ಬೆಂಗಳೂರಲ್ಲಿ ಇಂತಹದೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ಇಡೀ ಮನುಕುಲವೇ ಈ ಘಟನೆ ಬಗ್ಗೆ ಕೇಳಿದರೆ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. ಅಷ್ಟಕ್ಕೂ ಅಂತ ಏನಾಯ್ತು ಎಂದರೆ ಬೆಂಗಳೂರಿನಲ್ಲಿ ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರುವ ಗಂಗಾ ನಗರದ ಐದನೇ ಕ್ರಾಸ್ ಅಲ್ಲಿ ಇಂದು ಜನಸಂದಣಿ, ಅಲ್ಲದೆ ಬಂದಿದ್ದವರೆಲ್ಲ ಇವರ ಅಕ್ಕ ಪಕ್ಕ ಮನೆಯವರಾದರೂ ಎಲ್ಲರ ಕಣ್ಣು ಕಣ್ಣೀರಿನಿಂದ ಒದ್ದೆ ಆಗಿತ್ತು.
ಆದರೆ ಆ ಕಣ್ಣೀರು ಅಲ್ಲಿ ಸ.ತ್ತು ಮಲಗಿದ್ದ ಆ ತಾಯಿಯ ನೋಡಿಯೋ ಅಥವಾ ತಾಯಿ ಸ.ತ್ತಿ.ದ್ದಾ.ಳೆ ಎಂದು ಗೊತ್ತಿಲ್ಲದೆ ಎರಡು ದಿನ ತಾಯಿ ಶ.ವ.ದ ಜೊತೆ ಕಾಲ ಕಳೆದ ಮಗನ ಮುಗ್ಧತೆ ನೋಡಿಯೋ ಗೊತ್ತಿಲ್ಲ. ಒಟ್ಟಿನಲ್ಲಿ ಇಡಿ ಏರಿಯಾಗೆ ಏರಿಯಾವೇ ಇಂದು ಈ ಘಟನೆಯಿಂದ ಮಹಾ ಮೌನವಾಗಿದೆ. ಈ ಬದುಕು ಅನ್ನೋದು ಹೀಗೆ ಇಲ್ಲಿ ಎಲ್ಲವೂ ಇದ್ದರೆ ಮಾತ್ರ ಚೆನ್ನ. ಆದರೂ ಒಂದು ಪಕ್ಷ ಕಡು ಕಷ್ಟ ಇದ್ದರೂ ಕೂಡು ಕುಟುಂಬ ತುಂಬಿಕೊಂಡಂತೆ, ಎಲ್ಲರೂ ಕೈಗೂಡಿಸಿದರೆ ಎಂತಹ ಕಷ್ಟದಲ್ಲೂ ಕಷ್ಟ ಹಂಚಿಕೊಂಡು ನೆಮ್ಮದಿಯಿಂದ ಬದುಕಬಹುದು.
ಆದರೆ ಕುಟುಂಬವೇ ಇಲ್ಲ ಎಂದರೆ ಅದರಲ್ಲೂ ಹೆತ್ತ ತಂದೆ ತಾಯಿಯನ್ನು ಕಳೆದುಕೊಂಡರೆ ಆ ಬಡಮಕ್ಕಳ ಬದುಕು ನರಕವೇ ಸರಿ. ಮೊದಲೇ ಈ ಕಾಲದಲ್ಲಿ ಕಷ್ಟದಲ್ಲಿರುವವರನ್ನು ಕಂಡರೆ ಯಾರು ಕರಗುವುದಿಲ್ಲ, ಬಡವರಾಗಿ ಬಿಟ್ಟಳಂತೂ ಬಂಧುಗಳು ಹತ್ತಿರ ಸುಳಿಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡು ಬಿಟ್ಟರೆ ಯಾರು ಸೇರಿ ಬದುಕಬೇಕು, ಯಾರು ಅವರಿಗೆ ಹಿತವರು.
ಈ ದುಃಖಕ್ಕೋ ಅಥವಾ ಭಯಕ್ಕೋ ಇಲ್ಲೊಬ್ಬ ಮಗ ತಾಯಿ ಸತ್ತಿರುವ ಸುದ್ದಿಯನ್ನು ಎರಡು ದಿನಗಳವರೆಗೆ ಯಾರಿಗೂ ಹೇಳಿಲ್ಲ. ಬೆಂಗಳೂರಿನ ಗಂಗಾನಗರದ ನಿವಾಸಿ ಅಣ್ಣಮ್ಮ ಎನ್ನುವವರು ಇಳಂಗೋವನ್ ಎನ್ನುವವರನ್ನು ಮದುವೆಯಾಗಿ ಹೆಂಗೋ ಇದ್ದಷ್ಟಕ್ಕೆ ಚಂದವಾಗಿ ಬೆಂಗಳೂರಿನಲ್ಲಿ ಸಣ್ಣದೊಂದು ಶೀಟ್ ಮನೆಯಲ್ಲಿ ವಾಸಿಸುತ್ತಿದ್ದರು. ಇವರಿಗೆ 14 ವರ್ಷದ ಸೂರ್ಯ ಎನ್ನುವ ಹೆಸರಿನ ಮಗ ಕೂಡ ಇದ್ದ ಇದ್ದಕ್ಕಿದ್ದಂತೆ ಎಂಟು ತಿಂಗಳ ಹಿಂದೆ ಇಳಂಗೋವನ್ ಅವರು ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಮೃ.ತ ಪಟ್ಟಿದ್ದಾನೆ.
ಅದಾದ ಬಳಿಕ ತಾಯಿ ಹಾಗೂ ಮಗ ಹೇಗೋ ಒಬ್ಬರಿಗೊಬ್ಬರ ಜೊತೆಯಾಗಿ ಬದುಕುವ ನಿರ್ಧಾರ ಮಾಡಿದ್ದರು. ಮತ್ತೆ ವಿಧಿ ಅವರ ಬಾಳಲ್ಲಿ ಆಟ ಆಡಿದ್ದು ದೊಡ್ಡ ಬಿರುಗಾಳಿಯನ್ನು ಎಬ್ಬಿಸಿತ್ತು. ಅದೇನೆಂದರೆ, ದುಡಿದು ಹಾಕುತ್ತಿದ್ದ ತಾಯಿಗೂ ಕೂಡ ಸ್ಟ್ರೋಕ್ ಅಟ್ಯಾಕ್ ಆಗಿ ಮಾತನಾಡಲಾಗದ ಪರಿಸ್ಥಿತಿ ಉಂಟಾಯಿತು. ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ದ ಅಣ್ಣಮ್ಮ ಅವರಿಗೆ ಮಗ ಸೂರ್ಯನೇ ಅಡುಗೆ ಮಾಡಿ ಬಡಿಸುತ್ತಿದ್ದ. ಹೇಗೋ ತಂದೆ ಸ್ನೇಹಿತರು, ಅಕ್ಕಪಕ್ಕದವರ ನೆರವೇರಿನಿಂದ ಇಂದಲ್ಲಾ ನಾಳೆ ತಾಯಿ ಹುಷಾರಾಗುತ್ತಾರೆ ಎಂದು ನಂಬಿಕೆಯಿಂದ ಸೂರ್ಯ ಬದುಕುತ್ತಿದ್ದ.
ಆದರೆ ಫೆಬ್ರವರಿ 26ರಂದು ತಾಯಿಯು ಸಹ ಮಲಗಿದ್ದ ಜಾಗದಲ್ಲೇ ಮೃ.ತ ಪಟ್ಟಿದ್ದಾರೆ. ಆದರೆ ಮಗನಿಗೆ ಮಾತ್ರ ಆ ವಿಷಯ ಎರಡು ದಿನಗಳ ಬಳಿಕ ಅರಿವಾಗಿದೆ. ಅಮ್ಮನಿಗೆ ಹುಷಾರಿಲ್ಲ ಅದಕ್ಕೆ ಮಲಗಿದ್ದಾಳೆ ಎಂದುಕೊಂಡೇ ಕಾಲ ಕಳೆದ ಮಗ ಎರಡು ದಿನ ಆದರೂ ಅಮ್ಮ ಅಲುಗಾಡದೆ ಇದ್ದದ್ದು ಸದ್ದು ಮಾಡದೆ ಇದ್ದದ್ದು ಕಂಡು ವಾಸನೆ ಬರುತ್ತಿದೆ ಎಂದು ಅಕ್ಕ ಪಕ್ಕದವರಿಗೆ ವಿಷಯ ತಿಳಿಸಿದ್ದಾನೆ. ತಂದೆ ಸ್ನೇಹಿತರಿಗೂ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾನೆ. ಆನಂತರ ಅಣ್ಣಮ್ಮ ಅವರು ಮೃ.ತ ಪಟ್ಟಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಸೂರ್ಯ ಅಮ್ಮ ಹುಷಾರಾಗುತ್ತಾಳೆ ಎಂದು ನಂಬಿಕೆಯಿಂದ ಎರಡು ದಿನ ಶ.ವ.ದ ಜೊತೆ ಕಳೆದ ಮನಸ್ಥಿತಿ ಕಂಡು ಎಲ್ಲರೂ ಕಣ್ಣೀರಾಕಿದ್ದಾರೆ.