ಆಂಧ್ರಪ್ರದೇಶದ ಕೊತ್ತೂರು ಜಿಲ್ಲೆಯ ಬೆಂಜರ್ಲಾ ಎಂಬ ಗ್ರಾಮದ ನಿವಾಸಿ ಮಾಜಿ ಮಂಡಲ ಪಂಚಾಯಿತಿ ಸದಸ್ಯ ಜಯಶ್ರೀ ಎಂಬವರು ಬಹಳ ವರ್ಷಗಳಿಂದ ಅನಾರೋಗ್ಯದಿಂದ ನರಳುತ್ತಿದ್ದರು. ಐದು ದಿನಗಳ ಹಿಂದೆ ಜಯಶ್ರೀ ಅವರ ಆರೋಗ್ಯ ಸ್ಥಿತಿ ಗಂ.ಭೀ.ರ.ವಾಗಿ ಕುಟುಂಬಸ್ಥರು ಹೈದರಾಬಾದ್ ನಲ್ಲಿ ಇರುವ ಒಂದು ಪ್ರೈವೇಟ್ ಆಸ್ಪತ್ರೆಗೆ ಜಯಶ್ರೀ ಅವರನ್ನು ಅಡ್ಮಿಟ್ ಮಾಡುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಆಕೆಯನ್ನು ಪರೀಕ್ಷಿಸಿದ ಡಾಕ್ಟರ್ ಗಳು ಈಕೆಯು ಸ.ತ್ತು ಹೋಗಿದ್ದಾಳೆ ಎಂದು ರಿಪೋರ್ಟ್ ಕೊಟ್ಟು ದೇಹವನ್ನು ಮನೆಗೆ ತೆಗೆದುಕೊಂಡು ಹೋಗುವಂತೆ ಕುಟುಂಬಸ್ಥರಿಗೆ ಹೇಳಿದ್ದಾರೆ.
ಜಯಶ್ರೀ ಅವರ ಮೃ.ತ ದೇಹವನ್ನು ಆಂಬುಲೆನ್ಸ್ ಮೂಲಕ ಮನೆಗೆ ತೆಗೆದುಕೊಂಡು ಬಂದು ಕೆಳಗಡೆ ಇಳಿಸಿ ಅಂತ್ಯ ಕ್ರಿಯೆಗೆ ಸಿದ್ಧ ಮಾಡಿಕೊಂಡಿರುತ್ತಾರೆ. ಆ ಸಮಯದಲ್ಲಿ ಜಯಶ್ರೀ ಅವರ ತುಟಿಗಳು ಅಲ್ಲಾಡುತ್ತವೆ ಇದನ್ನು ಮನೆಯ ಕುಟುಂಬಸ್ಥರು ನೋಡಿ ಆಶ್ಚರ್ಯಗೊಂಡು ಜಯಶ್ರೀಯನ್ನು ಮನೆ ಒಳಗೆ ಕರೆದುಕೊಂಡು ಹೋಗಿ ಕೊನೆಯ ಬಾರಿ ಬಾಯಿಗೆ ಹಾಲು ಬಿಟ್ಟಿದ್ದು ಜಯಶ್ರೀ ಅವರು ಬದುಕುತ್ತಾರೆ. ಜಯಶ್ರೀ ಅವರ ಪ್ರಾಣ ಇನ್ನು ಹೋಗಿರುವುದಿಲ್ಲ ಇದು ಗೊತ್ತಿಲ್ಲದೆ ಕುಟುಂಬಸ್ಥರು ಅವರ ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆಗಳನ್ನು ತಯಾರು ಮಾಡುತ್ತಿದ್ದರು.
ಅಲ್ಲದೆ ಜಯಶ್ರೀ ಅಂತಿಮ ದರ್ಶನ ಪಡೆಯಲು ಸ್ನೇಹಿತರು ಮತ್ತು ಕುಟುಂಬಸ್ಥರು, ರಾಜಕೀಯ ವ್ಯಕ್ತಿಗಳು, ಜನ ಪ್ರತಿನಿಧಿಗಳು ಎಲ್ಲರೂ ಅವರ ಮನೆಗೆ ಬಂದಿದ್ದರು. ಜಯಶ್ರೀ ಅವರು ಇನ್ನು ಸತ್ತಿಲ್ಲ ಬದುಕಿದ್ದಾರೆ ಎಂದು ತಿಳಿದಾಗ ಅಂತ್ಯಕ್ರಿಯೆ ಎಲ್ಲ ಸಿದ್ಧತೆಗಳನ್ನು ನಿಲ್ಲಿಸಿ, ಅಂತಿಮ ದರ್ಶನಕ್ಕೆ ಬಂದಿದ್ದ ಎಲ್ಲರೂ ಆಶ್ಚರ್ಯಗೊಂಡು ಅವರವರ ಮನೆಗೆ ತೆರಳುತ್ತಾರೆ. ಜಯಶ್ರೀ ಅವರು ಬದುಕಿರುವ ವಿಷಯ ಕೇಳಿ ಡಾಕ್ಟರ್ ಗಳಿಗೂ ಆಶ್ಚರ್ಯವಾಗಿದೆ. ಈಗ ಜಯಶ್ರೀ ಅವರು ಎಲ್ಲರಂತೆ ಜೀವನ ನಡೆಸುತ್ತಿದ್ದಾರೆ.
ಲಕ್ನೋವಾ ನಗರಕ್ಕೆ ಸೇರಿದ ಮೊಹಮದ್ ಪಲ್ಕನ್ ಎಂಬ 20 ವರ್ಷದ ಯುವಕನಿಗೆ ಜೂನ್ 21ನೇ, 2022ರಂದು ಭಯಾನಕ ರಸ್ತೆ ಅ.ಪ.ಘಾ.ತ ಸಂಭವಿಸಿ ಗಂಭೀರ ಗಾಯಗಳಾಗಿರುತ್ತದೆ ಅದಕ್ಕಾಗಿ ಆತನನ್ನು ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಆಸ್ಪತ್ರೆಯಲ್ಲಿ ಮೊಹಮದ್ ಗೆ ಡಾಕ್ಟರ್ ಗಳು ಚಿಕಿತ್ಸೆ ಪ್ರಾರಂಭಿಸಿರುತ್ತಾರೆ. ಸುಮಾರು 10 ಲಕ್ಷ ಹಣ ಖರ್ಚು ಮಾಡಿ ಚಿಕಿತ್ಸೆ ನೀಡಿದರೂ ಮೊಹಮ್ಮದ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಲಕ್ಷಣಗಳು ಕಂಡು ಬಂದಿರುವುದಿಲ್ಲ ಆದರೂ ಇನ್ನು ಚಿಕಿತ್ಸೆ ನೀಡಲು ಹೆಚ್ಚು ಹಣಬೇಕು ಎಂದು ಆಸ್ಪತ್ರೆಯ ಅಧಿಕಾರಿಗಳು ಕುಟುಂಬಸ್ಥರನ್ನು ಡಿಮ್ಯಾಂಡ್ ಮಾಡಿದ್ದಾರೆ.
ಆದರೆ ನಮ್ಮ ಹತ್ತಿರ ಇನ್ನು ಒಂದು ರೂಪಾಯಿ ಕೂಡ ಇಲ್ಲ ಎಂದು ಮೊಹಮದ್ ಕುಟುಂಬಸ್ಥರು ಹೇಳುತ್ತಾರೆ. ನಂತರ ಸೋಮವಾರ ದಿನದಂದು ಮೊಹಮ್ಮದ್ ಸುತ್ತು ಹೋಗಿದ್ದಾನೆ ಎಂದು ಡಾಕ್ಟರ್ ಗಳು ಹೇಳಿತ್ತಾರೆ ನಂತರ ಆಸ್ಪತ್ರೆಯ ಫಾರ್ಮಾಲಿಟಿಸ್ ಗಳನ್ನು ಎಲ್ಲ ಪೂರ್ತಿ ಮಾಡಿ ಮೊಹಮದ್ ಮೃ.ತ ದೇಹವನ್ನು ಕುಟುಂಬಸ್ಥರು ಮನೆಗೆ ತಂದು ಅಂತ್ಯಕ್ರಿಯೆಗೆ ಸಕಲ ತಯಾರಿಗಳನ್ನು ಮಾಡುತ್ತಿರುತ್ತಾರೆ. ಆಗ ಮೊಹಮ್ಮದ್ ದೇಹದ ಅಂಗಗಳು ಅಲುಗಾಡುತ್ತಿರುವುದನ್ನು ಕುಟುಂಬಸ್ಥರು ಗಮನಿಸಿದ್ದಾರೆ ಆಗ ಪರೀಕ್ಷಿಸಿ ನೋಡಿದಾಗ ಮೊಹಮ್ಮದ್ ಇನ್ನೂ ಬದುಕಿದ್ದಾನೆ ಎಂಬ ವಿಷಯ ಗೊತ್ತಾಗಿದೆ.
ಕೂಡಲೇ ಬೇರೆ ಆಸ್ಪತ್ರೆಗೆ ಮೊಹಮದ್ ಅನ್ನು ದಾಖಲು ಮಾಡಿದ್ದಾರೆ ನಂತರ ಮೊಹಮ್ಮದನ್ನು ಪರೀಕ್ಷೆ ಮಾಡಿದ ಡಾಕ್ಟರ್ ಗಳು ವೆಂಟಿಲೇಟರ್ ನ ಮೂಲಕ ಚಿಕಿತ್ಸೆ ನೀಡುತ್ತಾರೆ. ಮೊಹಮದ್ ನ ಸ್ಥಿತಿ ಗಂಭೀರವಾಗಿದ್ದರೂ ಕೂಡ ಈತನ ಬ್ರೈನ್ ಡೆಡ್ ಆಗಿಲ್ಲ ಎಂದು ಡಾಕ್ಟರ್ ಹೇಳಿದ್ದಾರೆ. ಮೊಹಮ್ಮದ್ ಬದುಕಿದ್ದರು ಈತ ಸ.ತ್ತು ಹೋಗಿದ್ದಾನೆ ಎಂದು ಹೇಳಿದ ಪ್ರೈವೇಟ್ ಆಸ್ಪತ್ರೆಯ ಡಾಕ್ಟರ್ ಮತ್ತು ಅಧಿಕಾರಿಗಳ ವಿರುದ್ಧ ಮೊಹಮದ್ ಕುಟುಂಬಸ್ಥರು ದೂರು ದಾಖಲು ಮಾಡಿದ್ದಾರೆ. ಇದೇ ರೀತಿ ಸಾಕಷ್ಟು ಘಟನೆಗಳು ನಮ್ಮ ಸುತ್ತ ಮುತ್ತಲು ನೆಡೆದಿದೆ ವೈದ್ಯರ ನಿರ್ಲಕ್ಷ್ಯವೋ ಅಥವಾ ರೋಗಿಗಳೋ ಅದೃಷ್ಟವೋ ಏನೋ ತಿಳಿಯದು.