ಇತ್ತೀಚೆಗೆ ಸಣ್ಣ ಪುಟ್ಟ ವಿಷಯಕ್ಕೂ ಜಗಳ ಮಾಡಿಕೊಂಡು ಮೊಬೈಲ್ ಟವರ್ ಏರುತ್ತಿರುವ ಘಟನೆಗಳು ಎಲ್ಲೆಡೆ ಸರ್ವೇಸಾಮಾನ್ಯ ಎನಿಸುತ್ತಿವೆ. ಮನೆಯಲ್ಲಿ ಮಕ್ಕಳು ತಮ್ಮ ಪೋಷಕರು ಕೇಳಿದ್ದು ಕೊಡಿಸಲಿಲ್ಲ ಎಂದು, ಹೆಂಡತಿ ಜಗಳ ಮಾಡಿಕೊಂಡು ತವರಿಗೆ ಹೋದಳು ಎಂದು, ಎಷ್ಟೇ ಪ್ರಯತ್ನ ಪಟ್ಟರು ಉದ್ಯೋಗ ಸಿಗುತ್ತಿಲ್ಲ ಎಂದು ಅಥವಾ ಯಾವುದಾದರೂ ವಿಷಯಕ್ಕೆ ಮೋ’ಸ ಆಗಿದ್ದರೆ ನ್ಯಾಯ ಸಿಗುವವರೆಗೂ ಬಿಡುವುದಿಲ್ಲ ಎಂದು, ಪ್ರೀತಿ ಪ್ರೇಮದ ವಿಚಾರದಲ್ಲಿ ಸೋತವರು ಹೀಗೆ ಎಲ್ಲರೂ ಕೂಡ ಮೊಬೈಲ್ ಟವರ್ ತುದಿಯೇರಿ ಪ್ರತಿಭಟನೆ ಮಾಡುತ್ತೇನೆ ಎಂದು ಹೈಡ್ರಾಮಾ ಕ್ರಿಯೇಟ್ ಮಾಡಿರುವ ಸುದ್ದಿ ಸಾಕಷ್ಟು ವರದಿಯಾಗಿದೆ.
ನಾವು ಎಷ್ಟೇ ಪೂಜೆ ಮಾಡಿದರೆ ಕೆಲವೊಮ್ಮೆ ಆ ಪೂಜೆಗೆ ಫಲ ಸಿಗುವುದಿಲ್ಲ, ಯಾವ ತಪ್ಪುಗಳಿಂದ ಹೀಗಾಗುತ್ತದೆ ಗೊತ್ತಾ?…
ಈಗ ಇದೇ ಸಾಲಿಗೆ ಇನ್ನೊಂದು ಪ್ರಕರಣ ಸೇರುತ್ತದೆ ಈ ಬಾರಿ ಪ್ರಿಯಕರನ ಸಲುವಾಗಿ ಪ್ರಿಯತಮೆ ವಿದ್ಯುತ್ ಟವರ್ (Electrical Tower) ಏರಿ ಕುಳಿತಿದ್ದಾಳೆ. ಈ ಘಟನೆ ನಡೆದಿರುವುದು ಪಂಜಾಬ್ ರಾಜ್ಯದ ರಾಯಪುರ (Panjab state Raypura ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೊಡ್ಗರ್ ಎನ್ನುವ ಗ್ರಾಮದಲ್ಲಿ. ಅನಿತಾ ಭೈನಾ (Anitha Baina) ಎನ್ನುವ ವಿವಾಹಿತ ಮಹಿಳೆ ಈ ರೀತಿ ವಿದ್ಯುತ್ ಟವರ್ ಏರಿ ಕುರಿತಿದ್ದಾಳೆ.
ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ ಇದಕ್ಕೆ ಕಾರಣ ಆಗಿರುವುದು ಪ್ರಿಯಕರ ಮುಕೇಶ್ (Boy friend Mukhesh) ಹಾಗೂ ಅನಿತಾ ಭೈನಾ ನಡುವೆ ನಡೆದಿರುವ ಜಗಳ. ಅನಿತಾ ಭೈನಾ ಹೆಸರಿನ ಯುವತಿಗೆ ಈಗಾಗಲೇ ಮದುವೆ ಆಗಿತ್ತು ಆದರೂ ಕೂಡ ವಿವಾಹೇತರ ಸಂಬಂಧವನ್ನು ಮುಕೇಶ್ ನೊಂದಿಗೆ ಹೊಂದಿದ್ದಳು. ಒಂದು ವರ್ಷದಿಂದ ಪರಿಚಯವಿದ್ದ ಇವರಿಬ್ಬರು ಮುಂದೆ ಒಟ್ಟಿಗೆ ಬಾಳುವ ಉದ್ದೇಶ ಹೊಂದಿದ್ದರು.
ಇದೇ ಕಾರಣಕ್ಕಾಗಿ ಪತಿಯನ್ನು ತೊರೆದು ಅನಿತಾ ಭೈನ ಪ್ರಿಯಕರನ ಜೊತೆಗೆ ಬಂದು ಪ್ರಿಯಕರ ಗ್ರಾಮವಾದ ಕೊಟ್ಗಾರ್ ನಲ್ಲಿ ನೆಲೆಸಿದ್ದಳು. ಈ ಮಧ್ಯೆ ಅದೇನಾಯ್ತೋ ಏನೋ ಇದ್ದಕ್ಕಿದ್ದಂತೆ ಇಬ್ಬರ ನಡುವೆ ವೈ’ಮ’ನ’ಸ್ಸು ಏರ್ಪಟ್ಟಿದೆ. ಸಣ್ಣ ಪುಟ್ಟ ಜಗಳ ಆಗುತ್ತಿದ್ದ ವಿಷಯವೊಂದು ತೀರ ವಿಪರೀತಕ್ಕೆ ಹೋದಾಗ ಅನಿತಾ ಭೈನಾ ಸಿಟ್ಟಿಗೆದ್ದು ಪ್ರಿಯಕರನ ಜೊತೆ ಜಗಳ ಮಾಡಿಕೊಂಡು ಹೈ ವೋಲ್ಟೇಜ್ ವಿದ್ಯುತ್ ಟವರ್ ಏರಿ ಕುಳಿತು ಕ್ಷಣಕಾಲ ಎಲ್ಲರನ್ನೂ ಗಾಬರಿಗೊಳಿಸಿದ್ದಾಳೆ.
ಪ್ರಿಯಕರ ಮುಕೇಶ್ ಕೆಳಗೆ ಇಳಿಯುವಂತೆ ಎಷ್ಟೇ ಬೇಡಿಕೊಂಡರು ಅನಿತಾ ಕೆಳಗಿಳಿಯುವ ಮನಸ್ಸು ಮಾಡಲಿಲ್ಲ. ಕೊನೆಗೆ ಬೇರೆ ದಾರಿ ಇಲ್ಲದೆ ಪೊಲೀಸ್ ಠಾಣೆಗೆ (Police station) ಕರೆ ಮಾಡಿ ಈತನೇ ಎಲ್ಲ ವಿವರವನ್ನು ತಿಳಿಸಿದ್ದಾನೆ. ಪೊಲೀಸರು ಹಾಗೂ ಅಗ್ನಿಶಾಮಕ ಮತ್ತು ರಕ್ಷಣಾ ದಳದವರು (Fire and rescue team) ಬಂದು ಕೆಳಗಿಳಿಸುವ ಕೆಲಸ ಮಾಡಿದ್ದಾರೆ. ಇಬ್ಬರೂ ರಾಜಿಯಾಗಿ ಸಮಾಧಾನವಾಗಿ ಒಟ್ಟಿಗೆ ಮುಕೇಶ್ ಮನೆಗೆ ಹೋಗಿದ್ದಾರೆ ಎನ್ನುವ ಮಾಹಿತಿ ಇದೆ.
ಲೇಬರ್ ಕಾರ್ಡ್ ಹೊಸ ವೆಬ್ಸೈಟ್ ಪ್ರಾರಂಭ, ಹೊಸ ವೆಬ್ಸೈಟ್ ನಲ್ಲಿ ರಿಜಿಸ್ಟರ್ ಆಗಿ ಸೇವೆಗಳನ್ನು ಪಡೆಯುವುದು ಹೇಗೆ ನೋಡಿ.!
ಅನಿತಾ ಭೈನಾ ಹಾಗೂ ಮುಕೇಶ್ ಇಬ್ಬರು ರಾಜಿಯಾಗಿ ಇನ್ನು ಮುಂದೆ ಈ ರೀತಿ ಜಗಳ ಆಡುವುದಿಲ್ಲ ಹಾಗೂ ಇಂತಹ ಕೃತ್ಯಗಳಿಗೆ ಕೈ ಹಾಕುವುದಿಲ್ಲ ಎನ್ನುವುದನ್ನು ಒಪ್ಪಿಕೊಂಡು ಮನೆಗೆ ಹೋಗಿದ್ದರೂ ಕೂಡ ಪೊಲೀಸರು ಮಾತ್ರ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲೂ ಕೂಡ ಸುದ್ದಿಯಾಗುತ್ತಿದೆ. ನೆಟ್ಟಿಗರು ಕೂಡ ಇದರ ಬಗ್ಗೆ ತರಹೇವಾರಿ ಕಮೆಂಟ್ ಮಾಡಿ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ರೀತಿ ಮೊಬೈಲ್ ಟವರ್ ಅಥವಾ ವಿದ್ಯುತ್ ಟವರ್ ಏರಿ ಕುಳಿತು ಅವಾಂತರ ಮಾಡುವ ಅಪಾಯಕ್ಕೆ ಸಿಲುಕುವ ಉದಾಹರಣೆಗಳು ಹೆಚ್ಚಾಗುತ್ತಿವೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.