Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸದಾ ಆರೋಗ್ಯವಾಗಿರಲು ಬಯಸುವವರು ಹಿರಿಯರು ಹೇಳಿರುವ ಈ ಸಲಹೆಗಳನ್ನು ಪಾಲಿಸಿ.!

Posted on November 30, 2023 By Kannada Trend News No Comments on ಸದಾ ಆರೋಗ್ಯವಾಗಿರಲು ಬಯಸುವವರು ಹಿರಿಯರು ಹೇಳಿರುವ ಈ ಸಲಹೆಗಳನ್ನು ಪಾಲಿಸಿ.!

 

* ದ್ರಾಕ್ಷಿಯನ್ನು ತಿಂದ ತಕ್ಷಣ ನೀರು ಕುಡಿಯಬೇಡಿ ಇದು ಕಾಲರ ರೋಗಕ್ಕೆ ಕಾರಣವಾಗುತ್ತದೆ.
* ಕಾಲಿನ ಹೆಬ್ಬೆರಳುಗಳಿಗೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕಣ್ಣಿನ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರ ಆಗುತ್ತವೆ.
* ಹಾಲು ಕುಡಿದ ತಕ್ಷಣ ಕರ್ಜೂರ ತಿನ್ನುವುದರಿಂದ ಮೆದುಳು ಚುರುಕಾಗುತ್ತದೆ.
* ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉಗುರುಗಳು ದುರ್ಬಲವಾಗುತ್ತವೆ.

* ತಣ್ಣೀರು ಕುಡಿದ ತಕ್ಷಣ ಟೀ, ಕಾಫಿ ಕುಡಿಯಬೇಡಿ
* ಬೆಳ್ಳುಳ್ಳಿ ಜಜ್ಜಿ ಆ ರಸದಿಂದ ಹೊಟ್ಟೆಯನ್ನು ಮಸಾಜ್ ಮಾಡಿದರೆ ಹೊಟ್ಟೆಯ ಭಾಗದ ಬೊಜ್ಜು ಕಡಿಮೆ ಆಗುತ್ತದೆ.
* ಮೈದಾ ಹಿಟ್ಟಿನ ಪದಾರ್ಥಗಳನ್ನು ಸೇವಿಸಿದಾಗ ಕೆಲವರಿಗೆ ಎದೆ ಉರಿ ಹಾಗೂ ಹೊಟ್ಟೆ ಉರಿ ಆಗುತ್ತದೆ ಅಂತಹ ಸಮಯದಲ್ಲಿ ಸೌತೆಕಾಯಿ ತಿನ್ನುವುದರಿಂದ ಕಡಿಮೆಯಾಗುತ್ತದೆ.
* ಊಟ ಮಾಡಿದ ನಂತರ ಸ್ನಾನ ಮಾಡಿದರೆ ದೇಹಕ್ಕೆ ಹಾನಿ.
* ಉಪವಾಸ ಮಾಡುವುದರಿಂದ ಹೊಟ್ಟೆಗೆ ಸಂಬಂಧಿಸಿದ ರೋಗಗಳು ಗುಣವಾಗುತ್ತವೆ.

* ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನರಳುತ್ತಿರುವವರು ಬಾಳೆಹಣ್ಣು ಸೇವಿಸಿದರೆ ಸಮಸ್ಯೆ ಕಡಿಮೆಯಾಗುತ್ತದೆ.
* ಹಾಗಲಕಾಯಿಯನ್ನು ಬೇಯಿಸಿದ ನೀರು ಅಥವಾ ಹಾಗಲಕಾಯಿಯಿಂದ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ಮುಖದ ಮೇಲಿರುವ ಕಲೆಗಳು ಮಾಯವಾಗುತ್ತವೆ, ದೇಹದಲ್ಲಿರುವ ಟಾಕ್ಸಿನ್ ಅಂಶ ಹೊರಹೋಗುತ್ತದೆ.
* ಸಣ್ಣ ಈರುಳ್ಳಿಯನ್ನು ಪೇಸ್ಟ್ ಮಾಡಿ ಅಥವಾ ಈರುಳ್ಳಿಯ ರಸದಿಂದ ಕೂದಲಿನ ಬುಡಕ್ಕೆ ಮಸಾಜ್ ಮಾಡಿ ಸ್ವಲ್ಪ ಹೊತ್ತು ಬಿಟ್ಟ ಬಳಿಕ ಬೆಚ್ಚಗಿನ ನೀರಿನಿಂದ ವಾಶ್ ಮಾಡಿದರೆ ಕೂದಲು ನೈಸ್ ಆಗುತ್ತದೆ, ಸೋಂಪಾಗಿ ಬೆಳೆಯುತ್ತದೆ.

* ಬಿಳಿ ಈರುಳ್ಳಿಯ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.
* ಬಾಯಿ ದುರ್ವಾಸನೆ ಹೊಂದಿದ್ದರೆ ಮಲಗುವ ಮುನ್ನ ರಾತ್ರಿ ಹೊತ್ತು ಒಂದು ಏಲಕ್ಕಿಯನ್ನು ಬಾಯಿಗೆ ಹಾಕಿಕೊಂಡು ಮಲಗಿಕೊಳ್ಳಿ.
* ಮೂಲವ್ಯಾಧಿ ಸಮಸ್ಯೆ ಇರುವವರು ಮೆಂತ್ಯೆ ಚಟ್ನಿಯನ್ನು ಸೇವಿಸಬೇಕು
* ಹೆಚ್ಚು ಕಪ್ಪು ಬಟ್ಟೆಗಳನ್ನು ಧರಿಸುವುದರಿಂದ ಮೂಢನಂಬಿಕೆಗಳನ್ನು ಹೆಚ್ಚಾಗಿ ನಂಬುವ ಮನಸ್ಥಿತಿ ಬರುತ್ತದೆ.

* ಎಳ್ಳು ತಿನ್ನುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.
* ಜವೆ ಗೋಧಿ ಗಂಜಿ ಮಾಡಿ ತಿನ್ನುವುದರಿಂದ ಮಾನಸಿಕ ದೌರ್ಬಲ್ಯ ನಿರ್ಣಾಮವಾಗುತ್ತದೆ.
* ರಾತ್ರಿ ಹೊತ್ತು ಆದಷ್ಟು ಕಡಿಮೆ ಊಟ ಮಾಡಿ ಮತ್ತು ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಿ.
* ಅರಿಶಿಣವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ.

* ಕಬ್ಬಿನ ಹಾಲಿಗೆ ನಿಂಬೆರಸ ಸೇರಿಸಿ ಕುಡಿದರೆ ಶೀತ ಕಡಿಮೆ ಆಗುತ್ತದೆ.
* ಬೀಟ್ರೋಟ್ ರಸವನ್ನು ಪ್ರತಿದಿನ ಕುಡಿಯುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.
* ನಿದ್ರೆ ಕೊರತೆ ಹೆಚ್ಚಾದಷ್ಟು ಬುದ್ಧಿವಂತಿಕೆ ಕಡಿಮೆ ಆಗುತ್ತದೆ.
* ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ದೇಹದ ದೌರ್ಬಲ್ಯತೆ ಕಡಿಮೆ ಆಗುತ್ತದೆ.
* ಆದಷ್ಟು ಬಿಸಿಯಾಗಿರುವಾಗಲೇ ಆಹಾರ ಸೇವಿಸುವುದು ಒಳ್ಳೆಯದು
* ಪ್ರತಿನಿತ್ಯ ಟಮೋಟೋ ಸೇವಿಸುವುದರಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ.

* ಮುಖಕ್ಕೆ ಮೊಸರು ಹಾಗೂ ಕಡ್ಲೆಹಿಟ್ಟಿನ ಮಸಾಜ್ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.
* ನೆನೆಸಿದ ಬಾದಾಮಿ ಹಾಗೂ ಗೋಡಂಬಿಯನ್ನು ತಿನ್ನುವುದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ
* ತಕ್ಷಣವೇ ಬಿಕ್ಕಳಿಕೆ ನಿಲ್ಲಿಸಲು ನೀರಿನ ಜೊತೆ ಒಂದು ಲವಂಗ ತೆಗೆದುಕೊಳ್ಳಬೇಕು
* ಹಾಲಿನ ಕೆನೆಗೆ ನಿಂಬೆರಸ ಹಾಗೂ ಅರಿಶಿನ ಸೇರಿಸಿ ಹಚ್ಚುವುದರಿಂದ ಮುಖದ ಕಲೆಗಳು ಕಡಿಮೆ ಆಗುತ್ತದೆ, ಮುಖದ ಕಾಂತಿ ಹೆಚ್ಚಾಗುತ್ತದೆ.
* ಉಪ್ಪು ಹಾಗೂ ಜೇನುತುಪ್ಪದೊಂದಿಗೆ ಹಲ್ಲುಗಳನ್ನು ಬ್ರಷ್ ಮಾಡುವುದರಿಂದ ಹಾಲಿನ ಆರೋಗ್ಯಕ್ಕೆ ಒಳ್ಳೆಯದು ಮತ್ತು ಹಲ್ಲಿನ ಹೊಳಪು ಹೆಚ್ಚಾಗುತ್ತದೆ.

* ಸಿಹಿ ಮಾವು ತಿರುಳು ಅಥವಾ ಔಡಲ ಬೀಜದ ತಿರುಳು ಮತ್ತು ಬೇವಿನ ಎಲೆ ಜಗಿದು ತಿನ್ನುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
* ಕಣ್ಣುಗಳ ಕೆಳಗೆ ಉಂಟಾಗುವ ಕಪ್ಪು ಛಾಯೆಯನ್ನು ಹೋಗಲಾಡಿಸಲು ಜೇನುತುಪ್ಪದ ಜೊತೆ ನಿಂಬೆ ರಸ ಮಿಕ್ಸ್ ಮಾಡಿ ಹಚ್ಚಿಕೊಳ್ಳಿ.
* ನಿಂಬೆರಸ ಹಾಗೂ ತುಳಸಿ ರಸವನ್ನು ಮಿಕ್ಸ್ ಮಾಡಿ ಮೊಡವೆ ಆದಾಗ ಮುಖಕ್ಕೆ ಹಚ್ಚಿಕೊಳ್ಳಿ, ಕಲೆ ಇಲ್ಲದೆ ಮೊಡವೆ ಗುಣವಾಗುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಬಿಸಿ ನೀರು ಕುಡಿಯಬೇಕಾ.? ತಣ್ಣೀರು ಕುಡಿಯಬೇಕಾ.? ದೇಹಕ್ಕೆ ಯಾವುದು ಒಳ್ಳೆದು ಅನ್ನೊದನ್ನ ತಿಳಿಸಿದ ವೈದ್ಯರು ತಪ್ಪದೆ ನೋಡಿ.!
Next Post: ಸಕ್ಕರೆ ಫ್ಯಾಕ್ಟರಿಯಲ್ಲಿ ಹೇಗೆ ತಯಾರಾಗುತ್ತದೆ ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore