Home Useful Information ನರಗಳ ವೀಕ್ನೆಸ್, ಮಂಡಿ ನೋವು, ಜಾಯಿಂಟ್ ಪೈನ್, ಸೊಂಟ ನೋವು, ಗ್ಯಾಸ್ 100ಕ್ಕೂ ಹೆಚ್ಚು ರೋಗ ತಕ್ಷಣ ಕಡಿಮೆಯಾಗುತ್ತೆ.!

ನರಗಳ ವೀಕ್ನೆಸ್, ಮಂಡಿ ನೋವು, ಜಾಯಿಂಟ್ ಪೈನ್, ಸೊಂಟ ನೋವು, ಗ್ಯಾಸ್ 100ಕ್ಕೂ ಹೆಚ್ಚು ರೋಗ ತಕ್ಷಣ ಕಡಿಮೆಯಾಗುತ್ತೆ.!

0
ನರಗಳ ವೀಕ್ನೆಸ್, ಮಂಡಿ ನೋವು, ಜಾಯಿಂಟ್ ಪೈನ್, ಸೊಂಟ ನೋವು, ಗ್ಯಾಸ್ 100ಕ್ಕೂ ಹೆಚ್ಚು ರೋಗ ತಕ್ಷಣ ಕಡಿಮೆಯಾಗುತ್ತೆ.!

 

ಈಗಿನ ಕಾಲದಲ್ಲಿ ನಾವು ಅನಾರೋಗ್ಯಕರವಾದ ಆಹಾರ ಪದ್ಧತಿಯನ್ನು ರೂಢಿಸಿಕೊಂಡಿದ್ದೇವೆ ಮತ್ತು ನಮ್ಮ ಜೀವನ ಶೈಲಿಯೂ ಕೂಡ ರೂಢಿ ತ’ಪ್ಪಿ ಹೋಗಿದೆ. ಇದೇ ಕಾರಣಕ್ಕೆ ನಾವು ನೂರಾರು ಕಾಯಿಲೆಗಳಿಗೆ ತ್ತುತ್ತಾಗುತ್ತಿದ್ದೇವೆ. ನಮ್ಮ ದೇಹದ ಹಲವಾರು ಸಮಸ್ಯೆಗೆ ದೇಹದಲ್ಲಿ ಉಂಟಾಗಿರುವ ಅಜೀರ್ಣತೆ ಮತ್ತು ಮಲಬದ್ದತೆಯೇ ಮುಖ್ಯ ಕಾರಣ.

ಈ ಎರಡು ಕಾರಣದಿಂದಾಗಿ ನಾವು ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಮತ್ತು ಅದು ಹೊರ ಹೋಗದೆ ಟಾಕ್ಸಿನ್ ಆಗುತ್ತದೆ. ಆ ಟಾಕ್ಸಿನ್ ಮೂಲಕ ದೇಹಕ್ಕೆ ಹಲವಾರು ರೀತಿಯ ವಿಷಾಂಶಗಳು ಸೇರಿ ರಕ್ತ ಕಲುಷಿತವಾಗಿ ಆ ಮೂಲಕ ಅಂಗಾಂಗಗಳಿಗೆಲ್ಲ ಸಮಸ್ಯೆ ಆಗುತ್ತಿದೆ. ಮತ್ತು ನಾವು ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಇರುವುದರಿಂದ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ ಇದರಿಂದಲೂ ಕೂಡ ನಾವು ಅನೇಕ ರೋಗಗಳನ್ನು ಎದುರಿಸಬೇಕಾಗಿ ಬರುತ್ತದೆ.

ಈ ಎಲ್ಲ ಸಮಸ್ಯೆಗಳಿಂದ ಪರಿಹಾರ ಪಡೆಯಬೇಕು ಎಂದರೆ ಮೊದಲು ನಮ್ಮ ಜೀವನ ಕ್ರಮವನ್ನು ಸರಿಯಾಗಿ ಮಾಡಿಕೊಳ್ಳಬೇಕು. ತಡವಾಗಿ ಮಲಗುವುದು ತಡವಾಗಿ ಏಳುವುದು ಈ ದುರಭ್ಯಾಸವನ್ನು ಬಿಟ್ಟುಬಿಡಬೇಕು ಮತ್ತು ಧೂಮಪಾನ ಮಧ್ಯಪಾನ ತಂಬಾಕು ಗುಟ್ಕ ಇಂತಹ ದು’ಶ್ಚ’ಟಗಳಿಂದ ದೂರ ಇರಬೇಕು.

ಅವೈಜ್ಞಾನಿಕವಾಗಿ ತಯಾರಾದ ಆಹಾರ ಪದಾರ್ಥಗಳಾದ ಫಾಸ್ಟ್ ಫುಡ್ ಜಂಕ್ ಫುಡ್ ಇವುಗಳ ಸೇವನೆಯನ್ನು ನಿಲ್ಲಿಸಿ ಪೋಷಕಾಂಶಯುಕ್ತ ಹಣ್ಣುಗಳು ತರಕಾರಿಗಳು ಹಸಿರು ಸೊಪ್ಪುಗಳು ಸಿರಿಧಾನ್ಯಗಳು ಇವುಗಳನ್ನು ಆಹಾರವಾಗಿ ಸೇವಿಸಬೇಕು. ಅತಿ ಹೆಚ್ಚು ನೀರನ್ನು ಕುಡಿಯಬೇಕು ದೇಹಕ್ಕೆ ಯಾವುದೇ ರೀತಿಯ ಪೋಷಕಾಂಶಗಳ ಕೊರತೆ ಬಾರದಂತೆ ನೋಡಿಕೊಳ್ಳಬೇಕು.

ಮತ್ತು ನಿಯಮಿತವಾಗಿ ವ್ಯಾಯಾಮ ಅಥವಾ ವಾಕಿಂಗ್ ಅಥವಾ ಯೋಗ ರೂಢಿಸಿಕೊಂಡು ಮನಸ್ಸನ್ನು ಶಾಂತಿಯಾಗಿ ಇಟ್ಟುಕೊಳ್ಳಬೇಕು. ಈ ರೀತಿ ಮಾಡಿದರೆ ನಮ್ಮ ದೇಹದ 75% ಕಾಯಿಲೆಗಳು ಗುಣವಾಗುತ್ತವೆ ಮತ್ತು ಕಾಯಿಲೆಗಳು ನಮಗೆ ಬರುವುದು ಕಡಿಮೆಯಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಒಂದು ವೇಳೆ ನೀವು ಈಗಾಗಲೇ ದೇಹ ಕೆಲ ಸಮಸ್ಯೆಗಳಿಗೆ ಗುರಿಯಾಗಿದ್ದರೆ ಅದರಲ್ಲೂ ಕ್ಯಾಲ್ಸಿಯಂ ವಿಟಮಿನ್ ಮುಂತಾದ ಪೋಷಕಾಂಶಗಳ ಹಾಗೂ ಲವಣಾಂಶಗಳ ಕೊರತೆಯಿಂದಾಗಿ ಮಂಡಿ ನೋವು, ಸೊಂಟ ನೋವು ಬೆನ್ನು ನೋವು ನರದೌರ್ಬಲ್ಯ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ನಿಮ್ಮ ದೇಹದ ಚೇತನವು ಹೆಚ್ಚಾಗಲು …

ಈಗ ನಾವು ಹೇಳುವ ಈ ಸುಲಭ ಮನೆಮದ್ದನ್ನು ಮಾಡಿ ಯಾವುದೇ ದುಬಾರಿ ವಸ್ತುಗಳನ್ನು ಖರೀದಿಸದೆ ಮನೆಯಲ್ಲಿ ಇರುವ ಅಡುಗೆ ಮನೆಯ ಮಸಾಲೆ ಪದಾರ್ಥಗಳನ್ನು ಉಪಯೋಗಿಸಿಕೊಂಡು ಈ ಮನೆಮದ್ದನ್ನು ಮಾಡಬಹುದು.

ಜೀರಿಗೆ, ಓಂ ಕಾಳು ಹಾಗೂ ಸೋಂಪು ಕಾಳು ಈ ಮೂರನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿ ನುಣ್ಣಗೆ ಗ್ರೈಂಡ್ ಮಾಡಿ ಇಟ್ಟುಕೊಳ್ಳಿ. ಈ ಪುಡಿಯನ್ನು ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಹಾಗೂ ರಾತ್ರಿ ಊಟ ಆದ ಮೇಲೆ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಚಮಚ ಈ ಪುಡಿ ಮಿಕ್ಸ್ ಮಾಡಿ ಸೇವಿಸಿ.

ಈ ರೀತಿ ಮಾಡುವುದರಿಂದ ದೇಹದಲ್ಲಿರುವ ಟಾಕ್ಸಿನ್ ಅಂಶಗಳು ಹೊರಹೋಗುತ್ತವೆ ಮತ್ತು ದೇಹಕ್ಕೆ ಕೊರತೆ ಉಂಟಾಗಿರುವ ಕ್ಯಾಲ್ಸಿಯಂ ಜಿಂಕ್ ಮೆಗ್ನೀಷಿಯಂ ಮುಂತಾದ ಅಂಶಗಳು ದೇಹಕ್ಕೆ ದೊರೆಯುತ್ತದೆ ಮಲಬದ್ಧತೆ ಸಮಸ್ಯೆ ಸರಿ ಹೋಗುತ್ತದೆ, ನಿಶಕ್ತಿ ಕಡಿಮೆ ಆಗುತ್ತದೆ. ನೀವು ಇದನ್ನು ನೀರಿನ ಬದಲು ಹಾಲಿನಲ್ಲಿ ಕೂಡ ಮಿಕ್ಸ್ ಮಾಡಿ ಸೇವಿಸಬಹುದು. ರಾತ್ರಿ ಹೊತ್ತು ಬೇಕಾದರೆ ಇದೇ ಪುಡಿಯನ್ನು ಒಂದು ಲೋಟ ಹಾಲಿಗೆ ಒಂದು ಚಮಚ ಮಿಕ್ಸ್ ಮಾಡಿ ತೆಗೆದುಕೊಳ್ಳಿ ಬಹಳ ಪರಿಣಾಮಕಾರಿಯಾಗಿ ಇದು ವರ್ಕ್ ಆಗುತ್ತದೆ.

LEAVE A REPLY

Please enter your comment!
Please enter your name here