
ಬೆಟ್ಟದ ನೆಲ್ಲಿಕಾಯಿ ಇದನ್ನು ಆಯುರ್ವೇದದಲ್ಲಿ ಆಮ್ಲಕ್ಕಿ ಎಂದು ಕರೆಯುತ್ತಾರೆ. ಇದು ಸರ್ವೇ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಸುಲಭವಾಗಿ ಸಿಗುವಂತಹ ಪದಾರ್ಥವಾಗಿದ್ದು ಇದನ್ನು ಹೆಚ್ಚಿನ ಜನ ಸೇವನೆ ಮಾಡಿರುತ್ತಾರೆ ಹಾಗೂ ಕೆಲವೊಂದಷ್ಟು ಜನ ಇದನ್ನು ಸೇವನೆ ಮಾಡಲು ಇಷ್ಟಪಡುವುದಿಲ್ಲ.
ಏಕೆಂದರೆ ಇದು ಸ್ವಲ್ಪ ಪ್ರಮಾಣದ ಕಹಿ ಒಗರು ಅಂಶವನ್ನು ಹೊಂದಿದ್ದು ಇದು ತಿನ್ನಲು ಅಷ್ಟು ರುಚಿಯಾಗಿಲ್ಲ ಎನ್ನುವ ಉದ್ದೇಶದಿಂದ ಹೆಚ್ಚಿನ ಜನರು ಇದನ್ನು ತಿನ್ನಲು ಇಷ್ಟಪಡುವು ದಿಲ್ಲ. ಆದರೆ ಇದನ್ನು ಸೇವನೆ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದರೆ ನೀವೇ ಆಶ್ಚರ್ಯ ಪಡುತ್ತೀರಿ.
ಹೌದು ಬೆಟ್ಟದ ನೆಲ್ಲಿಕಾಯಿಯನ್ನು ಸೇವನೆ ಮಾಡುವುದ ರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ನಾವು ಪಡೆದು ಕೊಳ್ಳಬಹುದು ಹೌದು ಆಯುರ್ವೇದದಲ್ಲಿ ಬೆಟ್ಟದ ನೆಲ್ಲಿಕಾಯಿಗೆ ಬಹಳ ಮಹತ್ವವಾದ ಸ್ಥಾನ ಇದ್ದು. ಹಲವಾರು ರೀತಿಯ ಔಷಧಿಗಳ ತಯಾರಿಕೆಯಲ್ಲಿಯೂ ಕೂಡ ಇದನ್ನು ಯಥೇಚ್ಛವಾಗಿ ಬಳಸುತ್ತಾರೆ ಎಂದೇ ಹೇಳಬಹುದು.
ಆದರೆ ಹೆಚ್ಚಿನ ಜನಕ್ಕೆ ಈ ಮಾಹಿತಿ ತಿಳಿದಿಲ್ಲ ಆದ್ದರಿಂದ ಈ ದಿನ ಬೆಟ್ಟದ ನೆಲ್ಲಿಕಾಯಿಯನ್ನು ಸೇವನೆ ಮಾಡುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಯಾವ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬಹುದು. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
ಈ ಒಂದು ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ B6, ಮೆಗ್ನೀಷಿಯಂ, ಪೊಟ್ಯಾಶಿಯಂ, ರೈಬೋಕ್ಲೋಮಿನ್, ಥಯಾಮಿನ್, ಆಂಟಿ ಆಕ್ಸಿಡೆಂಟ್ ನೈಟ್ರಿಕ್ ಆಕ್ಸೈಡ್ ಹಾಗೂ ಹೆಚ್ಚಾಗಿ ವಿಟಮಿನ್ ಸಿ ಅಂಶವನ್ನು ನಾವು ಇದರಲ್ಲಿ ಕಾಣಬಹುದು.
ಈ ಒಂದು ಬೆಟ್ಟದ ನೆಲ್ಲಿಕಾಯಿ ಯಾವ ರೀತಿಯ ಆಯುರ್ವೇದದ ರಸಗಳನ್ನು ಹೊಂದಿರುತ್ತದೆ ಎಂದು ನೋಡುವುದಾದರೆ ಐದು ರೀತಿಯ ರಸಗಳನ್ನು ಕಾಣಬಹುದು ಅವು ಯಾವುವೆಂದರೆ ಮಧುರ, ಆಮ್ಲ, ಕಟು, ತಿಕ್ತ, ಕಷಾಯ ಹಾಗಾದರೆ ಇದನ್ನು ಸೇವನೆ ಮಾಡುವುದರಿಂದ ಯಾವುದೆಲ್ಲ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ನೋಡುವುದಾದರೆ.
ಇದು ಕಣ್ಣಿಗೆ, ಹೃದಯಕ್ಕೆ, ನಮ್ಮ ಶರೀರಕ್ಕೆ ಹೊಸ ಚೈತನ್ಯವನ್ನು, ಹಾಗೂ ನಮ್ಮ ಶರೀರವನ್ನು ಶುದ್ಧೀಕರಣ ಮಾಡುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಹಾಗಾದರೆ ನಾವು ಇದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದರೆ ಇದನ್ನು ಹೇಗೆ ಸೇವನೆ ಮಾಡಬೇಕು ಎಂಬುದನ್ನು ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ.
* ಬೆಟ್ಟದ ನೆಲ್ಲಿಕಾಯಿಯನ್ನು ಚವನ್ ಪ್ರಾಶ್ ಮಾಡಿಕೊಂಡು ಕೂಡ ಸೇವನೆ ಮಾಡಬಹುದು. ಈ ರೀತಿ ಮಾಡಿಕೊಂಡು ಸೇವನೆ ಮಾಡುವುದ ರಿಂದ ಇದು ಶೀತ ವೀರ್ಯ ಗುಣ ಧರ್ಮವನ್ನು ಹೊಂದಿದ್ದರು ಕೂಡ ಕಫ ನಿವಾರಕವಾಗಿ ಕೆಲಸ ಮಾಡುತ್ತದೆ.
* ಇನ್ನು ಇದನ್ನು ಜ್ಯೂಸ್ ಮೂಲಕ ಸೇವನೆ ಮಾಡುವುದರಿಂದ ಪಿತ್ತಜನ್ಯ ವಾಗಿ ವಾತಜನ್ಯವಾಗಿ ಬರುವಂತಹ ರೋಗಗಳು ದೂರವಾಗುತ್ತದೆ. ವಾತ ಜನ್ಯವಾಗಿ ಬರುವಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳ ಬೇಕು ಎಂದರೆ ಇದರ ಜೊತೆ ಸ್ವಲ್ಪ ಪ್ರಮಾಣದ ಮೆಣಸನ್ನು ಸೇರಿಸಿ ಸೇವನೆ ಮಾಡುವುದು ಉತ್ತಮ.
* ಜೊತೆಗೆ ಯಾರು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದುಕೊಂಡಿರುತ್ತಾರೋ ಅಂದರೆ ದೇಹದ ಬೊಜ್ಜನ್ನು ದೂರ ಮಾಡಿ ಕೊಳ್ಳುವುದಕ್ಕೆ ಇದು ಬಹಳ ಅದ್ಭುತವಾದಂತಹ ಔಷಧಿ ಎಂದು ಹೇಳಬಹುದು.
* ಮೇಲೆ ಹೇಳಿದಂತೆ ಚವನ್ ಪ್ರಾಶ್ ಸೇವನೆ ಮಾಡುವುದರಿಂದ ರಕ್ತಹೀನತೆಯ ಸಮಸ್ಯೆಯನ್ನು ಕೂಡ ದೂರ ಮಾಡಿಕೊಳ್ಳಬಹುದು.
* ಹಾಗೂ ಯಾರಿಗೆ ಸಕ್ಕರೆ ಕಾಯಿಲೆ ಬಿಪಿ ಸಮಸ್ಯೆ ಇದೆ ಅಂಥವರು ಇದರ ಜ್ಯೂಸ್ ಅನ್ನು ಸೇವನೆ ಮಾಡುವುದರಿಂದ ಇವೆರಡು ಕೂಡ ನಿಯಂತ್ರಣಕ್ಕೆ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.
https://youtu.be/-ml7MULeA_s?si=mUJaF4SBcrY6P1aL