ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ಎಂದರೆ ಎಲ್ಲರಿಗೂ ಸಹ ಸಾಕಷ್ಟು ರೀತಿಯಾದಂತಹ ನಿರೀಕ್ಷೆಗಳನ್ನು ಇಟ್ಟುಕೊಂಡು ಚಿತ್ರ ಮಂದಿರಗಳಿಗೆ ಹೋಗಿ ಚಿತ್ರವನ್ನು ನೋಡಿ ಉತ್ಸಾಹದಿಂದ ಎಂಜಾಯ್ ಮಾಡಿ ಖುಷಿಪಡುತ್ತಿದ್ದರು. ಆದರೆ ಇದೀಗ ಕನ್ನಡ ಚಿತ್ರರಂಗಕ್ಕೆ ದೊಡ್ಡ ಆ’ಘಾ’ತ ಉಂಟಾಗಿದೆ ಹೌದು ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡಿರುವುದು ಕನ್ನಡ ಚಿತ್ರರಂಗಕ್ಕೆ ಬಹು ದೊಡ್ಡ ಮಟ್ಟದ ಲಾಸ್ ಎಂದೇ ಹೇಳಬಹುದು. ನಮ್ಮ ನಿಮ್ಮೆಲ್ಲರ ಪ್ರೀತಿಯ ನಟ ಸಾರ್ವಭೌಮ ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರು ಹಗಲಿ ನಮ್ಮೆಲ್ಲರಿಗೆ ತುಂಬಾ ನೋವನ್ನು ಉಂಟುಮಾಡಿದೆ. ಪುನೀತ್ ರಾಜ್ ಕುಮಾರ್ ಅವರು ನಟಿಸಿದಂತಹ ಎಲ್ಲಾ ಸಿನಿಮಾಗಳು ಒಂದೊಂದು ರೀತಿಯಾದಂತಹ ಸಂದೇಶವನ್ನು ಜನರಿಗೆ ನೀಡುತ್ತಿತ್ತು ಅಪ್ಪು ಸಿನಿಮಾಗಳು ಜನರಿಗೆ ಉತ್ಸಾಹವನ್ನು ಮೂಡಿಸಿ ಜೀವನದಲ್ಲಿ ಏನಾದರೂ ಸಾಧಿಸಬೇಕು, ಯಾವ ರೀತಿಯಲ್ಲಿ ಜೀವನ ಮಾಡಬೇಕು ಹಾಗೆಯೇ ಒಬ್ಬ ಒಳ್ಳೆಯ ವ್ಯಕ್ತಿ ಹೇಗಿರಬೇಕು ಎನ್ನುವಂತಹ ಒಂದು ಸಂದೇಶವನ್ನು ನೀಡುವಂತಹ ಸಿನಿಮಾಗಳನ್ನು ಪುನೀತ್ ರಾಜ್ ಕುಮಾರ್ ಅವರು ಮಾಡುತ್ತಿದ್ದರು. ಸಾಕಷ್ಟು ಜನ ನಿರ್ದೇಶಕರು ಪುನೀತ್ ರಾಜ್ ಕುಮಾರ್ ಅವರ ಜೊತೆಯಲ್ಲಿ ಕೆಲಸ ಮಾಡಲು ಕಾಯುತ್ತಿದ್ದರು ನಟನೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಬರುವಂತಹದ್ದಲ್ಲ ಆದರೆ ಪುನೀತ್ ರಾಜ್ ಕುಮಾರ್ ಅವರು ನಟನೆಯನ್ನು ಮೈಗೂಡಿಸಿಕೊಂಡು ಚಿತ್ರರಂಗದಲ್ಲಿ ಸಕ್ರಿಯರಾಗಿ ಉತ್ತಮವಾದಂತಹ ಹಲವಾರು ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರು ನಟಿಸಿರುವಂತಹ ಬಹುತೇಕ ಎಲ್ಲಾ ಸಿನಿಮಾಗಳು ಯಶಸ್ಸನ್ನು ಕಂಡಿದೆ. ಆದ್ದರಿಂದ ಪುನೀತ್ ರಾಜ್ ಕುಮಾರ್ ಅವರ ಜೊತೆಯಲ್ಲಿ ಕೆಲಸ ಮಾಡಲು ನಿರ್ದೇಶಕರು ಹಾಗೂ ನಿರ್ಮಾಪಕರು ತುಂಬಾ ಉತ್ಸಾಹದಿಂದ ಕಾಯುತ್ತಿದ್ದರು ಆದರೆ ಅಪ್ಪು ಅವರ ಜೊತೆಯಲ್ಲಿ ಸಿನಿಮಾ ಮಾಡಲು ಸಾಕಷ್ಟು ವರ್ಷಗಳೇ ಕಾಯಬೇಕು. ಮೇರುನಟ ಡಾಕ್ಟರ್ ರಾಜ್ ಕುಮಾರ್ ಅವರ ಕಿರಿಯ ಪುತ್ರ ಪುನೀತ್ ರಾಜ್ ಕುಮಾರ್ ಅವರು ದೊಡ್ಡ ನಟನ ಮಗನಾಗಿದ್ದರು ಸಹ ಯಾವುದೇ ರೀತಿ ಆದಂತ ಅಹಂಕಾರ, ಗರ್ವ ಎನ್ನುವಂತಹದ್ದು ಇವರಲ್ಲಿ ಇರುಲಿಲ್ಲ, ಯಾರನ್ನೇ ಮಾತನಾಡಿಸಬೇಕು ಎಂದರೂ ಸಹ ಗೌರವಯುತವಾಗಿ ಕಾಣುತ್ತಿದ್ದರು. ಅಷ್ಟೇ ಅಲ್ಲದೆ ಯಾವುದೇ ಕೆಲಸವನ್ನು ಮಾಡಿದರೂ ಸಹ ತುಂಬಾ ಶ್ರದ್ಧೆ ಮತ್ತು ಭಕ್ತಿಯಿಂದ ಇವರು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಪುನೀತ್ ರಾಜ್ ಕುಮಾರ್ ಅವರು ಇದೀಗ ನಮ್ಮೆಲ್ಲರನ್ನು ಹಗಲಿದ್ದಾರೆ ಈ ಒಂದು ನೋವನ್ನು ಚಿತ್ರರಂಗದಲ್ಲಿ ಇರುವವರು ಹಾಗೆಯೇ ಸಾಮಾನ್ಯ ಜನರಿಗೂ ಸಹ ಅರಗಿಸಿಕೊಳ್ಳಲು ಆಗುತ್ತಿಲ್ಲ ಇಂತಹ ಸಂದರ್ಭದಲ್ಲಿ ಯಾವುದೇ ಒಂದು ಮುಖ್ಯವಾದ ಕೆಲಸ ಅಥವಾ ಯಾವುದೇ ಒಂದು ದೊಡ್ಡ ಕೆಲಸಕ್ಕೆ ಕೈ ಹಾಕಬೇಕು ಎಂದರು ಸಹ ಪುನೀತ್ ರಾಜ್ ಕುಮಾರ್ ಅವರನ್ನು ನೆನೆಸಿಕೊಂಡು ಅವರಿಗೆ ಒಂದು ಗೌರವಯುತ ವಾದಂತಹ ನಮನವನ್ನು ಸಲ್ಲಿಸಿ ನಂತರ ಆ ಕೆಲಸವನ್ನು ಮುಂದುವರೆಸುತ್ತಿದ್ದಾರೆ.
ಅಷ್ಟರ ಮಟ್ಟಿಗೆ ಪುನೀತ್ ರಾಜಕುಮಾರ್ ಅವರು ಎಲ್ಲರ ಮನಸ್ಸಲ್ಲಿ ಒಂದು ಗೌರವಯುತ ವಾದಂತಹ ಸ್ಥಾನ ಮತ್ತೆ ಉತ್ತಮ ವ್ಯಕ್ತಿತ್ವವಾಗಿ ಉಳಿದುಕೊಂಡಿದ್ದಾರೆ. ಜೀವನದಲ್ಲಿ ಈ ರೀತಿಯಾದಂತಹ ಯಶಸ್ಸನ್ನು ಕಾಣಲು ಎಲ್ಲರಿಂದಲೂ ಸಾಧ್ಯವಿಲ್ಲ. ಅಪ್ಪು ಅವರು ತಮ್ಮ ಜೀವನದಲ್ಲಿ ಯಾರಿಂದಲು ಮರೆಯಲಾಗದಂತಹ ಕೆಲವೊಂದು ಉತ್ತಮವಾದಂತಹ ಕಾರ್ಯವನ್ನು ನಡೆಸಿ ಜನರ ಮನಸಲ್ಲಿ ನೆಲೆಸಿದ್ದಾರೆ. ಇವರು ಸಾಕಷ್ಟು ಜನರಿಗೆ ಮಾಡಿರುವಂತಹ ಸಹಾಯಗಳು ಜನರು ಇವರನ್ನು ಮತ್ತೆ ಮತ್ತೆ ನೆನೆಸಿಕೊಳ್ಳುವ ಹಾಗೆ ಮಾಡಿದೆ. ಹಾಗೆಯೇ ಅಪ್ಪು ಅವರನ್ನು ನೆನೆಸಿಕೊಂಡರೆ ಇಂದಿಗೂ ಸಹ ನಮ್ಮೆಲ್ಲರ ಕಣ್ಣಲ್ಲಿ ಕಣ್ಣೀರು ಬರುವುದು ಖಂಡಿತ. ಸಾಕಷ್ಟು ಜನ ನಿರ್ದೇಶಕರು ಪುನೀತ್ ರಾಜಕುಮಾರ್ ಅವರ ಜೊತೆಯಲ್ಲಿ ಸಿನಿಮಾಗಳನ್ನು ಮಾಡಲು ಕಾತುರದಿಂದ ಕಾಯುತ್ತಿದ್ದರು ಹಾಗೆಯೇ ಕಥೆಗಳನ್ನು ರೆಡಿಮಾಡಿಕೊಂಡು ಅವರಿಗಾಗಿ ಕಾಯುತ್ತಿದ್ದರು ಅಂತಹ ನಿರ್ದೇಶಕರಲ್ಲಿ ಕೃಷ್ಣ ಅವರು ಸಹ ಒಬ್ಬರು. ನಿರ್ದೇಶಕ ಕೃಷ್ಣ ಅವರು ಅಪ್ಪು ಅವರಿಗಾಗಿ ಒಂದು ಉತ್ತಮವಾದಂತಹ ಕಥೆಯನ್ನು ರೆಡಿಮಾಡಿಕೊಂಡು ಅವರಿಗಾಗಿ ಕಾಯುತ್ತಿದ್ದರು ಆದರೆ ಅದರ ಮಧ್ಯದಲ್ಲಿ ಈ ರೀತಿಯಾದಂತಹ ಒಂದು ಘಟನೆಯೂ ಸಂಭವಿಸಿದೆ ಅಪ್ಪು ಅವರ ಹಗಲಿಕೆಯ ನಂತರ ಈ ಒಂದು ವಿಚಾರವನ್ನು ನಿರ್ದೇಶಕ ಕೃಷ್ಣ ಅವರು ಎಲ್ಲರಿಗೂ ಸಹ ತಿಳಿಸಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದಿಷ್ಟು ಚರ್ಚೆಗಳು ಹೊರಬರುತ್ತಿದೆ ಅದೇನೆಂದರೆ ನಿರ್ದೇಶಕ ಕೃಷ್ಣ ಅವರು ಅಪ್ಪು ಅವರಿಗಾಗಿ ಮಾಡಿದಂತಹ ಕಥೆಯನ್ನು ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರ ಜೊತೆಯಲ್ಲಿ ಸೇರಿ ಆ ಒಂದು ಸಿನಿಮಾವನ್ನು ಮಾಡಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಆದರೆ ಈ ಒಂದು ವಿಚಾರದ ಬಗ್ಗೆ ಸ್ವತಃ ನಿರ್ದೇಶಕ ಕೃಷ್ಣ ಅವರೆಲ್ಲರಿಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಜೊತೆಯಲ್ಲಿ ಮಾಡಬೇಕಾದಂತಹ ಸಿನಿಮಾವನ್ನು ನಾನು ಯಾರ ಜೊತೆಯಲ್ಲು ಮಾಡುವುದಿಲ್ಲ, ಪುನೀತ್ ರಾಜ್ ಕುಮಾರ್ ಅವರಿಗಾಗಿಯೇ ಒಪ್ಪುವ ರೀತಿಯಲ್ಲಿ ಈ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ ಆದರೆ ಈ ಸಿನಿಮಾಗೆ ಯಾರು ಸಹ ಒಪ್ಪುವುದಿಲ್ಲ, ಅಪ್ಪು ಅವರ ನಟನಾ ವೈಖರಿ ಯಾರಿಗೂ ಸಹ ಬರುವುದಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.