಎನ್ನಲಾಗಿದೆ.
* ಕಪ್ಪು ಬಣ್ಣದ ಲಟ್ಟಣಿಗೆ ಅಥವಾ ಮಣೆಯನ್ನು ಅಪ್ಪಿತಪ್ಪಿಯು ಅಡುಗೆ ಮನೆಯಲ್ಲಿ ಬಳಸುವುದು ಒಳ್ಳೆಯದಲ್ಲ. ಇದರಿಂದ ಶನಿದೋಷ ಹಾಗೂ ದುರದೃಷ್ಟ ಬೆನ್ನೇರುತ್ತದೆ.
* ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಈರುಳ್ಳಿಯನ್ನು ಬಳಸಲಾಗುತ್ತದೆ, ಹಾಗೂ ಮಾಂಸ, ಮೀನು ಮುಂತಾದ ತಾಮಸಿಕ ಆಹಾರವನ್ನು ತಯಾರಿಸಲಾಗುತ್ತದೆ.
* ಹಾಗಾಗಿ ದೇವರ ಫೋಟೋ ಅಥವಾ ದೇವರ ವಿಗ್ರಹವನ್ನು ಅಡುಗೆ ಮನೆಯಲ್ಲಿ ಇಡಬಾರದು ಹೀಗೆ ಮಾಡಿದರೆ ಲಕ್ಷ್ಮಿ ದೇವಿ ಮುನಿಸಿಕೊಳ್ಳುತ್ತಾಳೆ.
* ಅಡುಗೆ ಮನೆಯಲ್ಲಿ ಎಂಜಲು ಪಾತ್ರೆಯನ್ನು ಎಂದಿಗೂ ಇಡಬಾರದು ಅದನ್ನು ಮನೆಯಿಂದ ಹೊರಗಿಡಬೇಕು ಇಲ್ಲವಾದಲ್ಲಿ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ವಂಚಿತರಾಗುತ್ತೀರಿ.
* ಹಾಲನ್ನು ಎಂದಿಗೂ ತೆರೆದಿಡಬಾರದು ಯಾವಾಗಲೂ ಒಂದು ತಟ್ಟೆಯಿಂದ ಮುಚ್ಚಿಡಬೇಕು. ಈ ರೀತಿ ಮುಚ್ಚಿಡುವುದರಿಂದ ತಾಯಿ ಲಕ್ಷ್ಮಿ ದೇವಿ ಸದಾ ಕಾಲ ನಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ ಎನ್ನುವ ನಂಬಿಕೆ ಇದೆ.
* ವಾಸ್ತು ಶಾಸ್ತ್ರದ ಪ್ರಕಾರ ಪ್ರತಿ ಬಾರಿ ಆಹಾರ ತಯಾರಿಸಿದಾಗ ಆ ಆಹಾರವನ್ನು ಒಂದು ಶುದ್ಧ ಪಾತ್ರೆಯಲ್ಲಿ ಇರಿಸಬೇಕು. ಈ ರೀತಿ ಇಡುವುದರಿಂದ ಅನ್ನಪೂರ್ಣೇಶ್ವರಿಯ ಆಶೀರ್ವಾದ ಸಿಗುತ್ತದೆ ಹಾಗೂ ಮನೆಯಲ್ಲಿ ಯಾವುದೇ ಕಾರಣಕ್ಕೂ ಆಹಾರದ ಕೊರತೆ ಉಂಟಾಗುವುದಿಲ್ಲ.
* ಆಹಾರ ತಯಾರಿಸಿದ ನಂತರ ಒಂದು ಶುದ್ಧವಾದ ತಟ್ಟೆಯಲ್ಲಿ ಆಹಾರ ವನ್ನು ಹಸುವಿಗೆ ನೀಡಿ ನಂತರ ಮನೆಯವರು ಸೇವಿಸಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸದಾ ಕಾಲ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ.
* ಇದು ಸಾಧ್ಯವಾಗದಿದ್ದಲ್ಲಿ ನೀವು ಆಹಾರ ಸೇವಿಸುವ ಮುನ್ನ ಒಂದು ತಟ್ಟೆಯಲ್ಲಿ ಆಹಾರವನ್ನು ಹಾಕಿ ಪಕ್ಕದಲ್ಲಿ ಇಡಬೇಕು.
* ಅಡುಗೆ ಮನೆಯ ಮುಂಭಾಗದಲ್ಲಿ ಸ್ನಾನ ಗೃಹ ಎಂದಿಗೂ ನಿರ್ಮಿಸ ಬಾರದು. ಅಡುಗೆಮನೆ ಮತ್ತು ಸ್ನಾನ ಗೃಹ ಮುಖಾಮುಖಿ ಆದರೆ ವಾಸ್ತುದೋಷ ಸೃಷ್ಟಿಯಾಗುತ್ತದೆ. ಆದ್ದರಿಂದ ಅಡುಗೆ ಮನೆ ಹಾಗೂ ಸ್ನಾನ ಗೃಹ ಆದಷ್ಟು ಸ್ವಲ್ಪ ದೂರ ಇರುವುದು ಉತ್ತಮ.