ಹಣಕಾಸಿನ ಸಮಸ್ಯೆ ಎನ್ನುವುದು ಯಾರನ್ನು ಬಿಡುವುದಿಲ್ಲ ಆದರೆ ಬಡವರು ಹಾಗೂ ಮಧ್ಯಮ ವರ್ಗದವರು ಆರ್ಥಿಕ ಸಮಸ್ಯೆಯಿಂದ ಹೆಚ್ಚಾಗಿ ನರಳುತ್ತಾರೆ. ಮನುಷ್ಯನಿಗೆ ತನ್ನ ಜೀವನದ ಎಲ್ಲ ಸಮಸ್ಯೆಗಿಂತ ದುಡ್ಡಿನ ಸಮಸ್ಯೆ ದೊಡ್ಡದು ಎನಿಸುತ್ತದೆ ಆದರೆ ದುಡ್ಡು ಬಂದ ನಂತರವೂ ಕೂಡ ಸಮಸ್ಯೆಗಳು ನಿಲ್ಲುವುದಿಲ್ಲ.
ಆರೋಗ್ಯ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಈ ರೀತಿ ನಿಮಗೆ ಜೀವನದಲ್ಲಿ ಬಹಳಷ್ಟು ಸಮಸ್ಯೆ ಇದ್ದರೆ ಮನೆಯಲ್ಲಿ ಕ’ಲ’ಹ, ಶಾಂತಿ ಇಲ್ಲದಿರುವುದು, ಮನೆ ಮೇಲೆ ಕೆ’ಟ್ಟ ದೃಷ್ಟಿ ಬಿದ್ದಿರುವುದು, ನರ ದೃಷ್ಟಿ ದೋ’ಷ, ಮಾಟ ಮಂತ್ರ ಪ್ರಯೋಗ ಆಗಿರುವುದು ಈ ರೀತಿಯ ಅನುಮಾನಗಳಿದ್ದರೆ ಅಥವಾ ಎಷ್ಟೇ ದುಡಿದರು ಹಣ ನಿಲ್ಲುತ್ತಿಲ್ಲ ಎನ್ನುವ ಸಮಸ್ಯೆ ಇದ್ದರೆ ಇದೆಲ್ಲದರ ಪರಿಹಾರಕ್ಕಾಗಿ ಒಂದು ಸುಲಭ ತಂತ್ರ ಮಾಡಿ ಸಾಕು.
ಹಿಂದಿನ ಕಾಲದಲ್ಲಿ ಮಳೆ ಬೇಕಿದ್ದರೂ, ಗಾಳಿ ಬೇಕಿದ್ದರೂ ಮಂತ್ರಗಳ ಉಚ್ಚಾರ ಮಾಡಿ ಪಡೆಯುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಮಂತ್ರಗಳ ಶಕ್ತಿಗಿಂತ ತಂತ್ರಗಳ ಶಕ್ತಿಯು ಹೆಚ್ಚು ಕೆಲಸ ಮಾಡುತ್ತದೆ ಎಂದೇ ಹೇಳಬಹುದು. ಸತ್ಯಯುಗವು ಕಡಿಮೆ ಆದಂತೆ ಮಂತ್ರಗಳ ಪ್ರಭಾವ ಕಡಿಮೆಯಾಗಿ ತಂತ್ರಗಳ ಅಳವಡಿಕೆ ಹೆಚ್ಚಾಗಿದೆ.
ಈಗ ತಂತ್ರಗಳು ಅಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡಿ ಫಲ ಕೊಡುತ್ತವೆ. ಇಂತಹ ಒಂದು ಬಲಿಷ್ಠವಾದ ತಂತ್ರದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಇದನ್ನು ಯಾವುದೇ ದಿನ ಬೇಕಾದರೂ ಮಾಡಬಹುದು, ಮಾಡುವ ಸಮಯದಲ್ಲಿ ನಿಮ್ಮನ್ನು ಯಾರು ಡಿಸ್ಟರ್ಬ್ ಮಾಡಬಾರದು ಅಷ್ಟೇ.
ಹಾಗಾಗಿ ಇದನ್ನು ಮಾಡುವಾಗ ಮೊದಲೇ ನಿಮ್ಮ ಮನೆಯ ಜನರಿಗೆ ಅಡ್ಡಿಪಡಿಸಿದಂತೆ ಹೇಳಿಬಿಡಿ ಅಥವಾ ಯಾರು ಇಲ್ಲದ ಸಮಯದಲ್ಲಿ ಮಾಡಿದರೆ ಇನ್ನು ಒಳ್ಳೆಯದು. ಇದಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುವ ಅವಶ್ಯಕತೆಯೂ ಇಲ್ಲ ನಿಮ್ಮ ಮನೆಯಲ್ಲಿ ಇರುವ ವಸ್ತುಗಳನ್ನು ಉಪಯೋಗಿಸಿಕೊಂಡು ಇದನ್ನು ಮಾಡಬಹುದು.
ಮಾಡುವ ಮುನ್ನ ಬಹಳ ನಂಬಿಕೆ ಇರಬೇಕು ಹಾಗೂ ಈಗ ನಾನು ಮಾಡುತ್ತಿರುವ ತಂತ್ರದಿಂದ ನನಗೆ ಫಲ ಸಿಗುತ್ತದೆ ಎನ್ನುವ ಪಾಸಿಟಿವ್ ಮೈಂಡ್ ಇರಬೇಕು. ಪ್ರಯೋಗ ಮಾಡುವ ಮುನ್ನ ಮನೆಯನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ, ಮಡಿಯುಟ್ಟು ಭಕ್ತಿಯಿಂದ ನಿಮ್ಮ ಕುಲದೈವ ಹಾಗೂ ಇಷ್ಟ ದೇವರಲ್ಲಿ ಬೇಡಿಕೊಳ್ಳಿ.
ಮತ್ತು ನಿಮಗೆ ಯಾವುದೇ ರೀತಿಯ ದೋ’ಷಗಳಿದ್ದರೂ ಪರಿಹಾರವಾಗಲಿ ಅಥವಾ ಕೆ’ಟ್ಟ ದೃಷ್ಟಿಗಳ ಮತ್ತು ಪ್ರಯೋಗಗಳ ಪ್ರಭಾವ ಬಿದ್ದಿದ್ದರೆ ಪರಿಹಾರವಾಗಲಿ, ಹಣಕಾಸಿನ ಸಮಸ್ಯೆಗಳು ಹೋಗಿ ಹೆಚ್ಚಿನ ಧನಾಕರ್ಷಣೆ ಉಂಟಾಗುವಂತೆ ಆಗಲಿ ಎಂದು ಹೇಳಿಕೊಂಡು ಇದನ್ನು ಆರಂಭಿಸಿ.
ಒಂದು ಬಿಳಿ ಬಟ್ಟೆಯಲ್ಲಿ ಒಂದು ಹಿಡಿ ಉಪ್ಪು ತೆಗೆದುಕೊಳ್ಳಿ. ಆ ಉಪ್ಪಿನ ಮೇಲೆ 5 ಅಥವಾ 9 ಬೇವಿನ ಎಲೆಯನ್ನು ಹಾಕಿ ಅದರ ಮೇಲೆ 51 ರೂ. ಕಾಣಿಕೆ ಇಡಿ. ಅರಿಶಿಣ ಕುಂಕುಮ ಅಕ್ಷತೆ ಹೂವು ಇಟ್ಟು ಪೂಜೆ ಮಾಡಿ ಗಂಟು ಕಟ್ಟಿ ಆ ಗಂಟನ್ನು ಮನೆ ಮುಂದೆ ಕಟ್ಟಿ. 11 ದಿನಗಳ ಕಾಲ ಪ್ರತಿ ದಿನವೂ ಇದಕ್ಕೆ ಹೂವು ನೀರು ಇಟ್ಟು ಭಕ್ತಿಯಿಂದ ಪೂಜೆ ಮಾಡಿ ಅಂದುಕೊಂಡ ಸಂಕಲ್ಪ ನೆರವೇರಬೇಕು ಎಂದು ವಿನರ್ಮವಾಗಿ ಕೇಳಿಕೊಳ್ಳಿ.
11 ದಿನಗಳಾದ ಬಳಿಕ ಅದನ್ನು ಬಿಚ್ಚಿ 51 ರೂಪಾಯಿಯನ್ನು ತೆಗೆದುಕೊಂಡು ನೀವು ಮನೆಯಲ್ಲಿ ಹಣ ಇಡುವ ಡಬ್ಬದಲ್ಲಿ ಹಾಕಿಡಿ. ಉಳಿದ ವಸ್ತುಗಳನ್ನು ಹರಿಯುವ ನೀರಿನಲ್ಲಿ ಬಿಟ್ಟುಬಿಡಿ ನಂತರ ನಿಮ್ಮ ಜೀವನದಲ್ಲಾಗುವ ಬದಲಾವಣೆಗಳನ್ನು ಕಂಡು ನೀವೇ ಆಶ್ಚರ್ಯ ಚಕಿತರಾಗುತ್ತೀರಿ.