ನಂಬಿಕೆ ಎನ್ನುವುದು ಬೆಲೆ ಕಟ್ಟಲಾಗದ್ದು, ಒಬ್ಬ ರೈತ ತಾನು ಬೀಜ ಬಿತ್ತುವುದು ಕೂಡ ಭೂಮಿ ತಾಯಿ ಬೆಳೆ ಬೆಳೆಸುತ್ತಾಳೆ ಎನ್ನುವ ನಂಬಿಕೆಯಿಂದ ಹಾಗೆ ಒಬ್ಬ ಭಕ್ತ ಭಗವಂತನಿಗೆ ಕೈಮುಗಿಯುವುದು ಮತ್ತು ಹರಕೆ ಕಟ್ಟಿಕೊಳ್ಳುವುದು ಕೂಡ ದೇವರು ತನ್ನ ಮನವಿಯನ್ನು ಕೇಳಿಸಿಕೊಂಡು ಕ’ಷ್ಟ ಪರಿಹರಿಸಿ ದಾರಿ ತೋರಿಸ್ತಾನೆ ಎನ್ನುವ ನಂಬಿಕೆಯಿಂದ..
ಈ ರೀತಿ ನಂಬಿಕೆಗಳನ್ನು ಇಟ್ಟುಕೊಂಡವರು ಶುದ್ಧ ಮನಸ್ಸಿನಿಂದ ಸಂಪೂರ್ಣವಾಗಿ ಭಗವಂತನ ಮೇಲೆ ಭಾರ ಹಾಕಿದವರು ಖಂಡಿತವಾಗಿಯೂ ಪರಿಹಾರ ಪಡೆದೇ ತೀರುತ್ತಾರೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆಯಂತೆ ಕರ್ನಾಟಕದಲ್ಲಿ ಅನೇಕ ದೇವಸ್ಥಾನಗಳಲ್ಲಿ ಪವಾಡ ಆಗುತ್ತಿರುವುದನ್ನು ನೋಡಬಹುದು ಅದೇ ರೀತಿಯ ಸಾಲಿಗೆ ಮತ್ತೊಂದು ದೇವಸ್ಥಾನ ಕೂಡ ಸೇರುತ್ತಿದೆ.
ಇದು ತುಮಕೂರು ಜಿಲ್ಲೆ ಬಿದನಗೆರೆಯ ಪಂಚಮುಖಿ ಆಂಜನೇಯ ದೇವಸ್ಥಾನ ಹಾಗೂ ಸತ್ಯ ಶನೇಶ್ವರ ಸ್ವಾಮಿಯ ದೇವಸ್ಥಾನ. ಇಲ್ಲಿ ಸಾಕ್ಷಾತ್ ಭಗವಂತನ ಸಾಕ್ಷಾತ್ಕಾರವಾಗಿದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳು ನಂಬಿಕೆ, 161 ಅಡಿ ಎತ್ತರದಲ್ಲಿ ಇಲ್ಲಿ ಆಂಜನೇಯನ ವಿಗ್ರಹವನ್ನು ನಿರ್ಮಿಸಲಾಗಿದೆ. ಕರ್ನಾಟಕದಲ್ಲಿ ಅತ್ಯಂತ ಎತ್ತರದ ಪಂಚಮುಖಿ ಆಂಜನೇಯನ ಸನ್ನಿಧಿಯಾಗಿರುವ ಇಲ್ಲಿ ರಾತ್ರಿ ಹೊತ್ತು ಭಕ್ತಾದಿಗಳು ನೆಲೆಸಲು ಅನುಕೂಲ ಮಾಡಿಕೊಡಲಾಗಿದೆ.
ಅವರಿಗೆ ಮಲಗೋ ವ್ಯವಸ್ಥೆಯಿಂದ ಬಿಸಿನೀರಿನ ವ್ಯವಸ್ಥೆ ಅನ್ನದಾನದ ವ್ಯವಸ್ಥೆ ಎಲ್ಲವೂ ಕೂಡ ಸಿಗುತ್ತದೆ. ಶುಕ್ರವಾರದ ದಿನ ಈ ದೇವಸ್ಥಾನದಲ್ಲಿ ತಂಗಿದ್ದರೆ ಭಿಕ್ಷೆ ಬೇಡುವ ಪರಿಸ್ಥಿತಿಗೆ ಹೋಗಿದ್ದವರು ಕೂಡ ಕೋಟ್ಯಾಧಿಪತಿಗಳಾಗಿ ಹಣಕಾಸಿನ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ. ಭಗವಂತನ ನೆರಳು ನಮ್ಮ ಮೇಲೆ ಬೀಳುವುದರಿಂದ ಪಾಪ ಪರಿಹಾರ ಆಗುತ್ತದೆ ಎನ್ನುವ ಅಚಲವಾದ ನಂಬಿಕೆ ಕೂಡ ಇದೆ.
ಇದೇ ಕಾರಣಕ್ಕೆ ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಬರುತ್ತಿರುವ ಭಕ್ತಾಧಿಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಸಾಮೂಹಿಕ ವಿವಾಹಗಳು ಸಾಮೂಹಿಕ ಯಜ್ಞ ಕಾರ್ಯಕ್ರಮ ಮತ್ತು ಪ್ರತಿವಾರವೂ ಕೂಡ ನಾಮಕರಣ ಇತ್ಯಾದಿಗಳು ಈ ದೇವಸ್ಥಾನದಲ್ಲಿ ಜರುಗುತ್ತವೆ. ಈ ದೇವಸ್ಥಾನದಲ್ಲಿ ಇರುವ ಜ್ಯೋತಿಷ್ಯರೊಬ್ಬರು ಅಂಜನ ಹಾಕಿ ವೀಳ್ಯದೆಲೆ ನೋಡಿ ಶಾಸ್ತ್ರ ಹೇಳುತ್ತಾರೆ.
ವ್ಯಕ್ತಿಯ ಮುಖ ನೋಡುತ್ತಿದ್ದಂತೆ ಅಂಜನದಲ್ಲಿ ತಿಳಿದುಕೊಂಡು ಯಾವ ಸಮಸ್ಯೆ ಆಗಿದೆ ಎನ್ನುವುದನ್ನು ನಿಖರವಾಗಿ ಹೇಳುತ್ತಾರೆ. ಹಾಗಾಗಿ ಇವರನ್ನು ಕಂಡು ಕ’ಷ್ಟ’ಕ್ಕೆ ಪರಿಹಾರ ಕೇಳಲು ಕೂಡ ಭಕ್ತಾದಿಗಳು ಬರುತ್ತಾರೆ ಇದನ್ನು ಹೊರತುಪಡಿಸಿ ಇಲ್ಲಿ ಹರಕೆ ಕಟ್ಟಿಕೊಂಡವರು ದರ್ಶನ ಮಾಡಿ ಹೋದವರು ಹೋಮ ಮಾಡಿಸಿದವರು ಕೂಡ ಜೀವನದಲ್ಲಿ ಆಗಿದ್ದ ಸಮಸ್ಯೆಗೆ ಪರಿಹಾರ ಕಂಡಿದ್ದಾರೆ.
ಉದ್ಯೋಗ ಸಿಗದವರಿಗೆ ಉದ್ಯೋಗ, ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳ ಭಾಗ್ಯ, ಮದುವೆ ಆಗಿಲ್ಲದವರೆಗೆ ಮದುವೆ, ಕೋರ್ಟು ಕೇಸ್ ವಿವಾದ ಇದ್ದವರಿಗೆ ಜಯ, ವ್ಯವಹಾರದಲ್ಲಿ ಹಣ ಕಳೆದುಕೊಂಡವರಿಗೆ ಹಣ ವಾಪಸ್ ಬರುವ ಮಾರ್ಗ ಇತ್ಯಾದಿ ಇತ್ಯಾದಿ ಎಲ್ಲಾ ರೀತಿಯ ಅನುಕೂಲತೆಗಳು ಕೂಡ ಈ ದೇವಸ್ಥಾನದಕ್ಕೆ ಬರುವುದರಿಂದ ನಡೆಯುತ್ತಿದೆ.
ತಮ್ಮ ಕೋರಿಕೆ ನೆನವೇರಿದ ಮೇಲೆ ಮತ್ತೊಮ್ಮೆ ಬಂದು ಹರಕೆ ತೀರಿಸಿ ಹೋಗುತ್ತಾರೆ. ಬಹಳ ಪ್ರಸಿದ್ಧಿಯಾದ ಕ್ಷೇತ್ರವಾಗಿ ಬದಲಾಗುತ್ತಿರುವ ಈ ಪಂಚಮುಖ ಆಂಜನೇಯನ ದರ್ಶನವನ್ನು ಪಡೆಯಲು ಮತ್ತು ಜೀವನದಲ್ಲಿರುವ ಮನುಷ್ಯ ಸಹಜವಾದ ಎಲ್ಲ ಸಮಸ್ಯೆಗಳಿಂದ ಮುಕ್ತಿ ಹೊಂದಲು ನೀವು ಕೂಡ ತಪ್ಪದೇ ಒಮ್ಮೆ ನಿಮ್ಮ ಕುಟುಂಬದವರ ಜೊತೆ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಇಲ್ಲಿ ನಡೆಯುವ ಚಮತ್ಕಾರವನ್ನು ಕಣ್ಣಾರೆ ನೋಡಿ ಕಣ್ತುಂಬಿಕೊಳ್ಳಿ.
ದೇವಸ್ಥಾನದ ಸಹಾಯವಾಣಿ ಸಂಖ್ಯೆ:- 9739466466