Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮನೆಗೆ ಎಷ್ಟು ಬಾಗಿಲು, ಎಷ್ಟು ಕಿಟಕಿ ಇರಬೇಕು ಹಾಗೂ ಯಾವ ದಿಕ್ಕಿನಲ್ಲಿರಬೇಕು ಗೊತ್ತಾ.? ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ ನೋಡಿ.!

Posted on November 18, 2023 By Kannada Trend News No Comments on ಮನೆಗೆ ಎಷ್ಟು ಬಾಗಿಲು, ಎಷ್ಟು ಕಿಟಕಿ ಇರಬೇಕು ಹಾಗೂ ಯಾವ ದಿಕ್ಕಿನಲ್ಲಿರಬೇಕು ಗೊತ್ತಾ.? ಈ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತದೆ ನೋಡಿ.!

 

ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆದ ಒಂದು ಸ್ವಂತ ಮನೆ ಕಟ್ಟಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ. ಮನೆ ಇಲ್ಲದಿದ್ದರೆ ನಮ್ಮ ಆದಾಯದಲ್ಲಿ ಅತಿ ದೊಡ್ಡ ಭಾಗವನ್ನು ಬಾಡಿಗೆಗೆ ಕಟ್ಟಬೇಕು ಹಾಗಾಗಿ ಮನೆ ಒಂದು ಅತ್ಯಮೂಲ್ಯ ಆಸ್ತಿ ಅಂತಲೂ ಹೇಳಬಹುದು.

ಆದರೆ ಈ ಮನೆ ಮೂಲಭೂತ ಸೌಕರ್ಯವನ್ನು ಹೊಂದಿರಬೇಕು ಎನ್ನುವುದು ಮಾತ್ರವಲ್ಲದೆ ನಮ್ಮ ಅನುಕೂಲತೆಗೆ ಬೇಕಾದ ಎಲ್ಲಾ ಸವಲತ್ತುಗಳು ಹೊಂದಿರಬೇಕು, ಜೀವನಪೂರ್ತಿ ಆ ಮನೆಯಲ್ಲೇ ಕುಟುಂಬದ ಜೊತೆ ಸಂತೋಷವಾಗಿ ಜೀವನ ನಡೆಸಬೇಕು ಎನ್ನುವುದೇ ಮನೆ ಕಟ್ಟುವವರ ಆಸೆ.

ಆದರೆ ಇದೆಲ್ಲಾ ಆಗಬೇಕು ಎಂದರೆ ಮನೆ ಕಟ್ಟುವಾಗಲೇ ವ್ಯವಸ್ಥಿತವಾಗಿ ಕಟ್ಟಬೇಕು ಹಾಗೂ ವಾಸ್ತು ಎನ್ನುವ ವಿಷಯವನ್ನು ಮರೆಯಬಾರದು. ಕೆಲವು ಸಲ ವಾಸ್ತು ಸರಿ ಇಲ್ಲ ಎಂದರೆ ಖಂಡಿತವಾಗಿ ನೆಮ್ಮದಿ ಇರುವುದಿಲ್ಲ. ಮೊದಲು ವಾಸ್ತುವನ್ನು ಬಹಳ ನಿರ್ಲಕ್ಷಿಸಲಾಗುತ್ತಿತ್ತು. ಬಳಿಕ ಅದರ ಬಗೆಗೆ ಆಗಿರುವ ಸಂಶೋಧನೆಗಳನ್ನು ನಂಬಿ ಪುರಸ್ಕರಿಸಲಾಗುತ್ತಿದೆ.

ವಾಸ್ತು ಪ್ರಕಾರವಾಗಿ ಮನೆ ಕಟ್ಟಿಕೊಳ್ಳುವರು ಬಹಳ ನೆಮ್ಮದಿಯಾಗಿ ಆ ಮನೆಗಳಲ್ಲಿ ವಾಸಿಸುತ್ತಿರುವುದು ಹಾಗೂ ವಾಸ್ತು ದೋಷ ಗೃಹಗಳಲ್ಲಿ ವಾಸಿಸುವವರು ನಾನಾ ಬಗೆಯ ಕ’ಷ್ಟಗಳಿಗೆ ಈಡಾಗುತ್ತಿರುವುದು ಅನೇಕ ಉದಾಹರಣೆಗಳಿಂದ ಮನವರಿಕೆಯಾಗಿದೆ. ಹಾಗಾದರೆ ವಾಸ್ತು ಪ್ರಕಾರವಾಗಿ ಮನೆ ಹೇಗಿರಬೇಕು ಎಂದರೆ ಇದು ಬಹಳ ವಿಸ್ತಾರವಾದ ವಿಷಯ ಆದರೆ ಈ ಅಂಕಣದಲ್ಲಿ ಅದರ ಕೆಲ ಪ್ರಮುಖ ವಿಷಯದ ಬಗ್ಗೆ ಹೇಳುತ್ತಿದ್ದೇವೆ.

ಮನೆಗೆ ಗೋಡೆಗಳು ಮಾತ್ರವಲ್ಲದೆ ಕಿಟಕಿ ಬಾಗಿಲುಗಳು ಕೂಡ ಬಹಳ ಮುಖ್ಯ ಹೊರಗಿನಿಂದ ಗಾಳಿ, ಬೆಳಕು ಅದೃಷ್ಟವನ್ನು ಮನೆಗೆ ತರುವ ಹಾಗೂ ಮನೆಯಲ್ಲಿರುವ ನಕರಾತ್ಮಕತೆಯನ್ನು ಹೊರಗೆ ಕಳುಹಿಸುವ ವಾಹಿನಿಯಾದ ಈ ಕಿಟಕಿ ಬಾಗಿಲುಗಳು ಹೇಗಿರಬೇಕು ಎನ್ನುವುದರ ಬಗ್ಗೆ ವಾಸ್ತು ಹೀಗೆ ಹೇಳುತ್ತದೆ.

* ಮನೆಯಲ್ಲಿ ಯಾವಾಗಲೂ ಕಿಟಕಿ ಹಾಗೂ ಬಾಗಿಲುಗಳ ಸಂಖ್ಯೆಯನ್ನು ಪ್ರತ್ಯೇಕವಾಗಿ ಲೆಕ್ಕಕ್ಕೆ ತೆಗೆದುಕೊಂಡು ಅವುಗಳನ್ನು ಸಮ ಸಂಖ್ಯೆಯಲ್ಲಿ ಇಡಬೇಕು. ಬೆಸ ಸಂಖ್ಯೆಯಲ್ಲಿ ಇದ್ದರೆ ಕಷ್ಟಗಳು ಹೆಚ್ಚು ಎಂದು ಹೇಳಲಾಗುತ್ತದೆ. ಮತ್ತು ಆ ಮನೆ ಯಾವುದಾದರೂ ಒಂದು ವಿಷಯದಿಂದಾಗಿ ಕುಖ್ಯಾತಿಗೆ ಒಳಗಾಗುತ್ತದೆ. ಎಲ್ಲರೂ ಆ ಘಟನೆಯನ್ನು ಉದ್ದೇಶಿಸಿ ಮನೆಯನ್ನು ತೋರಿಸಿ ಮಾತನಾಡಲು ಆರಂಭಿಸುತ್ತಾರೆ, ಅಂತಹ ಘಟನೆಗಳು ನಡೆಯುತ್ತವೆ ಎಂದು ಹೇಳಲಾಗುತ್ತದೆ.

* ನಾವು ಒಂದೇ ಕಟ್ಟಡದಲ್ಲಿ ವಾಸವಿದ್ದು ಅನೇಕ ಮನೆಗಳನ್ನು ಬಾಡಿಗೆ ಕೊಟ್ಟಿದ್ದೇವೆ ಎಂದರೆ ನಾವು ವಾಸಿಸುವಂತಹ ಮನೆಯಲ್ಲಿ ಎಷ್ಟು ಕಿಟಕಿ ಬಾಗಿಲು ಇರುತ್ತವೆ ಅವುಗಳನ್ನು ಮಾತ್ ಪರಿಗಣನೆಗೆ ತೆಗೆದುಕೊಳ್ಳಬೇಕು.
* ಡ್ಯುಪ್ಲೆಕ್ಸ್, ತ್ರಿಪ್ಲೆಕ್‌ಸ್ ಮನೆಗಳಲ್ಲಿ ವಾಸಿಸುವವರು ಪೂರ್ತಿ ಮನೆನಲ್ಲಿರುವ ಕಿಟಕಿ ಹಾಗೂ ಬಾಗಿಲುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು.

* ಇನ್ನು ಮುಖ್ಯ ಬಾಗಿಲು ಎಲ್ಲಿರಬೇಕು ಎಂದು ನೋಡುವುದಾದರೆ ಮನೆ ಬೌಂಡರಿಗೆ 32 ಪಾದಗಳಿರುತ್ತವೆ, ಅದರಲ್ಲಿ ಬಲಗಡೆಯಿಂದ ಒಳಗಿನಿಂದ ನಿಂತು ಹೊರಗಿನ ಕಡೆಗೆ ಲೆಕ್ಕ ಹಾಕಿದಾಗ ಪೂರ್ವದಿಂದ ಲೆಕ್ಕ 3&4 ಪಾದವು, ದಕ್ಷಿಣದಲ್ಲಿ 3&4 ನೇ ಪಾದವು ಪಶ್ಚಿಮದಲ್ಲಿ 4&5 ಪಾದವು, ಉತ್ತರದಿಂದ ಮ 3,4 & 5 ‌ನೇ ಪಾದವು ಹೆಚ್ಚು ಸೂಕ್ತ ಎಂದು ಹೇಳಲಾಗುತ್ತದೆ.

* ಯಾವುದೇ ಭಾಗವನ್ನು ಒಂಬತ್ತು ವಿಭಾಗ ಮಾಡಿ ಬಲಗಡೆಯಿಂದ ಲೆಕ್ಕ ಹಾಕುತ್ತು ಬಂದಾಗ ಸೂರ್ಯನಿಂದ ರಾಹು ಕೇತುವರಿಗೂ ಇರುವ ಸಾಲಿನಲ್ಲಿ ನಾಲ್ಕನೇ ಸ್ಥಾನಕ್ಕೆ ಬರುವ ಬುಧನ ಪಾದದ ಭಾಗ‌ವು ಯಾವುದೇ ಬಾಗಿಲು ಇಡುವುದಕ್ಕೆ ಸೂಕ್ತ ಸ್ಥಳ ಎಂದು ಹೇಳಲಾಗುತ್ತದೆ.
*10,20,30 ಈ ರೀತಿ ಸೊನ್ನೆ ಬರುವ ಸಂಖ್ಯೆಗಳು ಶುಭವಲ್ಲ ಎಂದು ಕೆಲವರು ಭಾವಿಸುತ್ತಾರೆ. ಆದರೆ ಇದು ತಪ್ಪು. ಇವುಗಳು ಸಮಸಂಖ್ಯೆಯಾಗಿರುವುದರಿಂದ ಯಾವುದೇ ದೋಷಗಳಿರುವುದಿಲ್ಲ

* ಉಚ್ಚ ಸ್ಥಾನಗಳು ಎಂದು ಹೇಳಲಾಗುವ ಪೂರ್ವ ಈಶಾನ್ಯ, ಉತ್ತರ ಈಶಾನ್ಯ, ಪಶ್ಚಿಮ ವಾಯುವ್ಯ, ದಕ್ಷಿಣ ಆಜೇಞ ಈ ನಾಲ್ಕು ಭಾಗಗಳು ಕೂಡ ಬಾಗಿಲು ಹಾಗೂ ಕಿಟಕಿ ಇಡುವುದಕ್ಕೆ ಸೂಕ್ತ ಎಂದು ಹೇಳಲಾಗುತ್ತದೆ.
* ದಕ್ಷಿಣ ನೈರುತ್ಯ ಅಥವಾ ಪಶ್ಚಿಮ ನೈರುತ್ಯದಲ್ಲಿ ಯಾವುದೇ ಕಾರಣಕ್ಕೂ ಕಿಟಕಿ ಅಥವಾ ಬಾಗಿಲು ಓಪನಿಂಗ್ ಇರಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

 

Useful Information

Post navigation

Previous Post: ಪತಿ-ಪತ್ನಿಯರಿಗೆ ವಿಶೇಷ ಸೂಚನೆಗಳು, ಪ್ರತಿ ದಂಪತಿಗಳು ತಿಳಿದುಕೊಳ್ಳಬೇಕಾದ ವಿಷಯ ಇದು, ಇದನ್ನು ಅರಿತವರ ಮನೆ ನಂದನವನವಾಗುತ್ತದೆ.!
Next Post: ತಲೆ ಕೂದಲಿಗೆ ಈ ಎಣ್ಣೆ ಹಚ್ಚಿ ನೋಡಿ ಎಲ್ಲರೂ ಆಶ್ಚರ್ಯ ಪಡುವಂತೆ ನಿಮ್ಮ ತಲೆ ಕೂದಲು ಉದ್ದವಾಗುತ್ತದೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore