* ಫ್ಲಾಸ್ಕ್ ನ್ನು ಕ್ಲೀನ್ ಮಾಡುವುದು ಸ್ವಲ್ಪ ಕ’ಷ್ಟ’ಕ’ರ ಕೆಲಸ, ವಾಷಿಂಗ್ ಸೋಡಾ ಹಾಗೂ ಬಿಸಿ ನೀರನ್ನು ಫ್ಲಾಸ್ಕ್ ಅರ್ಥದ ವರೆಗೂ ಹಾಕಿ ಚೆನ್ನಾಗಿ ಕಲಕಿ ಹೊರಗೆ ಚೆಲ್ಲಿ ಮತ್ತೆ ಬಿಸಿ ನೀರನ್ನು ಹಾಕಿಕೊಂಡು ಮತ್ತೊಮ್ಮೆ ಅದೇ ತರ ಚೆನ್ನಾಗಿ ಬಾಟಲ್ ಶೇಕ್ ಮಾಡಿ ಸುರಿದು ಸ್ವಚ್ಛ ಮಾಡಿ ಬಿಸಿಲಿಗೆ ಇಡಿ
* ಫ್ಲಾಸ್ಕ್ ನ್ನು ಬಹು ದಿನಗಳವರೆಗೆ ಉಪಯೋಗಿಸದೆ ಹಾಗೆ ಇಟ್ಟಾಗ ಅದು ವಾಸನೆ ಬರುತ್ತದೆ. ಈ ವಾಸನೆಯನ್ನು ಹೋಗಿಸಲು ಮಜ್ಜಿಗೆ ಹಾಗೂ ಉಪ್ಪನ್ನು ಹಾಕಿ 10 ನಿಮಿಷ ಚೆನ್ನಾಗಿ ಶೇಕ್ ಮಾಡಿ ನಂತರ ಬಿಸಿನೀರಿನಿಂದ ತೊಳೆದು ಬಿಸಿಲಿಗೆ ಸ್ವಲ್ಪ ಹೊತ್ತು ಇಡಿ ವಾಸನೆ ಹೋಗುತ್ತದೆ.
* ಗುಂಜು, ನೈಲಾನ್ ಪ್ಯಾಡ್ ಅಥವಾ ಬ್ರಷ್ ಬಳಸಿ ಪಾತ್ರೆ ತೊಳೆದರೆ ಪಾತ್ರೆಗಳು ಗೀಜಾಗುವುದಿಲ್ಲ.
* ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳನ್ನು ಒಂದು ರಾತ್ರಿ ಪೂರ್ತಿ ಸೋಪಿನ ನೀರಿನಲ್ಲಿ ನೆನೆಸಿ, ಮರುದಿನ ಉಜ್ಜಿ ತೊಳೆದರೆ ಪಾತ್ರೆಗೆ ಹೊಸ ಹೊಳಪು ಬರುತ್ತದೆ.
* ಚಹಾಚರಟ, ವಿಮ್ ಜೆಲ್ ಅಥವಾ ಪಾತ್ರೆ ತೊಳೆಯುವ ಸೋಪು, ಸಬೀನಾ ಇವುಗಳಿಂದ ಪಾತ್ರೆಯನ್ನು ಉಜ್ಜಿ ತೊಳೆದರೆ ಪಾತ್ರೆ ನೀಟಾಗಿ ಕ್ಲೀನ್ ಆಗುತ್ತದೆ ಹಾಗೂ ಹೊಳಪು ಹಾಗೆ ಇರುತ್ತದೆ.
* ಕೆಲವೊಮ್ಮೆ ಹಸಿ ಈರುಳ್ಳಿಯನ್ನು ಪಾತ್ರೆಯಲ್ಲಿ ಇಟ್ಟಿದ್ದಾಗ ಹೇಗೆ ಕ್ಲೀನ್ ಮಾಡಿದರೂ ಅದರ ವಾಸನೆ ಹೋಗುವುದಿಲ್ಲ ಇಂತಹ ಸಮಯದಲ್ಲಿ ಉಪ್ಪು ನೀರಿನಿಂದ ಅಥವಾ ನಿಂಬೆಹಣ್ಣಿನ ಸಿಪ್ಪೆಯಿಂದ ಉಜ್ಜಿ ತೊಳೆದರೆ ವಾಸನೆ ಹೋಗುತ್ತದೆ.
* ಪ್ಲಾಸ್ಟಿಕ್ ಬಟ್ಟಳಿಗೆ ಸ್ವಲ್ಪ ಸಕ್ಕರೆ ಹಾಗೂ ಸೋಪಿನ ನೀರು ಹಾಕಿ ಶುಚಿ ಮಾಡುವ ಸಾಧನವನ್ನು ಯಾವಾಗಲೂ ಅದರಲ್ಲಿ ಮುಳುಗುವಂತೆ ಇಡಿ. ಇಂತಹ ದ್ರಾವಣಗಳಿಂದ ಪಾತ್ರೆಗಳನ್ನು ಚೆನ್ನಾಗಿ ಶುಚಿ ಮಾಡಬಹುದು.
* ಬೆಣ್ಣೆ ಕಾಯಿಸಿದ ಪಾತ್ರೆಯೂ ಬಹಳ ಜಿಡ್ಡಾಗಿರುತ್ತದೆ ಇದನ್ನು ಸುಲಭವಾಗಿ ಕ್ಲೀನ್ ಮಾಡಬೇಕು ಎಂದರೆ ಸಮ ಪ್ರಮಾಣದಲ್ಲಿ ವಾಷಿಂಗ್ ಸೋಡಾ ಹಾಗೂ ಉಪ್ಪನ್ನು ಹಾಕಿ ದ್ರಾವಣ ಮಾಡಿಕೊಂಡು ಅದನ್ನು ಬೆಣ್ಣೆ ಕಾಯಿಸಿದ ಪಾತ್ರೆಗೆ ಹಾಕಿ ಚೆನ್ನಾಗಿ ಕುದಿಸಿ ಐದು ನಿಮಿಷದಲ್ಲೇ ಕ್ಲೀನ್ ಆಗುತ್ತದೆ.
* ಅಲ್ಯುಮಿನಂ ಪಾತ್ರೆಗಳನ್ನು ಸೀಗೆಕಾಯಿ ಪುಡಿಯಿಂದ ತೊಳೆದರೆ ಹೊಳಪು ಬರುತ್ತದೆ. ವಿಮ್ ಜೆಲ್ ಹಾಗೂ ಸಾಬೂನು ಕೂಡ ಬಳಸಬಹುದು.
* ಒಂದೇ ಪಾತ್ರೆಯಲ್ಲಿ ಯಾವಾಗಲೂ ಬಿಸಿ ನೀರು ಕಾಯಿಸುತ್ತಿದ್ದಾಗ ಅದರ ಕೆಳಗೆ ಬಿಳಿ ಕಲೆಗಳು ಆಗುತ್ತವೆ. ಇದನ್ನು ಕ್ಲೀನ್ ಮಾಡಬೇಕು ಎಂದರೆ ಟೊಮೇಟೊವನ್ನು ಚೆನ್ನಾಗಿ ಬೇಯಿಸಿ ಅದರ ಸಿಪ್ಪೆಯನ್ನು ಒಂದು ರಾತ್ರಿ ಹಾಗೆ ಬಿಟ್ಟು ಬೆಳಗ್ಗೆ ತೊಳೆದರೆ ಬಿಳಿ ಕಲೆಗಳು ಹೋಗುತ್ತವೆ.
* ನಿಂಬೆ ಹಣ್ಣಿನ ರಸ ಅಥವಾ ನಿಂಬೆಹಣ್ಣಿನ ಸಿಪ್ಪೆಯಿಂದ ಪಾತ್ರೆಗಳನ್ನು ತೊಳೆದರೆ ಪಾತ್ರೆಯಲ್ಲಿರುವ ಕೀಟಾನುಗಳು ನಾ’ಶವಾಗುತ್ತದೆ ಹಾಗೂ ಪಾತ್ರೆಗಳಿಗೆ ಹೊಳಪು ಬರುತ್ತದೆ. ಆದರೆ ನೆನಪಿಡಿ ಕಲಾಯಿ ಮಾಡಿರುವ ಪಾತ್ರೆಗಳ ಹೊರಭಾಗದಲ್ಲಿ ಮಾತ್ರ ಈ ರೀತಿ ನಿಂಬೆಹಣ್ಣಿನ ಸಿಪ್ಪೆ ಅಥವಾ ಹುಣಸೆ ಹಣ್ಣಿನಿಂದ ಉಜ್ಜಬೇಕು, ಕಲಾಯಿ ಮಾಡಿರುವ ಭಾಗವನ್ನು ಉಜ್ಜಿದರೆ ಅದು ಹೊರಟು ಹೋಗುತ್ತದೆ.
* ಮಸಿಯಾದ ಭಾಗಕ್ಕೆ ಬಿಸಿ ನೀರನ್ನು ಹಾಕಿ ತಕ್ಷಣ ಬೂದಿಯಿಂದ ಉಜ್ಜಿದರೆ ಮಸಿ ಹೋಗುತ್ತದೆ.
* ಅಡುಗೆ ಮಾಡಿದರೆ ಪಾತ್ರೆಗಳ ಮಸಿ ಹೋಗಿಸಬೇಕು ಎಂದರೆ ಬಿಸಿಯಾದ ಉಪ್ಪು ನೀರಿನಲ್ಲಿ ಈರುಳ್ಳಿಯನ್ನು ನೆನೆಸಿ ಆ ಈರುಳ್ಳಿಯಿಂದ ಪಾತ್ರೆ ಉಜ್ಜಿರಿ.
* ಹುಣಸೆ ಎಲೆಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅದರಲ್ಲಿ ಕಬ್ಬಿಣದ ಪಾತ್ರೆಗಳನ್ನು ಕ್ಲೀನ್ ಮಾಡಿದರೆ ಹೆಚ್ಚು ಸ್ವಚ್ಛವಾಗುತ್ತದೆ.
* ಬೂದಿ, ಹುಣಸೆಹಣ್ಣು ಮತ್ತು ಚಹಾ ಚರಟವನ್ನು ಗೊಜ್ಜಿನಂತೆ ಮಾಡಿಕೊಂಡು ಕಬ್ಬಿಣದ ಸಾಮಾನುಗಳಿಗೆ ಬಳಿದು ಒಣಗಿಸಬೇಕು, ಅನಂತರ ಬೂದಿ ಹಾಗೂ ಒಣ ಮಣ್ಣನ್ನು ಹಾಕಿ ಉಜ್ಜಿದರೆ ಅವು ಉಕ್ಕಿನಂತೆ ಬೆಳ್ಳಗೆ ಹೊಳೆಯುತ್ತವೆ.