ಕರ್ನಾಟಕ ಸರ್ಕಾರ ನಾಡಕಛೇರಿಯಿಂದ ರಾಜ್ಯದ ನಾಗರಿಕರು ಎಲ್ಲ ರೀತಿಯ ಪ್ರಮಾಣ ಪತ್ರಗಳಿಗಾಗಿ ಅರ್ಜಿ ಸಲ್ಲಿಸಿ ಪಡೆಯಬಹುದು ಇದಕ್ಕೆ Atalji Jan Snehi Kendra, ajsk ಅಂತ ಕೂಡ ಕರೆಯುತ್ತಾರೆ. ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯು ಜಾತಿ ಮತ್ತು ಆದಾಯ, ಜಮೀನು ಮತ್ತು ಕೃಷಿಕರಿಗೆ ಸಂಬಂಧಿಸಿದ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳಂತಹ ವಿವಿಧ ಪ್ರಮುಖ ಸೇವೆಗಳನ್ನು ನಾಗರೀಕರಿಗೆ ಒದಗಿಸುತ್ತದೆ.
Nadakacheri ಯಲ್ಲಿ ಈ ಯೋಜನೆಯ ಅಡಿಯಲ್ಲಿ ಒದಗಿಸಿದ 42 Online ಸೇವೆಗಳ ಪಟ್ಟಿಇದೆ. ಸಾರ್ವಜನಿಕರಿಗೆ ಅಗತ್ಯವಿರುವ ಕಂದಾಯ ಇಲಾಖೆಯ ಹಲವು ಸೇವೆಗಳನ್ನು ಪಡೆಯಲು ಅನುಕೂಲವಾಗುವಂತೆ ಸರ್ಕಾರದ ಎಲ್ಲಾ ಕಂದಾಯ ಸೇವೆಗಳನ್ನು ಹೋಬಳಿ ಮಟ್ಟದಲ್ಲಿ ಗ್ರಾಮೀಣ ಪ್ರದೇಶದ ನಾಗರೀಕರಿಗೆ ಪಾರದರ್ಶಕ, ವಿಶ್ವಾಸರ್ಹ ಹಾಗೂ ಕೈಗೆಟಕುವ ವಿಧಾನದ ಮೂಲಕ ನೀಡಲು ಅಟಲ್ ಜೀ ಜನಸ್ನೇಹಿ ಕೇಂದ್ರವನ್ನು ಸರ್ಕಾರದ ಆದೇಶ ಅನ್ವಯ ಪ್ರಾರಂಭಿಸಲಾಗಿದ್ದು, ಅದರಂತೆ, ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿವೆ.
ಕರ್ನಾಟಕ ಸರ್ಕಾರದ ನಾಡಕಛೇರಿಯ ವೆಬೈಸೈಟ್‌ನಲ್ಲಿ ಮಹತ್ವದ ಬದಲಾವಣೆಯಾಗಿದೆ. ಹೌದು, ನಾಡಕಛೇರಿಯಲ್ಲಿ ಅರ್ಜಿ ಸಲ್ಲಿಸುವಾಗ ಮೊದಲು 4.1 ವರ್ಷನ್ ಇತ್ತು. ಆದ್ರೆ, ಇದೀಗ 2023 ರ 13, ಏಪ್ರಿಲ್‌ನಲ್ಲಿ ಇದನ್ನು ಬದಲಾವಣೆ ಮಾಡಲಾಗಿದ್ದು, ಈಗ 5.0 ವರ್ಷನ್ ಎಂದು ಲಾಂಚ್ ಮಾಡಲಾಗಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಅರ್ಜಿ ಸಲ್ಲಿಸಲು 4.1 ವರ್ಷನ್ ಕೂಡ ಲಭ್ಯವಿರುತ್ತದೆ. ಇದರಲ್ಲಿ ಮೊದಲು ಮೊಬೈಲ್ ನಂಬರ್ ಹಾಗೂ ಒಟಿಪಿ ಹಾಕಿ ಲಾಗ್ ಇನ್ ಮಾಡಲಾಗ್ತಿತ್ತು. ಈಗ 5.0 ವರ್ಷನ್‌ನಲ್ಲೂ ಕೂಡ ಅದೇ ರೀತಿಯಾಗಿ ಲಾಗ್ ಇನ್ ಮಾಡಬೇಕಾಗುತ್ತದೆ. ಈಗ ನಿಮ್ಮ ಮೊಬೈಲ್‌ಗೆ ʻನೀವು ಲಾಗ್ ಇನ್ ಆಗಿದ್ದೀರ ಎಂದುʼ ಒಂದು ಮೆಸೇಜ್ ಕೂಡ ಬರುತ್ತದೆ.
ಲಾಗ್ ಇನ್ ಆದ ನಂತ್ರ ಮೇನ್ ವಿಂಡೋ ಓಪನ್ ಆಗುತ್ತದೆ. ಇದರ ಮೇಲ್ಬಾಗದಲ್ಲಿ ನಿಮ್ಮ ಮೊಬೈಲ್ ನಂಬರ್ ಕೂಡ ಕಾಣಿಸುತ್ತದೆ. ಇನ್ನೂ, ಈ ಪೇಜ್‌ನಲ್ಲಿ ನಾವು ಅರ್ಜಿ ಸಲ್ಲಿಸುವ ಅಗತ್ಯ ಆಪ್ಷನ್‌ಗಳ ಲಿಸ್ಟ್ ಕಾಣಿಸುತ್ತದೆ. ಇಲ್ಲಿ, ಮೊದಲು
* ಅಗತ್ಯವಿರುವ ಸೇವೆ/ ಪ್ರಮಾಣ ಪತ್ರವನ್ನು ಆಯ್ಕೆ ಮಾಡಿ.
* ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ.
* ವಿನಂತಿಸಿದ ಪ್ರಮಾಣ ಪತ್ರ ಅಸ್ತಿತ್ವದಲ್ಲಿದ್ದರೆ ಅದನ್ನು ತೋರಿಸಲಾಗುತ್ತದೆ. ಆನ್‌ಲೈನ್‌ನಲ್ಲಿಪಾವತಿಸಿ ಮುದ್ರಿಸಿ.
* ಇಲ್ಲದಿದ್ದರೆ ಪೋಷಕ ದಾಖಲೆಗಳನ್ನು (ಪಿಡಿಎಫ್) ಅಪ್‌ಲೋಡ್ ಮಾಡುವ ಮೂಲಕ ಹೊಸ ಪ್ರಮಾಣ ಪತ್ರಕ್ಕಾಗಿ ವಿನಂತಿಸಿ. ಅರ್ಜಿದಾರರ ಹೆಸರನ್ನು ಆಧಾರ್ ಪ್ರಕಾರ ನಮೂದಿಸಬೇಕು.
* ಅಪ್ಲಿಕೇಶನ್ ಅನ್ನು ಸೈನ್ ಮಾಡಿ, ಸ್ವೀಕೃತಿಯನ್ನು ಮುದ್ರಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಇರಿಸಿ.
* ಯಾವುದಾದರೂ ಇದ್ದರೆ ಶುಲ್ಕವನ್ನು ಪಾವತಿಸಿ. ಎಂದು ನೀವು ಇಲ್ಲಿನ ಲಿಸ್ಟ್‌ನಲ್ಲಿ ನೋಡಬಹುದು.
ಇನ್ನೂ ನೀವು ಇಲ್ಲಿ ಮೇಲ್ಭಾಗದಲ್ಲಿ ಕೆಲವು ಆಯ್ಕೆಗಳನ್ನು ನೋಡಬಹುದು. ಇಲ್ಲಿ ಹೊಸ ವಿನಂತಿ ಎಂಬ ಆಯ್ಕೆಯನ್ನು ನೋಡಬಹುದು. ಇಲ್ಲಿ ಕ್ಲಿಕ್ ಮಾಡಿದರೆ, ʻಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅಲ್ಪ ಸಂಖ್ಯಾತ ಹಾಗೂ ಹಿಂದುಳಿದ ಪ್ರಮಾಣ ಪತ್ರ ಇತ್ಯಾಇ ಆಯ್ಕೆಗಳನ್ನ ಇಲ್ಲಿ ಕಾಣಬಹುದು. ಇಲ್ಲಿ ನಿಮಗೆ ಅವಶ್ಯವಿರುವ ಪ್ರಮಾಣ ಪತ್ರಗಳ ಮೇಲೆ ಕ್ಲಿಕ್ ಮಾಡಬಹುದು.
ಈ ಕೆಳಗೆ ನೀಡಲಾಗಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.